Post Independence Development : ಸ್ವಾತಂತ್ರ್ಯಾ ನಂತರ ಭಾರತದ ಆರ್ಥಿಕತೆಯ ಅಭಿವೃದ್ಧಿ ನಡೆದುಬಂದ ಹಾದಿ

Post Independence Development : ಭಾರತವು ತನ್ನ 75ನೇ ಸ್ವಾತಂತ್ರ್ಯ ದಿನಾಚರಣೆಗೆ ಸಮೀಪದಲ್ಲಿ ಇರುವ ಈ ಸಂದರ್ಭಲ್ಲಿ ದೇಶವು ಇಲ್ಲಿಯವರೆಗೆ ಸಾಗಿ ಬಂದ ಆರ್ಥಿಕ ಪ್ರಗತಿಯನ್ನು ನಾವು ನೋಡುವ ಸಮಯ ಬಂದಿದೆ. 1947ರಲ್ಲಿ ವಿಶ್ವದ ಅತ್ಯಂತ ಬಡ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಭಾರತವು ಇದೀಗ ಆರ್ಥಿಕತೆಯಲ್ಲಿ ಸಾಕಷ್ಟು ಸುಧಾರಣೆಯನ್ನು ಕಂಡಿದೆ. ಅಲ್ಲದೇ ಈ ಪ್ರಗತಿಯು ಮತ್ತಷ್ಟು ಹೆಚ್ಚುತ್ತಲೇ ಇದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಬಾಹ್ಯ ಪರಿಸರ ಹಾಗೂ ಹಣದುಬ್ಬರದ ಒತ್ತಡಗಳಂತಹ ಸಮಸ್ಯೆಗಳ ಹೊರತಾಗಿಯೂ ಭಾರತವು ಆರ್ಥಿಕತೆಯಲ್ಲಿ ತನ್ನದೇ ಆದ ವೇಗದಲ್ಲಿ ಸಾಗುತ್ತಿದೆ.


ಅಂದು ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ದೇಶದ ಎದುರು ಇದ್ದ ಸವಾಲುಗಳಿಗೂ ಈಗಿನ ಸಂದರ್ಭಕ್ಕೂ ತುಂಬಾನೇ ವ್ಯತ್ಯಾಸವಿದೆ. ಬ್ರಿಟೀಷರು ಭಾರತವನ್ನು ತೊರೆದಿದ್ದ ಸಂದರ್ಭದಲ್ಲಿ ಅವರು ವಿಶ್ವದ ಆದಾಯದ ಪಾಲನ್ನು 1700 ರಲ್ಲಿ 22.6 ಪ್ರತಿಶತದಿಂದ ಸುಮಾರು ಮೂರು ಪ್ರತಿಶತಕ್ಕೆ ಇಳಿಸಿದ್ದರು. ದೇಶಕ್ಕೆ ಅರ್ಧದಷ್ಟು ಜಿಡಿಪಿಯು ಕೃಷಿ ವಲಯದಿಂದ ಬಂದಿದೆ. ಇದು ಪ್ರಮುಖ ಉದ್ಯೋಗದಾತ ಕ್ಷೇತ್ರ ಕೂಡ ಆಗಿತ್ತು.

ಈ ಹಿನ್ನೆಲೆಯಲ್ಲಿ ಸೋವಿಯತ್ ಯೂನಿಯನ್ ಮಾದರಿಯಲ್ಲಿ ಸರ್ಕಾರಿ ಸ್ವಾಮ್ಯದ ಉದ್ಯಮಗಳ ಮೂಲಕ ದೇಶವನ್ನು ಕೈಗಾರಿಕೀಕರಣಗೊಳಿಸಬೇಕು ಎಂದು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅಭಿಪ್ರಾಯಪಟ್ಟಿದ್ದರು. ತಾಂತ್ರಿಕವಾಗಿ ಇದನ್ನು 1948 ರ ಕೈಗಾರಿಕಾ ನೀತಿ ನಿರ್ಣಯದಲ್ಲಿ ‘ಮಿಶ್ರ ಆರ್ಥಿಕತೆ’ ಎಂದು ವಿವರಿಸಲಾಗಿದೆಯಾದರೂ, ವಾಸ್ತವವೆಂದರೆ, ಸಾರ್ವಜನಿಕ ವಲಯವು ಆರ್ಥಿಕತೆಯ ‘ಕಮಾಂಡಿಂಗ್ ಎತ್ತರ’ದಲ್ಲಿ ಉಳಿಯಲು ಉದ್ದೇಶಿಸಲಾಗಿತ್ತು.


ಮತ್ತೊಂದೆಡೆ ಮಹಾತ್ಮ ಗಾಂಧಿ ಆರ್ಥಿಕ ಬೆಳವಣಿಗೆಯ ಬಗ್ಗೆ ದೂರದೃಷ್ಟಿಯನ್ನು ಹೊಂದಿದ್ದರು. ಸ್ಥಳೀಯ ಉದ್ಯಮಿಗಳು, ಗುಡಿ ಕೈಗಾರಿಕೆಗಳೊಂದಿಗೆ ಗ್ರಾಮಗಳು ಹಾಗೂ ಗ್ರಾಮೀಣ ಪ್ರದೇಶವನ್ನು ಅಭಿವೃದ್ಧಿಪಡಿಸುವ ಬಗ್ಗೆ ಗಮನ ಹರಿಸಿದರು. ಬಹುಪಾಲು ಕೃಷಿ ಆರ್ಥಿಕತೆಯ ಕೈಗಾರೀಕರಣದ ತುರ್ತು ಅಗತ್ಯದ ದೃಷ್ಟಿಯಿಂದ ಈ ಆದರ್ಶವಾದಿ ವಿಧಾನವನ್ನು ಹೊಸ ಸರ್ಕಾರವು ಬಹಳ ಗಂಭೀರವಾಗಿ ಪರಿಗಣಿಸಿರಲಿಲ್ಲ.


ಆದರೆ 50ರ ದಶಕದಲ್ಲಿ ಭಾರೀ ಉದ್ಯಮಗಳು ಮುಂದೆ ಬರಲು ಆರಂಭಿಸುತ್ತಿದ್ದಂತೆಯೇ ಕೃಷಿ ವಲಯವು ನಿರ್ಲಕ್ಷ್ಯಕ್ಕೆ ಒಳಗಾಯಿತು. ಇದರ ಪರಿಣಾಮಗಾಗಿ ದೇಶದಲ್ಲಿ ಆಹಾರದ ಕೊರತೆ ಕೂಡ ಉಂಟಾಯ್ತು. ಸಾರ್ವಜನಿಕ ಕಾನೂನು 480ಯ ಅಡಿಯಲ್ಲಿ ಅಮೆರಿಕದಿಂದ ಹೆಚ್ಚುವರಿ ಆಹಾರ ಧಾನ್ಯಗಳನ್ನು ಅವಲಂಬಿಸುವ ಭಾರತದ ಅಗತ್ಯಗಳು ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಪ್ರಯತ್ನಗಳಿಗೆ ಪ್ರಚೋದನೆಯನ್ನು ನೀಡಿತ್ತು. ಇದರಿಂದ ದೇಶದಲ್ಲಿ ಹಸಿರು ಕ್ರಾಂತಿ ಆರಂಭಗೊಂಡಿತು.


ಕ್ರಮೇಣವಾಗಿ ದೇಶವು ಕೃಷಿ ವಲಯದಲ್ಲಿ ಮುಂಚೂಣಿ ಸ್ಥಾನವನ್ನು ಪಡೆಯುತ್ತಾ ಹೋಯಿತು. ಇಂದಿರಾ ಗಾಂಧಿ ಆಡಳಿತದಲ್ಲಿ ಅವರು ತೆಗೆದುಕೊಂಡ ಕೆಲವು ನಿರ್ಧಾರಗಳು ದೇಶಕ್ಕೆ ಹಿನ್ನೆಡೆಯುಂಟು ಮಾಡಿದವು. ಉದಾಹರಣೆಗೆ ಸ್ವಾತಂತ್ರ್ಯದ ನಂತರ ಅನೇಕ ಖಾಸಗಿ ಬ್ಯಾಂಕ್‌ಗಳು ಕುಸಿದುಬಿದ್ದ ನಂತರ ಬ್ಯಾಂಕ್ ರಾಷ್ಟ್ರೀಕರಣವು ಠೇವಣಿದಾರರಿಗೆ ತೀವ್ರ ತೊಂದರೆ ಉಂಟುಮಾಡಿತ್ತು.

ಇದನ್ನು ಓದಿ : Minister Kota Srinivasa Pujari : ಸಿದ್ದರಾಮೋತ್ಸವ ಬಿಜೆಪಿ ಭವಿಷ್ಯವನ್ನು ನಿರ್ಧರಿಸೋದಿಲ್ಲ : ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಇದನ್ನೂ ಓದಿ : independence Freedom Struggle : ಭಾರತದ ಸ್ವಾತಂತ್ರ್ಯ ಹೋರಾಟದ 10 ಪ್ರಮುಖ ವಿಚಾರಗಳು ಇಲ್ಲಿದೆ ನೋಡಿ

Post Independence Development : India’s growth story since independence

Comments are closed.