Teen Shot Mother :ಮೊಬೈಲ್​​ ಹುಚ್ಚಿಗೆ ತಾಯಿಯನ್ನೇ ಕೊಂದ ಬಾಲಕ

ಉತ್ತರ ಪ್ರದೇಶ : Teen Shot Mother : ಮಕ್ಕಳಿಗೆ ಮೊಬೈಲ್​ ಗೇಮ್​ಗಳ ಚಟ ಹತ್ತಿತು ಅಂದರೆ ಮುಗೀತು . ಅದರಿಂದ ಮಕ್ಕಳನ್ನು ಹೊರಗೆ ತರೋದು ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಅದರಲ್ಲೂ ಹದಿ ಹರೆಯದ ಮಕ್ಕಳಂತೂ ಮೊಬೈಲ್​ ಗೇಮ್​ ಚಟಕ್ಕೆ ಬಿದ್ದು ಜೀವ ಕಳೆದುಕೊಂಡಂತಹ ಉದಾಹರಣೆ ಕೂಡ ಇದೆ. ಆದರೆ ಉತ್ತರ ಪ್ರದೇಶದ ಲಕ್ನೋದಲ್ಲಿ 16 ವರ್ಷದ ಬಾಲಕ ತನ್ನ ತಾಯಿ ಮೊಬೈಲ್​ ಗೇಮ್​ ಆಡಲು ಬಿಡದ್ದಕ್ಕೆ ಕೋಪಗೊಂಡು ಆಕೆಯನ್ನು ಕೊಲೆ ಮಾಡಿದ್ದು ಮಾತ್ರವಲ್ಲದೇ 2 ದಿನಗಳ ಕಾಲ ಆಕೆಯ ಶವವನ್ನು ಬಚ್ಚಿಟ್ಟ ಬೆಚ್ಚಿ ಬೀಳಿಸುವ ಘಟನೆಯೊಂದು ವರದಿಯಾಗಿದೆ.


ಭಾನುವಾರ ಮುಂಜಾನೆ ಈ ಘಟನೆ ಸಂಭವಿಸಿದ್ದು ತಂದೆಯ ಪರವಾನಿಗಿ ಪಡೆದ ರಿವಾಲ್ವರ್​​ನಿಂದ ತನ್ನ ತಾಯಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ . ಪುತ್ರ ತಾಯಿಯ ತಲೆಗೆ ರಿವಾಲ್ವರ್​​ನಿಂದ ಶೂಟ್​ ಮಾಡಿದ್ದಾನೆ. ತಲೆಗೆ ಗುಂಡು ತಗುಲಿದ ಮಹಿಳೆಯು ಸ್ವಲ್ಪ ಸಮಯದ ಬಳಿಕ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.



ಹದಿಹರೆಯದವರು ತನ್ನ ತಾಯಿಯ ದೇಹವನ್ನು ಮರೆಮಾಡಿದರು ಮತ್ತು ಎರಡು ದಿನಗಳ ಕಾಲ ತನ್ನ ಒಂಬತ್ತು ವರ್ಷದ ಸಹೋದರಿಯೊಂದಿಗೆ ಮನೆಯಲ್ಲಿದ್ದರು. ದುರ್ವಾಸನೆ ಆವರಿಸಲು ಬಾಲಕ ರೂಮ್ ಫ್ರೆಶ್ನರ್ ಬಳಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ತಾಯಿಯನ್ನು ಕೊಂದ ಬಾಲಕ ತಾಯಿಯ ಶವವನ್ನು ಅಡಗಿಸಿಟ್ಟು 2 ದಿನಗಳ ಕಾಲ ತನ್ನ 9 ವರ್ಷದ ತಂಗಿಯ ಜೊತೆಯಲ್ಲಿ ಅದೇ ಮನೆಯಲ್ಲಿ ವಾಸಿಸಿದ್ದಾನೆ. ಶವದಿಂದ ದುರ್ವಾಸನೆ ಬರೆದಂತೆ ತಡೆಯಲು ಈತ ರೂಮ್​ ಫ್ರೆಶ್​ನರ್​ ಬಳಸಿದ್ದಾನೆ ಎನ್ನಲಾಗಿದೆ. ಅಲ್ಲದೇ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನೂ ಕೊಲ್ಲುತ್ತೇನೆಂದು ತಂಗಿಗೆ ಬೆದರಿಕೆಯೊಡ್ಡಿದ್ದ ಎಂದು ಬಾಲಕಿಯು ಪೊಲೀಸರಿಗೆ ತಿಳಿಸಿದ್ದಾಳೆ.


ವಿಚಾರಣೆ ವೇಳೆ ಸುಳ್ಳು ಕತೆ ಹೆಣೆದಿದ್ದ ಬಾಲಕ ಕೆಲಸದ ನಿಮಿತ್ತ ತಂದೆ ಮನೆಯಿಂದ ಹೊರಗಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿದ್ದ ಎಲೆಕ್ಟ್ರಿಷಿಯನ್​ ತಾಯಿಗೆ ಗುಂಡಿಟ್ಟು ಕೊಂದಿದ್ದಾನೆ ಎಂದು ಹೇಳಿದ್ದ. ಬಾಲಕನ ತಂದೆಯು ಕೆಲಸದ ನಿಮಿತ್ತ ಪಶ್ಚಿಮ ಬಂಗಾಳದಲ್ಲಿ ನೆಲೆಸಿದ್ದರು ಎನ್ನಲಾಗಿದೆ.


ಬಾಲಕ ಮೊದಲು ಸುಳ್ಳು ಕತೆಯನ್ನು ಹೆಣೆದಿದ್ದ. ಆದರೆ ನಾವು ಹೆಚ್ಚಿನ ತನಿಖೆ ನಡೆಸಿದ ವೇಳೆಯಲ್ಲಿ ಇದು ಸಂಪೂರ್ಣ ಕಾಲ್ಪನಿಕ ಕತೆ ಎಂಬುದು ತಿಳಿದುಬಂದಿದೆ. ಬಳಿಕ ನಾವು ಬಾಲಕನನ್ನು ಕಸ್ಟಡಿಗೆ ತೆಗೆದುಕೊಂಡಿದ್ದೇವೆ ಎಂದು ಲಕ್ನೋದ ಹಿರಿಯ ಪೊಲೀಸ್​ ಅಧಿಕಾರಿ ಎಸ್​​ಎಂ ಖಾಸಿಮ್​ ಅಬಿದಿ ಹೇಳಿದರು.

ಇದನ್ನು ಓದಿ : Set Up UPI: ಹಣ ವರ್ಗಾಯಿಸಲು ಯುಪಿಐ ಸೆಟ್‌ ಮಾಡುವುದು ಹೇಗೆ?

ಇದನ್ನೂ ಓದಿ : Student Gang Rape : 10 ನೇ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

UP Teen Shot Mother Over Mobile Game, Used Air Freshener To Cover Stench: Cops

Comments are closed.