ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ : 31-07-2010

ನಿತ್ಯಭವಿಷ್ಯ : 31-07-2010

- Advertisement -

ಮೇಷರಾಶಿ
ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಉದ್ಯೋಗ ಬಡ್ತಿಗೆ ಅಡೆತಡೆ, ರೈತರಿಗೆ ಉತ್ಸಾಹದಾಯಕ ವಾತಾವರಣವು ಸಂತಸ ತರಲಿದೆ. ಬಂಧುಗಳಿಗೆ ಶುಭಸುದ್ದಿ ತಂದೀತು. ಉದ್ಯೋಗಿಗಳಿಗೆ ಸ್ಥಾನಪಲ್ಲಟದ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಸರಸದ ದಿನಗಳಿವು. ಆರೋಗ್ಯ ವೃದ್ಧಿ. ಆಧ್ಯಾತ್ಮಿಕ ಕ್ಷೇತ್ರದವರಿಗೆ ತೊಂದರೆ, ಮಾನಸಿಕ ಕಿರಿಕಿರಿ, ಶತ್ರುಗಳಿಂದ ತೊಂದರೆ, ಮಾಟ-ಮಂತ್ರ ತಂತ್ರ ದೋಷ, ಬಂಧುಗಳಿಂದ ದೂರವಿರುವುದು ಒಳಿತು.

ವೃಷಭರಾಶಿ
ಗಂಭೀರ ಪರಿಣಾಮಗಳು ಇಲ್ಲ, ಉದ್ಯೋಗದಲ್ಲಿ ಪ್ರಗತಿ, ಪ್ರಯಾಣದಲ್ಲಿ ಹಿನ್ನಡೆ, ಹಿರಿಯ ಸಹೊದರನಿಂದ ಸಮಸ್ಯೆ, ಗೃಹದಲ್ಲಿ ಶುಭಮಂಗಲ ಕಾರ್ಯಗಳ ಚಿಂತನೆ ನಡೆಯಲಿದೆ. ನಾನಾ ರೀತಿಯಲ್ಲಿ ಧನ ಸಂಪಾದನೆ ಆಗಲಿದೆ. ಗೃಹ ನಿರ್ಮಾಣ ಕಾರ್ಯಗಳಿಗಾಗಿ ಧನವ್ಯಯವಿದೆ. ಕರ್ತವ್ಯದ ಕಾರ್ಯಕರ್ಮದಲ್ಲಿ ವಿಘ್ನಗಳು ತೋರಿಬಂದಾವು.ಹಣಕಾಸು ವ್ಯವಹಾರದಲ್ಲಿ ನಿರಾಸೆ, ಸ್ಥಿರಾಸ್ತಿ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕುವಿರಿ, ಆರೋಗ್ಯದ ಬಗ್ಗೆ ಕಾಳಜಿವಹಿಸಿ.

ಮಿಥುನರಾಶಿ
ದಾಂಪತ್ಯದಲ್ಲಿ ಕಿರಿಕಿರಿ, ಪಾಲುದಾರಿಕೆಯಲ್ಲಿ ತೊಂದರೆ, ಪೂರ್ವಾಪರ ವಿಮರ್ಶಿಸಿ ಮುನ್ನಡೆದರೆ ಉತ್ತಮ. ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿ ವರ್ಗದವ ರೊಂದಿಗೆ ಭಿನ್ನಾಭಿಪ್ರಾಯ ಬಂದೀತು. ಸಾಂಸಾರಿಕವಾಗಿ ತಾಪತ್ರಯ ಗಳು ನಿವಾರಣೆಯಾದೀತು. ನಿಮ್ಮ ಪ್ರಯತ್ನ ಸಫ‌ಲವಾಗಲಿದೆ. ಕಂಕಣ ಭಾಗ್ಯಕ್ಕೆ ಕಂಟಕ, ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆ, ಆರೋಗ್ಯ ಸಮಸ್ಯೆ, ಯೋಚಿಸಿ ನಿರ್ಧಾರ ಕೈಗೊಳ್ಳಿ, ಉದ್ಯೋಗದಲ್ಲಿ ಹಿನ್ನಡೆ, ಪ್ರೇಮ ವಿಚಾರದಲ್ಲಿ ವೈಮನಸ್ಸು.

