DKS – ACB : ಉಗ್ರಪ್ಪ ಸಲೀಂ ಆಡಿಯೋ ಬಾಂಬ್‌ : ಡಿಕೆಶಿ, ರಾಹುಲ್‌ ಗಾಂಧಿ ವಿರುದ್ದ ದೂರು ದಾಖಲು

ಬೆಂಗಳೂರು : ಕಾಂಗ್ರೆಸ್‌ ಹಿರಿಯ ಮುಖಂಡರಾದ ಉಗ್ರಪ್ಪ ಹಾಗೂ ಸಲೀಂ ಅವರ ನಡುವೆ ನಡೆದಿರುವ ಆಡಿಯೋ ಬಾಂಬ್‌ ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಸಂಕಷ್ಟವನ್ನು ತಂದೊಡ್ಡಿದೆ. 2023ರ ಚುನಾವಣೆಗಾಗಿ ಡಿ.ಕೆ.ಶಿವಕುಮಾರ್‌ ಅವರು ಕೋಟಿ ಕೋಟಿ ಭ್ರಷ್ಟಾಚಾರದ ಹಣ ಸಂಪಾದನೆಯ ಆರೋಪ ಕೇಳಿಬಂದ ಹಿನ್ನೆಲೆಯಲ್ಲೀಗ ಡಿಕೆಶಿ ವಿರುದ್ದ ಎಸಿಬಿ ದೂರು ದಾಖಲಾಗಿದೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಸುದ್ದಿಗೋಷ್ಠಿಯಲ್ಲಿ ಉಗ್ರಪ್ಪ ಹಾಗೂ ಸಲೀಂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ದ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ್ದರು. ಡಿ.ಕೆ.ಶಿವಕುಮಾರ್‌ ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಇಬ್ಬರೂ ನಾಯಕರು ಮಾತನಾಡಿಕೊಂಡಿದ್ದರು. ಇಬ್ಬರ ಗುಪ್ತ ಸಂಭಾಷಣೆಯ ಆಡಿಯೋ ವೈರಲ್‌ ಆಗಿತ್ತು. ಇದರ ಬೆನ್ನಲ್ಲೇ ಕೆಪಿಸಿಸಿ ಸಲೀಂ ಅವರನ್ನು ವಜಾಗೊಳಿಸಿದ್ದು, ಉಗ್ರಪ್ಪ ಅವರಿಗೆ ವಾರ್ನಿಂಗ್‌ ನೀಡಿತ್ತು. ಇನ್ನೊಂದೆಡೆಯಲ್ಲಿ ಡಿಕೆ ಶಿವಕುಮಾರ್‌ ಅವರು ಗರಂ ಆಗಿದ್ದರು. ಜೊತೆಯಲ್ಲೇ ಎಐಸಿಸಿ ಆಂತರಿಕ ತನಿಖೆಗೆ ಆದೇಶವನ್ನು ನೀಡಿತ್ತು. ಇದೆಲ್ಲದರ ಬೆನ್ನಲ್ಲೇ ಇದೀಗ ಹೆಲ್ಪಿಂಗ್ ಸಿಟಿಜನ್ ಅಂಡ್ ಪೀಪಲ್ಸ್ ಕೋರ್ಟ್ ಎಜಿಓ ಸಂಸ್ಥಾಪಕ ಅಲಂ ಪಾಷ ಭ್ರಷ್ಟಾಚಾರ ನಿಗ್ರಹ ದಳ ( ACB )ಕ್ಕೆ ದೂರು ನೀಡಿದ್ದು, ದೂರಿನಲ್ಲಿ ಹಲವು ಆರೋಪಗಳನ್ನು ಮಾಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್‌ ಅವರು 2023ರ ಚುನಾವಣೆಗಾಗಿ ಡಿ.ಕೆ.ಶಿವಕುಮಾರ್‌ ಅವರು ಕೋಟಿ ಕೋಟಿ ಭ್ರಷ್ಟಾಚಾರ ನಡೆಸಿದ್ದಾರೆ. ಈ ಹಿಂದೆ ಡಿ.ಕೆ.ಶಿವಕುಮಾರ್‌ ಅವರು ನೀರಾವರಿ ಮತ್ತು ಜಲಸಂಪನ್ಮೂಲ ಸಚಿವರಾಗಿದ್ದ ವೇಳೆಯಲ್ಲಿ 8 ರಿಂದ 12 ಪರ್ಸೆಂಟ್‌ ಕಮಿಷನ್‌ ಪಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕಾಂಗ್ರೆಸ್‌ ನಾಯಕರ ಆಡಿಯೋ ಸಂಭಾಷಣೆ ಹಾಗೂ ಹಲವು ದಾಖಲೆಗಳನ್ನು ಒಳಗೊಂಡಿರುವ ಸಿಡಿಯನ್ನು ಎಸಿಬಿ ಅಧಿಕಾರಿಗಳಿಗೆ ಪಾಷಾ ಸಲ್ಲಿಕೆ ಮಾಡಿದ್ದಾರೆ.

