Dhoni’s successor: ಸಿಎಸ್‌ಕೆ ಯಲ್ಲಿ ಧೋನಿ ಉತ್ತರಾಧಿಕಾರಿಯಾಗ್ತಾನಾ ಈ ಯುವ ಆಟಗಾರ..? ಚೆನ್ನೈ ನಾಯಕತ್ವಕ್ಕೆ ಅಚ್ಚರಿಯ ಆಯ್ಕೆ..?

ಚೆನ್ನೈ: (Dhoni’s successor) ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ದಿಗ್ಗಜ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಐಪಿಎಲ್-2023ರ ಟೂರ್ನಿಯ ನಂತರ ಐಪಿಎಲ್’ನಿಂದ ನಿವೃತ್ತಿಯಾಗಲಿದ್ದಾರೆ. 41 ವರ್ಷದ ಎಂ.ಎಸ್ ಧೋನಿಯವರಿಗೆ ಮುಂದಿನ ವರ್ಷದ ಐಪಿಎಲ್ ಕೊನೆಯ ಟೂರ್ನಿಯಾಗಿದ್ದು, ಎಲ್ಲಾ ಮಾದರಿಯ ಕ್ರಿಕೆಟ್’ನಿಂದ ಧೋನಿ ನಿವೃತ್ತಿಯಾಗುವುದು ಬಹುತೇಕ ಖಚಿತ.

ಐಪಿಎಲ್’ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 9 ಬಾರಿ ಫೈನಲ್’ಗೆ ಮುನ್ನಡೆಸಿರುವ ಧೋನಿ (Dhoni’s successor) ನಾಲ್ಕು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. 2010, 2011, 2018 ಮತ್ತು 2021ರಲ್ಲಿ ಧೋನಿ ನಾಯಕತ್ವದಲ್ಲಿ CSK ಐಪಿಎಲ್ ಚಾಂಪಿಯನ್ ಆಗಿತ್ತು.

ಧೋನಿ ನಿವೃತ್ತಿಯ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುವವರು ಯಾರು ಎಂಬ ಬಗ್ಗೆ ದೊಡ್ಡ ಕುತೂಹಲವಿದೆ. ಕಳೆದ ಬಾರಿಯ ಟೂರ್ನಿಗೆ ನಾಯಕನಾಗಿ ನೇಮಕಗೊಂಡಿದ್ದ ಆಲ್ರೌಂಡರ್ ರವೀಂದ್ರ ಜಡೇಜ ಸತತ ಸೋಲುಗಳ ಹಿನ್ನೆಲೆಯಲ್ಲಿ ಟೂರ್ನಿಯ ಮಧ್ಯದಲ್ಲೇ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಮತ್ತೆ ಧೋನಿಯವರೇ CSK ತಂಡದ ನಾಯಕತ್ವ ವಹಿಸಿಕೊಂಡಿದ್ದರು.

ಕಳೆದ ವರ್ಷದ ಘಟನೆಯ ನಂತರ ರವೀಂದ್ರ ಜಡೇಜ ಅವರಿಗೆ ಮತ್ತೆ ಚೆನ್ನೈ ತಂಡದ ನಾಯಕತ್ವ ಸಿಗುವ ಸಾಧ್ಯತೆಗಳಿಲ್ಲ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಈಗಿನಿಂದಲೇ ಹೊಸ ನಾಯಕನ ಹುಡುಕಾಟದಲ್ಲಿದೆ. ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿರುವ ಐಪಿಎಲ್ ಮಿನಿ ಹರಾಜಿನಲ್ಲಿ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಖರೀದಿಸಿ ಅವರನ್ನೇ ಧೋನಿ ಉತ್ತರಾಧಿಕಾರಿಯಾಗಿ ನೇಮಕ ಮಾಡುವ ಸಾಧ್ಯತೆಗಳೂ ಇವೆ. ಇದರ ಮಧ್ಯೆ CSK ನಾಯಕತ್ವಕ್ಕೆ ಟೀಮ್ ಇಂಡಿಯಾದ ಮಾಜಿ ಟೆಸ್ಟ್ ಓಪನರ್ ವಸೀಂ ಜಾಫರ್ ಅಚ್ಚರಿಯ ಆಯ್ಕೆಯೊಂದನ್ನು ಹೆಸರಿಸಿದ್ದಾರೆ. ಅವರು ಬೇರಾರೂ ಅಲ್ಲ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಆರಂಭಿಕ ಬ್ಯಾಟ್ಸ್’ಮನ್ ಋತುರಾಜ್ ಗಾಯಕ್ವಾಡ್ (Ruturaj Gaikwad).

ಇದನ್ನೂ ಓದಿ : Team India players in Beach : ವೆಲ್ಲಿಂಗ್ಟನ್ ಬೀಚ್‌ನಲ್ಲಿ ಟೀಮ್ ಇಂಡಿಯಾ ಆಟಗಾರರ “ಬಾಡಿ” ಪ್ರದರ್ಶನ, ವೀಡಿಯೊ ವೈರಲ್

ಇದನ್ನೂ ಓದಿ : India Vs NZ T20 Series: ನಾಳೆಯಿಂದ ಭಾರತ Vs ನ್ಯೂಜಿಲೆಂಜ್ ಟಿ20 ಸರಣಿ: ಒಂದೇ ಕ್ಲಿಕ್‌ನಲ್ಲಿ Live ಟೆಲಿಕಾಸ್ಟ್, ಪ್ಲೇಯಿಂಗ್ XI ಸಹಿತ ಕಂಪ್ಲೀಟ್ ಮಾಹಿತಿ

“ಧೋನಿ ಅವರ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆಗೆ ಋತುರಾಜ್ ಗಾಯಕ್ವಾಡ್ ಉತ್ತರವಾಗಬಲ್ಲರು. ನಾಯಕತ್ವದ ವಿಚಾರದಲ್ಲಿ ಚೆನ್ನೈ ಫ್ರಾಂಚೈಸಿ ಈ ಯುವ ಆಟಗಾರನ ಮೇಲೆ ಕಣ್ಣಿಟ್ಟಿರುವಂತೆ ಕಾಣುತ್ತಿದೆ. ಯಾಕಂದ್ರೆ ಋತುರಾಜ್ ಗಾಯಕ್ವಾಡ್ ಯುವಕ, ಇನ್ನೂ ವಯಸ್ಸಿದೆ. ಈಗಾಗ್ಲೇ ದೇಶೀಯ ಕ್ರಿಕೆಟ್’ನಲ್ಲಿ ಮಹಾರಾಷ್ಟ್ರ ತಂಡವನ್ನು ಮುನ್ನಡೆಸಿದ ಅನುಭವವಿದೆ. ಈ ಕಾರಣಗಳಿಂದ CSK ತಂಡದ ಭವಿಷ್ಯದ ನಾಯಕನಾಗಿ ಋತುರಾಜ್ ಆಯ್ಕೆಯಾಗಬಹುದು, ಆತನಿಗೆ ಫ್ರಾಂಚೈಸಿ ನಾಯಕತ್ವದ ಜವಾಬ್ದಾರಿ ನೀಡಬಹುದು” ಎಂದು ವಸೀಂ ಜಾಫರ್ ಹೇಳಿದ್ದಾರೆ.

(Dhoni’s successor) Mahendra Singh Dhoni, the legendary captain of Chennai Super Kings (MS Dhoni) will retire from the IPL after the IPL-2023 tournament. Next year’s IPL will be the last tournament for 41-year-old MS Dhoni and it is almost certain that Dhoni will retire from all forms of cricket.

Comments are closed.