ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 11-06-2020

ನಿತ್ಯಭವಿಷ್ಯ : 11-06-2020

- Advertisement -

ಮೇಷರಾಶಿ
ನೆರೆಹೊರೆಯವರಿಂದ ಅನಾವಶ್ಯಕವಾಗಿ ನಿಷ್ಠುರಕ್ಕೆ ಕಾರಣರಾಗದಿರಿ. ಆಸೆ-ಆಕಾಂಕ್ಷೆಗಳು ಹೆಚ್ಚಾಗುವುದು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಚೋರಾಗ್ನಿ ಭೀತಿ, ಆಕಸ್ಮಿಕ ಉದ್ಯೋಗ ಪ್ರಾಪ್ತಿ, ಮಾನಸಿಕ ನೆಮ್ಮದಿ ಲಭಿಸುವುದು. ಹಿರಿಯರ ದೇಹಾ ರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿರಿ. ವಿದ್ಯಾರ್ಥಿಗಳು ತಮ್ಮ ಪ್ರಯತ್ನಬಲಕ್ಕೆ ಒತ್ತು ನೀಡುವುದು ಅಗತ್ಯವಿರುತ್ತದೆ.

ವೃಷಭರಾಶಿ
ಆಗಾಗ ವೃತ್ತಿರಂಗದಲ್ಲಿ ಅಡಚಣೆಗಳು ಕಂಡು ಬಂದರೂ ಕಾರ್ಯಸಾಧನೆ ನಿಶ್ಚಿತ. ದೂರ ಪ್ರಯಾಣ ಸಾಧ್ಯತೆ, ಸ್ನೇಹಿತರಿಂದ ಸಹಕಾರ, ಸಂಗಾತಿಯಿಂದ ಲಾಭ, ನೆರೆಹೊರೆಯವರಿಂದ ಅನುಕೂಲ, ಸ್ಥಳ-ಗೃಹ ಬದಲಾವಣೆ, ಉದ್ಯೋಗ ಬದಲಾವಣೆಗೆ ಉತ್ತಮ ಅವಕಾಶ. ದಾಯಾದಿಗಳ ಸಹಕಾರದ ಅಚ್ಚರಿ ತಂದೀತು. ಸರಕಾರಿ ಅಧಿಕಾರಿ ವರ್ಗದವ ರಿಗೆ ಶುಭ ಸಮಾಚಾರವಿದೆ. ದೇಹಾರೋಗ್ಯದಲ್ಲಿ ಜಾಗ್ರತೆ .

ಮಿಥುನರಾಶಿ
ಮಿತ್ರವರ್ಗದವರಿಗೆ ವಂಚನೆಯ ಸಾಧ್ಯತೆ ತೋರಿ ಬಂದೀತು. ಕಮಿಶನ್‌ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ತರಲಿದೆ. ಆಕಸ್ಮಿಕ ಧನ ಯೋಗ, ಸಾಲಗಾರರು-ಶತ್ರುಗಳಿಂದ ತೊಂದರೆ, ಕಾರ್ಮಿಕರ ಕೊರತೆ, ಕೆಲಸದಲ್ಲಿ ಹಿನ್ನಡೆ, ಗ್ಯಾಸ್ಟ್ರಿಕ್-ದೈಹಿಕ ನೋವು, ಆರೋಗ್ಯದಲ್ಲಿ ವ್ಯತ್ಯಾಸ. ಹಿರಿಯರಿಗೆ ದೇವತಾ ದರ್ಶನ ಭಾಗ್ಯಕ್ಕಾಗಿ ಸಂಚಾರ ಒದಗಿ ಬರಲಿದೆ. ಆರೋಗ್ಯದಲ್ಲಿ ಜಾಗ್ರತೆ ಇರಲಿ.

ಕಟಕರಾಶಿ
ಪ್ರವಾಸಕ್ಕಾಗಿ ಸಂಚಾರವಿರುತ್ತದೆ. ವ್ಯಾಪಾರ, ವ್ಯವಹಾರದಲ್ಲಿ ನಿರೀಕ್ಷಿತ ಲಾಭವಿಲ್ಲದಿದ್ದರೂ ನಷ್ಟವಾಗದು. ದೇಹಾರೋಗ್ಯದ ಬಗ್ಗೆ ವೈದ್ಯರೊಂದಿಗೆ ತಪಾಸಣೆ ಮಾಡಿಸಿರಿ. ಸಂತಾನ ವಿಚಾರದಲ್ಲಿ ವೈಮನಸ್ಸು, ಮಕ್ಕಳ ವಿಷಯಕ್ಕೆ ಅಪಮಾನ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಪಾಲುದಾರಿಕೆ ವ್ಯವಹಾರದಲ್ಲಿ ಮನಃಸ್ತಾಪ, ಆಕಸ್ಮಿಕ ಸಮಸ್ಯೆ ಎದುರಾಗುವುದು. ದೈವಾನುಗ್ರಹವಿದ್ದ ನೀವು ಭಾಗ್ಯಶಾಲಿಗಳಾಗಲಿದ್ದೀರಿ

ಸಿಂಹರಾಶಿ
ಆರ್ಥಿಕವಾಗಿ ನಾನಾರೀತಿಯಲ್ಲಿ ಸಂಪನ್ನತೆ. ಗೃಹ ನಿರ್ಮಾಣ ಕಾರ್ಯಕ್ಕೆ ಭೂಖರೀದಿ, ಶುಭಮಂಗಲ ಕಾರ್ಯಕ್ಕೆ ಸಂಭ್ರಮದ ಓಡಾಟವಿರುತ್ತದೆ. ನಷ್ಟ ಪ್ರಮಾಣ ಅಧಿಕವಾಗುವುದು, ಸಾಲ ಮಾಡುವ ಪರಿಸ್ಥಿತಿ, ಮನೆ ವಾತಾವರಣದಲ್ಲಿ ಕಲಹ, ಸ್ಥಿರಾಸ್ತಿ ವಾಹನದ ಮೇಲೆ ಸಾಲ, ದೀರ್ಘಾವಧಿ ಸಾಲದ ಚಿಂತೆ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕಾಗಿ ಉತ್ತಮ ಅವಕಾಶಗಳು ಒದಗಿಬರಲಿವೆ.

ಕನ್ಯಾರಾಶಿ
ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಗಮನಹರಿಸಿರಿ. ಮಕ್ಕಳಿಂದ ಅನುಕೂಲ, ಸ್ನೇಹಿತರಿಂದ ಪ್ರಶಂಸೆ, ದಾಯಾದಿಗಳೊಂದಿಗೆ ಕಲಹ, ನೆರೆಹೊರೆಯವರಿಂದ ಮಾನಹಾನಿ. ಕೌಟುಂಬಿಕವಾಗಿ ಹಿರಿಯರ ಕೊಂಕು ನುಡಿಗೆ ತಲೆಕೆಟ್ಟು ಹೋದೀತು. ಅನಿರೀಕ್ಷಿತ ಖರ್ಚುವೆಚ್ಚದಿಂದಾಗಿ ಚಿಂತೆಗೀಡಾಗುವಿರಿ. ವೈಯಕ್ತಿಕ ಆರೋಗ್ಯದ ಬಗ್ಗೆ ಜಾಗ್ರತರಾಗಿರಿ.

ತುಲಾರಾಶಿ
ಕಾರ್ಯಕ್ಷೇತ್ರದ ಒತ್ತಡಗಳು ದೇಹಾರೋಗ್ಯವನ್ನು ಏರುಪೇರು ಮಾಡಲಿವೆ. ಸಾಂಸಾರಿಕವಾಗಿ ಅಸಮಾಧಾನವಿರುತ್ತದೆ. ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಅನಗತ್ಯ ಮಾತುಗಳಿಂದ ಕಿರಿಕಿರಿ, ಆತ್ಮೀಯರೊಂದಿಗೆ ಮನಃಸ್ತಾಪ. ನ್ಯಾಯಾಲಯದ ವಿಚಾರದಲ್ಲಿ ಮಧ್ಯಸ್ಥಿಕೆ ರಾಜೀಮನೋಭಾಗಳು ಕಾರ್ಯಾನುಕೂಲವಾದೀತು.

ವೃಶ್ಚಿಕರಾಶಿ
ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕಂಕಣಬಲದ ಭಾಗ್ಯ ತರಲಿವೆ. ವ್ಯಾಪಾರ, ಅನಾರೋಗ್ಯದಿಂದ ಪ್ರಯಾಣ ರದ್ದು, ಸ್ಥಳ-ಗೃಹ ಬದಲಾವಣೆಯಿಂದ ಸಂಕಷ್ಟ, ಉದ್ಯೋಗ ಬದಲಾವಣೆ ಉತ್ತಮವಲ್ಲ, ಪಾಪ ಕರ್ಮ ಫಲ ಲಭಿಸುವುದು. ವ್ಯವಹಾರದಲ್ಲಿ ಹೆಚ್ಚಿನ ಹೂಡಿಕೆ ಲಾಭಕರವಾಗಲಿದೆ. ಆದಾಯ ಮೀರಿ ಅನಿರೀಕ್ಷಿತ ರೂಪದಲ್ಲಿ ಖರ್ಚುವೆಚ್ಚಗಳು ಅಧಿಕವಾದೀತು.

