ಶುರುವಾಗುತ್ತಾ ಶಾಲೆ- ಕಾಲೇಜು ? ಓಡುತ್ತೆ ಮೆಟ್ರೋ ರೈಲು : ಅನ್ ಲಾಕ್ 4.0 ಮಾರ್ಗಸೂಚಿ ಹೇಗಿರಲಿದೆ ಗೊತ್ತಾ ?

0

ನವದೆಹಲಿ : ದೇಶದಾದ್ಯಂತ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಹೇರಿಕೆಯಾಗಿದ್ದ ಲಾಕ್ ಡೌನ್ ಆದೇಶ ತೆರವು ಮಾಡಲಾಗುತ್ತಿದೆ. ದೇಶದಾದ್ಯಂತ ಈಗಾಗಲೇ ಅನ್ ಲಾಕ್ 3.0 ಮಾರ್ಗಸೂಚಿ ಜಾರಿಯಲ್ಲಿದ್ದು, ಸದ್ಯದಲ್ಲಿಯೇ ಅನ್ ಲಾಕ್ 4.0 ಮಾರ್ಗಸೂಚಿ ಜಾರಿಯಾಗಲಿದೆ. ಹೊಸ ಮಾರ್ಗಸೂಚಿಯಲ್ಲಿ ಕೇಂದ್ರ ಸರಕಾರ ಯಾವೆಲ್ಲಾ ವಲಯಕ್ಕೆ ವಿನಾಯಿತಿ ನೀಡುತ್ತೆ ಅನ್ನೋದು ತೀವ್ರ ಕುತೂಹಲವನ್ನು ಮೂಡಿಸಿದೆ.

ಕರೊನಾ ವೈರಸ್ ಸೋಂಕಿನ ಆರ್ಭಟದ ಹಿನ್ನೆಲೆಯಲ್ಲಿ ದೇಶಾದ್ಯಂತ ವಿಧಿಸಲಾಗಿದ್ದ ನಿರ್ಬಂಧಗಳನ್ನು ಹಂತಹಂತವಾಗಿ ತೆರವು ಮಾಡಲಾಗುತ್ತಿದೆ. ನಾಲ್ಕನೇ ಹಂತದ ಲಾಕ್​ಡೌನ್​ ತೆರವು ವೇಳೆ ಇನ್ನಷ್ಟು ವಿನಾಯ್ತಿ ನೀಡಲಾಗುತ್ತಿದೆ. ಸೆಪ್ಟಂಬರ್​ 1 ರಿಂದ ಜಾರಿಯಾಗಲಿರುವ ಅಲ್ ಲಾಕ್ 4.0 (ನಾಲ್ಕನೇ ಹಂತದ ನಿರ್ಬಂಧ ಸಡಿಲಿಕೆ) ಮಾರ್ಗಸೂಚಿಯಲ್ಲಿ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಾಗಿದೆ.

ಮಹಾನಗರಗಳಲ್ಲಿ ಮೆಟ್ರೋ ಸಂಚಾರ ಆರಂಭವಾಗುವ ಸಾಧ್ಯತೆಯಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಹಂತ ಹಂತವಾಗಿ ಮೆಟ್ರೋ ಸಂಚಾರವನ್ನು ಆರಂಭಿಸುವಂತೆ ಮನವಿ ಮಾಡಿಕೊಂಡಿದ್ದರು.

ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ಶಾಲೆ, ಕಾಲೇಜು ಓಪನ್ ಆಗುತ್ತಾ ಅನ್ನೋದಕ್ಕೆ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ. ಈಗಾಗಲೇ ಸುಪ್ರೀಂ ಕೋರ್ಟ್ ಗೆ ಸಪ್ಟೆಂಬರ್ 1ರಿಂದಲೇ ಶಾಲೆ ಆರಂಭವಾಗಲಿದೆ ಎನ್ನುವ ಕುರಿತು ಅಫಿಡವಿಟ್ ಸಲ್ಲಿಕೆ ಮಾಡಿದ್ದರು. ಸಪ್ಟೆಂಬರ್ 1 ರಿಂದ 10ನೇ ತರಗತಿ ಹಾಗೂ ಪಿಯುಸಿ ತರಗತಿಗಳು ಆರಂಭವಾಗಲಿವೆ.

ಸಪ್ಟೆಂಬರ್ 5ನೇ ತರಗತಿ ಮೇಲ್ಪಟ್ಟ ತರಗತಿಗಳನ್ನು ಆರಂಭಿಸಲಾಗುತ್ತದೆ. ಅಂತಿಮವಾಗಿ ನವೆಂಬರ್ ತಿಂಗಳಿನಿಂದ ಪೂರ್ವ ಪ್ರಾಥಮಿಕ ಶಾಲೆಯನ್ನು ಆರಂಭಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದ್ರೀಗ ಅನ್ ಲಾಕ್ 4.0 ಮಾರ್ಗಸೂಚಿಯಲ್ಲಿ ಶಾಲೆ, ಕಾಲೇಜು ಆರಂಭದ ಕುರಿತು ಸ್ಪಷ್ಟವಾದ ಚಿತ್ರಣ ಹೊರಬರಲಿದೆ.

ಕೇಂದ್ರ ಸರಕಾರ ಈಗಾಗಲೇ ಶಾಲೆಗಳನ್ನು ತೆರೆಯಲು ಅನುಮತಿಯನ್ನು ನೀಡಲಾಗಿದೆ. ಕೇಂದ್ರ ಸರ್ಕಾರ ಮತ್ತಷ್ಟು ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡುವ ನಿರೀಕ್ಷೆ ಇದ್ದು, ಜನ ಹಾಗೂ ವಾಹನಗಳ ಸಂಚಾರದ ಮೇಲೆ ನಿರ್ಬಂಧ ವಿಧಿಸದಂತೆ ಈಗಾಗಲೇ ರಾಜ್ಯಗಳಿಗೆ ಸೂಚಿಸಿದೆ. ಆದರೆ ಸಭೆ, ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಸಭೆಗಳ ಮೇಲಿನ ನಿರ್ಬಂಧವನ್ನು ಮುಂದುವರಿಸವುದು ಖಚಿತ ಎನ್ನಲಾಗುತ್ತಿದೆ.

Leave A Reply

Your email address will not be published.