rape hubby’s friend :ಪತಿಯೊಂದಿಗೆ ಸಲುಗೆಯಿಂದಿದ್ದ ಮಹಿಳೆಯ ಮೇಲೆ ಗ್ಯಾಂಗ್​​ರೇಪ್​ಗೆ ಸುಪಾರಿ ಕೊಟ್ಟ ಪತ್ನಿ

rape hubby’s friend : ತನ್ನ ಪತಿ ಮತ್ತೊಬ್ಬ ಮಹಿಳೆಯೊಂದಿಗೆ ಸ್ನೇಹ ಬೆಳೆಸುತ್ತಿದ್ದುದ್ದನ್ನು ಸಹಿಸದ ಹೈದರಾಬಾದ್​ನ ಗಚ್ಚಿಬೌಲಿಯ ನಾಗರಿಕಾ ಪತ್ನಿಯು ತನ್ನ ಸೇವಾ ಪರೀಕ್ಷಾ ಫಲಿತಾಂಶ ಆಕಾಂಕ್ಷಿ ಗಂಡನ ಜೊತೆ ಆತ್ಮೀಯವಾಗಿದ್ದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಲು ಐವರು ಪುರುಷರನ್ನು ನೇಮಿಸಿದ ಘಟನೆಯೊಂದು ವರದಿಯಾಗಿದೆ. ಆ ಮಹಿಳೆ ಕೂಡ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಳೆ ಎನ್ನಲಾಗಿದೆ.

ಭಾನುವಾರ ಮಹಿಳೆ ನೀಡಿದ ದೂರಿನ ಮೇರೆಗೆ ಗಚ್ಚಿಬೌಲಿ ಪೊಲೀಸರು ಪತ್ನಿ ಸೇರಿದಂತೆ ಆರು ಮಂದಿಯನ್ನು ಬಂಧಿಸಿ ಸಾಮೂಹಿಕ ಅತ್ಯಾಚಾರ ಹಾಗೂ ಈ ಅಪರಾಧಕ್ಕೆ ಕುಮ್ಮಕ್ಕು ನೀಡಿದ ಪ್ರಕರಣವನ್ನು ದಾಖಲಿಸಿದ್ದಾರೆ. ಸಧ್ಯ ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.


ಆರೋಪಿ ಮಹಿಳೆಯ ಪತಿಯು ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಇದನ್ನೇ ನೆಪವಾಗಿಟ್ಟುಕೊಂಡ ಮಹಿಳೆಯು ಇವರ ಮನೆಗೆ ಆಗಮಿಸುತ್ತಿದ್ದಳು ಎನ್ನಲಾಗಿದೆ. ಕಾಲಾಂತರದಲ್ಲಿ ಮಹಿಳೆ ಕೂಡ ಈ ದಂಪತಿಯಿದ್ದ ಮನೆಗೆ ಶಿಫ್ಟ್​ ಆಗಿದ್ದಾಳೆ. 2021ರ ಅಕ್ಟೋಬರ್​ನಿಂದ ಈ ವರ್ಷದ ಫೆಬ್ರವರಿ ತಿಂಗಳವರೆಗೂ ಮಹಿಳೆಯು ದಂಪತಿಯ ಜೊತೆಯಲ್ಲಿ ವಾಸವಿದ್ದಳು. ಮೊದ ಮೊದಲು ಎಲ್ಲವೂ ಸರಿಯಾಗಿತ್ತು. ಆದರೆ ಪತ್ನಿಗೆ ಯಾವಾಗ ತನ್ನ ಪತಿಯು ಈ ಮಹಿಳೆಯೊಂದಿಗೆ ಹೆಚ್ಚು ಸಲಿಗೆ ಹೊಂದಿದ್ದಾನೆ ಎಂಬ ಅನುಮಾನ ಮೂಡಿತೋ ಅಲ್ಲಿಂದ ಎಲ್ಲವೂ ಬದಲಾಗಿದೆ ಎಂದು ಗಚ್ಚಿಬೌಲಿ ಠಾಣಾ ಪೊಲೀಸ್​ ಸುರೇಶ್​ ಹೇಳಿದ್ದಾರೆ.
ಸಾಕಷ್ಟು ಗಲಾಟೆಗಳ ಬಳಿಕ ಮಹಿಳೆಯು ಆ ಮನೆಯನ್ನು ಖಾಲಿ ಮಾಡಿದ್ದಳು. ಆದರೆ ಅಲ್ಲಿಗೆ ಈ ಗಲಾಟೆ ನಿಂತಿರಲಿಲ್ಲ.


ಮೇ 26ರಂದು ಪತ್ನಿಯು ಮಹಿಳೆಯ ಜೊತೆ ಮಾತನಾಡಬೇಕೆಂದು ತನ್ನ ಮನೆಗೆ ಕರೆಸಿದ್ದಾಳೆ. ಮಹಿಳೆಯು ತನ್ನ ಪೋಷಕರ ಜೊತೆಯಲ್ಲಿ ಅಲ್ಲಿಗೆ ಆಗಮಿಸಿದ್ದಳು. ಪೋಷಕರಿಗೆ ಮನೆಯ ಹೊರಗೆ ಇರುವಂತೆ ಸೂಚಿಸಿದ ಪತ್ನಿಯು ನಿನ್ನೊಂದಿಗೆ ಖಾಸಗಿಯಾಗಿ ಮಾತನಾಡಬೇಕೆಂದು ಹೇಳಿದ್ದಳು ಎನ್ನಲಾಗಿದೆ. ಮಹಿಳೆಯು ಮನೆ ಒಳಗೆ ಬರುತ್ತಿದ್ದಂತೆಯೇ ಅಲ್ಲಿ ಐವರು ಪುರುಷರು ಇರುವುದನ್ನು ನೋಡಿದ್ದಾಳೆ.


ಆರು ಮಂದಿ ಸೇರಿಕೊಂಡು ಮಹಿಳೆಯನ್ನು ನೆಲಕ್ಕೆ ಬೀಳಿಸಿ ಆಕೆಯ ಬಾಯಿಗೆ ಬಟ್ಟೆ ತುರುಕಿದ್ದರು. ಐವರಲ್ಲಿ ನಾಲ್ವರು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದರೆ ಐದನೇ ವ್ಯಕ್ತಿಯು ಆಕೆಯ ಮೇಲೆ ಅತ್ಯಾಚಾರವೆಸಗಿದನು. ಇದು ಸಾಮೂಹಿಕ ಅತ್ಯಾಚಾರಕ್ಕೆ ಸಮನಾಗಿದೆ ಎಂದು ಡಿಸಪಿ ಕೆ. ಶಿಲ್ಪವಲ್ಲಿ ಹೇಳಿದ್ದಾರೆ.


ಸಂತ್ರಸ್ತೆ ಸಹಾಯಕ್ಕಾಗಿ ಚೀರಾಡಿದ್ದು ಪೋಷಕರ ಗಮನಕ್ಕೆ ಬರುತ್ತಿದ್ದಂತೆ ಓಡಿ ಬಂದ ಪೋಷಕರು ಪುತ್ರಿಯನ್ನು ರಕ್ಷಿಸಿದ್ದಾರೆ. ಅಷ್ಟೊತ್ತಿಗಾಗಲೇ ಗೂಂಡಾಗಳು ಪರಾರಿಯಾಗಿದ್ದರು. ಪೊಲೀಸರ ಎದುರು ಆರೋಪಿ ಮಹಿಳೆಯು ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಎಲ್ಲಾ ಐವರು ಆರೋಪಿಗಳನ್ನು ಪೊಲೀಸರು ಸುಲಭವಾಗಿ ಬಂಧಿಸಿದ್ದಾರೆ.

ಇದನ್ನು ಓದಿ : ನಿಮ್ಮ ವೆಬ್ಸೈಟ್ ಗೆ ಟ್ರಾಫಿಕ್ ಹೆಚ್ಚಿಸಲು ಇದೆ ಸುಲಭ ವಿಧಾನ ….!

ಇದನ್ನೂ ಓದಿ : acid attack victim : ಆ್ಯಸಿಡ್​ ಸಂತ್ರಸ್ತೆಗೆ 5ನೇ ಶಸ್ತ್ರಚಿಕಿತ್ಸೆ: ಅನಾರೋಗ್ಯಕ್ಕೊಳಗಾದ ಯುವತಿ ಐಸಿಯುಗೆ ಶಿಫ್ಟ್​

Wife gets goons to rape hubby’s friend over ‘affair’ in Hyderabad

Comments are closed.