Terrorist Fake ID: ದಾಖಲೆ ಕಳೆದುಕೊಂಡಿದ್ರೆ ಹುಷಾರ್ ! ನಿಮ್ಮ ಹೆಸರಲ್ಲಿ ಸಿದ್ದವಾಗುತ್ತೆ ಉಗ್ರರ ನಕಲಿ ಐಡಿ

ಮಂಗಳೂರು: (Terrorist Fake ID) ಮಂಗಳೂರು ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಶಾರೀಖ್‌ ನಕಲಿ ಐಡಿ ಕಾರ್ಡ್‌ ಗಳನ್ನು ಬಳಸಿ ಉಗ್ರ ಕೃತ್ಯಗಳನ್ನು ನಡೆಸುತ್ತಿದ್ದ ಎಂಬ ಮಾಹಿತಿ ತಿಳಿದು ಬಂದಿತ್ತು. ಅಮಾಯಕರ ವೇಷ ಧರಿಸಿ ಉಗ್ರ ಚಟುವಟಿಕೆಗಳನ್ನು ಹೇಗೆ ನಡೆಸಬಹುದು ಎಂಬ ಬಗ್ಗೆ ಇಲ್ಲೊಂದು ಭಯಾನಕ ಸತ್ಯ ಹೊರಬಿದ್ದಿದೆ. ಭಯೋತ್ಪಾದಕರ ನಕಲಿ ಐಡಿ ಮಾಫಿಯಾದ ಅಸಲಿ ಕತೆ ಇಲ್ಲಿದೆ.

ಹೌದು..! ಸಾಮಾಜಿಕ ಜಾಲತಾಣಗಳಲ್ಲಿ ಅಮಾಯಕರು ಫೋಟೋ ಹಂಚಿಕೊಳ್ಳುವ ಮೊದಲು ಈ ವಿಷಯವನ್ನು ತಿಳಿಯಲೇ ಬೇಕು ಏಕೆಂದರೇ ನಿಮ್ಮ ಫೋಟೋಗಳನ್ನೇ ಬಳಸಿ ನಕಲಿ ಐಡಿ(Terrorist Fake ID)ಗಳನ್ನು ಕ್ರಿಯೇಟ್‌ ಮಾಡಿ ನಿಮ್ಮ ಹೆಸರಲ್ಲೇ ಉಗ್ರ ಕೃತ್ಯಗಳನ್ನು ನಡೆಸುವ ಒಂದು ಮಾಫಿಯಾದ ಬಗ್ಗೆ ಮಾಹಿತಿ ಬಯಲಾಗಿದೆ. ಅಮಾಯಾಕರ ಫೋಟೋಗಳನ್ನೇ ಬಳಸಿಕೊಂಡು, ಅವರ ವೇಷವನ್ನೇ ಧರಿಸಿಕೊಂಡು ಉಗ್ರ ಚಟುವಟಿಕೆಗಳನ್ನು ನಡೆಸಬಹುದು. ನಂತರ ಉಗ್ರ ಕೃತ್ಯಕ್ಕೆ ನಿಮ್ಮ ಹೆಸರನ್ನೇ ಬಳಸಿಕೊಳ್ಳಬಹುದು, ಎಚ್ಚರವಾಗಿರಿ.

ಮಂಗಳೂರು ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಶಾರೀಖ್‌ ಪ್ರೇಮ್‌ ರಾಜ್‌ ಎನ್ನುವ ಹೆಸರಲ್ಲಿ ನಕಲಿ ಐಡಿ ಕಾರ್ಡ್‌ ತಯಾರಿಸಿ ಅದನ್ನೇ ಬಳಸಿಕೊಂಡು ಬಾಂಬ್‌ ಬ್ಲಾಸ್ಟ್‌ಗೆ ಹುನ್ನಾರ ಹಾಕಿದ್ದ. ಇದೇ ರೀತಿ ನಿಮ್ಮ ಆಧಾರ್‌ ನಂಬರ್‌ ಅನ್ನೇ ಇಟ್ಟುಕೊಂಡು ಫೋಟೋ ಬದಲಿಸಿ ಉಗ್ರ ಕೃತ್ಯಗಳನ್ನು ನಡೆಸಬಹುದು. ನಂತರ ಅದನ್ನು ನಿಮ್ಮ ತಲೆಗೆ ಕಟ್ಟಬಹುದು. ಇಲ್ಲಿ ಯಾರ ಮಾಹಿತಿಗಳು ಗೌಪ್ಯವಲ್ಲ.

