Tiger claw controversy : ವರ್ತೂರು ಸಂತೋಷ್ (Varthur Santhosh) ಎಂಬ ಬಿಗ್ ಬಾಸ್ (kannada Biggboss) ಸ್ಪರ್ಧಿ ಹುಲಿ ಉಗುರು ಧರಿಸಿ ಬಂಧನಕ್ಕೊಳಗಾದ ಬಳಿಕ ಸ್ಯಾಂಡಲ್ ವುಡ್ ನಟರಿಗೂ ಹುಲಿ ಉಗುರು ಸಂಕಷ್ಟ ಎದುರಾಗಿತ್ತು. ಆದರೀಗ ಜನರ ಟೀಕೆ ತಪ್ಪಿಸಿಕೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳು ಸೆಲೆಬ್ರೆಟಿಗಳಿಗೆ ಕಾಟಾಚಾರಕ್ಕೆ ನೊಟೀಸ್ ನೀಡಿ ಸುಮ್ಮನಾಗಿದೆ ಎಂಬ ಅನುಮಾನ ಕಾಡಲಾರಂಭಿಸಿದೆ.
ವರ್ತೂರ್ ಸಂತೋಷ್ ಪ್ರಾಣಿಜನ್ಯ ವಸ್ತು ಧರಿಸಿ ರಿಯಾಲಿಟಿ ಶೋದಲ್ಲಿ ಪಾಲ್ಗೊಂಡ ಕಾರಣಕ್ಕೆ ಜೈಲು ಸೇರಿದ್ದಾರೆ. ಈ ವಿಚಾರ ವೈರಲ್ ಆಗ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ನಟರಾದ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಮಾಜಿ ಸಚಿವ ಮುನಿರತ್ನ ಸೇರಿದಂತೆ ಹಲವರು ಹುಲಿ ಉಗುರು ಧರಿಸಿದ ಪೋಟೋಗಳು ವೈರಲ್ ಆಗಿದ್ದವು.

ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಕೇವಲ ವರ್ತೂರು ಸಂತೋಷ್ ಮೇಲೆ ಮಾತ್ರ ಕ್ರಮವೇ? ಸೆಲೆಬ್ರೆಟಿಗಳು ಹುಲಿ ಉಗುರು ಧರಿಸಿದ್ದು ತಪ್ಪಲ್ಲವೇ? ಅವರೆಲ್ಲ ಅರಣ್ಯ ಇಲಾಖೆ ಕಣ್ಣಿಗೆ ಕಾಣೋದಿಲ್ಲವೇ ಎಂಬ ಚರ್ಚೆ ಆರಂಭವಾಗಿತ್ತು. ಹೀಗಾಗಿ ಸಾರ್ವಜನಿಕರ ಈ ಟೀಕೆಗಳಿಂದ ಬೇಸತ್ತಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಬುಧವಾರ ನಟ ದರ್ಶನ್ , ಜಗ್ಗೇಶ್ ,ರಾಕ್ ಲೈನ್ ವೆಂಕಟೇಶ್ ಹಾಗೂ ನಿಖಿಲ್ ಕುಮಾರಸ್ವಾಮಿಗೆ ನೊಟೀಸ್ ನೀಡಿದ್ದರು.
ಇದನ್ನೂ ಓದಿ : ಹಳ್ಳಿಕಾರ್ ಒಡೆಯ ಸಂತೋಷ್ ವರ್ತೂರು ಧರಿಸಿದ್ದ ಹುಲಿ ಉಗುರು ಎಲ್ಲಿಯದ್ದು ? ವ್ಯಾಘ್ರ ಮೂಲ ಹುಡುಕಲು ಅಧಿಕಾರಿಗಳು FSL ಮೊರೆ
ಮಾತ್ರವಲ್ಲ ಸರ್ಚ್ ವಾರೆಂಟ್ ಪಡೆದು ಎಲ್ಲರ ನಿವಾಸದಲ್ಲೂ ಶೋಧ ನಡೆಸಿದರು. ಈ ವೇಳೆ ದರ್ಶನ್ ಹಾಗೂ ಜಗ್ಗೇಶ ಮನೆಯಲ್ಲಿ ಹುಲಿ ಉಗುರು ಸಿಕ್ಕಿದ್ದು, ಅದನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ನಿಖಿಲ್ ಮನೆಯಲ್ಲೂ ನಿಖಿಲ್‌ಧರಿಸಿದ್ದರು ಎನ್ನಲಾದ ಹುಲಿ ಉಗುರಿನ ಪೆಂಡೆಂಟ್ ಸಿಕ್ಕಿದೆ.
ಆದರೆ ರಾಕ್ ಲೈನ್ ಮನೆಯಲ್ಲಿ ಮಾತ್ರ ಯಾವುದೇ ಪೆಂಡೆಂಟ್ ಲಭ್ಯವಾಗಿಲ್ಲ. ಈ ಮಧ್ಯೆ ಮನೆಗಳ ಮೇಲೆ ರೇಡ್ ನಡೆಸಿದ ಅರಣ್ಯ ಇಲಾಖೆ ರಾಕ್ ಲೈನ್ ವೆಂಕಟೇಶ್ ಹೊರತು ಪಡಿಸಿ ಉಳಿದ ಮೂವರಿಗೂ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿ ಮಾಡಿದೆ. ಆದರೆ ಈ ನೊಟೀಸ್ ಜಾರಿ ಹಾಗೂ ರೇಡ್ ಕೇವಲ ಕಣ್ಣೊರೆಸುವ ತಂತ್ರ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ : ದೇವರಿಗೂ ಫ್ರೀ ವಿದ್ಯುತ್ : ರಾಜ್ಯ ಸರ್ಕಾರದ ಹೊಸ ಗ್ಯಾರಂಟಿ
ಒಂದೊಮ್ಮೆ ಅರಣ್ಯ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರೇ ಕಾಲಮಿತಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಬೇಕಿತ್ತು. ಆದರೆ ನೊಟೀಸ್ ನಲ್ಲಿ ವಿಚಾರಣೆಗೆ ಹಾಜರಾಗಲು ಕಾಲಮಿತಿ ನೀಡಲಾಗಿಲ್ಲ. ಹೀಗಾಗಿ ಇದು ಕೇವಲ ಕಣ್ಣೊರೆಸುವ ತಂತ್ರ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಇನ್ನೂ ಈ ರೇಡ್ ಗೆ ಒಳಗಾದ ಸೆಲೆಬ್ರೆಟಿಗಳು ಇದಕ್ಕೆ ಕ್ಯಾರೇ ಎಂದಿಲ್ಲ.ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದರೂ ತಲೆಕೆಡಿಸಿಕೊಳ್ಳದ ನಟ ದರ್ಶನ್ ಕಾಟೇರಾ ಶೂಟಿಂಗ್ ಗಾಗಿ ಗುಜರಾತ್ ಗೆ ಹಾರಿದ್ದಾರೆ. ಬುಧವಾರ ರೇಡ್ ಮುಗಿಯುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೇ ಮೈಸೂರಿಗೆ ತೆರಳಿದ್ದ ನಟ ದರ್ಶನ್, ಗುರುವಾರ ವಿಚಾರಣೆಗೆ ಹಾಜರಾಗಬಹುದೆಂದು ನೀರಿಕ್ಷಿಸಲಾಗಿತ್ತು.
ಇದನ್ನೂ ಓದಿ : ನಟ ದರ್ಶನ್ ತೂಗುದೀಪ್ ಹುಲಿ ಉಗುರಿನ ಪೆಂಡೆಂಟ್ ಅಧಿಕಾರಿಗಳ ವಶಕ್ಕೆ : ಅರಣ್ಯ ಇಲಾಖೆಯಿಂದ ನೋಟೀಸ್ ಜಾರಿ
ಆದರೆ ಈ ವಿಚಾರಕ್ಕೆ ತಲೆಕೆಡಿಸಿಕೊಳ್ಳದ ದರ್ಶನ್ ತಮ್ಮ ಪೂರ್ವ ನಿಗದಿತ ಶೆಡ್ಯೂಲ್ ನಂತೆ ಗುಜರಾತ್ ಗೆ ಶೂಟಿಂಗ್ ಹೊರಟಿದ್ದಾರೆ. ನಟ ಜಗ್ಗೇಶ್ ಕೂಡ ತಮ್ಮ ತವರು ಜಿಲ್ಲೆಯ ಪ್ರವಾಸದಲ್ಲಿದ್ದು, ತಮ್ಮ ಮೇಲಿನ ರೇಡ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆಯೇ ವಿನಃ ಇನ್ನೂ ವಿಚಾರಣೆಗೆ ತೆರಳಿಲ್ಲ.

ಇನ್ನು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ವಿದೇಶ ಪ್ರವಾಸದಲ್ಲಿದ್ದು, ಮನೆಗೆ ವಾಪಸ್ಸಾದ ಬಳಿಕ ಈ ವಿದ್ಯಮಾನಕ್ಕೆ ಸ್ಪಂದಿಸಬಹುದು. ನಟ ನಿಖಿಲ್ ಶೂಟಿಂಗ್ ನಲ್ಲಿದ್ದಾರೆ. ಸದ್ಯ ಅರಣ್ಯ ಇಲಾಖೆಯ ಅಧಿಕಾರಿಗಳು ದರ್ಶನ್ ಮತ್ತು ಜಗ್ಗೇಶ್ ಮನೆಯಲ್ಲಿ ಸಿಕ್ಕ ಉಗುರು ಮಾದರಿಯನ್ನು ಎಫ್ ಎಸ್ ಎಲ್ ಗೆ ರವಾನಿಸಿದ್ದು, ಅಲ್ಲಿಂದ ವರದಿ ಬಳಿಕ ಪ್ರಕರಣ ಗಂಭೀರತೆ ಪಡೆದುಕೊಳ್ಳುವ ಸಾಧ್ಯತೆ ಇದೆ .
Tiger claw controversy Forest department neglect to giving notice to celebrities for encroachment, no time limit