Astrology: ಎರಡು ಪ್ರಮುಖ ಗ್ರಹಗಳ ಕುತೂಹಲಕಾರಿ ನಡೆ: ವಕ್ರತ್ಯಾಗ ಮಾಡಲಿರುವ ಬುಧ ಮತ್ತು ಗುರು

ಗ್ರಹಗಳ ವಕ್ರಚಲನೆ ಎನ್ನುವುದು ಭಾರತೀಯ ಜ್ಯೋತಿಷ್ಯಶಾಸ್ತ್ರದಲ್ಲಿ ಬಹಳ ಕುತೂಹಲಕರ ಮತ್ತು ಆಸಕ್ತಿಕರ ವಿಷಯವಾಗಿದೆ. ಭಾರತೀಯ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಪಂಚತಾರಾಗ್ರಹರಾದ ಮಂಗಳ, ಬುಧ, ಗುರು, ಶುಕ್ರ, ಮತ್ತು ಶನಿ ನಭೋಂಡಲದಲ್ಲಿ ಕೆಲವೊಮ್ಮೆ ಹಿಮ್ಮುಖವಾಗಿ ಚಲಿಸುತ್ತಿರುವಂತೆ ಕಂಡುಬರುತ್ತದೆ. ಇದನ್ನೇ ನಮ್ಮ ಪ್ರಾಚೀನ ಋಷಿಗಳು ಮತ್ತು ಜ್ಯೋತಿಷ್ಯ ಗ್ರಂಥಕರ್ತರುಗಳು ಗ್ರಹಗಳ ವಕ್ರಚಲನೆಯೆಂದು ಕರೆದಿದ್ದಾರೆ. ಗ್ರಹಗಳ ಚಲನೆಯ ಈ ಮಹತ್ವದ ವಿದ್ಯಮಾನದ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಿದ್ದಾರೆ ಟಿ.ಆರ್.ನಾಗೇಶ್.

ಗ್ರಹಗಳು ಹೀಗೆ ವಕ್ರಚಲನೆಯಲ್ಲಿದ್ದಾಗ ಹೆಚ್ಚಿನ ಬಲಹೊಂದಿ ಭೂಮಂಡಲದ ಮೇಲೆ ಹಾಗೂ ಮಾನವರ ಜೀವನದಲ್ಲಿ ಗಮನಾರ್ಹ ಬದಲಾವಣೆಗಳಿಗೆ ಕಾರಣರಾಗುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶುಭಗ್ರಹರು ವಕ್ರಿ ಆದರೆ ಹೆಚ್ಚಿನ ಶುಭಫಲಗಳನ್ನು ನೀಡುತ್ತಾರೆ, ಹಾಗೂ ಪಾಪಗ್ರಹರು ವಕ್ರಿ ಆದಾಗ ಆಶುಭಫಲಗಳನ್ನು ನೀಡುತ್ತಾರೆ. ಕೆಲವೊಮ್ಮೆ ಈ ಫಲಗಳು ಮಾನವರ ಬದುಕಿನಲ್ಲಿ ಆಮೂಲಾಗ್ರ ಬದಲಾವಣೆಗಳನ್ನೇ ತರುವಷ್ಟು ಪ್ರಭಾವಶಾಲಿಯಾಗಿರುತ್ತವೆ.

ಸೌರಮಂಡಲದಲ್ಲಿನ ಎರಡು ಮುಖ್ಯಗ್ರಹಗಳಾದ ಬುಧ ಮತ್ತು ಗುರು ಇಂದು (ಅ..8) ತಮ್ಮ ವಕ್ರಚಲನೆಯನ್ನು ತ್ಯಾಗಮಾಡಲಿದ್ದಾರೆ. ಈ ಎರಡು ಘಟನೆಗಳು ಕ್ರಮವಾಗಿ ರಾತ್ರಿ 8:44 ಮತ್ತು ಬೆಳಿಗ್ಗೆ 11:39ಕ್ಕೆ ನಡೆಯಲಿದ್ದು ಜನ ಸಾಮಾನ್ಯರ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರಲಿವೆ. ಬುಧನು ಸೆಪ್ಟೆಂಬರ್ 27, 2021 ರಂದು ತನ್ನ ವಕ್ರ ಚಲನೆ ಪ್ರಾರಂಭಿಸಿ ತುಲಾರಾಶಿಯಿಂದ ಕನ್ಯಾರಾಶಿಗೆ ಚಲಿಸಿದ್ದರೆ, ಗುರುವಿನ ವಕ್ರಚಲನೆ ಇದಕ್ಕೂ ಮೊದಲೇ, ಅಂದರೆ ಜೂನ್ 20, 2021ರಂದೇ ಪ್ರಾರಂಭವಾಗಿ ಕುಂಭರಾಶಿಯಿಂದ ಮಕರರಾಶಿಗೆ ಸಂಚರಿಸಿತ್ತು. ಮತ್ತೊಮ್ಮೆ ಸೆಪ್ಟೆಂಬರ್ 15ರಂದ ವಕ್ರಿಯಾಗಿದ್ದನು. ಇದು ಜನಜೀವನದ ಮೇಲೆ ಹಾಗೂ ಪ್ರಕೃತಿಯ ಮೇಲೆ ಬೀರಿದ ಪರಿಣಾಮಗಳನ್ನು ನಾವೆಲ್ಲಾ ನೋಡಿದ್ದೇವೆ. ಪ್ರಪಂಚದ ಅನೇಕ ವಿದ್ಯಮಾನಗಳ ಮೇಲೆ ಇದು ತನ್ನ ಪ್ರಭಾವವನ್ನು ಬೀರಿದುದನ್ನು ನಾವೆಲ್ಲಾ ಗಮನಿಸಿದ್ದೇವೆ.

ಬುಧನು ಮಾನವರ ಸಂವಹನ ಸಾಮರ್ಥ್ಯದ ಮೇಲೆ ಪ್ರಭಾವ ಬೀರುವ ಗ್ರಹನಾಗಿದ್ದು ಮಾತು, ಓದು, ಬರವಣಿಗೆ, ಮುಖ್ಯ ಕಾಗದಪತ್ರಗಳು, ಗಣಕಯಂತ್ರದ ಭಾಷೆ ಮತ್ತು ಇತರ ಕಾರ್ಯಗಳಾದ ಕೋಡಿಂಗ್‌ಗಳ ಮೇಲೆ ಅವನ ಪ್ರಭಾವವಿರುತ್ತದೆ. ಇದಲ್ಲದೆ, ಪ್ರಯಾಣ ಮತ್ತು ಸಾಗಾಣಿಕೆಗಳ ಮೇಲೂ ಇವನ ನೇರ ಪ್ರಭಾವವಿರುತ್ತದೆ. ಹಾಗಾಗಿ, ಬುಧನು ವಕ್ರಿಯಾದಾಗ ಮಾನವನ ಸಂವಹನ ಸಾಮರ್ಥ್ಯದಲ್ಲಿ ಕೊರತೆಯುಂಟಾಗುತ್ತದಲ್ಲದೇ, ಪ್ರಯಾಣ ಮತ್ತು ಸಾಗಾಣಿಕೆಗಳ ವಿಷಯದಲ್ಲೂ ಹಿನ್ನಡೆಯುಂಟಾಗುತ್ತದೆ. ಇಂತಹ ಸಮಯದಲ್ಲಿ ಮಾನವ ತನ್ನ ವಿವೇಚನಾಶಕ್ತಿಯನ್ನು ಕಳೆದುಕೊಂಡು ತಪ್ಪುನಿರ್ಧಾರಗಳನ್ನು ಕೈಗೊಳ್ಳುತ್ತಾನಲ್ಲದೇ ಕಷ್ಟ-ನಷ್ಟಗಳಿಗೀಡಾಗುತ್ತಾನೆ. ವಾಹನಗಳು ಕೆಡಬಹುದಲ್ಲದೇ ಸಣ್ಣ-ಪುಟ್ಟ ಅಪಘಾತಗಳ ಸಾಧ್ಯತೆಗಳೂ ಇರುತ್ತವೆ. ಆದ್ದರಿಂದ, ಬುಧ ವಕ್ರಿಯಾಗಿದ್ದಾಗ ಸಂಪೂರ್ಣ ವಿವೇಚನೆಯಿಂದ, ಹಿತೈಷಿಗಳ ಸಲಹೆ ಪಡೆದು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಸಾಧ್ಯವಾದರೆ ಪ್ರಮುಖ ನಿರ್ಧಾರಗಳನ್ನು ಮುಂದೂಡುವುದು ಕ್ಷೇಮಕರ.

