ಧರ್ಮಸ್ಥಳಕ್ಕೆ ಸಂಬಂಧಿಸಿದ ಎಲ್ಲಾ ವಿಡಿಯೋ ಡಿಲೀಟ್​ ಮಾಡಿದ ದೂತ ಸಮೀರ್​..!

ಧರ್ಮಸ್ಥಳ ಬುರುಡೆ ಪ್ರಕರಣ ದೇಶವ್ಯಾಪಿ ಸದ್ದು ಮಾಡುವುದರ ಹಿಂದೆ ಯುಟ್ಯೂಬರ್​ ಸಮೀರ್​ ಎಂ.ಡಿ ಪಾತ್ರ ಕೂಡ ಮಹತ್ವದ್ದು ಎಂಬುದನ್ನು ತಳ್ಳಿ ಹಾಕುವಂತೆಯೇ ಇಲ್ಲ. ಊರ ಗೌಡರು ಎಂಬ ಹೆಸರನ್ನು ನೀಡಿ ಧರ್ಮಸ್ಥಳದ ವಿರುದ್ಧ ಕಪ್ಪು ಚುಕ್ಕೆ ಮೂಡಿಸುವ ಪ್ರಯತ್ನದಲ್ಲಿ ಯಶಸ್ವಿಯೂ ಆಗಿದ್ದ. ಆದರೆ ಇದೀಗ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ವಿಡಿಯೋಗಳನ್ನು ಸಮೀರ್​ ಎಂ.ಡಿ ಡಿಲೀಟ್​ ಮಾಡಿದ್ದಾರೆ.
ತಮ್ಮ ದೂತ ಯುಟ್ಯೂಬ್​ ಚಾನೆಲ್​ನಲ್ಲಿ ಎಐ ವಿಡಿಯೋ ಮೂಲಕ ಸೌಜನ್ಯಾ ಪ್ರಕರಣ, ಅನನ್ಯಾ ಭಟ್​, ವೇದವಲ್ಲಿ, ನಂತರ ಈ ಬುರುಡೆ ಪ್ರಕರಣಗಳ ವಿಡಿಯೋಗಳನ್ನು ಬಿತ್ತರಿಸಿದ್ದ ಸಮೀರ್​ ಈಗ ಸೈಲೆಂಟ್​ ಆಗಿದ್ದಾನೆ. ಈ ವಿಡಿಯೋಗಳನ್ನು ಆತನೇ ಡಿಲೀಟ್​ ಮಾಡಿದ್ದಾನೋ, ಅಥವಾ ಡಿಲೀಟ್​ ಮಾಡಿಸಲಾಗಿದೆಯೋ ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿಯಬೇಕಿದೆ.

ಧರ್ಮಸ್ಥಳ ಸೌಜನ್ಯಾ ಪ್ರಕರಣದಲ್ಲಿ ಸಮೀರ್​ ಎಂ.ಡಿ ಮಾಡಿದ್ದ ವಿಡಿಯೋ ನೋಡಿ ರಾಜ್ಯಾದ್ಯಂತ ಜನರು ಧರ್ಮಸ್ಥಳದ ವಿರುದ್ಧ ತಿರುಗಿಬಿದ್ದಿದ್ದರು. ಇದಾದ ಬಳಿಕ ಬುರುಡೆ ಪ್ರಕರಣದಲ್ಲಿ ಭೀಮನ ಪಾತ್ರ ಸೃಷ್ಟಿಸಿದ್ದ ಸಮೀರ್​ ಅಲ್ಲಿಯೂ ಕಟ್ಟು ಕತೆಗಳ ಮೂಲಕ ಜನರ ನಂಬಿಕೆ ಗಳಿಸಿದ್ದ. ಆದರೆ ಯಾವಾಗ ಈ ಪ್ರಕರಣದಲ್ಲಿ ಎಸ್​ಐಟಿ ಎಂಟ್ರಿಯಾಯ್ತೋ ಸಮೀರ್​ ಮತ್ತಾತನ ಗ್ಯಾಂಗ್​ನ ಕರಾಳ ಮುಖ ಬಯಲಾಗಿತ್ತು. ಇದಾದ ಬಳಿಕ ಸಮೀರ್​​ ವಿಡಿಯೋ ಮೂಲಕ ಬುರುಡೆ ಬಿಡ್ತಿದ್ದಾನೆ ಎಂಬುದನ್ನು ಜನ ಅರಿತಿದ್ದರು.
ಅಲ್ಲದೇ ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಬೆಳ್ತಂಗಡಿ ಠಾಣಾ ಪೊಲೀಸರು ಸಮೀರ್​ ಎಂಡಿಯನ್ನೂ ವಿಚಾರಣೆಗೆ ಒಳಪಡಿಸಿದ್ದರು. ಎಸ್​ಐಟಿ ಅಧಿಕಾರಿಗಳು ಅನೇಕ ಬಾರಿ ತಮ್ಮ ಕಚೇರಿಗೆ ಕರೆಯಿಸಿಕೊಂಡಿದ್ದರು. ಇದರಿಂದ ಸುಸ್ತಾದ ದೂತ.. ವಿಡಿಯೋ ಡಿಲೀಟ್​ ಮಾಡಿರುವ ಸಾಧ್ಯತೆಗಳು ಹೆಚ್ಚಿವೆ.

ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಪ್ರಕರಣ : ಇಂದು ಕೋರ್ಟ್‌ಗೆ ಎಸ್‌ ಐಟಿಯಿಂದ ಬರೋಬ್ಬರಿ 4 ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

ಇನ್ನು ಧರ್ಮಸ್ಥಳ ಬುರುಡೆ ಪ್ರಕರಣ ಸಂಬಂಧ ಎಸ್​ಐಟಿ ಅಧಿಕಾರಿಗಳು ನಿನ್ನೆ ಬೆಳ್ತಂಗಡಿ ನ್ಯಾಯಾಲಯಕ್ಕೆ 4 ಸಾವಿರ ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ದಾರೆ. ಮಾಜಿ ಮಾಸ್ಕ್​ ಮ್ಯಾನ್​ ಚಿನ್ನಯ್ಯ, ಮಹೇಶ್​ ತಿಮರೋಡಿ, ಗಿರೀಶ್​ ಮಟ್ಟಣನವರ್​, ವಿಠ್ಠಲಗೌಡ ಸೇರಿದಂತೆ 6 ಮಂದಿಯ ಹೆಸರು ಜಾರ್ಚ್​ಶೀಟ್​ನಲ್ಲಿ ಉಲ್ಲೇಖವಾಗಿದೆ ಎಂದು ತಿಳಿದುಬಂದಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories