Teen Serial Killer- ‘KGF’ ರಾಕಿ ಭಾಯ್ ಆಗಲು ಸರಣಿ ಕೊಲೆ

ಭೋಪಾಲ್  : Teen Serial Killer KGF ಪ್ಯಾನ್ ಇಂಡಿಯಾ ಬ್ಲಾಕ್ಬಸ್ಟರ್ ಕೆಜಿಎಫ್ ಸಿನಿಮಾದಿಂದ ಸ್ಫೂರ್ತಿಪಡೆದ ಯುವಕನೊಬ್ಬ ತಾನೂ ಸಹ ಸಿನಿಮಾದಲ್ಲಿರುವಂತೆ ರಾಕಿ ಭಾಯ್ ಆಗಲು, ಡಾನ್ ಆಗಲು ಸರಣಿ ಕೊಲೆಗಳನ್ನ ಮಾಡಿದ್ದಾನೆ.  

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಈಘಟನೆ ನಡೆದಿದ್ದು, ಸರಣಿ ಕೊಲೆಗಳನ್ನ ಮಾಡಿರೋನನ್ನ 19 ವರ್ಷ ವಯಸ್ಸಿನ ಶಿವಪ್ರಸಾದ್ ಅಂತಾ ಗುರುತಿಸಲಾಗಿದೆ. ಅಲ್ಲದೇ ಶಿವಪ್ರಸಾದ್ ಹತ್ಯೆ ಮಾಡುವ ದೃಶ್ಯ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದೆ. ಸದ್ಯ ಪೊಲೀಸರು ಸರಣಿ ಹಂತಕ ಶಿವಪ್ರಸಾದ್ ನನ್ನ ಅರೆಸ್ಟ್ ಮಾಡಿದ್ದಾರೆ.

ಹಂತಕ ಶಿವಪ್ರಸಾದ್ ಮೂವರು ಸೆಕ್ಯೂರಿಟಿ ಗಾರ್ಡ್ ಗಳನ್ನ ಕೊಲೆ ಮಾಡಿದ್ದಾನೆ. ಸಾಗರ ಅನ್ನೋ ಪ್ರದೇಶದಲ್ಲಿ ಇಬ್ಬರನ್ನ ಕೊಂದಿದ್ರೆ ಭೋಪಾಲ್ ನಲ್ಲಿ ಒಬ್ಬ ಸೆಕ್ಯೂರಿಟಿ ಗಾರ್ಡ್ ನನ್ನ ಹತ್ಯೆಗೈದಿದ್ದಾನೆ. ಬೋಪಾಲ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಕೊಲೆ ಮಾಡುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ರಾತ್ರಿ ಮಲಗಿದ್ದ ಸೆಕ್ಯೂರಿಟಿ ಗಾರ್ಡ್ ತಲೆಗೆ ಸುತ್ತಿಗೆ ರೀತಿಯ ಕಟ್ಟಿಗೆ ಯಿಂದ ಹೊಡೆದು, ಕೊಂಚ ಉಸಿರೆತ್ತಲು ಆಗದಂತೆ ಮಾಡಿ ಹತ್ಯೆ ಮಾಡಿದ್ದಾನೆ.

ಹಂತಕ ಶಿವಪ್ರಸಾದ್ ಹತ್ಯೆ ಬಳಿಕ ಸೆಕ್ಯೂರಿಟಿ ಗಾರ್ಡ್ ಬಳಿಯಿದ್ದ ಮೊಬೈಲ್ ಗಳನ್ನ ಕದ್ದೊಯ್ದಿದ್ದ. ಆ ಮೊಬೈಲ್ ಗಳ ಲೊಕೇಷನ್ ಆಧಾರದ ಮೇಲೆ ಪೊಲೀಸರು ಈತನನ್ನ ಅರೆಸ್ಟ್ ಮಾಡಿದ್ದಾರೆ.  ಇನ್ನು ಅರೆಸ್ಟ್ ಮಾಡಿ ಕರೆದೊಯ್ಯುವ ವೇಳೆಯೂ ಶಿವಪ್ರಸಾದ್ ವಿಕ್ಟರಿ ಸಿಂಬಲ್ ತೋರಿಸಿದ್ದಾನೆ.

ಅಲ್ದೆ ಪ್ರಾಥಮಿಕ ತನಿಖೆಯಲ್ಲಿ ಹೊರ ಬಂದಿರೋ ಮಾಹಿತಿ ಪ್ರಕಾರ, ಶಿವ್ರ ಪ್ರಸಾದ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ನೋಡಿ ತಾನೂ ಡಾನ್ ಆಗಬೇಕು ಅಂದುಕೊಂಡಿದ್ದ. ಹೀಗಾಗಿ ಸೆಕ್ಯೂರಿಟಿ ಗಾರ್ಡ್ ಗಳನ್ನೇ ಮೊದಲು ಟಾರ್ಗೆಟ್ ಮಾಡಿಕೊಂಡಿದ್ದ. ಸೆಕ್ಯೂರಿಟಿ ಗಾರ್ಡ್ ಗಳ ಬಳಿಕ ಪೊಲೀಸರ ಹತ್ಯೆಗೆ ಸಂಚು ರೂಪಿಸಿದ್ದ ಅಂತಾ ಗೊತ್ತಾಗಿದೆ. ಆ ಮೂಲಕ ಸರಣಿ ಕೊಲೆಗಳನ್ನ ಮಾಡಿದ್ರೆ ತಾನು ಡಾನ್ ಆಗಬಹುದು, ಸಾಕಷ್ಟು ಹಣ ಸಂಪಾದಿಸಬಹುದು ಅಂತಾ ಈ ಕಿರಾತಕ ಶಿವ್ರಪ್ರಸಾದ್ ಅಂದುಕೊಂಡಿದ್ದ ಅನ್ಸುತ್ತೆ. ಆದ್ರೀಗ ಪೊಲೀಸರು ಬೀಸಿದ ಬಲೆಗೆಯಲ್ಲಿ ತಗ್ಲಾಕ್ಕೊಂಡಿದ್ದು, ಡಾನ್ ಆಗಲು ಹೋದವನು ಕಂಬಿ ಎಣಿಸುವಂತಾಗಿದೆ.

ಇದನ್ನೂ ಓದಿ : POCSO court Judge found dead: ಪೋಕ್ಸೋ ಕೋರ್ಟ್ ನ ಜಡ್ಜ್ ನಿಗೂಢ ಸಾವು

ಇದನ್ನೂ ಓದಿ : wife commits suicide : ಪತಿಯಿಂದಲೇ ಪತ್ನಿಗೆ ಜಾತಿ ನಿಂದನೆ :ಮನನೊಂದ ಗೃಹಿಣಿ ಆತ್ಮಹತ್ಯೆಗೆ ಶರಣು

Teen Serial Killer-Inspired by KGF Movie-Shocking video-crime news

Comments are closed.