200-300 ರೂಪಾಯಿ ಪಾವತಿಸಿದರೆ ಸಾಕು ನಿಮಗೆ ನಕಲಿ ಐಡಿ ಕ್ರಿಯೇಡ್‌ ಮಾಡುವ ವೆಬ್‌ ಸೈಟ್‌ ಗೆ ಲಾಗಿನ್‌ ಆಗುತ್ತೆ. ವೆಬ್‌ ಸೈಟ್‌ ನಲ್ಲಿ ಯಾವುದಾದರೂ ಹನ್ನೆರಡು ನಂಬರ್‌ ಅನ್ನು ದಾಖಲಿಸಿದರೆ ನಿಮಗೊಂದು ಅರ್ಜಿ ಲಭ್ಯವಾಗುತ್ತದೆ. ಅದರಲ್ಲಿ ಮಾಹಿತಿಗಳನ್ನು ನೀಡಿದರೆ ಕ್ಷಣ ಮಾತ್ರದಲ್ಲಿ ನಿಮ್ಮ ಹೆಸರಲ್ಲಿ ನಕಲಿ ಆಧಾರ್‌ ಕಾರ್ಡ್‌ ರೆಡಿಯಾಗುತ್ತೆ. ಇದೇ ರೀತಿ ಪಾನ್‌ ಕಾರ್ಡ್‌ ಹಾಗೂ ವೋಟರ್‌ ಐಡಿ ಕೂಡ ಕ್ರಿಯೇಟ್‌ ಮಾಡಬಹುದು. ನಕಲಿ ಆಧಾರ್‌ ಕಾರ್ಡ್‌ ಕ್ರಿಯೇಟ್‌ ಮಾಡಲು ಕೇವಲ ಇಪ್ಪತ್ತು ರೂಪಾಯಿ ಸಾಕು. ನಿಮಗೆ ನಕಲಿ ಆಧಾರ್‌ ಕಾರ್ಡ್‌ ಜೊತೆಗೆ ನಕಲಿ ವೋಟರ್‌ ಐಡಿ ಹಾಗೂ ಪಾನ್‌ ಕಾರ್ಡ್‌ ಕೂಡ ಲಭ್ಯವಾಗುತ್ತದೆ ಎಂದು ಕನ್ನಡದ ಸುದ್ದಿ ವಾಹಿನಿ ಸುವರ್ಣ ನ್ಯೂಸ್ ವರದಿ ಮಾಡಿದೆ.

ಇದನ್ನೂ ಓದಿ : Deadly Mosquito: ಸೊಳ್ಳೆ ಕಚ್ಚಿದ್ದಕ್ಕೆ 30 ಬಾರಿ ಆಪರೇಷನ್ ಗೆ ಒಳಗಾದ; 1 ತಿಂಗಳು ಕೋಮಾದಲ್ಲಿದ್ದ.. ಕೊನೆಗೂ ಬದುಕಿ ಬರಲೇ ಇಲ್ಲ..

ಇದನ್ನೂ ಓದಿ : ಪಳನಿಯಲ್ಲಿ ಬಾಯ್ಲರ್ ಸ್ಫೋಟ : ತಪ್ಪಿದ ಬಾರೀ ದುರಂತ

ಯಾರದ್ದೋ ಫೋಟೋ ಬಳಸಿ, ಇನ್ಯಾರದ್ದೋ ಐಡಿ ಬಳಸಿ ಉಗ್ರರು ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗುವ ನಿಮ್ಮ ಫೋಟೋಗಳನ್ನೇ ಬಳಸಿಕೊಂಡು ಫೇಕ್‌ ಐಡಿಯನ್ನು ಕ್ರಿಯೇಟ್‌ ಮಾಡುತ್ತಾರೆ. ನಂತರ ಅದನ್ನೇ ಬಾಂಬ್‌ ಸ್ಫೋಟ ಹಾಗೂ ಇನ್ನೀತರ ಉಗ್ರ ಕೃತ್ಯಗಳಿಗೆ ಬಳಸಿಕೊಳ್ಳುತ್ತಾರೆ. ರಾಜ್ಯ ಸರ್ಕಾರ ಇದರ ಬಗ್ಗೆ ಕ್ರಮ ಕೈಗೊಳ್ಳಲೇಬೇಕು. ಇಲ್ಲವಾದಲ್ಲಿ ದೇಶಕ್ಕೆ ಗಂಡಾಂತರ ಕಟ್ಟಿಟ್ಟ ಬುತ್ತಿ.

(Terrorist Fake ID) In connection with the Mangalore bomb blast case, information has come to light that terrorist Sharikh was carrying out terrorist activities using fake ID cards. Here is a shocking truth about how innocent people can carry out violent activities. Here is the real story of fake ID mafia of terrorists.

Comments are closed.