POCSO court Judge found dead: ಪೋಕ್ಸೋ ಕೋರ್ಟ್ ನ ಜಡ್ಜ್ ನಿಗೂಢ ಸಾವು

ಕಟಕ್, ಓಡಿಶಾ : POCSO court Judge found dead ಒಡಿಶಾದ ಕಟಕ್ ನಲ್ಲಿ ಪೋಕ್ಸೋ ವಿಶೇಷ ಕೋರ್ಟ್ ನ ಜಡ್ಜ್ ಒಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ಕಟಕ್ ನ ಪೋಕ್ಸೋ ವಿಶೇಷ ಕೋರ್ಟ್ ನ ನ್ಯಾಯಾಧೀಶ ಸುಭಾಷ್ ಕುಮಾರ್ ಬಿಹಾರಿ ಮೃತದೇಹ ಶುಕ್ರವಾರ ಅವರ ಸರ್ಕಾರಿ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಟಕ್ ನ ಜೋನ್-3 ವಿಭಾಗದ ACP ತಪಸ್ ಚಂದ್ರ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಮೇಲ್ನೋಟಕ್ಕೆ ಇದು ಆತ್ಮಹತ್ಯೆ ರೀತಿ ಕಾಣಿಸುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ,  ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ.

ಇನ್ನು ನ್ಯಾಯಾಧೀಶ ಸುಭಾಷ್ ಕುಮಾರ್ ಬಿಹಾರಿ ಅವರ ಸ್ಟೆನೋಗ್ರಾಫರ್ ಮಹಾಪಾತ್ರ ಅವರ ಪ್ರಕಾರ, ಎರಡು ದಿನ ರಜೆ ಮೇಲೆ ತೆರಳಿದ್ದ ಜಡ್ಜ್ ಶುಕ್ರವಾರ ಕರ್ತವ್ಯಕ್ಕೆ ಹಾಜರಾಗಬೇಕಿತ್ತಂತೆ. ಆದ್ರೆ, ಶುಕ್ರವಾರ ಬೆಳಗ್ಗೆ 10 ಗಂಟೆಗೆ ಮಹಾಪಾತ್ರ ಅವ್ರಿಗೆ ನ್ಯಾಯಾಧೀಶ ಸುಭಾಷ್ ಕರೆ ಮಾಡಿದ್ರಂತೆ. ಮತ್ತೆರಡು ದಿನ ರಜೆ ವಿಸ್ತರಣೆ ಮಾಡುವ ಸಂಬಂಧ ರಜೆ ಅರ್ಜಿ ಬರೆಯೋಕೆ ಸ್ಟೆನೋಗ್ರಾಫರ್ ಗೆ ತಿಳಿಸಿದ್ರಂತೆ. ಆದ್ರೆ ಅದಾಗಿ ಕೆಲವೇ ಹೊತ್ತಲ್ಲಿ ಜಡ್ಜ್ ದೇಹ ಅನುಮಾನಾಸ್ಪದವಾಗಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮನೆಯಲ್ಲಿ ಪತ್ನಿ ಮತ್ತು ಮಕ್ಕಳು ಇಲ್ಲದೇ ಇರುವಾಗಲೇ ಈ ರೀತಿಯಾಗಿದೆ. ಸ್ಥಳೀಯರು ನ್ಯಾಯಾಧೀಶರನ್ನ ಆಸ್ಪತ್ರೆಗೆ ದಾಖಲಿಸೋಕೆ ಪ್ರಯತ್ನಿಸಿದ್ದಾರಾದ್ರೂ, ಆಸ್ಪತ್ರೆಗೆ ದಾಖಲಿಸೋ ಮೊದಲೇ ಜಡ್ಜ್ ಕೊನೆಯುಸಿರೆಳೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೇನು ಆತ್ಮಹತ್ಯೆಯೋ ಅಥವಾ ಕೊಲೆಯೋ ಅನ್ನೋದನ್ನ ಪತ್ತೆಹಚ್ಚಲು ತನಿಖೆ ಶುರು ಮಾಡಿದ್ದಾರೆ.

