Metro train : ಸೈಕ್ಲಿಂಗ್ ಪ್ರಿಯರಿಗೆ ಸಿಹಿಸುದ್ದಿ: ಮೆಟ್ರೋದಲ್ಲಿ ಕೊಂಡೊಯ್ಯಬಹುದು ಸೈಕಲ್‌

ಬೆಂಗಳೂರು : ಸಿಲಿಕಾನ್‌ ಸಿಟಿಯ ಲಕ್ಷಾಂತರ ಜನರಿಗೆ ಕಾಡುವ ಟ್ರಾಫಿಕ್ ನಿಂದ ಮುಕ್ತಿ ನೀಡಿದ ಖ್ಯಾತಿ ನಮ್ಮ‌ಮೆಟ್ರೋಕ್ಕಿದೆ. ಆದರೆ ಈ ಮೆಟ್ರೋ ಬಳಸೋ ಬಹುತೇಕರಿಗೆ ಮೆಟ್ರೋ ಸ್ಟೇಶನ್ ನಿಂದ ಮತ್ತೆ ಆಫೀಸ್ ಗಳಿಗೆ ತೆರಳೋಕೇ ಅಟೋ ಹುಡುಕೋ ತಲೆಬಿಸಿ ಇರ್ತಿತ್ತು. ಆದರೆ ಈಗ ಈ ಸಮಸ್ಯೆಗೆ ನಮ್ಮ ಮೆಟ್ರೋ ಒಂದು ಪರಿಹಾರ ನೀಡಿದ್ದು, ನೀವು ಇನ್ಮುಂದೇ ನಿಮ್ಮ ಸೈಕಲ್ ನ್ನು (metro train) ಮೆಟ್ರೋದಲ್ಲಿ ತೆಗೆದುಕೊಂಡು ಹೋಗಲು ಅವಕಾಶ ನೀಡಿದೆ. ಹೌದು ನಮ್ಮ ಮೆಟ್ರೋ ಬೆಂಗಳೂರು ಮಂದಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಮೆಟ್ರೋದಲ್ಲಿ ಇನ್ಮುಂದೆ ಸೈಕಲ್ ಕೊಂಡೊಯ್ಯಲು BMRCL ನಿಂದ ಅನುಮತಿ ನೀಡಿದೆ.

ಮಡಚಬಹುದಾದ ಸೈಕಲ್ ಅನ್ನು (Folding Bicycle) ಮೆಟ್ರೋದ ಕೊನೆಯ ಭೋಗಿಯಲ್ಲಿ ಕೊಂಡೊಯ್ಯಲು ಅವಕಾಶ ನೀಡಿ ನಮ್ಮ ಮೆಟ್ರೋ ಆದೇಶ ಹೊರಡಿಸಿದೆ. 60 mm × 45 mm × 25 mm ನ 15 kg ತೂಕದವರೆಗಿನ ಸೈಕಲ್ ಕೊಂಡೊಯ್ಯಲು ಅವಕಾಶವಿದ್ದು, ಸೈಕಲ್ ಗೆ ಯಾವುದೇ ಲಗೇಜ್ ಚಾರ್ಜ್ ಇರುವುದಿಲ್ಲ, ಇದು ಸಂಪೂರ್ಣ ಉಚಿತ ಎಂದು ನಮ್ಮ ಮೆಟ್ರೋ ಘೋಷಿಸಿದೆ.

ಈ ಬಗ್ಗೆ ಈಗಾಗಲೇ ಹಲವು ಸಂಘ ಸಂಸ್ಥೆಗಳು ಸೈಕಲ್ ತೆಗೆದುಕೊಂಡು ಹೋಗಲು ಅವಕಾಶ ಕೊಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದವು ಎನ್ನಲಾಗಿದೆ. ಈ ಬೇಡಿಕೆಯ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಸೈಕಲ್ ಸಾಗಿಸಲು ಅವಲಾಶ ನೀಡಿದೆ. ಸೈಕಲ್ ನ್ನು ನಮ್ಮ ಮೆಟ್ರೋದಲ್ಲಿ ಸಾಗಿಸಲು ಅವಕಾಶ ನೀಡೋದರಿಂದ ನಗರದಲ್ಲಿ ಸೈಕ್ಲಿಂಗ್ ಮತ್ತಷ್ಟು ಪ್ರೋತ್ಸಾಹ ನೀಡದಂತಾಗಲಿದ್ದು ಎಂಬುದು ಸಂಘ ಸಂಸ್ಥೆಗಳ ಅಭಿಮತವಾಗಿತ್ತು. ಅಲ್ಲದೇ ಸೈಕ್ಲಿಂಗ್ ಗೆ ಉತ್ತೇಜನ ಸಿಕ್ಕಿದಲ್ಲಿ ವಾಯುಮಾಲಿನ್ಯ ಹಾಗೂ ಟ್ರಾಫಿಕ್ ಸಮಸ್ಯೆಗೆ ಈ ಮೂಲಕ ಪರಿಹಾರವಾಗಲಿದೆ ಎಂದಿದ್ದ ಸಂಘ ಸಂಸ್ಥೆಗಳು ಮೇಟ್ರೋಗೆ ಮನವಿ ಸಲ್ಲಿಸಿದ್ದವು.

ಈ ಪ್ರಸ್ತಾಪವನ್ನು ಪರಿಶೀಲಿಸಿದ ನಮ್ಮ ಮೆಟ್ರೋ ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಸೈಕಲ್ ನ್ನು ನಮ್ಮ ಮೆಟ್ರೋದಲ್ಲಿ ಕ್ಯಾರಿ ಮಾಡಲು ಅವಕಾಶ ನೀಡಲಾಗಿದೆ. ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣಕ್ಕೆ ನಮ್ಮ ಮೆಟ್ರೋ ಸತತ ನಷ್ಟದಲ್ಲಿದೆ. ಹೀಗಾಗಿ ಪ್ರಯಾಣಿಕರನ್ನು ತನ್ನತ್ತ ಸೆಳೆದುಕೊಂಡು ನಷ್ಟ ಸರಿತೂಗಿಸಿಕೊಳ್ಳಲು ನಮ್ಮ ಮೆಟ್ರೋ ಇನ್ನಿಲ್ಲದ ಸರ್ಕಸ್ ನಡೆಸಿದ್ದು ಅದರ ಭಾಗವಾಗಿಯೇ ಮೆಟ್ರೋ ಸೈಕಲ್ ಗೆ ಅನುಮತಿ ನೀಡಿದೆ.

ಇದನ್ನೂ ಓದಿ : Rohit Chakratirtha : ಸಂಶೋಧಕನಿಗೆ ಮತಕ್ಕಿಂತ ಸತ್ಯ ಮುಖ್ಯ: ಬಿಜೆಪಿ ವಿರುದ್ಧವೇ ತಿರುಗಿಬಿದ್ದ ರೋಹಿತ್ ಚಕ್ರತೀರ್ಥ

ಇದನ್ನೂ ಓದಿ : Teen Shot Mother :ಮೊಬೈಲ್​​ ಹುಚ್ಚಿಗೆ ತಾಯಿಯನ್ನೇ ಕೊಂದ ಬಾಲಕ

BMRCL allows Carrying cycle on the metro train

Comments are closed.