ಕಟಕರಾಶಿ
ಉದ್ಯೋಗದಲ್ಲಿ ನಷ್ಟ, ಕೌಟುಂಬಿಕ ಕಲಹ, ಸಾಂಸಾರಿಕವಾಗಿ ಇಷ್ಟಾರ್ಥ ಸಿದ್ಧಿಸಲಿದೆ. ಆರ್ಥಿಕ ಸಂಪತ್ತು ಸಾಂಸಾರಿಕವಾಗಿ ಹೆಚ್ಚಲಿದೆ. ಅದರಂತೆ ಖರ್ಚುಗಳೂ ಬರಲಿವೆ. ಗೃಹಕೃತ್ಯದಲ್ಲಿ ಇಷ್ಟಾರ್ಥ ಸಿದ್ಧಿಸಲಿದೆ. ವ್ಯಾಪಾರೋದ್ಯಮಿಗಳಿಗೆ ಲಾಭದಾಯಕ ಆದಾಯವಿರುತ್ತದೆ. ಸೋಲು ನಷ್ಟ ನಿರಾಸೆಗಳಿಂದ ಕಿರಿಕಿರಿ, ಭವಿಷ್ಯದ ಚಿಂತೆಗಳು, ಸಂಗಾತಿಯಿಂದ ಬಾಧೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ.

ಸಿಂಹರಾಶಿ
ಭಾವನೆಗಳಿಗೆ ಪೆಟ್ಟು, ಮಕ್ಕಳ ಜೀವನದಲ್ಲಿ ಏರುಪೇರು, ದುಶ್ಚಟಗಳಿಂದ ಆಯುಷ್ಯಕ್ಕೆ ಕಂಟಕ ಸಾಧ್ಯತೆ, ವ್ಯಾಪಾರಿಗಳು ತಮ್ಮ ಆದಾಯವನ್ನು ವೃದ್ಧಿಸ ಲಿದ್ದಾರೆ. ಬಂಧುಮಿತ್ರರ ಸಹಕಾರ ಸಿಗಲಿದೆ. ದಾಂಪತ್ಯ ಜೀವನದಲ್ಲಿ ಅನಾವಶ್ಯಕ ತಪ್ಪು ಅಭಿಪ್ರಾಯ ಬಂದೀತು. ಹಿರಿಯರ ಹಾಗೂ ಅಧಿಕಾರಿ ವರ್ಗದವರ ಸಹಕಾರವಿದೆ. ಗರ್ಭಿಣಿಯರು ಎಚ್ಚರಿಕೆ, ಸ್ಪರ್ಧಾತ್ಮಕ ವಿಚಾರಗಳಲ್ಲಿ ಸೋಲು, ಕುಟುಂಬದಿಂದ ದೂರಾಗುವ ಚಿಂತೆ, ನಿದ್ರೆಯಲ್ಲಿ ದುಸ್ವಪ್ನ, ಆಕಸ್ಮಿಕ ನಷ್ಟ.

ಕನ್ಯಾರಾಶಿ
ಉದ್ಯೋಗ-ವ್ಯಾಪಾರದಲ್ಲಿ ತೊಂದರೆ, ಮಾಟ-ಮಂತ್ರ ತಂತ್ರದ ದೋಷ, ಸ್ಥಿರಾಸ್ತಿ-ವಾಹನದಿಂದ ನಷ್ಟ, ಆರೋಗ್ಯದಲ್ಲಿ ಏರುಪೇರು, ಅಸಾಧ್ಯ ಸಂಗತಿಗಳು ಕೂಡ ಸುಲಭದಲ್ಲಿ ನಡೆದು ಹೋದಾವು. ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಕಾರ್ಯಕ್ಷೇತ್ರದಲ್ಲಿ ಅಡೆತಡೆಗಳು ತೋರಿಬಂದರೂ ಸಾಕಷ್ಟು ವಿಸ್ತಾರಗೊಳ್ಳಲಿದೆ. ಕೋರ್ಟು ಕಚೇರಿ ಕಾರ್ಯದಲ್ಲಿ ಯಶಸ್ಸಿದೆ. ಪಾಲುದಾರಿಕೆಯಿಂದ ಅಶಾಂತಿ, ಮಿತ್ರರಿಂದ ಮಾನಸಿಕ ವೇದನೆ, ಪೆಟ್ಟು ಮಾಡಿಕೊಳ್ಳುವ ಸಂಭವ.

ತುಲಾರಾಶಿ
ಆರೋಗ್ಯದಲ್ಲಿ ಅಲ್ಪ ವ್ಯತ್ಯಾಸ, ಗರ್ಭಿಣಿಯರು ಎಚ್ಚರಿಕೆಯಲ್ಲಿರಬೇಕು, ವ್ಯಾಜ್ಯ ತಕರಾರುಗಳಿಂದ ಬವಣೆಗಳು ಕಂಡು ಬಂದಾವು. ವ್ಯರ್ಥ ಸಂಚಾರದಿಂದ ಧನವ್ಯಯ ಅನುಭವಕ್ಕೆ ಬರಲಿದೆ. ನೀಚ ಜನರ ಸಹವಾಸದಿಂದ ಅವಮಾನ, ಧನಹಾನಿ ಸಂಭವಿಸೀತು. ಜಾಗ್ರತೆ ಮಾಡುವುದು. ಬಂಧುಗಳಿಂದ ದೂರವಿರಿ, ಪ್ರಯಾಣದಲ್ಲಿ ಜಾಗ್ರತೆ, ತಂದೆಯಿಂದ ಕಿರಿಕಿರಿ, ದುಸ್ವಪ್ನ, ಅನಗತ್ಯ ಖರ್ಚು, ಗುರು-ದೈವ ನಿಂದನೆ ಮಾಡುವ ಪರಿಸ್ಥಿತಿ.

ವೃಶ್ಚಿಕರಾಶಿ
ಪೆಟ್ಟಾಗುವ ಸಾಧ್ಯತೆ, ಆರ್ಥಿಕ ಸಂಕಷ್ಟ, ಹೂಡಿಕೆಯಿಂದ ತೊಂದರೆ, ಪತ್ನಿಯ ಚಾಣಾಕ್ಷತೆ ಹಾಗೂ ದಿಟ್ಟತನದಿಂದ ಕುಟುಂಬದಲ್ಲಿ ಪ್ರಶಾಂತ ವಾತಾವರಣ ಅನುಭವಿಸ ಲಿದ್ದೀರಿ. ದಾಯಾದಿಗಳ ಬಗ್ಗೆ ಹಾಗೂ ಹಿತಶತ್ರುಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ನಿಮ್ಮೆಣಿಕೆಯಂತೆ ಗುರಿ ಸಾಧಿಸುವಿರಿ. ಸಂತಾನದಿಂದ ಸಮಸ್ಯೆ, ಪ್ರೇಮ ವಿಚಾರದಲ್ಲಿ ವೈಮನಸ್ಸು, ಮಿತ್ರರಿಂದ ಹಣ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬದಲ್ಲಿ ಕಲಹ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಗೆಲುವು.

ಧನಸ್ಸುರಾಶಿ
ಕೆಲಸ ಕಾರ್ಯಗಳಲ್ಲಿ ವಿಘ್ನ, ಆರೋಗ್ಯದಲ್ಲಿ ಏರುಪೇರು, ಶನಿಚಾರದಿಂದ ನಾನಾರೀತಿಯಲ್ಲಿ ಹಲವು ತರದ ಕಿರಿಕಿರಿಯನ್ನು ಅನುಭವಿಸುವಂತಾದೀತು. ಆಗಾಗ ವಿಳಂಬ ಗತಿಯಲ್ಲಿ ಕೆಲಸ ಕಾರ್ಯಗಳು ನಡೆದರೂ ನಿಮ್ಮ ಕಾರ್ಯದಲ್ಲಿ ಜಯ ದೊರಕಲಿದೆ. ಚಿಂತಿಸದಿರಿ. ಉದ್ಯೋಗದಲ್ಲಿ ತೊಂದರೆ, ತಂದೆಯಿಂದ ಸಹಕಾರ, ಹಣಕಾಸು ವ್ಯವಹಾರದಲ್ಲಿ ಎಚ್ಚರ, ವಾಹನ-ಸ್ಥಿರಾಸ್ತಿ ವ್ಯವಹಾರದಲ್ಲಿ ಮೋಸ, ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ, ದಾಂಪತ್ಯದಲ್ಲಿ ಕಿರಿಕಿರಿ.

ಮಕರರಾಶಿ
ಪಾಲುದಾರಿಕೆಯಲ್ಲಿ ನಷ್ಟ, ಕೆಟ್ಟ ಸುದ್ದಿ ಕೇಳುವ ಸಂಭವ, ಬಂಧುಮಿತ್ರರ ಸಹಕಾರದಿಂದ ಮನೋ ನೆಮ್ಮದಿಯ ಅನುಭವವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಹೆಜ್ಜೆ ಹೆಜ್ಜೆಗೂ ಪರೀಕ್ಷೆಗೆ ಗುರಿಯಾಗಲಿದ್ದೀರಿ. ಹಿತಾಸಕ್ತಿಗಳ ವಿರುದ್ಧ ಪ್ರತಿಭಟನೆ ತೋರಿಬರಲಿದೆ. ದಿನಾಂತ್ಯ ಶುಭವಿದೆ. ತಂದೆ-ಮಕ್ಕಳಲ್ಲಿ ವೈಮನಸ್ಸು, ಸಾಲ ಬಾಧೆ, ಕೆಲಸಗಾರರಿಂದ ಕಿರಿಕಿರಿ, ಉದ್ಯೋಗದಲ್ಲಿ ಪ್ರಗತಿ, ಪ್ರೇಮಿಗಳಿಗೆ ಅನುಕೂಲ.

ಕುಂಭರಾಶಿ
ಮಿತ್ರರಿಂದ ಸಹಕಾರ, ಸಹೋರರಿಂದ ಸಂಕಷ್ಟ, ನಿಮ್ಮ ವಿರೋಧಿಗಳ ಕುಕೃತ್ಯ ನಿಮ್ಮ ಮೇಲೆ ಹೆಚ್ಚಿನ ಪರಿಣಾಮ ಬೀರದು. ಸಾಮಾಜಿಕವಾಗಿ ಕೀರ್ತಿ ಪ್ರತಿಷ್ಠೆ ಹೆಚ್ಚಲಿದೆ. ಭಾಗಿತ್ವದ ವ್ಯವಹಾರದಲ್ಲಿ ಲಾಭದಾಯಕ ಆದಾಯವು ಹೆಚ್ಚಲಿದೆ. ಆರೋಗ್ಯ ಜಾಗ್ರತೆ. ಸ್ಥಿರಾಸ್ತಿ-ವಾಹನ ಯೋಗ, ಶುಭ ಕಾರ್ಯಕ್ಕೆ ತೊಂದರೆ, ಗರ್ಭ ದೋಷ, ಮಕ್ಕಳಿಂದ ಬೇಸರ.

ಮೀನರಾಶಿ
ಅದೃಷ್ಟ ಕೈ ತಪ್ಪುವ ಸಂಭವ, ಉದ್ಯೋಗದಲ್ಲಿ ಹಿನ್ನಡೆ, ವೃತ್ತಿರಂಗದಲ್ಲಿ ಅವ್ಯವಸ್ಥೆಗಳ ಮೇಲೆ ಹತೊಟಿ ಸಾಧಿಸಲಿದ್ದೀರಿ. ಸ್ನೇಹಿತರ ಸಹಕಾರ ತೋರಿಬಂದರೂ ಸಲುಗೆಯ ದುರುಪಯೋಗವಾಗದಂತೆ ಜಾಗ್ರತೆ ಮಾಡಿರಿ. ಗೃಹದಲ್ಲಿ ಮಂಗಲಕಾರ್ಯದ ಸಂತಸವಿರುತ್ತದೆ. ಆರೋಗ್ಯದಲ್ಲಿ ವ್ಯತ್ಯಾಸ, ಸ್ವಂತ ವ್ಯಾಪಾರ-ವ್ಯವಹಾರದಲ್ಲಿ ಅರ್ಥಿಕ ನಷ್ಟ, ಸ್ಥಿರಾಸ್ತಿಯಲ್ಲಿ ಅನುಕೂಲ, ಸಂಗಾತಿಯಿಂದ ಧನಾಗಮನ, ಉದ್ಯೋಗದಲ್ಲಿ ಒತ್ತಡ, ಭಾವನಾತ್ಮಕವಾಗಿ ಕೆರಳುವಿರಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular