ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 24-09-2020

ನಿತ್ಯಭವಿಷ್ಯ : 24-09-2020

- Advertisement -

ಮೇಷರಾಶಿ
ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಅನಗತ್ಯ ತಿರುಗಾಟ, ಅನಗತ್ಯ ಚರ್ಚೆ, ಭವಿಷ್ಯದ ಬಗ್ಗೆ ಸಮಾಲೋಚನೆ, ಕೋರ್ಟ್ ಕೇಸುಗಳಲ್ಲಿ ಸಮಸ್ಯೆ. ಕೃಷಿ ಕಾರ್ಯದಲ್ಲಿ ವಿಪರೀತ ಮಳೆ ನಿಮಿತ್ತ ತುಂಬಾ ಕಷ್ಟನಷ್ಟಗಳನ್ನು ಅನುಭವಿಸುವಂತಾದೀತು. ವ್ಯವಸಾಯದವರಿಗೆ ಸಹಿಸಲಾಗದ ಏಟು ಬಿದ್ದೀತು. ಮನೆಯಲ್ಲಿ ತುಂಬಾ ಉದ್ವೇಗ, ಕಳವಳವಿದ್ದೀತು.

ವೃಷಭರಾಶಿ
ಕಾರ್ಮಿಕ ವರ್ಗದವರಿಗೆ ಉದ್ಯೋಗವಿಲ್ಲದೆ ಊಟಕ್ಕಾಗಿ ಪರದಾಡುವ ಪರಿಸ್ಥಿತಿಯು ಕಂಡುಬಂದೀತು. ವಿದ್ಯಾರ್ಥಿಗಳಲ್ಲಿ ಆತುರದ ಸ್ವಭಾವ, ಕಲಹಗಳಿಂದ ನಿದ್ರಾಭಂಗ, ಕೆಲಸಕಾರ್ಯಗಳಲ್ಲಿ ನಿರಾಸಕ್ತಿ. ಆದರೂ ಜನಹಿತಕ್ಕಾಗಿ ರಾಜಕೀಯ ಹಾಗೂ ಧಾರ್ಮಿಕ ಧುರೀಣರು ತುಂಬಾ ಶ್ರಮಪಟ್ಟು  ದುಡಿದಾರು.

ಮಿಥುನರಾಶಿ
ಅನಾರೋಗ್ಯ ಸಮಸ್ಯೆಗಳು, ಮನೆಯ ಪರಿಸ್ಥಿತಿಗಳ ಚಿಂತೆ, ತಪ್ಪುಗಳಿಂದ ಸಮಸ್ಯೆ. ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ಒಳ್ಳೆಯ ಪರಿಣಾಮ ನಿಮಗೆ ದೊರಕಲಿದೆ. ಗೃಹದಲ್ಲಿ ಸಮಾಧಾನದ ವಾತಾವರಣವು ಕಂಡುಬಂದೀತು. ಮನೆಯಲ್ಲಿ ಮಂಗಲಕಾರ್ಯದ ತಯಾರಿಯು ನಡೆದೀತು.

ಕಟಕರಾಶಿ
ಆಕಸ್ಮಿಕವಾಗಿ ವಿದ್ಯಾಭ್ಯಾಸದಲ್ಲಿ ತೊಡಕು, ದಾಂಪತ್ಯ ಸಮಸ್ಯೆಗಳು, ಕರ್ತವ್ಯಗಳಲ್ಲಿ ಅಡೆತಡೆ, ಉದ್ಯೋಗ ವ್ಯಾಪಾರದಲ್ಲಿ ನಿರಾಸಕ್ತಿ. ಮಂಗಲಕಾರ್ಯಕ್ಕಾಗಿ ಪ್ರಯತ್ನಪಟ್ಟಲ್ಲಿ ಶ್ರಮವಿಲ್ಲದೆ ನೆಂಟಸ್ಥಿಕೆಯು ಕೂಡಿಬಂದೀತು ಮುಂದುವರಿಯುವುದು ಅಗತ್ಯ. ದಿನವಿಡೀ ದುಡಿದರೂ ಸಾಕಾಗದು ಎಂಬಂತಹ ಪರಿಸ್ಥಿತಿ ಇರುತ್ತದೆ. ದಿನಾಂತ್ಯ ಶುಭ.