ಪತಿಯಿಂದಲೇ ಪತ್ನಿಗೆ ಜಾತಿ ನಿಂದನೆ :ಮನನೊಂದ ಗೃಹಿಣಿ ಆತ್ಮಹತ್ಯೆಗೆ ಶರಣು

ಪತಿ – ಪತ್ನಿ ನಡುವೆ ಕಲಹಗಳು ಉಂಟಾಗೋದು ಸರ್ವೇ ಸಾಮಾನ್ಯ. ಆದರೆ ಈ ಜಗಳಗಳು ತೀರಾ ಮುಂದುವರಿಯುವಂತೆ ಇರಬಾರದು. ಗಂಡ – ಹೆಂಡಿರ ಜಗಳ ಉಂಡು ಮಲಗೋ ತನಕ ಎಂಬ ಮಾತಿನಂತೆ ಇಷ್ಟಕ್ಕೆ ಮಾತ್ರ ಮನಸ್ತಾಪಗಳು ಸೀಮಿತವಾಗಿದ್ದರೆ ಯಾವುದೇ ಸಮಸ್ಯೆ ಇರೋದಿಲ್ಲ . ಆದರೆ ತುಮಕೂರು ಜಿಲ್ಲೆ ತುಮಕೂರು ತಾಲೂಕಿನ ಅನುಪನಹಳ್ಳಿ ಎಂಬಲ್ಲಿ ಪತಿ – ಪತ್ನಿ ನಡುವಿನ ಕಲಹವು ಸಾವಿನಲ್ಲಿ ಅಂತ್ಯಗೊಂಡ ದಾರುಣ ಘಟನೆಯೊಂದು ವರದಿಯಾಗಿದೆ.

ಪತಿಯೊಂದಿಗಿನ ಪ್ರತಿನಿತ್ಯದ ಕಿತ್ತಾಟದಿಂದ ಬೇಸತ್ತ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಮಹಿಳೆಯನ್ನು 22 ವರ್ಷದ ಗೌರಮ್ಮ ಎಂದು ಗುರುತಿಸಲಾಗಿದೆ. ತುಮಕೂರು ಹೊರ ವಲಯದ ಮಂಚಗೊಂಡನಹಳ್ಳಿಯ ನಿವಾಸಿಯಾದ ಗೌರಮ್ಮ ಕಳೆದ ವರ್ಷವಷ್ಟೇ ಅನುಪನಹಳ್ಳಿಯ ನಿವಾಸಿ ರವಿತೇಜನನ್ನು ವಿವಾಹವಾಗಿದ್ದರು.

ಗೌರಮ್ಮಗೆ ಪೋಷಕರು ಇಲ್ಲದ ಕಾರಣ ಅವರ ಚಿಕ್ಕಮ್ಮನೇ ಇವರನ್ನು ಸಾಕಿ ಕೊನೆಗೆ ಮದುವೆಯನ್ನೂ ಮಾಡಿಕೊಟ್ಟಿದ್ದರು. ಪರಿಶಿಷ್ಟ ಜಾತಿಗೆ ಸೇರಿದ ಗೌರಮ್ಮನನ್ನು ತುಮಕೂರಿನ ಯಲ್ಲಾಪುರದ ಗಾರ್ಮೆಂಟ್ಸ್​​ವೊಂದರಲ್ಲಿ ಕೆಲಸ ಮಾಡುತ್ತಿದ್ದ ರವಿತೇಜ ಎಂಬಾತನ ಜೊತೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಪರಿಶಿಷ್ಟ ಜಾತಿಗೆ ಸೇರಿದ ಗೌರಮ್ಮಳನ್ನು ಮದುವೆಯಾಗಿ ಸರ್ಕಾರದಿಂದ 3 ಲಕ್ಷ ರೂಪಾಯಿ ಸೌಲಭ್ಯವನ್ನೂ ಪಡೆದಿದ್ದ ಈ ರವಿತೇಜ ಗೌರಮ್ಮನಿಗೆ ಪದೇ ಪದೇ ನೀವು ಕೆಳಗಿನ ಜಾತಿಯವಳು ಎಂದು ನಿಂದಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಮನನೊಂದಿದ್ದ ಗೌರಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Murugha Seer in Jail : ಜೈಲು ಸೇರಿದ ಮುರುಘಾ ಶ್ರೀ

ಇದನ್ನೂ ಓದಿ : Teen Serial Killer- ‘KGF’ ರಾಕಿ ಭಾಯ್ ಆಗಲು ಸರಣಿ ಕೊಲೆ

POCSO court Judge found dead-crime news-Odisha’s Cuttack

Comments are closed.