ಶಾಲೆಗಳಿಗೆ ಬೇಸಿಗೆ ರಜೆ : 2 ದಿನದಲ್ಲಿ ನಿರ್ಧಾರ ..! ಶಿಕ್ಷಕರಿಗೆ ಲಭಿಸುತ್ತಾ ಹಕ್ಕಿನ ರಜೆ ..?

ಬೆಂಗಳೂರು : ಕೊರೊನಾ‌ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ 9ನೇ ತರಗತಿ‌ವರೆಗಿನ ಪಠ್ಯ ಚಟುವಟಿಕೆ ಬಂದ್ ಆಗಿದೆ. ಎಸ್ಎಸ್ಎಲ್ ಸಿ‌ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ದತೆ ರಜೆ ನೀಡುವ ಕುರಿತು ಚರ್ಚೆ ನಡೆಯುತ್ತಿದೆ. ಈ ನಡುವಲ್ಲೇ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಬೇಸಿಗೆ ರಜೆ ನೀಡುವ ಕುರಿತು ಇನ್ನು 2 ರಿಂದ 3 ದಿನಗಳಲ್ಲಿ ಸರಕಾರ ನಿರ್ಧಾರ ತೆಗೆದು ಕೊಳ್ಳುವ ಸಾಧ್ಯತೆಯಿದೆ.

ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಯೂ ಏರಿಕೆಯಾಗುತ್ತಿದೆ. ನಿತ್ಯವೂ 4 ಸಾವಿರಕ್ಕೂ ‌ಅಧಿಕ ಮಂದಿಗೆ ಕೊರೊನಾ ಸೋಂಕಿಗೆ ತುತ್ತಾಗುತ್ತಿ ದ್ದಾರೆ. ಎಸ್ಎಸ್ಎಲ್ ಸಿ ಮೇಲ್ಪಟ್ಟು ತರಗತಿಗಳಷ್ಟೇ ನಡೆಯುತ್ತಿದ್ದರೂ ಹೆಚ್ಚುತ್ತಿರುವ ‌ಕೊರೊ‌ನಾ ಆರ್ಭಟ ಕ್ಕೆ ಹೈ ರಿಸ್ಕ್ ಅನ್ನೋ ಮಾತುಗಳು ಕೇಳಿ ಬರುತ್ತಿದೆ.  ಕೊರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ. ಹಾಗಾಗಿ ಶಿಕ್ಷಕರ ಹಕ್ಕಿನ ರಜೆ ನೀಡುವುದೇ ಒಳಿತು ಅನ್ನುವ ಅಭಿಪ್ರಾಯವನ್ನು ಹಿರಿಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಇನ್ನು ಕೊರೊನಾ ಸಂಕಷ್ಟದ ಕಾಲದಲ್ಲಿ ಶಿಕ್ಷಕರು ಕೊರೊನಾ ವಾರಿಯರ್ಸ್‌ ಆಗುವುದರ ಜೊತೆಗೆ‌ ಶಿಕ್ಷಣದ ಕಾರ್ಯವನ್ನೂ ಮಾಡಿದ್ದಾರೆ. ಶಿಕ್ಷಕರು ಕೊಚವೂ ರೆಸ್ಟ್ ಇಲ್ಲದೇ ಶ್ರಮಿಸಿದ್ದಾರೆ. ಕೊರೊನಾ ಕಾಲದಲ್ಲಿಯೂ ವಿದ್ಯಾಗಮದ ಜೊತೆಗೆ ಜೊತೆಗೆ ವಿದ್ಯಾರ್ಥಿ ಗಳಿಗೆ ಪಠ್ಯ ಚಟುವಟಿಕೆಗಳಿಗೆ ಕೊಂಚವೂ ಕೊರತೆಯಾಗ ದಂತೆ ನೋಡಿಕೊಂಡಿದ್ದಾರೆ. ಇನ್ನೂ ಶಾಲಾರಂಭವಾಗುವ ಹೊತ್ತಿಗೆ ಬಹುತೇಕ ‌ಪಠ್ಯವನ್ನು ಮುಗಿಸಿದ್ದಾರೆ. ಜನವರಿ ನಂತರದಲ್ಲಿ ಪುನರ್ ಮನನ ತರಗತಿ ನಡೆಸಲಾಗಿದೆ. ಈಗಾಗಲೇ 9ನೇ‌ ತರಗತಿವರೆಗೆ ತರಗತಿ ಬಂದ್ ಆಗಿದೆ. ಇನ್ನು ಎಸ್ಎಸ್ಎಲ್ ಸಿ ಪಠ್ಯಕ್ರಮವನ್ನು ಶಿಕ್ಷಕರು ಬೋಧನೆಯನ್ನು ಮುಗಿಸಿ, ಪುನರ್ ಮನನ ಕಾರ್ಯವನ್ನೂ ಮುಗಿಸಿದ್ದಾರೆ.

ಹೀಗಾಗಿ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ದತೆಗೆ ರಜೆಯನ್ನು ನೀಡಿ, ವಿದ್ಯಾರ್ಥಿಗಳಿಗೆ ಬೇಸಿಗೆ ‌ರಜೆ‌ ನೀಡಬೇಕು. ಈ ಮೂಲಕ ಶಿಕ್ಷಕರಿಗೆ ಹಕ್ಕಿನ ರಜೆಯನ್ನು ಒದಗಿಸಬೇಕೆಂದು ಶಿಕ್ಷಕರ ಸಂಘ ಈಗಾಗಲೇ ಮುಖ್ಯಮಂತ್ರಿಗಳನ್ನು ಹಾಗೂ ಶಿಕ್ಷಣ ಸಚಿವರನ್ನು ಭೇಟಿ ‌ಮಾಡಿ ಮನವಿ ಮಾಡಿದೆ. ಎರಡು ಮೂರು ವಾರಗಳಲ್ಲಿ ಈ ಕುರಿತು ಆದೇಶ ಹೊರಬೀಳುವ ಸಾಧ್ಯತೆಯಿದೆ ಎಂದು ಶಿಕ್ಷಣ‌ ಇಲಾಖೆಯ ‌ಮೂಲಗಳಿಂದ ತಿಳಿದುಬಂದಿದೆ.

Comments are closed.