ಡಿ.ಕೆ.ಶಿವಕುಮಾರ್‌ ಅವರು ಅಕ್ರಮ ಹಣ ಸಂಪಾದನೆ ಮಾಡಿರೋ ವಿಚಾರ ಗೊತ್ತಿದ್ದರೂ ಕೂಡ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. ಭ್ರಷ್ಟಾಚಾರ ಪ್ರೋತ್ಸಾಹಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಯುವ ನಾಯಕ ರಾಹುಲ್‌ ಗಾಂಧಿ ವಿರುದ್ದವೂ ದೂರು ನೀಡಲಾಗಿದೆ. ಆರೋಪಿಗಳ ವಿರುದ್ದ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳು ವಂತೆಯೂ ಮನವಿ ಮಾಡಿಕೊಂಡಿದ್ದಾರೆ. ಇನ್ನು ನೀರಾವರಿ ಇಲಾಖೆಯಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿತ್ತು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಆಪ್ತನಾಗಿದ್ದ ಉಮೇಶ್‌ ಹಾಗೂ ಗುತ್ತಿಗೆದಾರರ ಬಳಿಯಲ್ಲಿ ಸುಮಾರು 750 ಕೋಟಿ ಅಕ್ರಮ‌ ಆಸ್ತಿ ಪತ್ತೆಯಾಗಿತ್ತು. ನೀರಾವರಿ ಇಲಾಖೆಯಲ್ಲಿ ಲಂಚ ಪಡೆದು ಸಾವಿರಾರು ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಡೀಲ್ ರಾಜ ಎಂದ ಕಾಂಗ್ರೆಸ್ ನಾಯಕರು

ಇದನ್ನೂ ಓದಿ : ಪಕ್ಕದಲ್ಲಿ ಬಂದ ಕಾರ್ಯಕರ್ತನಿಗೆ ಡಿಕೆಶಿ ಥಳಿತ : ರಾಜಕಾರಣಿಯೋ ಅಥವಾ ರೌಡಿಯೋ ಎಂದ ಬಿಜೆಪಿ

ಕೇವಲ ಡಿ.ಕೆ.ಶಿವಕುಮಾರ್‌ ಮಾತ್ರವಲ್ಲದೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ದವೂ ಆರೋಪ ಕೇಳಿಬಂದಿದೆ. ಈಗಾಗಲೇ ಡಿ.ಕೆ.ಶಿವಕುಮಾರ್‌ ಐಟಿ, ಇಡಿ ಸಂಕಷ್ಟದ ನಡುವಲ್ಲೇ ಇದೀಗ ಎಸಿಬಿ ಅಧಿಕಾರಿಗಳ ವಿಚಾರಣೆಯನ್ನು ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

( Ugrappa Salim Audio Bomb: ACB Complaint against DK Sivakumar and Rahul Gandhi )

Comments are closed.