illicit relationship :ಸೋದರತ್ತೆಯೊಂದಿಗೆ ಅಳಿಯನ ಅಕ್ರಮ ಸಂಬಂಧ ಕೊಲೆಯಲ್ಲಿ ಅಂತ್ಯ

ರಾಮನಗರ : illicit relationship : ಜುಲೈ 15ರಂದು ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದ ಕೊಲೆ ಪ್ರಕರಣವನ್ನು ಬಯಲಿಗೆಳೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜುಲೈ 15ರಂದು ಮಹದೇಶ್ವರ ನಗರದಲ್ಲಿರುವ ಮನೆಯೊಂದರಲ್ಲಿ ಮಹಿಳೆಯನ್ನು ಕೊಲೆಗೈಯಲಾಗಿತ್ತು. ತನ್ನದೇ ನಿವಾಸದಲ್ಲಿನ ಬೆಡ್​ ರೂಮಿನಲ್ಲಿ ಮಹಿಳೆಯು ಶವವಾಗಿ ಪತ್ತೆಯಾಗಿದ್ದಳು. ಕೊಲೆಗಾರ ಮನೆಯಲ್ಲಿ ಸಣ್ಣ ಸುಳಿವನ್ನೂ ಬಿಟ್ಟಿರದ ಹಿನ್ನೆಲೆಯಲ್ಲಿ ಪೊಲೀಸರಿಗೆ ಈ ಕೊಲೆ ಪ್ರಕರಣವನ್ನು ಭೇದಿಸುವುದು ಸಖತ್​ ಚಾಲೆಂಜಿಂಗ್​ ಆಗಿತ್ತು.


ಮಹಿಳೆಯನ್ನು ಆಕೆಯ ಮನೆಯಲ್ಲಿನ ಬೆಡ್​ರೂಮಿನಲ್ಲಿಯೇ ಚಾಕುವಿನಿಂದ ಇರಿದು ಕೊಲೆಗೈಯಲಾಗಿತ್ತು. ಈ ಪ್ರಕರಣದ ಒಂದೊಂದೆ ಎಳೆಯನ್ನು ಪೊಲೀಸರು ಬಿಡಿಸುತ್ತಾ ಹೋಗಿದ್ದು ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಮನಗರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಂತೋಷ್​​ ಬಾಬು ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಓಂಪ್ರಕಾಶ್ ನೇತೃತ್ವದಲ್ಲಿ ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ಟಿ.ಬಿ ಶಿವಕುಮಾರ್ & ಟೀಂ ಈ ಪ್ರಕರಣದ ತನಿಖೆಯನ್ನು ನಡೆಸಿ ಆರೋಪಿಯ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ.


ಮಹಿಳೆಯ ಕೊಲೆಗೆ ಆಕೆಯ ಅಕ್ರಮ ಸಂಬಂಧವೇ ಕಾರಣ ಎಂಬುದು ತನಿಖೆಯ ವೇಳೆ ತಿಳಿದು ಬಂದಿದೆ. ಮೃತ ಮಹಿಳೆಯು ತನ್ನ ಪತಿಯ ಅಕ್ಕನ ಪುತ್ರನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಇಬ್ಬರ ನಡುವಿನ ಅಕ್ರಮ ಸಂಬಂಧ ಗಾಢವಾಗುತ್ತಿದ್ದಂತೆಯೇ ಸೋದರಳಿಯ ಮೃತ ಮಹಿಳೆಗೆ ನೀವು ಪತಿ ಹಾಗೂ ಮಕ್ಕಳನ್ನು ಬಿಟ್ಟು ತನ್ನೊಂದಿಗೆ ನೆಲೆಸಬೇಕೆಂದು ಬೆದರಿಸಿದ್ದಾನೆ. ಆದರೆ ಇದಕ್ಕೆ ಮಹಿಳೆಯು ಒಪ್ಪದ ಹಿನ್ನೆಲೆಯಲ್ಲಿ ಕೋಪಗೊಂಡ ಸೋದರಳಿಯ ತನ್ನ ಮಾವ ಕೆಲಸಕ್ಕೆ ತೆರಳುತ್ತಿದ್ದಂತೆಯೇ ಆಕೆಯ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಕೊಲೆ ಮಾಡಿ ಎಸ್ಕೇಪ್​ ಆಗಿದ್ದ .


ಕೊಲೆ ಮಾಡಿದ ಬಳಿಕ ಆರೋಪಿಯು ತನ್ನ ಸೋದರತ್ತೆಯ ಚಿನ್ನದ ಸರ ಹಾಗೂ ಮೊಬೈಲ್​ನ್ನು ಕೆರೆಗೆ ಎಸೆದಿದ್ದ. ಕೊಲೆ ಮಾಡಲು ಬಂದ ಬಟ್ಟೆಯನ್ನೂ ಮರೆ ಮಾಡಿದ್ದ. ಬಳಿಕ ಬೈಕ್​ ನಂಬರ್​ ಪ್ಲೇಟ್​ ಕೂಡ ಬದಲಾಯಿಸಿಕೊಂಡು ತಿರುಗುತ್ತಿದ್ದ ಎನ್ನಲಾಗಿದೆ .

ಇದನ್ನು ಓದಿ : liquor online : ಆನ್​ಲೈನ್​ನಲ್ಲಿ ಮದ್ಯ ಖರೀದಿಸಲು ಹೋಗಿ ಬರೋಬ್ಬರಿ 1.6 ಲಕ್ಷ ರೂ.ಕಳೆದುಕೊಂಡ ಮಹಿಳೆ

ಇದನ್ನೂ ಓದಿ : STUDENTS STOLEN BULLETS : ಐಷಾರಾಮಿ ಜೀವನಕ್ಕೆಂದು ಬೈಕ್​ ಕಳ್ಳತನಕ್ಕೆ ಇಳಿದ ವಿದ್ಯಾರ್ಥಿಗಳ ಬಂಧನ

the son in law had an illicit relationship with the mother in law

Comments are closed.