ದಿನಭವಿಷ್ಯ : ವೃಷಭರಾಶಿಯಲ್ಲಿ ಚಂದ್ರನ ಸಂಚಾರ, ಈ ರಾಶಿಗಿದೆ ಶಿವಯೋಗ

Daily Horoscope : ದಿನಭವಿಷ್ಯ ಇಂದು ಸೋಮವಾರ ನವೆಂಬರ್ 10 2025. ಚಂದ್ರನು ಇಂದು ಮಿಥುನರಾಶಿಯಲ್ಲಿ ಸಂಚಾರ ಮಾಡುತ್ತಾನೆ. ಮಧ್ಯಾಹ್ನದ ನಂತರ ಕರ್ಕಾಟಕ ರಾಶಿಗೆ ಪ್ರವೇಶಿಸುತ್ತಾನೆ. ಇಂದು ಶಿವಯೋಗ, ಸಾಧ್ಯಯೋಗಗಳು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಹೇಗಿದೆ ಇಂದಿನ ದಿನಭವಿಷ್ಯ ತಿಳಿಯೋಣಾ.
ಮೇಷ ರಾಶಿ (Aries)
ಗುರು ಹಾಗೂ ಶುಕ್ರನ ಶುಭ ಬಲದಿಂದಾಗಿ ಇಂದು ಮಾಡಿದ ಕೆಲಸಗಳು ಯಶಸ್ವಿಯಾಗುತ್ತವೆ. ವೃತ್ತಿ ಕ್ಷೇತ್ರದಲ್ಲಿ ಉತ್ತಮ ಲಾಭ, ಆರ್ಥಿಕ ನೆಮ್ಮದಿ ಇರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗುವ ಲಕ್ಷಣಗಳಿವೆ. ಯಶಸ್ಸಿಗೆ ಶಾರ್ಟ್‌ಕಟ್‌ಗಳನ್ನು ಅವಲಂಬಿಸುವುದನ್ನು ತಪ್ಪಿಸಿ.
ವೃಷಭ ರಾಶಿ (Taurus)
ಆರ್ಥಿಕ ಜೀವನದಲ್ಲಿ ಉತ್ತಮ ಸುಧಾರಣೆ ಕಂಡುಬರುತ್ತದೆ. ಹಿಂದೆ ಮಾಡಿದ ಸಾಲಗಳನ್ನು ತೀರಿಸುವ ಯೋಗವಿದೆ. ಅಂದುಕೊಂಡ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ಮನಸ್ಸಿನಲ್ಲಿ ನೆಮ್ಮದಿ ಇರುತ್ತದೆ. ಹಣಕಾಸಿನ ವ್ಯವಹಾರಗಳಲ್ಲಿ ಜಾಗರೂಕರಾಗಿರಿ.
ಮಿಥುನ ರಾಶಿ (Gemini) ಇದು ಮಿಶ್ರ ಫಲಗಳ ದಿನವಾಗಿದೆ. ಗುರು ಮತ್ತು ಶುಕ್ರನ ಸಂಚಾರದಿಂದ ಸಂಪತ್ತು ಮತ್ತು ಸಮೃದ್ಧಿ ಇರುತ್ತದೆ, ಆದರೆ ಆಪ್ತರಿಗೆ ಸಹಾಯ ಮಾಡುವುದರಿಂದ ಕೈಯಲ್ಲಿ ಹಣ ನಿಲ್ಲುವುದಿಲ್ಲ. ನಿಮ್ಮ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ಸಿಗಲಿದೆ. ಆಪ್ತರಿಗೆ ಸಹಾಯ ಮಾಡುವ ಮುನ್ನ ಯೋಚಿಸಿ. ಶಿವನನ್ನು ಪೂಜಿಸಿ.
ಕರ್ಕಾಟಕ ರಾಶಿ (Cancer)
ಯಶಸ್ಸಿನ ದಿನ. ನಿಮ್ಮ ಪ್ರಯತ್ನಗಳಿಗೆ ದುಪ್ಪಟ್ಟು ಲಾಭ ತರುವ ದಿನ. ಐಷಾರಾಮಿ ಜೀವನ ಮತ್ತು ಸಂಪತ್ತು ವೃದ್ಧಿಯಾಗಲಿದೆ. ದಾಂಪತ್ಯ ಜೀವನದ ಹಣಕಾಸಿನ ಮನಸ್ತಾಪಗಳು ದೂರವಾಗುತ್ತವೆ. ವಿದೇಶ ಪ್ರಯಾಣದ ಅವಕಾಶಗಳು ಸಿಗಬಹುದು. ಕೆಲಸದಲ್ಲಿ ಯಾವುದೇ ಬದಲಾವಣೆ ಮಾಡುವ ಮುನ್ನ ಎಚ್ಚರವಿರಲಿ.
