ಟಿವಿ ರಿಮೋಟ್ ಕೇಳಿದ್ದಕ್ಕೆ 7 ವರ್ಷದ ಬಾಲಕಿಯ ಹತ್ಯೆ !

0

ಚೆನ್ನೈ : ಹೆಣ್ಣು, ಹೊನ್ನು, ಮಣ್ಣಿಗಾಗಿ ಕೊಲೆ ನಡೆಯೋದನ್ನು ಕೇಳಿದ್ದೇವೆ. ಆದ್ರೆ ಎಂದಾದ್ರೂ ಕೇವಲ ಟಿ.ವಿ. ರಿಮೋಟ್ ಕೇಳಿದ್ದಕ್ಕೆ ಕೊಲೆ ಆಗಿರೋದನ್ನು ಎಲ್ಲಾದ್ರೂ ಕೇಳಿದ್ರಾ ? ಇಂತಹ ಅಮಾನವೀಯ ಘಟನೆಯೊಂದು ಚೆನ್ನೈನಲ್ಲಿ ನಡೆದಿದೆ. ಟಿ.ವಿಯಲ್ಲಿ ತನ್ನಿಷ್ಟದ ಚಾನೆಲ್ ನೋಡೋದಕ್ಕೆ ರಿಮೋಟ್ ಕೇಳಿದ ತಪ್ಪಿದ ಮನೆಯ ಮಾಲೀಕನೋರ್ವ 7 ವರ್ಷದ ಬಾಲಕಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತಾಂಕುಲಂನ ನಿವಾಸಿಯಾಗಿರುವ ಬಾಲಕಿಯ ಮನೆಯಲ್ಲಿ ಕರೆಂಟ್ ಇರಲಿಲ್ಲ. ಮನೆಯಲ್ಲಿ ಬೋರ್ ಆಗುತ್ತೆ ಅಂತಾ ಬಾಲಕಿ ಪಕ್ಕದ ಮನೆಗೆ ಟಿವಿ ನೋಡೋದಕ್ಕೆ ಹೋಗಿದ್ದಾಳೆ. ಈ ವೇಳೆಯಲ್ಲಿ ಮನೆಯವರು ಟಿ.ವಿ. ನೋಡುತ್ತಾ ಕುಳಿತಿದ್ದರು. ಬಾಲಕಿ ತನಗೆ ಬೇರೆ ಚಾನೆಲ್ ನೋಡಬೇಕು ರಿಮೋಟ್ ಕೊಡಿ ಅಂತಾ ಹಠ ಹಿಡಿದಿದ್ದಾಳೆ. ಇದೇ ಹೊತ್ತಲ್ಲೇ ಮನೆಯ ಮಾಲೀಕ ಬಾಲಕಿಯ ತಂದೆಯ ಜೊತೆಗೆ ಜಗಳವಾಡುತ್ತಿದ್ದ. ಆದ್ರೆ ಇದನ್ನು ಅರಿಯದ ಬಾಲಕ ಮತ್ತೆ ಮತ್ತೆ ಹಠ ಮಾಡಿದ್ದಾಳೆ. ಇದರಿಂದ ಕೆರಳಿದ ಮನೆಯ ಮಾಲೀಕ ಯಾರಿಗೂ ಗೊತ್ತೆ ಆಗದಂತೆ ಬಾಲಕಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಕೊಲೆ ಮಾಡಿದ ನಂತರದಲ್ಲಿ ಯಾರಿಗೂ ಗೊತ್ತೆ ಆಗಬಾರದು ಅಂತಾ ಮನೆಯಲ್ಲಿದ್ದ ಪ್ಲಾಸ್ಟಿಕ್ ಡ್ರಮ್ ನಲ್ಲಿ ಬಾಲಕಿಯ ಶವವನ್ನು ತುಂಬಿಕೊಂಡು ಸುಮಾರು 2 ಕಿ.ಮೀ. ದೂರದಲ್ಲಿರುವ ಕಾಲುವೆಗೆ ತೆರಳಿ ಎಸೆದು ಬಂದಿದ್ದ. ದಿನಗೂಲಿ ಕೆಲಸ ಮಾಡುತ್ತಿದ್ದ ತಾಯಿ ಮನೆಗೆ ಬಂದಾಗ ಮನೆಯಲ್ಲಿ ಮಗಳು ಕಾಣಿಸಲಿಲ್ಲ. ಈ ಹಿನ್ನೆಲೆಯಲ್ಲಿ ತಂದೆ ತಾಯಿ ಚಿಂತಾಕ್ರಾಂತರಾಗಿದ್ದರು. ಇತ್ತ ಕಾಲುವೆಯ ಬಳಿಯಲ್ಲಿ ನಡೆದು ಕೊಂಡು ಹೋಗಿದ್ದ ಯುವಕನಿಗೆ ಅನುಮಾನಾಸ್ಪದವಾಗಿರುವ ಡ್ರಮ್ ಇರುವುದು ಕಾಣಿಸಿತ್ತು. ಕೂಡಲೇ ಯುವಕ ಪೊಲೀಸರಿಗೆ ಡ್ರಮ್ ಕುರಿತು ಸುದ್ದಿ ಮುಟ್ಟಿಸಿದ್ದಾನೆ. ಡ್ರಮ್ ತೆಗೆದಾಗ ಕೊಲೆಯಾಗಿರುವ ಸ್ಥಿತಿಯಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು.

ಬಾಲಕರಿಬ್ಬರು ಬಾಲಕಿಯನ್ನು ಅತ್ಯಾಚಾರವೆಸಗಿ ನಂತರ ಕೊಲೆ ಮಾಡಿರಬಹುದೆಂಬ ಮಾತುಗಳು ಕೇಳಿಬಂದಿತ್ತು. ಪೊಲೀಸರು ಗ್ರಾಮಸ್ಥರ ಹೇಳಿಕೆಯ ಆಧಾರದ ಮೇಲೆ ತನಿಖೆಗೆ ಮುಂದಾಗಿದ್ದರು. ಆದರೆ ಬಾಲಕಿಯ ಮರಣೋತ್ತರ ವರದಿಯ ಆಧಾರದ ಮೇಲೆ ಪೊಲೀಸರು ತನಿಖೆಗೆ ಇಳಿಯುತ್ತಿದ್ದಂತೆಯೇ ಕೊಲೆಯ ಹಿಂದಿನ ಸತ್ಯಾಂಶ ಬಯಲಾಗಿದೆ. ಪೊಲೀಸರು ಪಕ್ಕದ ಮನೆಯ ಮಾಲೀಕನ ವಿರುದ್ದ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ಬೆನ್ನಲ್ಲೇ ಸಾತಾಂಕುಲಂ ನಿವಾಸಿಗಳು ಬೆಚ್ಚಿಬಿದ್ದಾರೆ.

Leave A Reply

Your email address will not be published.