Karnataka Grilahakshmi Yojana : ಕರ್ನಾಟಕ ಗೃಹಲಕ್ಷ್ಮಿ ಯೋಜನೆ : ಈ ಯೋಜನೆಗೆ ಬ್ಯಾಂಕ್‌ ಖಾತೆಗೆ ಆಧಾರ್ ಕಾರ್ಡ್ ಲಿಂಕ್‌ ಕಡ್ಡಾಯ

ಬೆಂಗಳೂರು : ಕರ್ನಾಟಕದ ಮಹಿಳೆಯರಿಗಾಗಿ ಕಾಂಗ್ರೆಸ್‌ ಸರಕಾರ ಗೃಹಲಕ್ಷ್ಮೀ ಯೋಜನೆಯನ್ನು (Karnataka Grilahakshmi Yojana) ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಮನೆಯ ಯಜಮಾನಿಯ ಖಾತೆಗೆ ಪ್ರತೀ ತಿಂಗಳು 2000 ರೂಪಾಯಿ ಜಮೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಈ ಯೋಜನೆ ಲಾಭವನ್ನು ಪಡೆಯಲು ಜುಲೈ 15 ಕೊನೆಯ ದಿನವಾಗಿದೆ. ಈಗಾಗಲೇ ಹೆಚ್ಚಿನ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದು ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಆಧಾರ್ ಕಾರ್ಡಿಗೆ ಡಿ ಬಿ ಟಿ ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ.ಈ ಕುರಿತಂತೆ ಹೆಚ್ಚಿನ ಮಹಿಳೆಯರಿಗೆ ಮಾಹಿತಿ ತಿಳಿದಿಲ್ಲ ಮತ್ತು ಯಾರೂ ಕೂಡ ಈ ಮಾಹಿತಿಯನ್ನು ಮಹಿಳೆಯರಿಗೆ ನೀಡುವ ಕೆಲಸವನ್ನು ಕೂಡ ಮಾಡುತ್ತಿಲ್ಲ. ಹಾಗಾಗಿ ನಾವು ನಿಮಗೆ ಈ ಕುರಿತು ಮಾಹಿತಿಯನ್ನು ತಿಳಿಸಲಿದ್ದೇವೆ.

ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ ಈ ಕೆಲಸವನ್ನು ಕಡ್ಡಾಯವಾಗಿ ಮಾಡಬೇಕಾಗಿದೆ. ಇಲ್ಲವಾದಲ್ಲಿ ಗ್ರಹಲಕ್ಷ್ಮಿ ಯೋಜನೆಯ 2000 ಹಣ ಬ್ಯಾಂಕ್ ನಿಮ್ಮ ಖಾತೆಗೆ ಜಮೆ ಆಗುವುದಿಲ್ಲ. ಹೌದು ಆಧಾರ್ ಕಾರ್ಡ್ ಬಹಳಷ್ಟು ಜನ ಹೊಂದಿದ್ದೀರಾ ಹಾಗೂ ಸರಕಾರವು ಕೂಡ ಯಾವುದೇ ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿಯ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ 2000 ಹಣ ನೀಡಲು ಮುಂದಾಗಿದ್ದು, ಈ ಬೆನ್ನಲ್ಲೇ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣವನ್ನು ಪಡೆಯುವ ಮೊದಲು ನಿಮ್ಮ ಆಧಾರ್ ಕಾಡಿಗೆ ಡಿಬಿಟಿ ಲಿಂಕ್ ಆಗಿದೆಯಾ ಇಲ್ಲವಾ ಎಂಬುದನ್ನು ಖಚಿತಪಡಿಸಕೊಳ್ಳಬೇಕಾಗಿದೆ.

ಡಿಪಿಟಿ ಲಿಂಕ್‌ ಎಂದರೇನು ?