ಧನುರಾಶಿ
ವೃತ್ತಿರಂಗದಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ ಅನುಭವಕ್ಕೆ ಬರಲಿದೆ. ಆಕಸ್ಮಿಕ ಧನ ಪ್ರಾಪ್ತಿ, ಕೌಟುಂಬಿಕ ಸಮಸ್ಯೆ, ಒತ್ತಡದ ಜೀವನದಿಂದ ನಿದ್ರಾಭಂಗ, ಕುಟುಂಬದಲ್ಲಿ ವೈಮನಸ್ಸು, ಮಕ್ಕಳು ದೂರವಾಗುವ ಸಾಧ್ಯತೆ, ಪರಿಹಾರ: ಓಂ ಶ್ರೀ ಲಲಿತಾಂಬಿಕಾಯೈ ನಮಃ ಜಪಿಸಿ. ಸಾಂಸಾರಿಕವಾಗಿ ಸ್ವಯಂ ಕಾಲೋಚಿತ ವರ್ತನೆ ಸಮಸ್ಯೆಗಳ ಜಂಜಾಟದಿಂದ ಪಾರು ಮಾಡಲಿದೆ. ರಾಜಕೀಯ ಮುನ್ನಡೆ ಇದೆ.

ಮಕರರಾಶಿ
ವ್ಯಾಪಾರ, ವ್ಯವಹಾರದಲ್ಲಿ ಲಾಭವಿದೆ. ಕೃಷಿ ಕೈಗಾರಿಕೆಗಳಿಗೆ ನಾನಾ ರೀತಿಯಲ್ಲಿ ಅನುಕೂಲ ವಾಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಸ್ನೇಹಿತರಿಂದ ಸಮಸ್ಯೆ, ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ, ಹೇಳಿಕೆ ಮಾತುಗಳಿಂದ ವೈಮನಸ್ಸು, ಸ್ಥಿರಾಸ್ತಿ-ವಾಹನದಿಂದ ಅನುಕೂಲ. ಸಂಪಾದನೆಯನ್ನು ವರ್ಧಿಸಿಕೊಂಡಲ್ಲಿ ಕಾರ್ಯಾನು ಕೂಲವಾಗುತ್ತದೆ. ವೃತ್ತಿ ನಿರತರಿಗೆ ಮುನ್ನಡೆ ಇದೆ.

ಕುಂಭರಾಶಿ
ಧನಾಗಮನ ಒಂದಲ್ಲಾ ಒಂದು ರೀತಿಯಲ್ಲಿ ಅನುಕೂಲವಾಗಲಿದೆ. ಸಾಲ ತೀರಿಸುವ ಸಾಧ್ಯತೆ, ಉದ್ಯೋಗದಲ್ಲಿ ಒತ್ತಡ, ಕೆಲಸಕ್ಕೆ ಕಾರ್ಮಿಕರ ಕೊರತೆ, ನಾನಾ ಆಲೋಚನೆಗಳಿಂದ ನಿದ್ರಾಭಂಗ, ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ. ತಾಳ್ಮೆ ಸಮಾಧಾನದಿಂದ ಮುನ್ನಡೆಯಿರಿ. ಆರೋಗ್ಯಭಾಗ್ಯವನ್ನು ಕಾಪಾಡಿಕೊಳ್ಳುವ ಹೊಣೆ ನಿಮ್ಮದಾಗಲಿ. ಅಲೆದಾಟ ಹೆಚ್ಚಲಿದೆ.

ಮೀನರಾಶಿ
ಧನಾಗಮನ ಒಂದಲ್ಲಾ ಒಂದು ರೀತಿಯಲ್ಲಿ ಉತ್ತಮವಿದ್ದು ಅನುಕೂಲವಾಗಲಿದೆ. ಹೆಣ್ಣು ಮಕ್ಕಳಿಂದ ಲಾಭ, ಉತ್ತಮ ಗೌರವ ಪ್ರಾಪ್ತಿ, ಸಂತಾನ ಸಮಸ್ಯೆಗೆ ಮುಕ್ತಿ, ಸ್ನೇಹಿತರಿಂದ ಪ್ರಶಂಸೆ, ಈ ದಿನ ಶುಭ ಫಲ. ವೈದ್ಯಕೀಯ ವೃತ್ತಿಯವರು ಮುನ್ನಡೆಯನ್ನು ಸಾಧಿಸಲಿದ್ದಾರೆ. ಭೂ, ವಾಹನ ಖರೀದಿಗೆ ಅನುಕೂಲವಾದ ದಿನಗಳಿವು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular