Woman’s Handbag : ನಿಮ್ಮ ಬ್ಯಾಗ್‌ ಹೀಗಿರಲಿ : ಇಲ್ಲಿ ಹೇಳಿರುವ ಪರಿಕರಗಳನ್ನು ಅಗತ್ಯವಾಗಿ ನಿಮ್ಮ ಬ್ಯಾಗ್‌ನಲ್ಲಿಟ್ಟುಕೊಳ್ಳಿ!!

ಬ್ಯಾಗ್‌(Bag)ಗಳ ವಿಷಯ ಬಂದಾಗ ಮಹಿಳೆಯರೆಲ್ಲರೂ ಒಂದೇ ರೀತಿ ಯೋಚಿಸುತ್ತಾರೆ. ಬ್ಯಾಗ್‌ ಇಲ್ಲದೇ ಮಹಿಳೆಯರು(Woman’s Handbag) ಹೊರಗಡೆ ಹೋಗುವುದೇ ಇಲ್ಲ. ಅದು ಬೇಕಾದರೆ ಚಿಕ್ಕದಾದ ಕ್ರಾಸ್‌ ಬ್ಯಾಗ್‌ ಇರಬಹುದು ಇಲ್ಲವೇ ದೊಡ್ಡದಾದ ಟೋಟ್‌ ಬ್ಯಾಗ್‌ ಇರಬಹುದು. ಬ್ಯಾಗ್‌ ಮಹಿಳೆಯರಿಗೆ ಎರಡನೇ ಮನೆ ಇದ್ದಂತೆ, ಮತ್ತು ಅದರಲ್ಲಿ ಅವರ ಪ್ರಪಂಚವೇ ಇರುತ್ತದೆ. ಆದಗ್ಯೂ ಕೆಲವೊಮ್ಮೆ ಅಗತ್ಯದ ವಸ್ತುಗಳಿಗಿಂತ ಅನಗತ್ಯ ವಸ್ತುಗಳೇ ತುಂಬಿರುತ್ತವೆ. ಬ್ಯಾಗ್‌ನಲ್ಲಿ ಇರಿಸುವ ವಸ್ತುಗಳು ಬರೀ ಅಗತ್ಯವಸ್ತುಗಳು ಮಾತ್ರ ಆಗಿರುವುದಿಲ್ಲ ಕೆಲವೊಮ್ಮೆ ಅವು ಜೀವರಕ್ಷಕಗಳೂ ಆಗಿರುತ್ತವೆ.

ಹಾಗಾಗಿ, ನೀವು ನಿಮ್ಮ ಪರ್ಸ್‌ಅನ್ನು ಬಹಳವಾಗಿ ಪ್ರೀತಿಸುತ್ತಿದ್ದರೆ ನಾವು ಹೇಳಿರುವ ಎಲ್ಲಾ ವಸ್ತುಗಳು ಅದರಲ್ಲಿವೆಯೇ ಎಂದು ಖಚಿತಪಡಿಸಿಕೊಳ್ಳಿ. ಇವುಗಳು ಬಹಳ ಮಾಮೂಲಿನ ವಸ್ತುಗಳಾಗಿದ್ದರೂ ಅತಿ ಅವಶ್ಯಕಗಳಾಗಿವೆ. ಮತ್ತು ಅವು ಪ್ರತಿ ಮಹಿಳೆಯರ ಬ್ಯಾಗ್‌ ಅಲ್ಲಿ ಇರಲೇಬೇಕು.

ಸ್ಕೃಂಚಿಸ್‌ :
ನಮಗೆಲ್ಲರಿಗೂ ಕೂದಲನ್ನು ಗಾಳಿಗೆ ಹಾರಾಡಲು ಬಿಡುವುದೆಂದರೆ ಬಹಳ ಇಷ್ಟ ಅಲ್ಲವೇ? ಆದರೆ ಬಿಸಿಲಿನ ವಾತಾವರಣದಲ್ಲಿ ಕೂದಲನ್ನು ಕಟ್ಟಿಕೊಳ್ಳದೇ ಬೇರೆ ದಾರಿಯೇ ಇಲ್ಲ. ಇಂತಹ ಸಂದರ್ಭಗಳಲ್ಲಿ ಸ್ಕೃಂಚಿಗಳು ಬಹಳ ಸೂಕ್ತವಾಗಿವೆ. ಒಂದೇ ಸ್ಕ್ರಂಚಿಗಳನ್ನು ಇಟ್ಟುಕೊಳ್ಳುವ ಬದಲು 2–3 ಸ್ಕ್ರಂಚಿಗಳನ್ನು ಇಟ್ಟುಕೊಳ್ಳುವುದು ಬೆಸ್ಟ್‌ ಐಡಿಯಾ. ಏಕೆಂದರೆ ಬೆವರಿನ ಕಿರಿಕಿರಿಯನ್ನು ತಪ್ಪಿಸಿಕೊಳ್ಳಬಹುದು.

ಇದನ್ನೂ ಓದಿ : Gray Hair : ಬಿಳಿ ಕೂದಲ ನಿವಾರಣೆಗೆ ಇಲ್ಲಿದೆ 5 ಅದ್ಭುತ ಮನೆಮದ್ದುಗಳು!!

ಸನ್‌ಗ್ಲಾಸ್‌ಗಳು :
ಸನ್‌ಗ್ಲಾಸ್‌ಗಳನ್ನು ಧರಿಸುವುದು ಆರೋಗ್ಯಕ್ಕಷ್ಟೇ ಅಲ್ಲ ಬದಲಿಗೆ ತೀಕ್ಷ್ಣ ಬೆಳಕಿನಲ್ಲಿ ದೃಷ್ಟಿ ಸುಧಾರಿಸುತ್ತದೆ. ಇದು ಬೆಳಕಿನ ಪ್ರಖರತೆ ಕಡಿಮೆ ಮಾಡಿ ನಿಮ್ಮ ನೋಟದಲ್ಲಿ ಬಣ್ಣ ಮತ್ತು ಕಾಂಟ್ರ್ಯಾಸ್ಟ್‌ ಹೆಚ್ಚಿಸುತ್ತದೆ. ವಾಹನ ಚಾಲನೆ ಮಾಡುವಾಗ ಬೆಳಕಿನ ಪ್ರಖರತೆಯನ್ನು ಕಡಿಮೆ ಮಾಡಿ ದೃಷ್ಟಿ ಚೆನ್ನಾಗಿ ಕಾಣಿಸವಂತೆ ಮಾಡುತ್ತದೆ. ಇದು ಕಣ್ಣಿನ ಆಯಾಸವನ್ನೂ ಕಡಿಮೆ ಮಾಡುತ್ತದೆ.

ಸ್ಟೋಲ್‌:
ಸ್ಟೋಲ್‌ ಇದು ಬಹುಮುಖವಾದ ಉಡುಪಾಗಿದೆ. ಏಕೆಂದರೆ ಇದು ದೇಹದ ಆಕೃತಿಗೆ ಅನುಗುಣವಾಗಿ ನೀವು ಬಯಸಿದಷ್ಟು ವಿಭಿನ್ನ ಶೈಲಿಗಳಲ್ಲಿ ಧರಿಸಬಹುದಾದ ಬಟ್ಟೆಯ ಪೀಸ್‌ ಆಗಿದೆ. ಇದನ್ನೂ ಕುತ್ತಿಗೆಯ ಸುತ್ತ ಸಡಿಲವಾಗಿ ಸುತ್ತಿಕೊಳ್ಳಬಹುದಾಗಿದೆ. ಕುತ್ತಿಗೆ ಮತ್ತು ಭುಜದ ಸುತ್ತ ಪೀಯರ್‌ ಆಕೃತ್ತಿಯಲ್ಲಿ ಧರಿಸಬಹುದಾಗಿದೆ, ಸೊಂಟದ ಸುತ್ತ ಬೆಲ್ಟ್‌ ರೀತಿಯಲ್ಲಿ ಕಟ್ಟಿಕೊಳ್ಳಬಹುದಾಗಿದೆ, ಅಥವಾ ಸ್ಕರ್ಟ್‌, ಟಾಪ್‌ ಅಥವಾ ಶ್ರಗ್‌ಗಳಾಗಿಯೂ ಪರಿವರ್ತಿಸಬಹುದಾಗಿದೆ. ಒಂದ ದೊಡ್ಡ ಉಣ್ಣೆಯ ಬಟ್ಟೆ ನಿಮ್ಮ ಸೊಬಗನ್ನು ಇಮ್ಮಡಿಗೊಳಿಸುತ್ತದೆ. ಆದ್ದರಿಂದ ಸ್ಟೋಲ್‌ ಖರೀದಿಸುವಾಗ ಬುದ್ಧಿವಂತಿಕೆಯಿಂದ ಆಯ್ದುಕೊಳ್ಳಿ. ಗಾಢ ಬಣ್ಣದ ಮೇಲೆ ಪ್ರಿಂಟ್‌ ಇರುವ ಸ್ಟೋಲ್‌ಗಳು ಸೊಗಸಾಗಿ ಕಾಣಿಸುತ್ತವೆ. ಅತಿಯಾದ ಡಿಸೈನ್‌ ಅಂದ ಹಾಳುಮಾಡುತ್ತದೆ. ವಿವಿಧ ಆಕೃತಿ ಮತ್ತು ಬಣ್ಣಗಳು ಕಣ್ಮನ ಸೆಳೆಯುವಂತೆ ಮಾಡುತ್ತದೆ. ನಿಮ್ಮ ತ್ವಚೆಗೆ ಸರಿಹೊಂದುವ ಬಣ್ಣ ಆಯ್ದು ಕೊಳ್ಳಿ.

ಬಿಡಿಭಾಗಗಳು:
ನೀವು ಅನಿರೀಕ್ಷಿತ ಪಾರ್ಟಿಗೆ ಹೋಗಬೇಕಾದರೆ ಹೂಪ್ಸ್‌ ಮತ್ತು ಬ್ರಾಸ್ಲೆಟ್ ನಿಮ್ಮ ಬಟ್ಟೆಗೆ ಮೆರುಗನ್ನು ನೀಡುತ್ತದೆ. ಯಾವಾಗ ಸರ್ಪ್ರೈಸ್‌ ಪಾರ್ಟಿಗೆ ಸರಿಹೊಂದುವ ಪರಿಕರಗಳಿಲ್ಲದಿದ್ದಾಗ ಇವುಗಳು ಉಪಯೋಗಕ್ಕೆ ಬರುತ್ತವೆ. ಈ ಬಿಡಿ ಪರಿಕರಗಳನ್ನೇ ಸುಲಭವಾಗಿ ಸೇರಿಸಿಕೊಳ್ಳಿ ಮತ್ತು ಪಾರ್ಟಿಗೆ ರೆಡಿಯಾಗಿ.

ಇದನ್ನೂ ಓದಿ :Sunglasses : ಸನ್‌ಗ್ಲಾಸ್‌ ಖರೀದಿಸುವ ಆಲೋಚನೆಯಲ್ಲಿದ್ದೀರಾ? ಇಲ್ಲಿ ಹೇಳಿದವುಗಳನ್ನು ಒಮ್ಮೆ ಗಮನಿಸಿ!!

(Woman’s Handbag every woman must carry these accessories in her handbag)

Comments are closed.