ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ : ಮೇಷರಾಶಿಯವರಿಗೆ ಸಾಮಾಜಿಕವಾಗಿ ಸಮ್ಮಾನಗಳು ದೊರೆಯಲಿದೆ

ನಿತ್ಯಭವಿಷ್ಯ : ಮೇಷರಾಶಿಯವರಿಗೆ ಸಾಮಾಜಿಕವಾಗಿ ಸಮ್ಮಾನಗಳು ದೊರೆಯಲಿದೆ

- Advertisement -

ಮೇಷರಾಶಿ
ಮದುವೆಯ ಮಾತುಕತೆಗಳಲ್ಲಿ ಸಫಲತೆ ಇದೆ. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ಕೆಲಸದಲ್ಲಿ ವಿಘ್ನ ಉಂಟಾಗುವ ಸಾಧ್ಯತೆ ಇರುವುದು. ಎಚ್ಚರಿಕೆ ವಹಿಸಿರಿ.
ಅದೃಷ್ಟ ಸಂಖ್ಯೆ : 6

ವೃಷಭರಾಶಿ
ಪೂರ್ವ ತಯಾರಿ ಇಲ್ಲದ ಕೆಲಸವನ್ನೂ ಸಕಾಲಕ್ಕೆ ಮುಗಿಸುವಿರಿ. ಅನಿಯಮಿತ ಬದುಕು ಇರುವುದು. ಮೇಲಧಿಕಾರಿಗಳ ಒತ್ತಡ ಬೇಸರ ತರುವುದು. ಕಾರ್ಯಕ್ಷೇತ್ರದಲ್ಲಿ ಗೌರವ ಪ್ರಾಪ್ತಿಯಾಗುವುದು. ಶ್ರಮಕ್ಕೆ ತಕ್ಕ ಲಾಭ ದೊರೆಯುವುದು.
ಅದೃಷ್ಟ ಸಂಖ್ಯೆ : 1

ಮಿಥುನರಾಶಿ
ಮಹತ್ವದ ಕಾರ್ಯ ಸಾಧನೆಯಾಗುವ ಲಕ್ಷಣಗಳಿವೆ. ಮನೆಯಲ್ಲಿ ಕೌಟುಂಬಿಕ ಭಿನ್ನಾಭಿಪ್ರಾಯ ಇದ್ದರೂ ನೆಮ್ಮದಿಗೆ ಕೊರತೆ ಇಲ್ಲ. ವ್ಯವಹಾರ ಚತುರತೆಯಿಂದ ದೊಡ್ಡ ಕೆಲಸವನ್ನೂ ಸಹಜವಾಗಿ ಮಾಡುವಿರಿ.
ಅದೃಷ್ಟ ಸಂಖ್ಯೆ : 9

ಕರ್ಕಾಟಕರಾಶಿ
ಮನಸ್ಸಿನಂತೆಯೇ ಎಲ್ಲ ಕೆಲಸಗಳೂ ಪೂರ್ಣವಾಗುವವು. ಉದ್ಯೋಗ ಸ್ಥಾನದಲ್ಲಿ ಕಾರ್ಯಭಾರ ಹೆಚ್ಚುವುದು. ಆಸ್ತಿ ಸಂಬಂಧಿತ ವಿಷಯದಲ್ಲಿ ವಂಚನೆಯಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷದ ಕಾರ್ಯಗಳು ನೆರವೇರುವವು.
ಅದೃಷ್ಟ ಸಂಖ್ಯೆ : 4

ಸಿಂಹರಾಶಿ
ಅನಾವಶ್ಯಕ ತಿರುಗಾಟ, ನೌಕರಿಯಲ್ಲಿ ಕಿರಿಕಿರಿ, ಸ್ಥಾನಪಲ್ಲಟ ಸಾಧ್ಯತೆ, ಬಡ್ತಿಯೋಗ, ವ್ಯಾಪಾರಿಗಳಿಗೆ ಸ್ಥಳದ ವಿಚಾರವಾಗಿ ಚಿಂತೆ ಇರುವುದು. ಮಹಿಳೆಯರು, ವಿದ್ಯಾರ್ಥಿಗಳಿಗೆ ಸಂತೋಷ ಇರುವುದು. ತರಕಾರಿ ದಾನ ಮಾಡಿರಿ.
ಅದೃಷ್ಟ ಸಂಖ್ಯೆ : 7

ಕನ್ಯಾರಾಶಿ
ಪರಿವಾರದಲ್ಲಿ ಹೊಸಕಳೆ ಬರುವುದು. ಕುಟುಂಬದಲ್ಲಿ ಸೌಖ್ಯ ಇರುವುದು. ಮಹತ್ವದ ಕೆಲಸಕ್ಕೆ ವಿಘ್ನ ಬರುವ ಸಾಧ್ಯತೆ ಇದೆ ಎಚ್ಚರಿಕೆ ವಹಿಸಿರಿ. ವ್ಯವಹಾರಗಳು ಲಾಭದಾಯಕವಾಗಿ ಇರುವವು.
ಅದೃಷ್ಟ ಸಂಖ್ಯೆ : 8

