ಮಂಗಳವಾರ, ಏಪ್ರಿಲ್ 29, 2025
HomeCrimewife life is tragic :ಕಪ್ಪಗಿದ್ದೀಯಾ ಎಂದು ಪತ್ನಿಯನ್ನು ದೂರಿದ ಪತಿ : ಸ್ಯಾನಿಟೈಸರ್​​ ಸುರಿದುಕೊಂಡು...

wife life is tragic :ಕಪ್ಪಗಿದ್ದೀಯಾ ಎಂದು ಪತ್ನಿಯನ್ನು ದೂರಿದ ಪತಿ : ಸ್ಯಾನಿಟೈಸರ್​​ ಸುರಿದುಕೊಂಡು ಪತ್ನಿ ಸೂಸೈಡ್​

- Advertisement -

ಬೆಂಗಳೂರು :wife life is tragic : ದೇಹವೊಂದು ಸುಂದರವಾಗಿದ್ದರೆ ಸಾಲದು ಮನಸ್ಸು ಕೂಡ ಸುಂದರವಾಗಿರಬೇಕು. ಇಲ್ಲವಾದಲ್ಲಿ ಬಾಹ್ಯ ಸೌಂದರ್ಯ ಎಷ್ಟೇ ಚೆನ್ನಾಗಿದ್ದರೂ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ಅದೇ ರೀತಿ ರಾಜಧಾನಿಯಲ್ಲೊಬ್ಬ ಪತಿಯು ತನ್ನ ಪತ್ನಿಗೆ ನೀನು ಕಪ್ಪಗಿದ್ದೀಯಾ ಎಂದು ಪದೇ ಪದೇ ಪೀಡಿಸಿದ್ದಕ್ಕೆ ಮನನೊಂದ ಪತ್ನಿಯು ಮೈ ತುಂಬಾ ಸ್ಯಾನಿಟೈಸರ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಾಳೆ . ಬೆಂಗಳೂರಿನ ಮಠದಹಳ್ಳಿ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ.


ಮೃತ ಶಾಜಿಯಾ ಬಾನು ಹಾಗೂ ಇಮ್ರಾನ್​ ಖಾನ್​ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರ ದಾಂಪತ್ಯಕ್ಕೆ ಮೂರು ಮಕ್ಕಳು ಕೂಡ ಇದ್ದಾರೆ. ಆದರೆ ಇತ್ತೀಚಿಗೆ ಹೊಸ ಕಿರಿಕ್​ ಆರಂಭಿಸಿದ್ದ ಪತಿಯು ಪತ್ನಿ ಶಾಜಿಯಾ ಬಾನು ಬಳಿಯಲ್ಲಿ ನೀವು ನೋಡಲು ಸುಂದರವಾಗಿಲ್ಲ. ತುಂಬಾನೇ ಕಪ್ಪಗಿದ್ದೀಯಾ ಎಂದು ಪದೇ ಪದೇ ಪೀಡಿಸುತ್ತಿದ್ದನಂತೆ. ಇಷ್ಟು ಸಾಲದು ಎಂಬಂತೆ ಮೂವರು ಮಕ್ಕಳನ್ನು ಮುಟ್ಟದಂತೆ ತಾಕೀತು ಕೂಡ ಮಾಡಿದ್ದಾನೆ. ಮಗನ ಈ ವಿಕೃತ ನಡವಳಿಕೆಗೆ ಆತನ ತಾಯಿ ಕೂಡ ಸಾಥ್​ ನೀಡಿದ್ದು ಶಾಜಿಯಾ ಬಾನುಗೆ ಕೊಡಬಾರದ ಕಷ್ಟ ಕೊಟ್ಟಿದ್ದಾರೆ.


ಪತಿ ಹಾಗೂ ಅತ್ತೆಯ ಕಾಟದಿಂದ ಬೇಸತ್ತಿದ್ದ ಶಾಜಿಯಾ ಬಾನು ಏಪ್ರಿಲ್​ 20ರಂದು ಮೈ ತುಂಬಾ ಸ್ಯಾನಿಟೈಸರ್​ ಸುರುವಿಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಶಾಜಿಯಾ ಬಾನುರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಯ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಶಾಜಿಯಾ ಮೃತಪಟ್ಟಿದ್ದಾರೆ.


ಮಗಳ ಸಾವಿನ ಬಳಿಕ ಆಕೆಯ ಪೋಷಕರು ಆರ್​,ಟಿ ನಗರ ಪೊಲೀಸ್​ ಠಾಣೆಗೆ ದೂರನ್ನು ನೀಡಿದ್ದು, ನನ್ನ ಮಗಳಿಗೆ ಪತಿ ಇಮ್ರಾನ್​ ಖಾನ್​ ಹಾಗೂ ಆತನ ತಾಯಿ ಕೊಡಬಾರದ ಕಷ್ಟ ಕೊಟ್ಟಿದ್ದಾರೆ. ಆಕೆ ಕಪ್ಪಗಿದ್ದಾಳೆ ಎಂದು ಪದೇ ಪದೇ ನಿಂದಿಸಿದ್ದಾರೆ. ಇಷ್ಟು ಸಾಲದು ಎಂಬಂತೆ ಸ್ವಂತ ಮಕ್ಕಳನ್ನೇ ಮುಟ್ಟಲು ನೀಡುತ್ತಿರಲಿಲ್ಲ.ಇದೆಲ್ಲದರಿಂದ ಬೇಸತ್ತ ನಮ್ಮ ಮಗಳು ಈ ಕಠಿಣ ನಿರ್ಧಾರ ಕೈಗೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ.

ಇದನ್ನು ಓದಿ : CSK vs DC Prithvi Shaw : ಡೆಲ್ಲಿ ಕ್ಯಾಪಿಟಲ್ಸ್ ಓಪನರ್ ಪೃಥ್ವಿ ಶಾ ಆಸ್ಪತ್ರೆಗೆ ದಾಖಲು

ಇದನ್ನೂ ಓದಿ : supreme court : ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ : 2 ವಾರಗಳಲ್ಲಿ ನೋಟಿಫಿಕೇಶನ್​​

wife life is tragic end by husband

RELATED ARTICLES

Most Popular