ಹಾಸ್ಟೆಲ್​​ ಕಿಟಕಿ ರಾಡ್​ ಮುರಿದು ಎಸ್ಕೇಪ್​ ಆದ ವಿದ್ಯಾರ್ಥಿನಿಯರು

ಮಂಗಳೂರು : students escaped : ಕೆಲವು ದಿನಗಳ ಹಿಂದೆಯಷ್ಟೇ ಚಂಡೀಗಢದ ಮೊಹಾಲಿ ಎಂಬಲ್ಲಿ 60 ವಿದ್ಯಾರ್ಥಿನಿಯರು ಹಾಸ್ಟೆಲ್​ನಲ್ಲಿ ಸ್ನಾನ ಮಾಡುತ್ತಿದ್ದ ಖಾಸಗಿ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರು ಹಾಸ್ಟೆಲ್​ನಿಂದ ಎಸ್ಕೇಪ್​ ಆಗಿರುವ ಘಟನೆಯೊಂದು ಬೆಳಕಿಗೆ ಬಂದಿದ್ದು ಹಾಸ್ಟೆಲ್​ಗೆ ಮಕ್ಕಳನ್ನು ಪೋಷಕರು ಯಾವ ನಂಬಿಕೆ ಮೇಲೆ ಕಳಿಸಬೇಕು ಎಂಬ ಪ್ರಶ್ನೆ ಇದೀಗ ಮೂಡಿದೆ.

ಖಾಸಗಿ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಹಾಸ್ಟೆಲ್​​ನ ಕಿಟಕಿಯ ರಾಡ್​ ಮುರಿದು ಎಸ್ಕೇಪ್​ ಆಗಿದ್ದಾರೆ ಎನ್ನಲಾಗಿದೆ. ನಾಪತ್ತೆಯಾಗಿರುವ ವಿದ್ಯಾರ್ಥಿನಿಯರನ್ನು ಯಶಸ್ವನಿ, ದಕ್ಷತಾ ಹಾಗೂ ಸಿಂಚನಾ ಎಂದು ಗುರುತಿಸಲಾಗಿದೆ. ನಾಪತ್ತೆಯಾದ ವಿದ್ಯಾರ್ಥಿನಿಯರ ಪೈಕಿ ಯಶಸ್ವಿನಿ ಹಾಗೂ ದಕ್ಷತಾ ಬೆಂಗಳೂರು ನಿವಾಸಿಗಳಾಗಿದ್ದಾರೆ. ಸಿಂಚನಾ ಚಿತ್ರದುರ್ಗ ಮೂಲದ ವಿದ್ಯಾರ್ಥಿನಿಯಾಗಿದ್ದಾರೆ. ಇಂದು ಮುಂಜಾನೆ ಮೂರು ಗಂಟೆ ಸುಮಾರಿಗೆ ಈ ಮೂವರು ವಿದ್ಯಾರ್ಥಿನಿಯರು ಎಸ್ಕೇಪ್​ ಆಗಿದ್ದಾರೆ. ಈ ಮೂವರು ವಿದ್ಯಾರ್ಥಿನಿಯರು ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.

ವಿದ್ಯಾರ್ಥಿನಿಯರು ಲಗೇಜು ಸಮೇತ ಹಾಸ್ಟೆಲ್​ ಮುಂಭಾಗದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಂದು ಮುಂಜಾನೆ ಸರಿಯಾಗಿ 3:09ಕ್ಕೆ ಈ ವಿದ್ಯಾರ್ಥಿನಿಯರು ಹಾಸ್ಟೆಲ್​ ಗೇಟ್​ನಿಂದ ಹೊರ ಬಿದ್ದಿದ್ದಾರೆ. ಹಾಸ್ಟೆಲ್​​ನ ಕಿಟಕಿಯ ರಾಡ್​ ಮುರಿದ ಈ ಮೂವರು ವಿದ್ಯಾರ್ಥಿನಿಯರು ಹಾಸ್ಟೆಲ್​​ನಿಂದ ಎಸ್ಕೇಪ್​ ಆಗಿದ್ದಾರೆ. ಎಸ್ಕೇಪ್​ ಆಗುವ ಮುನ್ನ ನೋಟ್​ ಕೂಡ ಬರೆದಿಟ್ಟಿರುವ ಯಶಸ್ವಿನಿ, ದಕ್ಷತಾ ಹಾಗೂ ಸಿಂಚನಾ ನಾವು ಹೋಗುತ್ತಿದ್ದೇವೆ ಕ್ಷಮಿಸಿ ಎಂದು ಬರೆದಿದ್ದಾರೆ .

ಮಂಗಳೂರು ನಗರದ ಮೇರಿಹಿಲ್​ನಲ್ಲಿರುವ ಖಾಸಗಿ ಕಾಲೇಜಿಗೆ ಸೇರಿದ ಹಾಸ್ಟೆಲ್​ ಇದಾಗಿದ್ದು ಕಾಲೇಜು ಆವರಣದಲ್ಲಿಯೇ ಹಾಸ್ಟೆಲ್​ ಕಟ್ಟಡವಿದೆ. ಈ ಸಂಬಂಧ ಮಂಗಳೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ವಿದ್ಯಾರ್ಥಿನಿಯರು ಬರೆದಿಟ್ಟ ಪತ್ರ ಹಾಗೂ ಸಿಸಿಟಿವಿ ಫೂಟೇಜ್​ಗಳನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ : Virat Kohli New Hair Style: ಹೊಸ ಹೇರ್ ಸ್ಟೈಲ್‌ಗೆ ವಿರಾಟ್ ಕೊಹ್ಲಿ ಖರ್ಚು ಮಾಡಿದ ಮೊತ್ತ ₹80,000

ಇದನ್ನೂ ಓದಿ : drugs at Gobhi Manchurian shop :ನಡೆಸುತ್ತಿದ್ದುದು ಗೋಭಿ ಅಂಗಡಿ, ಮಾರಾಟವಾಗಿದ್ದು ಡ್ರಗ್ಸ್​ : ಕೊನೆಗೂ ಖಾಕಿ ಬಲೆಗೆ ಬಿದ್ದ ಐನಾತಿ

The female students escaped by breaking the window rod of the hostel

Comments are closed.