ಸಿಂಹರಾಶಿ
ನಿಮ್ಮ ಮನಸ್ಸಿನೆಣಿಕೆಯಂತೆ ಎಲ್ಲಾ ಕೆಲಸಗಳು ನಡೆದಾವು. ನಿದ್ರಾಭಂಗ, ಅನಾರೋಗ್ಯ ಸಮಸ್ಯೆಗಳಿಂದ ಆತಂಕ, ಪ್ರಯಾಣದಲ್ಲಿ ಅಡೆತಡೆ, ತಂದೆಯ ತಪ್ಪುಗಳಿಂದ ಸಂಕಷ್ಟ. ಜೀವನದಲ್ಲಿ  ಹಲವು ರೀತಿಯಲ್ಲಿ ಸೋಲು, ಗೆಲುವುಗಳನ್ನು ಅನುಭವಿಸಿ ದಣಿದ ನಿಮಗೆ ಸ್ವಲ್ಪ ಉತ್ತಮ ಕಾಲವಿದು. ಶ್ರೀದೇವರ ಪ್ರಾರ್ಥಿಸಿರಿ.

ಕನ್ಯಾರಾಶಿ
ಆರ್ಥಿಕವಾಗಿ ಚೇತರಿಕೆ ಕಂಡುಬಂದು ತುಂಬಾ ಉತ್ಸಾಹದಾಯಕರಾಗಿರುವಿರಿ. ಮಕ್ಕಳ ಬರವಣಿಗೆಯಲ್ಲಿ ವ್ಯತ್ಯಾಸ, ಶತ್ರು ದಮನ, ವಾಹನ ಚಾಲನೆಯಲ್ಲಿ ಎಚ್ಚರ, ಆಕಸ್ಮಿಕ ಅವಘಡಗಳು. ಎಲ್ಲಾ ರೀತಿಯಲ್ಲೂ ಚಟುವಟಿಕೆ ಭರಿತರಾಗಿದ್ದ ನಿಮಗೆ ಇದು ಸೂಕ್ತ ಸಮಯ. ಧೈರ್ಯದಿಂದ ಮುನ್ನಡಿ ಇಡಿ. ಜಯ ನಿಮ್ಮದು.

ತುಲಾರಾಶಿ
ಮನೆಮಂದಿಯೊಂದಿಗೆ ಸಂತೋಷ ಹಾಗೂ ಉತ್ಸಾಹದಿಂದ ಸಮಯ ಕಳೆಯುವಿರಿ. ವಿದ್ಯಾಭ್ಯಾಸದಿಂದ ಹಿಂದೆ ಸರಿಯುವ ಮಾತು, ಸಂತಾನ ವಿಷಯಗಳಲ್ಲಿ ಬೇಸರ, ವೈರಾಗ್ಯದ ಮಾತುಗಳು ಭಾವನೆಗಳು. ಆಭರಣ ಖರೀದಿಯು ಪತ್ನಿಗೆ ಹರುಷ ತಂದೀತು. ಗುಡಿ ಕೈಗಾರಿಕೆ, ರೈತರು ಹಾಗೂ ಕಾರ್ಮಿಕ ವರ್ಗಕ್ಕೂ ಸ್ವಲ್ಪ ಕಷ್ಟವಾದೀತು.

ವೃಶ್ಚಿಕರಾಶಿ
ಮನೆಯಲ್ಲಿ ಹರುಷ ತುಂಬಿದ ವಾತಾವರಣವಿರುತ್ತದೆ. ಅಕಾಲ ಮಳೆಯಿಂದ ತತ್ತರಿಸುವಂತಾಗಲಿದೆ. ಅನಾರೋಗ್ಯದಿಂದ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಸಿಟ್ಟು ಮತ್ತು ಬೇಸರಗಳು, ಸಾಲದ ಚಿಂತೆಗಳು, ಭವಿಷ್ಯದ ಚಿಂತೆ, ವ್ಯಾಪಾರ, ವ್ಯವಹಾರದಲ್ಲಿ ಏರು, ಇಳಿತ ಕಂಡುಬಂದೀತು. ಭಯದ ಆವಶ್ಯಕತೆ ಇಲ್ಲ . ಶುಭವಿದೆ.

ನುರಾಶಿ
ಮನಸ್ಸಿನ ಆವೇಶ, ಉದ್ವೇಗ ಸ್ವಲ್ಪ ಕಡಿಮೆಯಾಗಲಿದೆ. ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ, ಬಂಧು ಬಾಂಧವರಿಂದ ಭಾವನೆಗಳಿಗೆ ಪೆಟ್ಟು, ಶತ್ರು ಕಾಟ, ಅಧಿಕ ಸ್ಥಳ ಬದಲಾವಣೆ. ಪತ್ನಿಯಿಂದ ತುಂಬಾ ಸಹಕಾರವು ಕಂಡುಬಂದೀತು. ಪತ್ನಿಯ ಉದ್ಯೋಗದ ಕುರಿತು ತುಂಬಾ ಚಿಂತಾಕ್ರಾಂತರಾಗುವಿರಿ. ಯೋಚನೆ ಬೇಡ. ಒಳ್ಳೆಯದಾಗಲಿದೆ.

ಮಕರರಾಶಿ
ಕುಟುಂಬದ ಸಮಸ್ಯೆಗಳು, ವಿದ್ಯಾಭ್ಯಾಸದ ಮೇಲೆ ಪರಿಣಾಮ, ಮಾನಸಿಕವಾಗಿ ನಿರಾಸಕ್ತಿ, ಭೂಮಿ ಮತ್ತು ವಾಹನದ ಋಣದ ಚಿಂತೆ. ಕಾರ್ಯರಂಗದಲ್ಲಿ ಉತ್ತಮ ಅಭಿವೃದ್ಧಿಯು ಇದೆ. ಅಷ್ಟೇ ಜವಾಬ್ದಾರಿಯು ಹೆಚ್ಚಲಿದೆ. ಜನರ, ಹಿತಶತ್ರುಗಳ ನುಡಿಯಿಂದ ತುಂಬಾ ಬೇಸರವಾದೀತು. ಅನ್ಯರ ಮಾತಿಗೆ ಹೆಚ್ಚಿನ ಬೆಲೆ ತೆರೆಯುವುದು ಬೇಡ.

ಕುಂಭರಾಶಿ
ವಿದ್ಯಾಭ್ಯಾಸದಲ್ಲಿ ಹಿನ್ನಡೆ, ನೆರೆಹೊರೆಯವರು ಶತ್ರುಗಳಾಗುವರು, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಉದ್ಯೋಗರಂಗದಲ್ಲಿ ಉತ್ತಮ ಅಭಿವೃದ್ಧಿ ,  ಭಡ್ತಿಯು ಕಂಡುಬಂದು ಸಮಾಧಾನವಾಗಲಿದೆ. ಸ್ನೇಹಪರ ಜೀವಿಯಾದ ನಿಮಗೆ ಗೃಹವಾಸವು ಹಿಂಸೆ ತರಲಿದೆ. ಸಹಿಸುವುದು ಅಗತ್ಯ. ಶುಭವಾರ್ತಾ ಶ್ರವಣ.

ಮೀನರಾಶಿ
ಕಾರ್ಯರಂಗ ಹಾಗೂ ಉದ್ಯೋಗರಂಗದಲ್ಲಿ ಅಭಿವೃದ್ಧಿ ಕಂಡುಬಂದು ಸಂತಸ ತರಲಿದೆ. ಅನಗತ್ಯ ತೀರ್ಮಾನಗಳು, ಕುಟುಂಬವನ್ನು ಆತಂಕಕ್ಕೀಡು ಮಾಡುತ್ತವೆ, ಆರ್ಥಿಕ ಸಮಸ್ಯೆಗಳು, ಶತ್ರು ಕಾಟ, ಸಾಲಬಾಧೆಗಳಿಂದ ನಿದ್ರಾಭಂಗ. ಮನೆಯಲ್ಲಿ ಮಾತಾಪಿತರಗಳ ಹಿತನುಡಿಗಳು ಮನಸ್ಸನ್ನು ಕೊರೆಯಲಿದೆ. ಆಲಿಸುವುದು, ಮುನ್ನೆಡೆಯುವುದು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular