Viral Video : ಕಾಲೇಜಿನಲ್ಲಿ ಅಸಭ್ಯ ವರ್ತನೆ : ಉಪನ್ಯಾಸಕನಿಗೆ ಹಿಗ್ಗಾಮುಗ್ಗ ಥಳಿಸಿದ ಉಪನ್ಯಾಸಕಿಯರು

ಬೆಳಗಾವಿ : ಕಾಲೇಜಿನಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಉಪನ್ಯಾಸಕ ಓರ್ವನಿಗೆ ಉಪನ್ಯಾಸಕಿಯರೇ ಹಿಗ್ಗಾಮುಗ್ಗ ಥಳಿಸಿದ ಘಟನೆ ಬೆಳಗಾವಿ (Belagavi) ಜಿಲ್ಲೆಯ ಸರಕಾರಿ ಸರ್ದಾರ್‌ ಪಿಯು ಕಾಲೇಜಿನಲ್ಲಿ ನಡೆದಿದೆ. ಉಪನ್ಯಾಸಕನಿಗೆ ಥಳಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ (Viral Video) ಆಗಿದೆ.

ಅಮಿತ್ ಬಸವಮೂರ್ತಿ ಎಂಬಾತನೇ ಉಪನ್ಯಾಸಕಿಯರಿಂದ ಥಳಿತಕ್ಕೆ ಒಳಗಾದ ಉಪನ್ಯಾಸಕ. ಏಪ್ರಿಲ್ 12ರಂದು ಬೆಳಗಾವಿಯ ಸರ್ಕಾರಿ ಸರ್ದಾರ್ ಪಿಯು ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಇಂಗ್ಲಿಷ್ ವಿಭಾಗದ ಖಾಯಂ ಉಪನ್ಯಾಸಕ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಮಿತ್ ಬಸವಮೂರ್ತಿ ನಿತ್ಯ ಮದ್ಯ ಸೇವಿಸಿ ಕಾಲೇಜಿಗೆ ಆಗಮಿಸುತ್ತಿದ್ದ. ಈ ವೇಳೆಯಲ್ಲಿ ಉಪನ್ಯಾಸಕಿಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಅಲ್ಲದೇ ಮಹಿಳಾ ಸಿಬ್ಬಂದಿ ಇರುವ ವಿಶ್ರಾಂತಿ ಕೊಠಡಿಗೆ ತೆರಳಿ ಉಪನ್ಯಾಸಕಿಯರ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ಉಪನ್ಯಾಸಕನ ವರ್ತನೆಯ ಕುರಿತು ಉಪನ್ಯಾಸಕಿಯರು ಕಾಲೇಜಿನ ಪ್ರಾಂಶುಪಾಲರಿಗೆ ದೂರು ನೀಡಿದ್ದರೂ ಕೂಡ ಯಾವುದೇ ಪ್ರಯೋಜನ ಆಗಿರಲಿಲ್ಲ. ಇದರಿಂದ ಮನನೊಂದ ಉಪನ್ಯಾಸಕಿಯರು ಕಾಲೇಜಿನ ಸ್ಟಾಫ್‌ ರೂಂನಲ್ಲೇ ಧರ್ಮದೇಟು ಕೊಟ್ಟಿದ್ದಾರೆ. ಅಲ್ಲದೇ ಉಪನ್ಯಾಸಕನ ವಿರುದ್ದ ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಕಾಮುಕ ಆರೋಪಿಯ ವಿರುದ್ದ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರೀ ವೈರಲ್‌ ಆಗಿದೆ.

ಇದನ್ನೂ ಓದಿ : Santosh Patil : ಸಂತೋಷ್ ಪಾಟೀಲ್ ತಂಗಿದ್ದ ಹೊಟೇಲ್ ನಲ್ಲಿ ಏನಾಯ್ತು? ಇಲ್ಲಿದೆ Exclusive Details

ಇದನ್ನೂ ಓದಿ : ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, 4 ಗಂಟೆಗಳಲ್ಲಿ ಮೂವರು ಆರೋಪಿಗಳ ಬಂಧನ

Viral Video Lady Lecturers Beating lecturer in Belagavi

Comments are closed.