ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 25-08-2020

ನಿತ್ಯಭವಿಷ್ಯ : 25-08-2020

- Advertisement -

ಮೇಷ ರಾಶಿ
ವ್ಯವಹಾರಗಳಲ್ಲಿ ಎಚ್ಚರ, ಬಾಕಿ ಹಣ ಕೈ ಸೇರುವುದು, ತೊಡಗಿಸಿದ ಕಾರ್ಯಗಳು ಅರ್ಧಕ್ಕೆ ನಿಂತಾವು. ದೇಹಾರೋಗ್ಯದಲ್ಲಿ ಆಗಾಗ ಏರುಪೇರು ಕಂಡು ಬರಲಿದೆ. ಮನಸ್ಸು ಕೋತಿಯಂತೆ ಕುಣಿದೀತು. ಸ್ಥಿರವಾದ ನಿರ್ಧಾರ ವಿರದು. ಹತ್ತು ಹಲವು ಚಿಂತೆಗಳು ಕಾಡಲಿವೆ. ಮನಃ ಶಾಂತಿ, ರಾಜಕೀಯ ವ್ಯಕ್ತಿಗಳಿಂದ ಸಹಾಯ, ಅನಗತ್ಯ ಖರ್ಚು.

ವೃಷಭ ರಾಶಿ
ಆರೋಗ್ಯದ ಏರುಪೇರು ಮನಸ್ಸನ್ನು ಕೆಡಿಸಲಿದೆ. ವಿಲಾಸೀ ವರ್ತಕರಿಗೆ ಒಳ್ಳೆಯ ಆದಾಯವಿದೆ. ಧರ್ಮಕಾರ್ಯದಲ್ಲಿ ವಿಳಂಬ ತೋರಿಬಂದೀತು. ಗೃಹದಲ್ಲಿ ಪತ್ನಿಯ ಕಿರಿಕಿರಿ ತೋರಿಬಂದೀತು. ಶುಭವಿದೆ. ಹಿತೈಷಿಗಳಿಂದ ಬೆಂಬಲ, ಕಾರ್ಯಕ್ಷೇತ್ರದಲ್ಲಿ ಉತ್ತಮ ಬಾಂಧವ್ಯ ವೃದ್ಧಿ, ವಿವಾಹ ಯೋಗ, ಪರ ಸ್ತ್ರೀಯರಿಂದ ತೊಂದರೆ.

ಮಿಥುನ ರಾಶಿ
ದ್ರವ್ಯಲಾಭ, ದೈವಿಕ ಚಿಂತನೆ, ಪರರ ಧನ ಪ್ರಾಪ್ತಿ, ನೂತನ ಕಾರ್ಯವೊಂದರ ಆರಂಭಕ್ಕೆ ಬುನಾದಿ ದೊರಕೀತು. ದವಸಧಾನ್ಯ ವ್ಯಾಪಾರಿಗಳಿಗೆ ಉತ್ತಮ ಲಾಭವಿದೆ. ಮಕ್ಕಳ ವಿದ್ಯಾ ಪ್ರಗತಿಯು ಸಂತಸ ತರಲಿದೆ. ಗೃಹ ನಿರ್ಮಾಣ ಕಾರ್ಯಗಳಿಗೆ ಇದು ಸಕಾಲವು. ವಿದೇಶ ಪ್ರಯಾಣ, ಯತ್ನ ಕಾರ್ಯಗಳಲ್ಲಿ ವಿಳಂಬ.

ಕಟಕ ರಾಶಿ
ಆದಾಯಕ್ಕಿಂತ ಖರ್ಚು ಜಾಸ್ತಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಆರೋಗ್ಯದಲ್ಲಿ ಸುಧಾರಣೆ ತೋರಿಬಂದು ನೆಮ್ಮದಿಯಾದೀತು. ವ್ಯವಹಾರದಲ್ಲಿ ಚೇತರಿಕೆಯು ಇದ್ದರೂ ವಂಚನೆಗೆ ಆಸ್ಪದವಿರುತ್ತದೆ. ಜಾಗ್ರತೆ ಮಾಡಿರಿ. ವ್ಯವಹಾರದಲ್ಲಿ ಧನ ಹಾನಿಯು ಬಂದೀತು. ಕಿರು ಸಂಚಾರವಿದೆ. ಮಾತಾ ಪಿತೃಗಳಲ್ಲಿ ಪ್ರೀತಿ, ರೋಗಭಾದೆ.

ಸಿಂಹ ರಾಶಿ
ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ವಿಚಾರದಲ್ಲಿ ಅಧಿಕ ಚಿಂತೆ, ಮಡದಿಗೆ ಚಿನ್ನಾಭರಣ ಖರೀದಿಗೆ ಖರ್ಚು ಬರಲಿದೆ. ಮಕ್ಕಳ ವರ್ತನೆಯ ಬಗ್ಗೆ ಅಪವಾದ ಭೀತಿ ಇರುತ್ತದೆ. ಮನಸ್ಸು ಗೊಂದಲದ ಗೂಡಾದೀತು. ಸಮಾಧನಕ್ಕಾಗಿ ಧಾನ್ಯ ಹಾಗೂ ಶ್ರೀದೇವರ ಮೊರೆ ಹೋಗಿರಿ. ಲೇವಾದೇವಿ ವ್ಯವಹಾರದಲ್ಲಿ ಮೋಸ ಹೋಗುವಿರಿ.

ಕನ್ಯಾ ರಾಶಿ
ಭೂಮಿ ಖರೀದಿಸುವ ಯೋಗ, ಮೇಲಾಧಿಕಾರಿಗಳಿಂದ ಪ್ರಶಂಸೆ, ಆಗಾಗ ಸಾಂಸಾರಿಕವಾಗಿ ಅಡಚಣೆಯು ಹೆಚ್ಚಾಗಿ ಕಂಡು ಬರಲಿದೆ. ಉದ್ಯೋಗದಲ್ಲಿ ವರ್ಗಾವಣೆಯ ಸಾಧ್ಯತೆ ಇರುತ್ತದೆ. ದುಡುಕು ಬುದ್ಧಿಯಿಂದಾಗಿ ಆಕಸ್ಮಿಕದ ಧನದ ಲಾಭದ ಆಸೆಯಿಂದ ಉಳಿತಾಯ ಖಾಲಿಯಾದೀತು. ದಾಯಾದಿ ಕಲಹ, ಮಾತಿನ ಚಕಮಕಿ, ಚೋರ ಭೀತಿ.

ತುಲಾ ರಾಶಿ
ಯತ್ನ ಕಾರ್ಯ ಅನುಕೂಲ, ಮಂಗಳ ಕಾರ್ಯದಲ್ಲಿ ಭಾಗಿ, ಹೆಜ್ಜೆ ಹೆಜ್ಜೆಗೂ ಉದ್ವೇಗ, ಕಳವಳ, ಕಾರ್ಯನಾಶ ದಿಂದಾಗಿ ಮನಸ್ಸು ಖನ್ನವಾಗಲಿದೆ. ತಾಳ್ಮೆಯಿಂದ ವರ್ತಿಸಿದಲ್ಲಿ ಸಮಾಧಾನವು ದೊರಕೀತು ವಿದ್ಯಾರ್ಜನೆಯಲ್ಲಿ ಆಗಾಗ ಹಿನ್ನಡೆ ಕಂಡು ಬಂದೀತು. ಉದ್ವೇಗ ಬೇಡ. ಶರೀರದಲ್ಲಿ ತಳಮಳ, ಹೇಳಿಕೆ ಮಾತನ್ನು ಕೇಳಿ ಕಷ್ಟಕ್ಕೆ ಸಿಲುಕುವಿರಿ.

ವೃಶ್ಚಿಕ ರಾಶಿ
ಗುರುವಿನ ಕೃಪೆಯಿಂದ ಮಂಗಲ ಕಾರ್ಯದ ಸಿದ್ಧತೆ ನಡೆಯಲಿದೆ. ವ್ಯಾಪಾರಿ ವರ್ಗಕ್ಕೆ ಪ್ರತಿಸ್ಪರ್ಧಿಯಿಂದ ಸಮಸ್ಯೆಗಳು ಬಂದಾವು. ಆರೋಗ್ಯವು ಆಗಾಗ ಕೈಕೊಡಲಿದೆ. ನವದಂಪತಿಗಳಿಗೆ ಸಂತಾನದ ಶುಭಸೂಚನೆ. ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಅಭಿವೃದ್ಧಿ ಕುಂಠಿತ, ಧನವ್ಯಯ, ಎಲ್ಲಿ ಹೋದರು ಅಶಾಂತಿ.

