Three Truck catches fire: ಭೀಕರ ಅಪಘಾತ ಹೊತ್ತಿ ಉರಿದ 3 ಟ್ರಕ್ : ಇಬ್ಬರು ಸಜೀವ ದಹನ

ಮಧ್ಯಪ್ರದೇಶ: (Three Truck catches fire) ಮಧ್ಯಪ್ರದೇಶದ ಧಾರ್ ಜಿಲ್ಲೆಯ ಹೆದ್ದಾರಿಯಲ್ಲಿ ಶನಿವಾರ ಎರಡು ಟ್ರಕ್‌ ಗಳ ನಡುವೆ ಢಿಕ್ಕಿಯಾಗಿದ್ದು, ನಂತರ ಢಿಕ್ಕಿಯಾದ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಸಜೀವ ದಹನಗೊಂಡಿರುವ ಘಟನೆ ನಡೆದಿದೆ. ಅಪಘಾತದಲ್ಲಿ ಇಬ್ಬರು ಸಜೀವ ದಹನವಾಗಿದ್ದು, ಮೂವರು ಗಾಯಗೊಂಡಿದ್ದಾರೆ.

ಜಿಲ್ಲಾ ಕೇಂದ್ರದಿಂದ ಸುಮಾರು 60 ಕಿಮೀ ದೂರದಲ್ಲಿರುವ ಇಂದೋರ್-ಮುಂಬೈ ಹೆದ್ದಾರಿಯಲ್ಲಿರುವ ಗಣಪತಿ ಘಾಟ್‌ನಲ್ಲಿ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ದೇವೇಂದ್ರ ಪಾಟಿದಾರ್ ತಿಳಿಸಿದ್ದಾರೆ. ಮಾರ್ಬಲ್ ಸಾಗಿಸುವ ಉದ್ದದ ಟ್ರಕ್‌ನ ಬ್ರೇಕ್ ವಿಫಲವಾಗಿದ್ದು, ಇದರಿಂದಾಗಿ ವಾಹನವು ಡಿವೈಡರ್‌ ಗೆ ಢಿಕ್ಕಿ ಹೊಡೆದು ನಂತರ ಹೆದ್ದಾರಿಯ ಎದುರು ಭಾಗಕ್ಕೆ ಹೋಗಿದ್ದು, ಅಲ್ಲಿ ಮತ್ತೆ ಎರಡು ಟ್ರಕ್‌ ಗಳಿಗೆ ಢಿಕ್ಕಿ ಹೊಡೆದಿದೆ. ಅಪಘಾತದ ನಂತರ ಮೂರು ಟ್ರಕ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಟ್ರಕ್‌ ನಲ್ಲಿದ್ದ ಇಬ್ಬರು ಸಜೀವ ದಹನವಾಗಿದ್ದಾರೆ.

ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ಮಾರ್ಬಲ್‌ ತುಂಬಿದ್ದ ಟ್ರಕ್‌ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಅದರ ಚಾಲಕ ಮನೋಜ್ ರಾವತ್ (25) ಮತ್ತು ಸಹಾಯಕ ವಿನೋದ್ (23) ಸುಟ್ಟು ಕರಕಲಾಗಿದ್ದು, ಅವರ ಜೊತೆಗಿದ್ದ ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಅಪಘಾತದಲ್ಲಿ ಒಟ್ಟು ಮೂವರಿಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಮೇಲ್ನೋಟಕ್ಕೆ, ಮಾರ್ಬಲ್ ತುಂಬಿದ ಟ್ರಕ್‌ನ ಬ್ರೇಕ್ ವಿಫಲವಾದ ಕಾರಣ ಅಪಘಾತ ಸಂಭವಿಸಿದೆ. ಸಮೀಪದ ಪಟ್ಟಣಗಳಿಂದ ಕರೆಸಿಕೊಂಡ ಅಗ್ನಿಶಾಮಕ ಟೆಂಡರ್‌ಗಳ ಮೂಲಕ ಬೆಂಕಿಯನ್ನು ನಿಯಂತ್ರಿಸಲಾಯಿತು ಎಂದು ಅಧಿಕಾರಿಗಳು ಹೇಳಿದರು.

ಇದನ್ನೂ ಓದಿ : Gajiyabad crime: ಪತ್ನಿಯೊಂದಿಗೆ ಜಗಳ, ಬಳಿಕ ಮನೆಗೆ ಬೆಂಕಿ: ಕಾರಣ ಏನು ಗೊತ್ತಾ…

ಇದನ್ನೂ ಓದಿ : Aligarh Crime news: ಪತ್ನಿಯನ್ನು ಕತ್ತು ಹಿಸುಕಿ ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಪತಿರಾಯ

ಇದನ್ನೂ ಓದಿ : Kapu bus accident: ಕಾಪು: ಖಾಸಗಿ ಬಸ್‌ ಢಿಕ್ಕಿ: ಶಾಲಾ ಬಾಲಕಿಗೆ ಗಂಭೀರ ಗಾಯ

Three Truck catches fire: 3 trucks caught fire in a terrible accident: two burned alive

Comments are closed.