Tamil Nadu : ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ ಬಾಲಕಿ ಆತ್ಮಹತ್ಯೆಗೆ ಶರಣು

Tamil Nadu :ತಾನು ಗರ್ಭಿಣಿಯಾಗಿದ್ದೇನೆ ಎಂದು ತಿಳಿದ ಬಳಿಕ ಇಲಿ ಪಾಷಾಣ ಸೇವಿಸಿದ 16 ವರ್ಷದ ಬುಡಕಟ್ಟು ಜನಾಂಗದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆಯು ತಿರುವನ್ನಮಲೈನ ಸರ್ಕಾರಿ ಆಸ್ಪತ್ರೆಯಲ್ಲಿ ಸಂಭವಿಸಿದೆ.


ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ತಿರುವಣ್ಣಮಲೈ ಸಮೀಪದ ಗ್ರಾಮವೊಂದರಲ್ಲಿ ವಾಸವಿದ್ದ ಬಾಲಕಿಯ ಮೇಲೆ ನೆರೆಯ ಮನೆಯ ವ್ಯಕ್ತಿ ನಿರಂತರವಾಗಿ ಅತ್ಯಾಚಾರಗೈಯುತ್ತಿದ್ದ ಎನ್ನಲಾಗಿದೆ. ಈ ಪ್ರಕರಣ ಸಂಬಂಧ ಬಾಲಕಿಯ ನೆರೆ ಮನೆಯಲ್ಲಿ ವಾಸವಿರುವ ಕಲ್ಲಕುರಿಚಿ ಪಟ್ಟಣದಲ್ಲಿ ಚಾಲಕನಾಗಿರುವ 27 ವರ್ಷದ ಜಿ ಹರಿಪ್ರಸಾದ್​​ರನ್ನು ಪೊಲೀಸರು ಬಂಧಿಸಿದ್ದಾರೆ. ಆತ ಬಾಡಿಗೆ ಮನೆಯಲ್ಲಿ ವಾಸವಿದ್ದ ಹಾಗೂ ಬಾಲಕಿಯು ಗರ್ಭಿಣಿಯಾಗಲು ಈತನೇ ಕಾರಣ ಎನ್ನಲಾಗಿದೆ. ಕೊರೊನಾ ಸೋಂಕಿಗೂ ಒಳಗಾಗಿದ್ದ ಬಾಲಕಿಗೆ ಗರ್ಭಪಾತವಾಗಿತ್ತು. ಆದರೆ ಆಕೆಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.


ಇನ್ನು ಈ ಕೃತ್ಯದ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಲು ವಿಫಲರಾದ ಹಿನ್ನೆಲೆಯಲ್ಲಿ ತಿಂಡಿವನಂ ತಾಲೂಕಿನ ಏಕಲವ್ಯ ಮಾದರಿ ವಸತಿ ಶಾಲೆಯ ಮುಖ್ಯೋಪಾಧ್ಯಾಯ ಐ. ಕುಮಾರಗುರುಬರನ್​, ಹಾಗೂ ಹಾಸ್ಟೆಲ್​ ವಾರ್ಡನ್​ ಟಿ. ಶೆನ್​ಬಗವಲ್ಲಿಯನ್ನು ಪೊಲೀಸರು ಬಂಧಿಸಿದ್ದಾರೆ. ಚೆಂಗಲ್​ಪೇಟ್​ ಜಿಲ್ಲೆಯ ಕೋವಲಂ ಬಳಿ ಇರುವ ಇಎಂಆರ್​ಎಸ್​ನ್ನು ಪರಿಶಿಷ್ಟ ಪಂಗಡದ ಮಕ್ಕಳಿಗೆ ನೀಡಲು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಸ್ಥಾಪಿಸಿದೆ.
ಸರ್ಕಾರವು ಲಾಕ್​ಡೌನ್ ನಿರ್ಬಂಧಗಳನ್ನು ತೆಗೆದುಹಾಕಿದ ಒಂದೆರಡು ತಿಂಗಳುಗಳ ಬಳಿಕ ರಾಜ್ಯದಲ್ಲಿ ಶಾಲೆಗಳನ್ನು ಪುನಾರಂಭಿಸಲಾಗಿತ್ತು. ಬಳಿಕ ಅಪ್ರಾಪ್ತೆಯು ವಸತಿ ಶಾಲೆಗೆ ಮರಳಿದ್ದಾಳೆ. ಕಳೆದ ವರ್ಷ ಡಿಸೆಂಬರ್​ 22ರಂದು ಬಾಲಕಿಯು ಶಾಲೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಹಾಸ್ಟೆಲ್​ ವಾರ್ಡನ್​ ಆಕೆಯನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.


ಈ ವೇಳೆ ವೈದ್ಯರಿಗೆ ಬಾಲಕಿ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದುಬಂದಿದೆ. ವೈದ್ಯರು ವಾರ್ಡನ್​​ಗೆ ಈ ಬಗ್ಗೆ ಮಾಹಿತಿಯನ್ನೂ ನೀಡಿದ್ದರು. ಕೂಡಲೇ ವಾರ್ಡನ್​ ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆಯಲ್ಲಿ ಈ ಇಬ್ಬರು ಬಾಲಕಿಯ ಪೋಷಕರನ್ನು ಶಾಲೆಗೆ ಕರೆಸಿ ಆಕೆ ಗರ್ಭಿಣಿ ಎಂಬ ವಿಚಾರವನ್ನು ತಿಳಿಸಿದೆಯೇ ಆಕೆಯನ್ನು ಮನೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದರು ಎನ್ನಲಾಗಿದೆ. ಹೀಗಾಗಿ ಪೋಷಕರು ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿದ್ದರು.

Tamil Nadu: 16-year-old girl, pregnant after rape, ends life

ಇದನ್ನು ಓದಿ : India Ban International flights : ಭಾರತದಲ್ಲಿ ಫೆಬ್ರವರಿ 28 ರವರೆಗೆ ಅಂತರಾಷ್ಟ್ರೀಯ ವಿಮಾನ ಹಾರಾಟ ಬಂದ್‌

ಇದನ್ನೂ ಓದಿ : Coronavirus pandemic : ದೇಶದಲ್ಲಿ 3 ಲಕ್ಷ ಗಡಿದಾಟಿದ ದೈನಂದಿನ ಕೋವಿಡ್​ ಪ್ರಕರಣ

Comments are closed.