Unnavo crime : ಅಕ್ರಮ ಸಂಬಂಧಕ್ಕೆ ವಿರೋಧಿಸಿದ ತಾಯಿಯನ್ನೇ ಹತ್ಯೆಗೈದು ಪರಾರಿಯಾದ ಮಕ್ಕಳು

ಉನ್ನಾವ್: (Unnavo crime) ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಮಲ-ಸಹೋದರಿಯರ ನಡುವಿನ ಅಕ್ರಮ ಸಂಬಂಧವನ್ನು ವಿರೋಧಿಸಿದ ತಾಯಿಯನ್ನು ಮಕ್ಕಳೇ ಹತ್ಯೆ ಮಾಡಲಾಗಿದ್ದು, ಕೊಲೆಯ ನಂತರ ಮಹಿಳೆಯ ಮಗಳು ಮತ್ತು ಮಗ ಸ್ಥಳದಿಂದ ಪರಾರಿಯಾಗಿರುವ ಘಟನೆ ನಡೆದಿದೆ. ಪರಾರಿಯಾದ ಮಕ್ಕಳನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಮೃತರನ್ನು ಶಾಂತಿ ಸಿಂಗ್ ಎಂದು ಗುರುತಿಸಲಾಗಿದ್ದು, ಶಿವಂ ಮತ್ತು ತನ್ನು ಅಕಾ ಪೂಜಾ ಬಂಧಿತ ಆರೋಪಿಗಳು. ಪೂಜಾಳ ಮದುವೆ ಬೇರೆಯವರೊಂದಿಗೆ ನಿಶ್ಚಯವಾದ ನಂತರ ಇಬ್ಬರೂ ಕೊಲೆಗೆ ಯೋಜನೆ ರೂಪಿಸಿದ್ದರು ಎನ್ನಲಾಗಿದೆ.

ಪೊಲೀಸರ ಪ್ರಕಾರ, ಸದರ್ ಕೊತ್ವಾಲಿ ಪ್ರದೇಶದ ಬಂಧು ವಿಹಾರ್ ಪ್ರದೇಶದ ಬಾಡಿಗೆ ಮನೆಯಲ್ಲಿ ಶಾಂತಿ ಕೊಲೆಯಾಗಿದ್ದಾರೆ. ಮೃತ ಶಾಂತಿ ಸಿಂಗ್‌ ಮೂರು ಮದುವೆಯಾಗಿದ್ದು, ಪೂಜಾ ಮೂರನೇ ಗಂಡನ ಮಗಳಾಗಿದ್ದು, ಶಿವಂ ಅವಳ ಎರಡನೇ ಗಂಡನ ಮಗನಾಗಿದ್ದನು. ಅಣ್ಣ ತಂಗಿ ಇಬ್ಬರ ಮದ್ಯೆಯೂ ಅಕ್ರಮ ಸಂಬಂಧವಿದ್ದು, ಶಾಂತಿ ಅದನ್ನು ವಿರೋಧಿಸಿ ಪೂಜಾಳನ್ನು ಬೇರೆಯವರೊಂದಿಗೆ ಮದುವೆ ಮಾಡಿಸಲು ಯೋಜಸಿದ್ದರು. ಇದನ್ನು ವಿರೋಧಿಸಿದ ಮಕ್ಕಳು ತಾಯಿಯನ್ನು ಕೊಂದು ಅಲ್ಲಿಂದ ಪರಾರಿಯಾಗಿದ್ದಾರೆ. ಮೃತ ಶಾಂತಿಯ ಮುಖ ಮತ್ತು ಕತ್ತಿನ ಮೇಲೆ ಹಲವು ಬಾರಿ ಇರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೊಲೆಯ ನಂತರ ನಾಪತ್ತೆಯಾಗಿದ್ದ ಪೂಜಾಳ ಮೊಬೈಲ್ ಕರೆ ವಿವರಗಳ ಆಧಾರದ ಮೇಲೆ ಶಿವಂನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಆತನ ಹೇಳಿಕೆ ಆಧರಿಸಿ ಪೂಜಾಳನ್ನೂ ನಂತರ ವಶಕ್ಕೆ ಪಡೆಯಲಾಗಿದೆ. ಇದೀಗ ಇಬ್ಬರ ವಿರುದ್ದ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ : Two Car accident: ಕಾರು ಅಪಘಾತ: 3 ಮಕ್ಕಳು ಸೇರಿ 4 ಮಂದಿ ಸಾವು

ಇದನ್ನೂ ಓದಿ : Mumbai Cyber Crime: ಬ್ಯಾಂಕ್ KYC ಅಪ್‌ಡೇಟ್ ಹೆಸರಲ್ಲಿ ನಿವೃತ್ತ ರೈಲ್ವೆ ಉದ್ಯೋಗಿಗೆ ವಂಚನೆ

ಇದನ್ನೂ ಓದಿ : Rape and threat: 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಬೆದರಿಕೆ: ಆರೋಪಿ ಅರೆಸ್ಟ್‌

Unnavo crime: Children who ran away after killing their mother who objected to illegal relationship

Comments are closed.