ಧನಸ್ಸು ರಾಶಿ
ಹೊಸ ಜವಾಬ್ದಾರಿ ಒಪ್ಪಿಕೊಳ್ಳುವ ಮುನ್ನ ಯೋಚಿಸಿ, ಆರೋಗ್ಯವೇ ಭಾಗ್ಯ. ನಿಮ್ಮಪಾಲಿಗೆ ಬಂದ ಸ್ಥಿತಿಗೆ ನೀವು ಸಮತೋಲನ ನಿಭಾಯಿಸಿಕೊಂಡು ಹೋಗುವುದು. ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು. ವಾಯು ಪೀಡೆಯಿಂದ ಉದರನೋವು ಬಂದೀತು. ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಮಾಜದಲ್ಲಿ ಗೌರವ, ದೂರ ಪ್ರಯಾಣ.

ಮಕರ ರಾಶಿ
ಶ್ರಮವೇ ಜೀವನವೆಂಬ ನಡೆಯುಳ್ಳ ನಿಮಗೆ ಬಂದ ಅವಕಾಶವನ್ನು ಸದ್ವಿನಿಯೋಗಗೊಳಿಸಿರಿ. ಆರ್ಥಿಕವಾಗಿ ಎಷ್ಟು ಬಂದರೂ ಸಾಲದು ಎಂಬಂತೆ ಆಗಲಿದೆ. ಪತ್ನಿಯ ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ. ಸ್ತ್ರೀ ಲಾಭ, ಖರ್ಚಿನ ಬಗ್ಗೆ ನಿಗಾ ಇರಲಿ, ವ್ಯಾಪಾರದಲ್ಲಿ ಧನಲಾಭ, ಆಭರಣ ಖರೀದಿ, ಆತ್ಮೀಯರೊಂದಿಗೆ ಕಲಹ.

ಕುಂಭ ರಾಶಿ
ರಿಯಾಯಿತಿ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುವುದು, ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗವು ಲಭಿಸಿ ಸಮಾಧಾನವಾಗಲಿದೆ. ಪರಿವರ್ತನಾಶೀಲವೇ ಪ್ರಪಂಚವೆನ್ನುವುದು ನಿಮ್ಮ ಪಾಲಿಗೆ ಸದ್ಯದ ಉದಾಹರಣೆ. ಪತ್ನಿಯ ಆರೋಗ್ಯದಲ್ಲಿ ಜಾಗ್ರತೆ ವಹಿಸಿರಿ. ಹೊಸ ವ್ಯಾಪಾರ ಪ್ರಾರಂಭಿಸುವಿರಿ, ಮಿತ್ರರ ಆಗಮನದಿಂದ ಸಂತಸ, ಭೋಗವಸ್ತು ಪ್ರಾಪ್ತಿ.

ಮೀನ ರಾಶಿ
ಕಾರ್ಯ ವಿಕಲ್ಪ, ಬದುಕಿಗೆ ಉತ್ತಮ ತಿರುವು, ಪ್ರಚಾರ ಸಭೆಗಳಲ್ಲಿ ಭಾಗವಹಿಸುವಿರಿ, ಸ್ತ್ರೀಯರಿಗೆ ಶುಭ ಸಮಯ. ಹರ ಮುನಿದೊಡೆ ಗುರು ಕಾಯ್ದಾನೂ. ವಾಹನ ಖರೀದಿಯಿಂದ ಸಂತಸ ಹಾಗೂ ಹೆಮ್ಮೆ ಇರುವುದು. ಆರೋಗ್ಯದಲ್ಲಿ ಜಾಗ್ರತೆ ಮಾಡುವುದು. ಮಂಗಲ ಕಾರ್ಯಕ್ಕಾಗಿ ಓಡಾಟ ಬಂದೀತು. ಮುನ್ನಡೆಸುವುದು ಅಗತ್ಯ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular