Tirumala Leopard Attack : ತಿರುಮಲದಲ್ಲಿ ಚಿರತೆ ದಾಳಿಗೆ ಮಗು ಬಲಿ : ತಿರುಪತಿ ದೇವಸ್ಥಾನಕ್ಕೆ ತೆರಳುವಾಗ ದುರಂತ

ತಿರುಪತಿ : ತಿರುಪತಿ ತಿರುಮಲ ದೇವಸ್ಥಾನಕ್ಕೆ ತೆರಳುವ ವೇಳೆಯಲ್ಲಿ ಮಗುವಿನ ಮೇಲೆ ಚಿರತೆ ದಾಳಿ (Tirumala Leopard Attack) ನಡೆಸಿ ಮಗುವ ಸಾವನ್ನಪ್ಪಿರುವ ದಾರಣು ಘಟನೆ ನಡೆದಿದೆ. ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಮಗು ಲಕ್ಷಿತಾ ನಾಪತ್ತೆಯಾಗಿದ್ದು, ಇದೀಗ ಮಗುವಿನ ಶವ ನರಸಿಂಹ ಸ್ವಾಮೀ ದೇವಸ್ಥಾನದ ಬಳಿಯಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಚಿರತೆ ದಾಳಿ ನಡೆದಿದೆ ಎನ್ನಲಾಗುತ್ತಿದ್ದರೂ ಕೂಡ, ಮಗುವಿನ ದೇಹದ ಮೇಲೆ ಆಗಿರುವ ಗಾಯದ ಗುರುತುಗಳನ್ನು ಪರಿಶೀಲಿಸಿ, ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ದಾಳಿ ಇರಬಹುದು ಎಂದು ಶಂಕಿಸಿದ್ದಾರೆ.

ನೆಲ್ಲೂರು ಜಿಲ್ಲೆಯ ಕೋವೂರು ಮಂಡಲದ ಪೋತಿರೆಡ್ಡಿಪಾಳ್ಯದ ನಿವಾಸಿಯಾಗಿರುವ ದಿನೇಶ್‌ ಹಾಗೂ ಶಶಿಕಲಾ ದಂಪತಿಗಳು ಸಂಬಂಧಿಕರ ಜೊತೆಯಲ್ಲಿ ಕಾಲ್ನಡಿಗೆಯಲ್ಲಿ ತಿರುಪತಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ಶುಕ್ರವಾರ ರಾತ್ರಿ 70.30ಕ್ಕೆ ದಿನೇಶ್ ಅವರ ಆರು ವರ್ಷದ ಮಗಳು ಲಕ್ಷಿತಾ ನಾಪತ್ತೆಯಾಗಿದ್ದಳು. ಕುಟುಂಬಸ್ಥರು ಕೂಡಲೇ ಪೊಲೀಸರಿಗೆ ದೂರು ನೀಡಿ, ಮಗುವನ್ನು ಹುಡುಕಾಟ ನಡೆಸಿದ್ದಾರೆ. ಆದರೆ ಮಗು ಎಲ್ಲಿಯೂ ಪತ್ತೆಯಾಗಿರಲಿಲ್ಲ. ಆದರೆ ಶನಿವಾರ ಬೆಳಗ್ಗೆ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಶವ ಪತ್ತೆಯಾಗಿದೆ. ಮೃತದೇಹವನ್ನು ತಿರುಪತಿ ರುಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಾಮಾನ್ಯವಾಗಿ ಕರಡಿಗಳು ಮನುಷ್ಯರ ತಲೆಯ ಮೇಲೆ ದಾಳಿ ನಡೆಸುತ್ತವೆ. ಆದರೆ ಕರಡಿಗಳು ಸಾಮಾನ್ಯವಾಗಿ ತೆಲೆಯ ಮೇಲೆ ದಾಳಿ ಮಾಡುತ್ತವೆ. ಇದೀಗ ಮಗುವಿನ ತಲೆಯ ಮೇಲೆ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಕರಡಿ ದಾಳಿಗೆ ಒಳಗಾಗಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ಮರಣೋತ್ತರ ಪರೀಕ್ಷೆಯ ವರದಿಯ ನಂತರವಷ್ಟೇ ಸ್ಪಷ್ಟತೆ ಸಿಗಲಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್‌ ಅಧಿಕಾರಿಗಳು ಘಟನಾ ಸ್ಥಳದಲ್ಲಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಇದನ್ನೂ ಓದಿ : Uttar Pradesh Crime : ಸಹೋದರನಿಗಾಗಿ ಆತ್ಮಹತ್ಯೆ ಮಾಡಿಕೊಂಡ ಯುವತಿ

ಇನ್ನು ಮಗುವ ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ಯಾವುದೇ ಸ್ಪಷ್ಟನೆಯಿಲ್ಲ. ಅಲ್ಲದೇ ತಿರುಮಲದ ಕಾಲ್ನಡಿಗೆ ಪ್ರದೇಶದಲ್ಲಿ ಕರಡಿಯೊಂದು ಕಾಣಿಸಿಕೊಂಡಿರುವ ದೃಶ್ಯ ಕೂಡ ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದೆ. ಘಟನೆಯಿಂದಾಗಿ ಟಿಟಿಡಿ ಭಕ್ತರಲ್ಲೀಗ ಆತಂಕ ಶುರುವಾಗಿದೆ. ಇದೇ ಪ್ರದೇಶದಲ್ಲಿ ಪ್ರಾಣಿಗಳಿಂದ ದಾಳಿಗೆ ಒಳಗಾಗುತ್ತಿರುವುದು ಇದು ಎರಡನೇ ಘಟನೆ ಎನ್ನಲಾಗುತ್ತಿದೆ.

Tirumala Leopard Attack 6 Years Girl Lakshitha death Forest Department Officials Suspects Bear Attack

Comments are closed.