Udupi power cut : ಆಗಸ್ಟ್‌ 16, 17 ರಂದು ಉಡುಪಿ ಜಿಲ್ಲೆಯ ಹಲವಡೆ ವಿದ್ಯುತ್ ವ್ಯತ್ಯಯ

ಉಡುಪಿ : ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಆಗಸ್ಟ್ 16 ಮತ್ತು 17 ರಂದು (Udupi power cut) ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. ಎಲ್ಲೆಲ್ಲಿ ಎಷ್ಟು ಗಂಟೆಗಳ ಕಾಲ ವಿದ್ಯುತ್‌ ವ್ಯತ್ಯಯವಾಗಲಿದೆ ಎಂಬ ಕಂಪ್ಲೀಟ್‌ ಡೀಟೆಲ್ಸ್‌ ಇಲ್ಲಿದೆ.

110/33/11 ಕೆ.ವಿ ಮಣಿಪಾಲ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಪ್ರಗತಿನಗರ ಫೀಡರಿನಲ್ಲಿ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಪ್ರಗತಿನಗರ, ಶಾಂತಿನಗರ, ರಾಜೀವನಗರ, 80 ಬಡಗುಬೆಟ್ಟು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಗಸ್ಟ್ 16 ರಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

110/11 ಕೆ.ವಿ ಬ್ರಹ್ಮಾವರ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆ.ವಿ ಹೊನ್ನಾಳ ಫೀಡರ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆದರ್ಶನಗರ, ಕೀರ್ತಿನಗರ, ಸಾಲಿಕೇರಿ, ಬಿರ್ತಿ, ಹೊನ್ನಾಳ, ಕುಕ್ಕುಡೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆ. 16 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

33/11 ಕೆ.ವಿ ಹೆಬ್ರಿ ಉಪವಿದ್ಯುತ್ ಸ್ಥಾವರದಿಂದ ಹೊರಡುವ 11 ಕೆ.ವಿ ಹೆಬ್ರಿ, ಮುದ್ರಾಡಿ, ಕಳ್ತೂರು, ಶಿವಪುರ, ಚಾರ, ವಾಟರ್ ಸಫ್ಲೈ ಫೀಡರಿನಲ್ಲಿ ವ್ಯವಸ್ಥಾ ಸುಧಾರಣಾ ಕಾಮಗಾರಿ ಹಾಗೂ ಮಾರ್ಗನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಗುಳಿಬೆಟ್ಟು, ಹೆಬ್ರಿ ಪೇಟೆ, ಬಂಗಾರುಗುಡ್ಡೆ, ರಾಜೀವನಗರ, ಇಂದಿರಾನಗರ, ಮಠದಬೆಟ್ಟು, ಹೆಬ್ರಿ, ಬಲ್ಲಾಡಿ, ಉಪ್ಪಳ, ಜರವತ್ತು, ಬಚ್ಚಪ್ಪು, ಕಬ್ಬಿನಾಲೆ, ಮುದ್ರಾಡಿ, ಮುನಿಯಾಲು, ವರಂಗ ಮುಟ್ಟುಪಾಡಿ, ಪಡುಕುಡೂರು, ಕಾಡುಹೊಳೆ, ಮಂಡಾಡಿಜೆಡ್ಡು, ಕಳ್ತೂರು, ಸಂತೆಕಟ್ಟೆ, ಕರ್ಜೆ, ಕುರ್ಪಾಡಿ, ಭಟ್ಟಂಪಳ್ಳಿ, ಪಾಂಡುಕಲ್ಲು, ಎಳ್ಳಾರೆ, ಶಂಕರಲಿAಗೇಶ್ವರ ದೇವಸ್ಥಾನದ ಬಳಿ, ಮುಳ್ಳುಗುಡ್ಡೆ, ಶಿವಪುರ, ಸರ್ಕಾರಿ ಆಸ್ಪತ್ರೆ ಬಳಿ, ಕನ್ಯಾನ, ಚಾರ, ಹೊಸೂರು, ಹುತ್ತುರ್ಕೆ ವಾಟರ್ ಸಫ್ಲೈ, ಕಲ್ಲಿಲ್ಲು ವಾಟರ್ ಸಫ್ಲೈ, ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆ. 16 ರಂದು ಬೆಳಗ್ಗೆ 9 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

110/11 ಕೆ.ವಿ ಮಧುವನ ಉಪಕೇಂದ್ರದಿಂದ ಹೊರಡುವ ಬಾರ್ಕೂರು ಎಕ್ಸ್ಪ್ರೆಸ್ ಫೀಡರ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹೊಸಾಳ, ಕಚ್ಚೂರು, ರಂಗನಕೆರೆ, ಹೇರಾಡಿ, ಹನೆಹಳ್ಳಿ, ಕೂರಾಡಿ, ನಡೂರು, ಪಡುನೀಲಾವರ, ಬೆಣ್ಣೆಕುದ್ರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆ. 17 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಇದನ್ನೂ ಓದಿ : Karnataka Weather Report : ಹವಾಮಾನ ವರದಿ : ಆಗಸ್ಟ್‌ 16ರ ವರೆಗೆ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ

33/11 ಕೆ.ವಿ ಶಿರ್ವ ಎಂ.ಯು.ಎಸ್.ಎಸ್ನ ಬ್ಯಾಂಕ್-1 ನಲ್ಲಿ ಕೇಬಲ್ ಕಟ್ ಮಾಡಿ ಹೊಸ ಕೇಬಲ್ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಶಿರ್ವ ಎಂ.ಯು.ಎಸ್.ಎಸ್ ನ ಬ್ಯಾಂಕ್-1 ರಿಂದ ಹೊರಡುವ 11ಕೆವಿ ಬಂಟಕಲ್ಲು, ಶಿರ್ವ ಹಾಗೂ ಶಂಕರಪುರ ಫೀಡರ್ ಮಾರ್ಗದಲ್ಲಿ ಉಳಿಯಾರಗೋಳಿ ಗ್ರಾಮ, ಬಂಟಕಲ್ಲು ಗ್ರಾಮ, ಮೂಡಬೆಟ್ಟು ಗ್ರಾಮ, ಪಾಂಗಳ ಗ್ರಾಮ, ಶಂಕರಪುರ, ಕುಂಜಾರುಗಿರಿ, ಸಾಲ್ಮರ, ಪಾಜೈ, ಕುರ್ಕಾಲು, ಇನ್ನಂಜೆ, ಪಡುಬೆಳ್ಳೆ, ಶಿರ್ವ ಗ್ರಾಮ, ಮಟ್ಟಾರು ಗ್ರಾಮ, ಪದವು ಪಾಂಬೂರು, ಪಂಜಿಮಾರು, ಪಿಲಾರು ಖಾನ, ಪೆರ್ನಾಲು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆ. 17 ರಂದು ಬೆಳಗ್ಗೆ 9 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

Udupi power cut: On August 16, 17, many power cuts in Udupi district

Comments are closed.