Banana Blossom Benefits : ಬಾಳೆಹಣ್ಣಿನಿಂದಷ್ಟೇ ಅಲ್ಲ; ಬಾಳೆ ಹೂವಿನಿಂದಲೂ ಇದೆ ಅನೇಕ ಪ್ರಯೋಜನಗಳು

ಎಲ್ಲಾ ಕಾಲದಲ್ಲೂ ದೊರೆಯುವ ಹಾಗೂ ಅನೇಕ ಪೋಷಕಾಂಶಗಳನ್ನು ಹೊಂದಿರುವ ಹಣ್ಣು ಎಂದರೆ ಅದು ಬಾಳೆಹಣ್ಣು (Banana). ಬಾಳೆಯ ಹಣ್ಣಿನ ಜೊತೆಗೆ ಬಾಳೆಯ ದಿಂಡು, ಬಾಳೆ ಎಲೆಯೂ ಸಹ ಪ್ರಯೋಜನಕಾರಿಯಾಗಿದೆ. ಬಾಳೆಕಾಯಿಯ ಹಿಟ್ಟು– ಬಾಕಾಹು ದಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ಸಾಬೀತಾಗಿದೆ ಮತ್ತು ಅದರಿಂದ ಅನೇಕ ರೀತಿಯ ಅಡುಗೆಗಳನ್ನು ಮಾಡುತ್ತಾರೆ. ಆದರೆ, ಬಾಳೆಯ ಹೂವನ್ನು ಕೆಲವು ಪ್ರದೇಶಗಳಲ್ಲಿ ಮಾತ್ರ ಉಪಯೋಗಿಸುತ್ತಾರೆ. ಉಳಿದವರು ಅದನ್ನು ವೇಸ್ಟ್‌ ಎಂದೇ ಪರಿಗಣಿಸುವುದೇ ಹೆಚ್ಚು. ಆದರೆ ನಿಮಗಿದು ಗೊತ್ತಾ, ಬಾಳೆಯ ಹೂವಿನಿಂದಲೂ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು (Banana Blossom Benefits). ಬಾಳೆಗೊನೆಯಲ್ಲಿರುವ ಬಾಳೆ ಹೂವು ಉತ್ತಮ ಫೈಬರ್‌ ಅಂಶವನ್ನು ಹೊಂದಿದೆ. ಪ್ರೋಟೀನ್‌, ವಿಟಮಿನ್‌ ಎ, ಸಿ ಮತ್ತು ಇ, ಫಾಸ್ಪರಸ್‌, ಪೊಟ್ಯಾಶಿಯಮ್‌, ಕ್ಯಾಲ್ಸಿಯಮ್‌, ಐರನ್‌, ಮ್ಯಾಗ್ನೀಶಿಯಮ್‌, ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ. ಇದೇ ಕಾರಣದಿಂದಲೇ ಬಾಳೆಹೂವು ಅನೇಕ ರೋಗಗಳ ಚಿಕಿತ್ಸೆಯಲ್ಲಿ ಪ್ರಯೋಜನಕಾರಿಯಾಗಿದೆ ಎಂದು ಹೇಳುತ್ತಾರೆ. ಬಾಳೆಯ ಹೂವು ನಮ್ಮ ಆರೋಗ್ಯ ಹೇಗೆ ಕಾಪಾಡಬಲ್ಲದು ಇಲ್ಲಿದೆ ಓದಿ.

ಬಾಳೆಯ ಹೂವಿನ ಪ್ರಯೋಜನಗಳು :

ಮಧುಮೇಹ ನಿಯಂತ್ರಿಸುತ್ತದೆ:
ಬಾಳೆಹೂವಿಗೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುವ ಗುಣವಿದೆ. NCBI ಯ ವರದಿಯ ಪ್ರಕಾರ, ಇದು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರ ಪದಾರ್ಥವಾಗಿದ್ದು, ದೇಹದಲ್ಲಿ ಗ್ಲೂಕೋಸ್ ಅನ್ನು ನಿಧಾನವಾಗಿ ಬಿಡುಗಡೆ ಮಾಡುತ್ತದೆ.

ಅಧಿಕ ರಕ್ತದೊತ್ತಡ:
ಬಾಳೆಹೂವು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಆಂಟಿ ಹೈಪರ್ಟೆನ್ಸಿವ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ, ಫೈಬರ್ ಉತ್ಕರ್ಷಣ ನಿರೋಧಕಗಳು ಮತ್ತು ಅದರಲ್ಲಿರುವ ಅನೇಕ ಪೋಷಕಾಂಶಗಳು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮೂಳೆಗಳನ್ನು ಬಲಪಡಿಸುತ್ತದೆ:
ಬಾಳೆ ಹೂವುಗಳು ಮೂಳೆಗಳನ್ನು ಬಲಪಡಿಸುತ್ತದೆ. ಬಾಳೆ ಹೂವಿನಲ್ಲಿರುವ ಝಿಂಕ್‌ ಮೂಳೆ ನಶಿಸುವುದರಿಂದ ನಮ್ಮನ್ನು ರಕ್ಷಿಸುತ್ತದೆ. ಒಂದು ಅಧ್ಯಯನದ ಪ್ರಕಾರ, ಆಂಟಿಆಕ್ಸಿಡೆಂಟ್‌ಗಳಾದ ಕ್ವೆರ್ಸೆಟಿನ್ ಮತ್ತು ಕ್ಯಾಟೆಚಿನ್‌ಗಳು ನೈಸರ್ಗಿಕವಾಗಿ ಕಂಡುಬರುವ ಆಂಟಿಆಕ್ಸಿಡೆಂಟ್‌ಗಳು. ಇದು ಮೂಳೆ ನಷ್ಟವನ್ನು ತಪ್ಪಿಸುತ್ತದೆ.

ಮೂತ್ರಪಿಂಡವನ್ನು ಆರೋಗ್ಯವಾಗಿಡುತ್ತದೆ:
ಮೂತ್ರಪಿಂಡವನ್ನು ಆರೋಗ್ಯಕರವಾಗಿಡಲು ಬಾಳೆಹೂವನ್ನು ಸಹ ಬಳಸಬಹುದು. ಇದು ನೆಫ್ರೋ ಪ್ರೊಟೆಕ್ಟಿವ್‌ ಆಕ್ಟಿವಿಟಿಯನ್ನು ಮಾಡುತ್ತದೆ. ಇದು ಮೂತ್ರಪಿಂಡವನ್ನು ಯಾವುದೇ ರೀತಿಯ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಬಾಳೆಹಣ್ಣಿನಲ್ಲಿ ಇರುವ ಫೈಬರ್ ಮೂತ್ರಪಿಂಡದ ಕಲ್ಲುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಪ್ರಾಸ್ಟೇಟ್ ಗ್ರಂಥಿ:
ಸಾಮಾನ್ಯವಾಗಿ 50 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಲ್ಲಿ, ಪ್ರಾಸ್ಟೇಟ್ ಗ್ರಂಥಿಯ ಹಿಗ್ಗುವಿಕೆಯ ಸಮಸ್ಯೆಗಳಿರುತ್ತದೆ. ಇದರಿಂದಾಗಿ ಅನೇಕ ಮೂತ್ರದ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಬಾಳೆ ಹೂವಿನಲ್ಲಿರುವ ಸಿಟ್ರಿಕ್ ಆಮ್ಲ ಮತ್ತು ಅಮೈನೋ ಆಮ್ಲಗಳು ಪ್ರಾಸ್ಟೇಟ್ ಗ್ರಂಥಿಯನ್ನು ಸಾಮಾನ್ಯ ಗಾತ್ರಕ್ಕೆ ತರಲು ಸಹಾಯಮಾಡುತ್ತದೆ.

ಇದನ್ನೂ ಓದಿ: Carrot Juice Benefits : ಸಂಪೂರ್ಣ ಆರೋಗ್ಯಕ್ಕಾಗಿ ಕುಡಿಯಿರಿ ಕ್ಯಾರೆಟ್‌ ಜ್ಯೂಸ್‌

ಬಾಳೆ ಹೂವನ್ನು ಸೇವಿಸುವುದು ಹೇಗೆ?
ಬಾಳೆ ಹೂವಿನಿಂದಲೂ ಅಡುಗೆಗಳನ್ನು ಮಾಡುತ್ತಾರೆ. ಪಶ್ಚಿಮ ಬಂಗಾಳದ ಅಡುಗೆಯಾದ ಮೊಚಾರ್‌ ಘೊಂಟೊ (Mochar Ghonto) ಬಾಳೆ ಹೂವಿನಿಂದ ಮಾಡುವ ಅಡುಗೆಯಾಗಿದೆ. ಥೈ ಮತ್ತು ಮಲೇಶಿಯಾದ ಅಡುಗೆಗಳಲ್ಲಿ ಇದನ್ನು ತರಕಾರಿಯ ರೀತಿಯಲ್ಲಿ ಬಳಸಲಾಗುತ್ತದೆ. ಇದನ್ನು ಬೇಯಿಸಿ ಅಥವಾ ಹುರಿದು ತಿನ್ನುತ್ತಾರೆ. ಸಲಾಡ್‌ ಮತ್ತು ಕರಿಗಳಲ್ಲಿ ಇದರ ಬಳಕೆ ಹೆಚ್ಚು.

ಇದನ್ನೂ ಓದಿ: Corn Salad Benefits : ಡಯಟ್‌ ಮಾಡ್ಲಿಕ್ಕೆ ಫ್ರುಟ್‌ ಸಲಾಡ್‌ ಒಂದೇ ಅಲ್ಲ; ಈ ಸಲಾಡ್‌ ಕೂಡಾ ಉತ್ತಮ

(Do you know the Banana Blossom Benefits? Here is info.)

Comments are closed.