twist in Praveen Nettaru’s murder case: ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದಲ್ಲಿ ಸ್ಫೋಟಕ ತಿರುವು : ಸ್ಥಳೀಯರೇ ಕೊಲೆಗೈದಿದ್ದಾರೆಂದ ಗೃಹ ಸಚಿವ

ಬೆಂಗಳೂರು : twist in Praveen Nettaru’s murder case: ಹಿಂದೂ ಕಾರ್ಯಕರ್ತ ಹಾಗೂ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣವು ಇಡೀ ರಾಜ್ಯದಲ್ಲಿಯೇ ಸಂಚಲನ ಮೂಡಿಸಿದೆ. ಈಗಾಗಲೇ ರಾಜ್ಯ ಸರ್ಕಾರವು ಈ ಪ್ರಕರಣದ ಹೆಚ್ಚಿನ ತನಿಖೆಯನ್ನು ನಡೆಸುವಂತೆ ರಾಷ್ಟ್ರೀಯ ತನಿಖಾ ದಳಕ್ಕೆ ಪ್ರಕರಣವನ್ನು ಹಸ್ತಾಂತರಿಸುವುದಾಗಿ ಹೇಳಿದೆ. ಕೇರಳದಿಂದ ಬಂದವರು ಪ್ರವೀಣ್​ ನೆಟ್ಟಾರು ಕೊಲೆ ಮಾಡಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೊಂದು ಅಂತಾರಾಜ್ಯ ಕೊಲೆ ಪ್ರಕರಣವೆಂದು ಭಾವಿಸಿ ಈ ಕೊಲೆ ಪ್ರಕರಣವನ್ನು ಎನ್​ಐಗೆ ವಹಿಸಲಾಗಿದೆ.


ಆದರೆ ಈ ಎಲ್ಲದರ ನಡುವೆ ಇದೀಗ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಫೋಟಕ ಮಾಹಿತಿಯೊಂದನ್ನು ನೀಡಿದ್ದಾರೆ. ಖಾಸಗಿ ಸುದ್ದಿ ವಾಹಿನಿಯೊಂದಿಗೆ ಈ ವಿಚಾರವಾಗಿ ಮಾತನಾಡಿರುವ ಆರಗ ಜ್ಞಾನೇಂದ್ರ ಸ್ಥಳೀಯರೇ ಪ್ರವೀಣ್​ ನೆಟ್ಟಾರು ಕೊಲೆ ಮಾಡಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ನೀಡಿದ್ದಾರೆ. ಈ ಮೂಲಕ ಇಲ್ಲಿವರೆಗೆ ಕೇರಳದಿಂದ ಬಂದ ವ್ಯಕ್ತಿಗಳು ಪ್ರವೀಣ್​ ಅಂಗಡಿಯಿಂದ ಹೊರ ಬರುವುದನ್ನು ಹೊಂಚು ಹಾಕಿ ಬಳಿಕ ಕೊಲೆ ಮಾಡಿ ಎಸ್ಕೇಪ್​ ಆಗಿದ್ದಾರೆಂಬ ಗುಮಾನಿಗೆ ದೊಡ್ಡ ಟ್ವಿಸ್ಟ್​​ ನೀಡಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ನೆಟ್ಟಾರು ಗ್ರಾಮದವರಾದ ಪ್ರವೀಣ್​ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿ. ಬೆಳ್ಳಾರೆಯ ಮೇಲಿನ ಬೆಟ್ಟದಲ್ಲಿ ಚಿಕನ್ ಅಂಗಡಿಯನ್ನು ನಡೆಸುತ್ತಿದ್ದ ಪ್ರವೀಣ್​ ರಾತ್ರಿ ಅಂಗಡಿಯನ್ನು ಬಂದ್​ ಮಾಡಿ ಬೈಕ್​ನಲ್ಲಿ ಮನೆಗೆ ತೆರಳಲು ಮುಂದಾಗುತ್ತಿದ್ದಂತೆಯೇ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಪ್ರವೀಣ್​ ಕುತ್ತಿಗೆಗೆ ತಲವಾರ್​ನಿಂದ ಮಾರಣಾಂತಿಕ ದಾಳಿ ನಡೆದಿ ಸ್ಥಳದಿಂದ ಎಸ್ಕೇಪ್​ ಆಗಿದ್ದರು.


ತೀವ್ರ ರಕ್ತಸ್ರಾವದ ನಡುವೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಪ್ರವೀಣ್​ ನೆಟ್ಟಾರುವನ್ನು ಆಂಬುಲೆನ್ಸ್​ ಮೂಲಕ ಪುತ್ತೂರಿನ ಪ್ರಗತಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡುವ ಪ್ರಯತ್ನ ಮಾಡಲಾಗಿತ್ತಾದರೂ ಪ್ರವೀಣ್​ ಘಟನೆ ನಡೆದ ಸ್ಥಳದಿಂದ 18 ಕಿಲೋ ಮೀಟರ್​ ದೂರ ಕ್ರಮಿಸುವಷ್ಟರಲ್ಲಿ ಜೀವ ಚೆಲ್ಲಿದ್ದರು. ಬಳಿಕ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಪ್ರವೀಣ್​ ಮೃತದೇಹವನ್ನು ಶಿಫ್ಟ್​ ಮಾಡಿ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿತ್ತು.

ಇದನ್ನು ಓದಿ : Heavy rains : ಸುಳ್ಯ ತಾಲೂಕಿನಲ್ಲಿ ವರುಣನ ರೌದ್ರ ನರ್ತನ : ಮಳೆಯ ಅಬ್ಬರಕ್ಕೆ ಕೊಚ್ಚಿ ಹೋದ ಸೇತುವೆ, ಹಲವು ಗ್ರಾಮಗಳ ಸಂಪರ್ಕ ಕಡಿತ

ಇದನ್ನೂ ಓದಿ : Ramayana quiz : ರಾಮಾಯಣ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಗಮನಾರ್ಹ ಟಾಪರ್​ಗಳಾಗಿ ಹೊರ ಹೊಮ್ಮಿದ ಮುಸ್ಲಿಂ ವಿದ್ಯಾರ್ಥಿಗಳು

twist in Praveen Nettaru’s murder case: Locals are suspected to have committed the murder

Comments are closed.