liquor online : ಆನ್​ಲೈನ್​ನಲ್ಲಿ ಮದ್ಯ ಖರೀದಿಸಲು ಹೋಗಿ ಬರೋಬ್ಬರಿ 1.6 ಲಕ್ಷ ರೂ.ಕಳೆದುಕೊಂಡ ಮಹಿಳೆ

ಮಹಾರಾಷ್ಟ್ರ : liquor online : ಆನ್​ಲೈನ್​ನಲ್ಲಿ 1700 ರೂಪಾಯಿ ಮೌಲ್ಯದ ಮದ್ಯ ಖರೀದಿ ಮಾಡಲು ಯತ್ನಿಸಿದ 29 ವರ್ಷದ ಮಹಿಳೆಯೊಬ್ಬರು ಸೈಬರ್​ ವಂಚಕನಿಂದ ಬರೋಬ್ಬರಿ 1.6 ಲಕ್ಷ ರೂಪಾಯಿ ಮೋಸಕ್ಕೆ ಒಳಗಾದ ಘಟನೆಯು ಮಹಾರಾಷ್ಟ್ರದ ಮಲಾಡ್​ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾನು ಮದ್ಯದಂಗಡಿಯ ಸಿಬ್ಬಂದಿ ಎಂದು ಹೇಳಿಕೊಂಡ ಸೈಬರ್​ ವಂಚಕನು ಮಹಿಳೆಗೆ ಲಕ್ಷಗಟ್ಟಲೇ ಹಣ ಪಂಗನಾಮ ಹಾಕಿದ್ದಾನೆ.ಜುಲೈ 14ರಂದು ನಡೆದ ಘಟನೆಯು ತಡವಾಗಿ ಬೆಳಕಿಗೆ ಬಂದಿದ್ದು ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಖಾಸಗಿ ಕೋಚಿಂಗ್​ ಸೆಂಟರ್​ನಲ್ಲಿ ಉಪನ್ಯಾಕಸಿಯಾಗಿರುವ ಮಹಿಳೆಯು ಮಲಾಡ್​ನಲ್ಲಿ ತಮ್ಮ ಪತಿಯೊಂದಿಗೆ ವಾಸವಿದ್ದಾರೆ. ಜುಲೈ 14ರ ಸಂಜೆ 7 ಗಂಟೆ ಸುಮಾರಿಗೆ ಈ ದಂಪತಿ ಸ್ಥಳೀಯ ಮದ್ಯದ ಅಂಗಡಿಯಿದ ಮದ್ಯವನ್ನು ಆರ್ಡರ್​ ಮಾಡಲು ನಿರ್ಧರಿಸಿದ್ದರು.


ಪೊಲೀಸರಿಗೆ ನೀಡಲಾದ ದೂರಿನಲ್ಲಿ ಮಹಿಳೆಯು, ‘ ಚಿಂಚೋಳಿಯ ವೈನ್​ಶಾಪ್​​ನಿಂದ ಬ್ಲೆಂಡರ್ಸ್​ ಫ್ರೈಡ್​​ ಆರ್ಡರ್​ ಮಾಡುವಂತೆ ಪತಿಯು ನನಗೆ ಹೇಳಿದ್ದರು. ನಾನು ವೈನ್​ಶಾಪ್​ನ ನಂಬರ್​ನ್ನು ಗೂಗಲ್​​ನಲ್ಲಿ ಹುಡುಕಿ ಕರೆ ಮಾಡಿದೆ. ವೈನ್​ಶಾಪ್​ ಸಿಬ್ಬಂದಿ ಎಂದು ಹೇಳಿಕೊಂಡ ಸೈಬರ್​ ವಂಚಕನು ನೀವು 1700 ರೂಪಾಯಿ ಪಾವತಿ ಮಾಡಿದ್ದೀರಿ. ಆದರೆ ಜಿಎಸ್​ಟಿ ಪಾವತಿ ಮಾಡಬೇಕಿದೆ ಎಂದು ಹೇಳಿದರು. ಅಲ್ಲದೇ ವಾಟ್ಸಾಪ್​ನಲ್ಲಿ ಕ್ಯೂಆರ್​ ಕೋಡ್​ ಕಳುಹಿಸಿ ಇದನ್ನು ಸ್ಕ್ಯಾನ್​ ಮಾಡಿ ಹಣ ಪಾವತಿಸುವಂತೆ ಹೇಳಿದ್ದರು. ಇಲ್ಲಿ ಸ್ಕ್ಯಾನ್​ ಮಾಡುತ್ತಿದ್ದಂತೆಯೇ ನನ್ನ ಖಾತೆಯಿಂದ 19,860 ರೂಪಾಯಿ ಹಣ ಡೆಬಿಟ್​ ಆಯ್ತು ಎಂದು ತಿಳಿಸಿದ್ದಾರೆ .