ಡಿಬಿಟಿ ಲಿಂಕ್‌ ಎಂದರೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸರ್ ಎನ್ನುವುದಾಗಿದೆ. ಇದನ್ನು ಜಾರಿಗೆ ತರುವ ಮುಖ್ಯ ಉದ್ದೇಶ ಮಹಿಳೆಯರ ಅಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡುವ ಉದ್ದೇಶ, ಯಾವುದೇ ಬ್ಯಾಂಕ್ ಖಾತೆಯ ಅಕ್ರಮಗಳು ನಡೆಯದಂತೆ ತಪ್ಪಿಸಲು ಈ ಯೋಜನೆಯನ್ನು ಸರಕಾರವು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಈಗಾಗಲೇ ಪಿಎಂ ಕಿಸಾನ್ ಯೋಜನೆಯ ಹಣವು ಕೂಡ ವರ್ಗಾವಣೆಯಾಗುತ್ತಿದೆ. ಅದೇ ರೀತಿಯಲ್ಲಿ ಮಹಿಳೆಯರ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡ ವರ್ಗಾವಣೆ ಮಾಡಲು ಸರಕಾರವು ಡಿಬಿಟಿ ಲಿಂಕ್‌ನ್ನು ಕಡ್ಡಾಯಗೊಳಿಸಿದೆ. ಈ ಡಿಬಿಟಿ ಯೋಜನೆಯ ಅಡಿಯಲ್ಲಿ ನೀವು ನಿಮ್ಮ ಆಧಾರ್ ಕಾರ್ಡಿಗೆ ಯಾವ ಬ್ಯಾಂಕ್ ಖಾತೆ ಲಿಂಕ್ ಆಗಿದೆ ಆ ಬ್ಯಾಂಕ್ ಖಾತೆಗೆ ಮಾತ್ರವಷ್ಟೇ ಅಲ್ಲದೇ ಸರಕಾರದ ಎಲ್ಲಾ ಸವಲತ್ತುಗಳು ಕೂಡ ನೇರವಾಗಿ ಸಿಗಲಿದೆ. ಇದ್ದರಿಂದಾಗಿ ಯಾವುದೇ ಮಧ್ಯವರ್ತಿಗಳು ಅಥವಾ ಅಕ್ರಮ ನಡೆಯಲು ಸಾಧ್ಯವಿಲ್ಲ, ಹಾಗಾಗಿ ಈ ಯೋಜನೆಯನ್ನು ಸರಕಾರವು ಜಾರಿಗೆ ತಂದಿದೆ.

ಇದನ್ನೂ ಓದಿ : Toll staff murder case : ಟೋಲ್‌ ವಿಚಾರವಾಗಿ ಕಿರಿಕ್‌, ಟೋಲ್‌ ಸಿಬ್ಬಂದಿಯ ಹತ್ಯೆ

ನಿಮ್ಮ ಆಧಾರ್ ಕಾರ್ಡ್ ಗೆ ಡಿಬಿಟಿ ಲಿಂಕ್ ಆಗಿದೆಯಾ ?

ಈಗಾಗಲೇ ಯಾರೆಲ್ಲಾ ಪಿಎಮ್ ಕಿಸಾನ್ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಾಗಿದ್ದಾರೋ ಅಂತಹವರು ಯಾವುದೇ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ನಿಮ್ಮ ಪಿಎಂ ಕಿಸಾನ್ ಯೋಜನೆಯ ಹಣ ಯಾವ ಬ್ಯಾಂಕ್ ಖಾತೆಗೆ ಬರುತ್ತಿದೆ ಅದೇ ಬ್ಯಾಂಕ್‌ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣವು ಕೂಡ ಬರಲಿದೆ. ಒಂದು ವೇಳೆ ನೀವೇನಾದರೂ ಇದೇ ಮೊದಲ ಬಾರಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮುಂದಾದಲ್ಲಿ ನೀವು ನಿಮ್ಮ ಆಧಾರ್‌ ಕಾರ್ಡ್‌ಗೆ ಡಿಬಿಟಿ ಲಿಂಕ್ ಅಗತ್ಯವಾಗಿ ಮಾಡಿಕೊಳ್ಳಬೇಕು. ಈ ಲಿಂಕ್ ಇಲ್ಲದಿದ್ದಲ್ಲಿ ಹೊಸ ಖಾತೆ ತೆರೆದು ಅದಕ್ಕೆ ಆಧಾರ್ ಲಿಂಕ್ ಮಾಡುವ ಸೌಲಭ್ಯವನ್ನು ನಿಮ್ಮ ಹತ್ತಿರದ ಸೈಬರ್‌ನಲ್ಲಿ ಮಾಡಿಕೊಳ್ಳಬಹುದು.

Karnataka Grilahakshmi Yojana : Linking of Aadhaar card to bank account is mandatory for this scheme

Comments are closed.