ಇದನ್ನೂ ಓದಿ: ಅಭಿಷೇಕವೇ ನಡೆಯದ ವಿಗ್ರಹ : ತಿರುಪತಿಯಲ್ಲಿದೆ ಅಪರೂಪದ ದೇಗುಲ
ಇದನ್ನೂ ಓದಿ: Sabarimala : ತುಲಾಮಾಸದ ಪೂಜೆ ತೆರೆಯಲಿದೆ ಶಬರಿಮಲೆ ಅಯ್ಯಪ್ಪ ದೇವಸ್ಥಾನ : ಅ.16 ರಿಂದ ಭಕ್ತರಿಗೆ ಅವಕಾಶ

ಇನ್ನು, ಗುರುಗ್ರಹದ ವಿಷಯಕ್ಕೆ ಬರುವುದಾದರೆ, ಗುರುವನ್ನು ಜ್ಯೋತಿಷ್ಯಶಾಸ್ತ್ರವು ಧನಕಾರಕ, ಪುತ್ರಕಾರಕ, ಭಾಗ್ಯಕಾರಕ ಎಂದೆಲ್ಲಾ ಕರೆದಿದ್ದು ಹೆಚ್ಚಿನ ಶುಭಫಲಗಳನ್ನು ನೀಡುವ ಪ್ರಬಲ ಗ್ರಹವಾಗಿದೆ. ಇಂತಹ, ಗುರು ತನ್ನ ನೀಚ ಸ್ಥಾನವಾದ ಮಕರರಾಶಿಯಲ್ಲಿ ಮಾರ್ಚ್ 30, 2020ರಂದು ವಕ್ರಿಯಾದ ನಂತರ ಪ್ರಪಂಚದಲ್ಲಿ ಏನೆಲ್ಲಾ ಸಂಭವಿಸಿತೆಂಬುದು ನಮ್ಮ ಕಣ್ಣ ಮುಂದಿದೆ. ಇಡೀ ಪ್ರಪಂಚವೇ ಕೊರೋನಾ ಎಂಬ ಹೆಮ್ಮಾರಿಯ ಆರ್ಭಟಕ್ಕೆ ಸಿಲುಕಿ ನಲುಗಿಹೋಗಿದ್ದನ್ನು, ಅದರ ಪ್ರಭಾವ ಇನ್ನೂ ಪೂರ್ತಿಯಾಗಿ ನಿವಾರಣೆಯಾಗದೇ ಇರುವುದನ್ನು, ಹಾಗೂ ಇದರಿಂದ ಉಂಟಾದ ಆರ್ಥಿಕ ಹಿನ್ನಡೆಯನ್ನು ನಾವೆಲ್ಲಾ ಅನುಭವಿಸುತ್ತಿದ್ದೇವೆ.

ಮಾನವನ ಬದುಕನ್ನು ಹಾಗೂ ಇಡೀ ಭೂಮಂಡಲದ ಮೇಲೆ ಪ್ರಭಾವವನ್ನುಂಟು ಮಾಡುವ ಬುಧ ಮತ್ತು ಗುರುಗ್ರಹರು ತಮ್ಮ ವಕ್ರಚಲನೆಯನ್ನು ತ್ಯಾಗಮಾಡಿ ನೇರ ಚಲನೆಯನ್ನು ಹೊಂದುತ್ತಿರುವುದು ನಮಗೆಲ್ಲಾ ಸಮಾಧಾನ ತರುವಂತಹ ವಿಷಯವಾಗಿದೆ.

Astrology Mercury Jupiter going to quit their retrograde motions

Comments are closed.