Kollur Temple : ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ದಾಖಲೆಯ ಮೊತ್ತದ ಕಾಣಿಕೆ ಸಂಗ್ರಹ

ಉಡುಪಿ : Kollur Temple: ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದೆ. ಕಾಣಿಕೆ ಹುಂಡಿಯಲ್ಲಿ 1.53 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಹಣದ ಜೊತೆಯಲ್ಲಿ 2.5 ಕೆಜಿ ಬಂಗಾರ ಹಾಗೂ 4.2 ಕೆಜಿ ಬೆಳ್ಳಿಯ ಲೋಹವು ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ.


ಕೋವಿಡ್​ ಸಾಂಕ್ರಾಮಿಕ ತಹಬಧಿಗೆ ಬರುತ್ತಿದ್ದಂತೆಯೇ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ಭಕ್ತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಅಲ್ಲದೇ ಈಗಂತೂ ಮಕ್ಕಳ ಬೇಸಿಗೆ ರಜೆ ಕೂಡ ನಡೆಯುತ್ತಿರೋದ್ರಿಂದ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಿದೆ. ಹೀಗಾಗಿ ಈ ವರ್ಷ ಭಕ್ತರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆ ಕಂಡು ಬಂದಿದೆ. ಅಲ್ಲದೇ ದೇವಸ್ಥಾನದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ 1.53 ಕೋಟಿ ರೂಪಾಯಿ ಕಾಣಿಕೆ ರೂಪದಲ್ಲಿ ಸಂಗ್ರಹವಾದಂತಾಗಿದೆ.


ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಪ್ರತಿ ತಿಂಗಳು ಕಾಣಿಕೆ ಹುಂಡಿ ಎಣಿಕೆ ಕಾರ್ಯ ಮಾಡಲಾಗುತ್ತದೆ. ಪ್ರತಿ ತಿಂಗಳು ಸರಾಸರಿ ಅರವತ್ತೈದು ಲಕ್ಷ ರೂಪಾಯಿ ಸಂಗ್ರಹವಾಗುತ್ತಿದೆ. ಈ ಬಾರಿಯ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಳ್ಳುವ ವೇಳೆಯಲ್ಲಿ 1.53 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಇದನ್ನು ಓದಿ : woman kills 4-year-old girl : ಕಾಲ್ಗೆಜ್ಜೆ ಕದ್ದಳೆಂದು ನೆರೆಮನೆಯ ಬಾಲಕಿಯನ್ನು ಉಸಿರುಗಟ್ಟಿಸಿ ಸಾಯಿಸಿದ ಪಾಪಿ ಮಹಿಳೆ

ಇದನ್ನೂ ಓದಿ : wife life is tragic :ಕಪ್ಪಗಿದ್ದೀಯಾ ಎಂದು ಪತ್ನಿಯನ್ನು ದೂರಿದ ಪತಿ : ಸ್ಯಾನಿಟೈಸರ್​​ ಸುರಿದುಕೊಂಡು ಪತ್ನಿ ಸೂಸೈಡ್​

1.53 crores worth of collection at Kollur Temple

Comments are closed.