ಪ್ರಯಾಣಿಕರಿಗಾಗಿ 1 ಕಿ.ಮೀ. ಹಿಮ್ಮುಖ ಚಲಿಸಿದ ರೈಲು

ಕೊಚ್ಚಿ : ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದಕ್ಕಾಗಿ ಸುಮಾರು ಒಂದು ಕಿ.ಮೀ ಹಿಮ್ಮುಖವಾಗಿ ರೈಲು ಚಲಿಸಿರುವ (Train station incident) ವಿಚಿತ್ರ ಸನ್ನಿವೇಶ ಇದಾಗಿದೆ. ರೈಲು ತನ್ನ ನಿಗದಿತ ನಿಲ್ದಾಣದಲ್ಲಿ ನಿಲ್ಲಿಸದೇ ಮುಂದಕ್ಕೆ ಹೋದ ಕಾರಣಕ್ಕೆ, ಕೊನೆಗೆ ಪ್ರಯಾಣಿಕರು ಹಾಗೂ ರೈಲು ಅಧಿಕಾರಿಗಳನ್ನು ಹತ್ತಿಸಿಕೊಳ್ಳುವ ಸಲುವಾಗಿ ಹಿಮ್ಮುಖವಾಗಿ ಚಲಿಸಿರುತ್ತದೆ.

ಸದ್ಯ ಈ ವಿಚಿತ್ರ ಘಟನೆ ಮಾವೇಲಿಕ್ಕರ ಮತ್ತು ಚೆಂಗನ್ನೂರು ನಿಲ್ದಾಣ ನಡುವಿನ ಡಿ ದರ್ಜೆ ನಿಲ್ದಾಣವಾದ ಚೆರಿಯನಾಡ್‌ನಲ್ಲಿ ಬೆಳಿಗ್ಗೆ 7.45ಕ್ಕೆ ಸಂಭವಿಸಿದೆ. ಶೋರನೂರಿಗೆ ಪ್ರಯಾಣಿಸುತ್ತಿದ್ದ ವೇನಾಡ್‌ ಎಕ್ಸ್‌ಪ್ರೆಸ್‌ ರೈಲು ಭಾನುವಾರ ಆಲಪ್ಪುಝದ ಚೆರಿಯನಾಡ್‌ ನಿಲ್ದಾಣದಲ್ಲಿ ನಿಲುಗಡೆ ನೀಡಬೇಕಿತ್ತು. ಈ ಘಟನೆಯಿಂದಾಗಿ ರೈಲಿನ ವೇಳಾಪಟ್ಟಿಯಲ್ಲಿ ಸುಮಾರು ಎಂಟು ನಿಮಿಷ ವ್ಯತ್ಯಯವಾಗಿದೆ. ಆದರೆ ಲೋಕೋ ಪೈಲಟ್‌ ಮುಂದಿನ ಪ್ರಯಾಣದಲ್ಲಿ ತನ್ನ ತಪ್ಪನ್ನು ಸರಿಪಡಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.

“ಚೆರಿಯನಾಡ್‌ ನಿಲ್ದಾಣ ಕೇವಲ ನಿಲುಗಡೆ ನಿಲ್ದಾಣವಾಗಿದ್ದರಿಂದ ಯಾವುದೇ ಸಿಗ್ನಲ್‌ ಇರುವುದಿಲ್ಲ. ಕೇವಲ ದೊಡ್ಡ ಸ್ಟೇಷನ್‌ಗಳಲ್ಲಿ ಮಾತ್ರ ಸಿಗ್ನಲ್‌ ವ್ಯವಸ್ಥೆ ಇರುತ್ತದೆ. ಲೋಕೋಪೈಲಟ್‌ಗಳಿಂದಾದ ತಪ್ಪು ಆಗಿರಬಹುದು. ಕೆಲ ಮೀಟರ್‌ ದೂರ ಹೋಗುವಷ್ಟರಲ್ಲಿ ಗಮನಿಸಿದ್ದಾರೆ. ಅದು ಅಲ್ಲದೇ ರೈಲಿಗೆ ತಕ್ಷಣಕ್ಕೆ ಬ್ರೇಕ್ ಹಾಕುವಂತೆ ಇರುವುದಿಲ್ಲ. ಹೀಗಾಗಿ ಕೆಲ ಮೀಟರ್‌ ಮುಂದಕ್ಕೆ ಚಲಿಸಿದೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : ರಾಜ್ಯದ ರಾಜಧಾನಿಯಲ್ಲಿ ವರುಣನ ಆರ್ಭಟ : ಕಾರು ಮುಳುಗಿ ಯುವತಿ ಸಾವು, ನಾಲ್ವರ ರಕ್ಷಣೆ

ಇದನ್ನೂ ಓದಿ : ವಾಟ್ಸಾಪ್ ಸ್ಕ್ಯಾಮ್ ಹೆಚ್ಚಳ : ಸೈಬರ್ ವಂಚನೆ ತಪ್ಪಿಸಲು ಈ 5 ಅಂಶ ನೆನಪಿನಲ್ಲಿರಲಿ

ಇದನ್ನೂ ಓದಿ : ಮುಸ್ಲಿಂ ಯುವಕನೊಂದಿಗೆ ಬಿಜೆಪಿ ಮಾಜಿ ಶಾಸಕಿ ಮಗಳ ಮದುವೆ ರದ್ದು

ರೈಲು ಕೆಲ ಮೀಟರ್‌ ಮುಂದಕ್ಕೆ ಚಲಿಸಿದ್ದರಿಂದ ಸುಮಾರು 700 ಮೀಟರ್‌ನಷ್ಟು ಹಿಮ್ಮುಖವಾಗಿ ಚಲಿಸಿ ನಿಲ್ದಾಣಕ್ಕೆ ಬರಬೇಕಾಯಿತು. ಆದರೆ ಇದೇನೂ ದೊಡ್ಡ ಪ್ರಕರಣವಲ್ಲ, ಅಷ್ಟೇ ಅಲ್ಲದೇ ಇದ್ದರಿಂದಾಗಿ ಯಾರಿಗೂ ಯಾವುದೇ ರೀತಿಯಲ್ಲಿ ಅನಾನುಕೂಲ ಆಗಿಲ್ಲ ಎಂದು ರೈಲು ಅಧಿಕಾರಿಗಳು ಹೇಳಿಕೊಂಡಿದ್ದಾರೆ. ರೈಲು ಹಿಮ್ಮುಖವಾಗಿ ಚಲಿಸಿ ಚೆರಿಯನಾಡ್‌ ನಿಲ್ದಾಣಕ್ಕೆ ಆಗಮಿಸಿದ್ದರಿಂದ ರೈಲು ಪ್ರಯಾಣಿಕರು ಹತ್ತಲು ಮತ್ತು ಇಳಿಯಲು ಸಾಧ್ಯವಾಗಿದೆ ಎಂದು ಕೂಡ ಹೇಳಿದ್ದಾರೆ.

Train station incident: Train moved backwards 1 km for passengers

Comments are closed.