ಮಹಿಳೆಗೆ ತಾನು ಸೈಬರ್​ ವಂಚನೆ ಆಗಿದೆ ಎಂದು ತಿಳಿಯುತ್ತಿದ್ದಂತೆಯೇ ವಂಚಕನಿಗೆ ಈ ಬಗ್ಗೆ ಹೇಳಿದ್ದಾರೆ. ಆದರೆ ಆತ ಇಲ್ಲ ತಪ್ಪಾಗಿ ಈ ರೀತಿ ಆಗಿದೆ ಎಂದು ಹೇಳಿ ಮತ್ತೊಂದು ಕ್ಯೂ ಆರ್​ ಕೋಡ್​ ಕಳುಹಿಸಿದ್ದ. ಇದನ್ನು ಸ್ಕ್ಯಾನ್​ ಮಾಡುತ್ತಿದ್ದಂತೆಯೇ ಮಹಿಳೆಯ ಖಾತೆಗೆ 10 ರೂಪಾಯಿ ಪಾವತಿಯಾಗಿದೆ. ಇದಾದ ಬಳಿಕ ವಂಚಕ ಮತ್ತೊಂದು ಕ್ಯೂ ಆರ್ ಕೋಡ್​ ಕಳಿಸಿದ್ದ ಇದನ್ನೂ ಮಹಿಳೆ ಸ್ಕ್ಯಾನ್​ ಮಾಡಿದ್ದು ಕೂಡಲೇ ಆಕೆಯ ಖಾತೆಯಿಂದ 81,200 ರೂಪಾಯಿ ಖಾಲಿ ಆಗಿದೆ.


ಇದರಿಂದ ಆತಂಕಗೊಂಡ ಮಹಿಳೆಯು ಮತ್ತದೇ ನಂಬರ್​ಗೆ ಕರೆ ಮಾಡಿದರೆ ಆತ ನನ್ನ ಖಾತೆಯಲ್ಲಿ ತಾಂತ್ರಿಕ ಸಮಸ್ಯೆಯಿಂದ ಈ ರೀತಿ ಆಗಿದೆ ಎಂದು ಕ್ಷಮೆಯಾಚಿಸಿದ್ದಾನೆ. ಹಣವನ್ನು ಮರು ಪಾವತಿ ಮಾಡಲು ನಿಮ್ಮ ಫೋನ್​ ನಂಬರ್​ ಹಾಗೂ ಬ್ಯಾಂಕ್​ ಖಾತೆಯ ವಿವರ ನೀಡಿ ಎಂದು ಕೇಳಿದ್ದಾನೆ. ಈ ಬಾರಿ ಆಕೆ ತನ್ನ ಪತಿಯ ಮೊಬೈಲ್​ ಸಂಖ್ಯೆ ಹಾಗೂ ಬ್ಯಾಂಕ್​ ವಿವರವನ್ನು ನೀಡಿದ್ದಾಳೆ. ಅಲ್ಲದೇ ಮತ್ತೊಂದು ಕ್ಯೂ ಆರ್​ ಕೋಡ್​​ ಪಡೆದಿದ್ದಳು. ಇದನ್ನು ಸ್ಕ್ಯಾನ್​ ಮಾಡಿದಾಗ ಖಾತೆಯಿಂದ ಮತ್ತೆ 79,460 ರೂಪಾಯಿ ಡೆಬಿಟ್​ ಆಗಿದೆ.


ಮಹಿಳೆಯು ಮತ್ತೆ ಅದೇ ಸಂಖ್ಯೆಗೆ ಕರೆ ಮಾಡಿದ್ದು ವಂಚಕನು ನಿಮ್ಮ ಮನೆಗೆ ಮದ್ಯ ತಲುಪಿಸಲು ಬಂದಾಗ ಈ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸುತ್ತೇನೆಂದು ಹೇಳಿದ್ದಾರೆ. ಆದರೆ ಎಷ್ಟು ಹೊತ್ತು ಕಳೆದರೂ ಯಾರೊಬ್ಬರೂ ಮನೆಗೆ ಆಗಮಿಸದೇ ಹೋದದ್ದನ್ನು ಕಂಡು ಪತಿಯು ಮದ್ಯದಂಗಡಿಗೆ ಹೋಗಿ ವಿಚಾರಿಸಿದಾಗ ಸೈಬರ್​ ವಂಚನೆಯಾಗಿರುವುದು ದೃಢವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ .

ಇದನ್ನು ಓದಿ :First Child Via IVF : ಮದುವೆಗಾಗಿ 54 ವರ್ಷಗಳ ಬಳಿಕ ಮೊದಲ ಮಗುವನ್ನು ಬರಮಾಡಿಕೊಂಡ ವೃದ್ಧ ದಂಪತಿ

ಇದನ್ನೂ ಓದಿ : STUDENTS STOLEN BULLETS : ಐಷಾರಾಮಿ ಜೀವನಕ್ಕೆಂದು ಬೈಕ್​ ಕಳ್ಳತನಕ್ಕೆ ಇಳಿದ ವಿದ್ಯಾರ್ಥಿಗಳ ಬಂಧನ

Mumbai woman tries to order liquor online for Rs 1,700, loses Rs 1.6 lakh

Comments are closed.