Toll staff murder case : ಟೋಲ್‌ ವಿಚಾರವಾಗಿ ಕಿರಿಕ್‌, ಟೋಲ್‌ ಸಿಬ್ಬಂದಿಯ ಹತ್ಯೆ

ರಾಮನಗರ : ಟೋಲ್‌ ಸುಂಕ ಕಟ್ಟುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಟೋಲ್‌ ಸಿಬ್ಬಂದಿಯನ್ನು (Toll staff murder case) ಹಾಕಿ ಸ್ಟಿಕ್‌ನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ರಾಮನಗರ ಜಿಲ್ಲೆಯ ಶೇಷಗಿರಿ ಹಳ್ಳಿ ಟೋಲ್‌ಗೇಟ್‌ ಬಳಿಯಲ್ಲಿ ನಡೆದಿದೆ. ಬಿಡದಿ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟವನ್ನು ಆರಂಭಿಸಿದ್ದಾರೆ.

ಬೆಂಗಳೂರು ದಕ್ಷಿಣ ತಾಲೂಕಿನ ಕರಿನಕಲ್‌ ತಾಂಡ್ಯದ ನಿವಾಸಿ ಪವನ್‌ ಕುಮಾರ್‌ (23 ವರ್ಷ) ಎಂಬವರೇ ಕೊಲೆಯಾಗಿರುವ ಟೋಲ್‌ ಸಿಬ್ಬಂದಿ. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಪವನ್‌ ಕುಮಾರ್‌ ಟೋಲ್‌ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ನಿನ್ನೆ ರಾತ್ರಿ 10 ಗಂಟೆಯ ಸುಮಾರಿಗೆ ಮೈಸೂರಿನಿಂದ ಬೆಂಗಳೂರಿಗೆ ತೆರಳುವ ಗೇಟ್‌ ಬಳಿಗೆ ಕಾರು ಬಂದಿತ್ತು. ಆದರೆ ಫಾಸ್ಟ್‌ ಟ್ಯಾಗ್‌ ವರ್ಕ್‌ ಆಗದ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದವರು ಟೋಲ್‌ ಪಾವತಿ ಮಾಡಿರಲಿಲ್ಲ.

ನಂತರ ಕಾರಿನಲ್ಲಿದ್ದ ಯುವಕರು ಹಾಗೂ ಟೋಲ್‌ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಎರಡೂ ಗುಂಪುಗಳು ಪರಸ್ಪರ ಬಡಿದಾಡಿಕೊಂಡಿದ್ದರು. ನಂತರ ಕಾರಿನಲ್ಲಿದ್ದ ಯುವಕರು ಸ್ಥಳದಿಂದ ಹೊರಟು ಹೋಗಿದ್ದರು. ಆದರೆ ರಾತ್ರಿ 12 ಗಂಟೆಯ ಸುಮಾರಿಗೆ ಪವನ್‌ ಕೆಲಸ ಮುಗಿಸಿ ಟೋಲ್‌ ಸಮೀಪದಲ್ಲೇ ಇರುವ ಹೋಟೆಲ್‌ಗೆ ತೆರಳಿದ ವೇಳೆಯಲ್ಲಿ ಇದೇ ಗುಂಪು ಅಲ್ಲೇ ಕಾದು ಕುಳಿತಿತ್ತು. ಈ ವೇಳೆಯಲ್ಲಿ ಪವನ್‌ ಜೊತೆಗೆ ಗುಂಪು ವಾಗ್ವಾದಕ್ಕೆ ಇಳಿದಿತ್ತು. ಅಲ್ಲದೇ ತಮ್ಮ ಕೈಯಲ್ಲಿದ್ದ ಹಾಕಿ ಸ್ಟಿಕ್‌ನಿಂದ ಪವನ್‌ ತಲೆಗೆ ಬಲವಾಗಿ ಹೊಡೆದು ಹಲ್ಲೆ ನಡೆಸಿದ ಪರಿಣಾಮ ಪವನ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಪವನ್‌ ಕುಮಾರ್‌ ಸಾವನ್ನಪ್ಪಿರುವ ಖಚಿತವಾಗುತ್ತಿದ್ದಂತೆಯೇ ಕಿರಿಕ್‌ ಮಾಡಿರುವ ಗುಂಪು ಸ್ಥಳದಿಂದ ಎಸ್ಕೇಪ್‌ ಆಗಿದೆ. ಬಿಡದಿ ಠಾಣೆಯ ಪೊಲೀಸರು ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ. ಇನ್ನು ಸಿಬ್ಬಂದಿಗಳನ್ನು ಟೋಲ್‌ಗೆ ಒದಗಿಸಿದ್ದ ಏಜೆನ್ಸಿಯವರು ಮೃತ ಪವನ್‌ ಕುಟುಂಬಕ್ಕೆ ನೆರವಾಗಿಲ್ಲ ಅಂತಾ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಶೇಷಗಿರಿಹಳ್ಳಿ ಟೋಲ್‌ಗೇಟ್‌ನಲ್ಲಿ ಆಗಾಗ ಇಂತಹ ಘಟನೆಗಳು ನಡೆಯುತ್ತಿದ್ದು, ಪೊಲೀಸ್‌ ಇಲಾಖೆ ಕಠಿಣ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ : Newly married couple die : ಮದುವೆಯ ಮೊದಲ ರಾತ್ರಿ ನವದಂಪತಿ ಹೃದಯಾಘಾತದಿಂದ ಸಾವು

ಇನ್ನು ಘಟನೆಯಲ್ಲಿ ಮತ್ತೋರ್ವ ಸಿಬ್ಬಂದಿಗೂ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಕಾರಿನಲ್ಲಿ ಬಂದಿದ್ದ ಅಪರಿಚಿತ ಗುಂಪಿಗೆ ಸ್ಥಳೀಯ ಯುವಕರು ಕೂಡ ಬೆಂಬಲ ಕೊಟ್ಟಿದ್ದಾರೆ ಅಂತಾ ಪವನ್‌ ಕುಟುಂಬಸ್ಥರು ಆರೋಪಿಸಿದ್ದಾರೆ.

Toll staff murder case: Killing of toll staff

Comments are closed.