ತುಲಾರಾಶಿ
ಪ್ರತಿಯೊಂದು ಕೆಲಸದಲ್ಲಿಯೂ ವಿಳಂಭ ಉಂಟಾಗುವ ಸಾಧ್ಯತೆ ಇದೆ. ಅನಗತ್ಯ ಖರ್ಚುಗಳು ಹೆಚ್ಚಾಗುವವು. ವೃಥಾ ತಿರುಗಾಟ ಇರುವುದು ಆದರೂ ಕೀರ್ತಿದಾಯಕ ಫಲವಿದೆ.
ಅದೃಷ್ಟ ಸಂಖ್ಯೆ : 5

ವೃಶ್ಚಿಕರಾಶಿ
ಅನಿಸಿಕೆಗಿಂತ ವಾಸ್ತವ ಬೇರೆ ಇರುವುದರಿಂದ ತಕ್ಕ ಬದಲಾವಣೆ ಮಾಡಿಕೊಳ್ಳುವಿರಿ. ನಡತೆಯಲ್ಲ ಸೂಕ್ಷತೆ ಇರಲಿ. ವ್ಯವಹಾರವನ್ನು ಪೂರ್ಣವಾಗಿ ಆಲೋಚಿಸಿ ಮಾಡುವುದು ಒಳ್ಳೆಯದು. ಧನಹಾನಿಯ ಸಂಭವವಿದೆ.
ಅದೃಷ್ಟ ಸಂಖ್ಯೆ : 1

ಧನುರಾಶಿ
ಹೊಟ್ಟೆಕಿಚ್ಚು ಮಾಡುವವರಿಗೆ ತಕ್ಕ ಶಾಸ್ತಿಯಾಗಲಿದೆ. ಶತ್ರುಗಳು ತಾವಾಗಿಯೇ ದೂರ ಸರಿಯುವರು. ಜನರೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಯಾಗಲಿದೆ. ಯುಕ್ತಿಯಿಂದ ಕಾರ್ಯಸಾಧಿಸುವಿರಿ.
ಅದೃಷ್ಟ ಸಂಖ್ಯೆ : 3

ಮಕರರಾಶಿ
ಮಹತ್ತರ ಯೋಜನೆಗಳು ಕಾರ್ಯಗತವಾಗಲು ಪ್ರಾಜ್ಞರ ಮಾರ್ಗದರ್ಶನ. ಜೀವನದ ಏಳಿಗೆಗೆ ಚಿಂತನೆ. ಕೆಲಸದ ನಡುವೆ ಮತ್ತೊಂದು ಕಾರ್ಯವಹಿಸಿಕೊಳ್ಳಲು ಚೈತನ್ಯ. ಮಹಿಳೆಯರು ಪಶ್ಚಾತಾಪಕ್ಕೆ ಅವಕಾವಿಲ್ಲ ದಂತೆ ನಡೆದುಕೊಳ್ಳುವುದು ಒಳಿತು.
ಅದೃಷ್ಟ ಸಂಖ್ಯೆ : 6

ಕುಂಭರಾಶಿ
ಮನಸ್ಸು ಹಿಡಿತದಲ್ಲಿರಲಿ. ಎಷ್ಟು ಪ್ರಯತ್ನಿಸಿದರೂ ಸಮಸ್ಯೆಗಳಿಗೆ ಪರಿಹಾರ ದೊರೆಯದೇ ಕ್ಲೇಷ ಉಂಟಾಗುವುದು. ತೋರಿಕೆಯ ಸ್ವಭಾವದಿಂದ ದೃಷ್ಟಿದೋಷ ಆಗುವ ಸಾಧ್ಯತೆ ಇದೆ.
ಅದೃಷ್ಟ ಸಂಖ್ಯೆ : 7

ಮೀನರಾಶಿ
ಮದುವೆಯ ಮಾತುಕತೆಗಳಲ್ಲಿ ಸಫಲತೆ ಇದೆ. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು.ಉದ್ಯೋಗದ ಸ್ಥಾನ ಬದಲಾವಣೆಯ ವಿಚಾರವಾಗಿ ಚಿಂತೆ ಇರುವುದು.
ಅದೃಷ್ಟ ಸಂಖ್ಯೆ : 4

ಶುಭಂಭವತು
ಡಾ.ಬಸವರಾಜ್ ಗುರೂಜಿ
ವೈದಿಕ ಜ್ಯೋತಿಷಿ
9972848937

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular