UP Crime: ಮೂರು ವರ್ಷದ ಪುತ್ರಿಯ ಎದುರಲ್ಲೇ ಪತ್ನಿಯನ್ನು ಕೊಲೆ ಮಾಡಿ ತಂದೆಯು ಪರಾರಿಯಾದ ಭೀಕರ ಘಟನೆಯು ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಪಾರಾದ ಕಾನ್ಶಿರಾಮ್ ಕಾಲೋನಿಯಲ್ಲಿ ನಡೆದಿದೆ. ಪತ್ನಿಯನ್ನು ಕೊಲೆಗೈದ ಪರಿಯು ಮಗಳನ್ನು ಫ್ಲ್ಯಾಟ್ನಲ್ಲಿಯೇ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಮೃತ ಮಹಿಳೆಯ ಸಹೋದರ ಸ್ಥಳಕ್ಕೆ ಆಗಮಿಸಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.
ಜಾರಾ ಖಾನ್ ಅಲಿಯಾಸ್ ಶಿವಾ ವಿಶ್ವಕರ್ಮಳನ್ನು ಆಕೆಯ ಮುಖದ ಮೇಲೆ ದಿಂಬನ್ನಿಟ್ಟು ಕೊಲೆಗೈಯಲಾಗಿದೆ. ಕಳೆದ ಕೆಲ ದಿನಗಳಿಂದ ಕೊಲೆಗಾರ ಯಾಸಿನ್ನ ಮೊದಲ ಪತ್ನಿಯು ಕಾಲೋನಿಯ ಸಮೀಪ ಓಡಾಡುತ್ತಿದ್ದಳು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಮೃತ ಜಾರಾ ಆರೋಪಿ ಯಾಸಿನ್ನ ಎರಡನೇ ಪತ್ನಿಯಾಗಿದ್ದಳು. ಈಕೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಈತನನ್ನು ವಿವಾಹವಾಗಿದ್ದಳು ಎನ್ನಲಾಗಿದೆ. ಜಾರಾ ಎಷ್ಟು ಬಾರಿ ಕರೆ ಮಾಡಿದರೂ ಫೋನ್ ರಿಸೀವ್ ಮಾಡದ ಹಿನ್ನೆಲೆಯಲ್ಲಿ ಆಕೆಯ ಸಹೋದರ ಈಕೆಯ ಮನೆಗೆ ಆಗಮಿಸಿದ್ದಾನೆ. ಇಲ್ಲಿ ತನ್ನ ಸಹೋದರಿಯ ಶವವನ್ನು ಹಾಸಿಗೆಯಲ್ಲಿ ಸುತ್ತಿಟ್ಟಿರೋದನ್ನು ಕಂಡು ಶಾಕ್ ಆದ ಸಹೋದರ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ವಿಧಿ ವಿಜ್ಞಾನ ತಂಡ ಪರಿಶೀಲನೆ ನಡೆಸಿದೆ. ನಾಪತ್ತೆಯಾಗಿರುವ ಆರೋಪಿ ಯಾಸಿನ್ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಶೀಘ್ರದಲ್ಲಿಯೇ ಆತನನ್ನು ಬಂಧಿಸುತ್ತೇವೆ ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
up crime husband murdered wife in front of three year old daughter in lucknow
ಇದನ್ನು ಓದಿ : India Ban International flights : ಭಾರತದಲ್ಲಿ ಫೆಬ್ರವರಿ 28 ರವರೆಗೆ ಅಂತರಾಷ್ಟ್ರೀಯ ವಿಮಾನ ಹಾರಾಟ ಬಂದ್
ಇದನ್ನೂ ಓದಿ : Siddaramaiah outrage : ಕೊರೋನಾ ಚಿಕಿತ್ಸೆ ಹೊಣೆ ಖಾಸಗಿಯವರಿಗೆ, ಸರ್ಕಾರ ನಿದ್ರೆಗೆ : ಚಾಟಿ ಬೀಸಿದ ಸಿದ್ಧರಾಮಯ್ಯ