ಸಿಂಹ ರಾಶಿ (Leo)
ಸಂತೋಷದ ದಿನ. ಕೆಲಸದ ಒತ್ತಡ ಕಡಿಮೆಯಾಗುತ್ತದೆ. ಆರ್ಥಿಕ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಸ್ನೇಹಿತರು ಮತ್ತು ಪೋಷಕರಿಂದ ಬೆಂಬಲ ದೊರೆಯುತ್ತದೆ. ಕಚೇರಿ ಕೆಲಸದಲ್ಲಿ ಆತುರದಿಂದ ತಪ್ಪುಗಳು ಆಗಬಹುದು. ಕಚೇರಿ ಕೆಲಸವನ್ನು ಎಚ್ಚರಿಕೆಯಿಂದ ಮತ್ತು ನಿಧಾನವಾಗಿ ಮಾಡಿ.
ಕನ್ಯಾ ರಾಶಿ (Virgo)
ಮಂಗಳಕರ ದಿನ. ಕೆಲಸದಲ್ಲಿ ಹೆಚ್ಚುವರಿ ಜವಾಬ್ದಾರಿ, ಬಡ್ತಿ ಅಥವಾ ಉನ್ನತ ಸ್ಥಾನಗಳು ದೊರೆಯುವ ಸಾಧ್ಯತೆ ಇದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ನಿಮ್ಮ ಕೆಲಸ ಮತ್ತು ಸಾಧನೆಗಾಗಿ ಹಿರಿಯರಿಂದ ಪ್ರಶಂಸೆ ಪಡೆಯುವಿರಿ.
ತುಲಾ ರಾಶಿ (Libra)
ಮಕ್ಕಳ ಸಂಗದಲ್ಲಿ ಶಾಂತಿ ಮತ್ತು ನೆಮ್ಮದಿ ಸಿಗುತ್ತದೆ. ನಿಮ್ಮ ಸುತ್ತಲಿನವರ ಸಕಾರಾತ್ಮಕ ದೃಷ್ಟಿಕೋನದಿಂದ ಸಂತೋಷ ಇರುತ್ತದೆ. ಹೊಸ ಹೂಡಿಕೆಗಳಿಗೆ ಇದು ಉತ್ತಮ ಸಮಯ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿ.
ವೃಶ್ಚಿಕ ರಾಶಿ (Scorpio) ಒತ್ತಡದ ದಿನದ ಹೊರತಾಗಿಯೂ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಅನಿರೀಕ್ಷಿತ ಧನಾಗಮನವಾಗುವ ಸಾಧ್ಯತೆ ಇದೆ. ಭೂಮಿ ಅಥವಾ ಆಸ್ತಿ ಸಂಬಂಧಿತ ಕೆಲಸಗಳು ಯಶಸ್ವಿಯಾಗುತ್ತವೆ. ಕೋಪವನ್ನು ನಿಯಂತ್ರಿಸಿ. ಸಕಾರಾತ್ಮಕವಾಗಿ ಯೋಚಿಸಿ.
ಧನು ರಾಶಿ (Sagittarius)
ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಆದರೆ ಹಣಕಾಸಿನ ವಿಷಯಗಳಲ್ಲಿ ಯಾರಿಗೂ ಮಾತು ಕೊಡಬೇಡಿ. ನಿಮ್ಮ ಸುತ್ತಲಿರುವವರ ಸಣ್ಣ-ಪುಟ್ಟ ವಿಷಯಗಳನ್ನು ನಿರ್ಲಕ್ಷಿಸಿ. ದೀರ್ಘಾವಧಿಯ ಹೂಡಿಕೆಗಳ ಬಗ್ಗೆ ಯೋಚಿಸಲು ಇದು ಸರಿಯಾದ ಸಮಯ.
ಮಕರ ರಾಶಿ (Capricorn)
ಸ್ನೇಹಿತರೊಂದಿಗೆ ಅಥವಾ ಪಾಲುದಾರರೊಂದಿಗೆ ಇರುವ ಅಪಾರ್ಥಗಳು ಅಹಿತಕರ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ಸಹೋದ್ಯೋಗಿಗಳ ಬೆಂಬಲ ಸಿಗುತ್ತದೆ. ನಿಮ್ಮ ಮಾತಿನ ಮೇಲೆ ನಿಯಂತ್ರಣ ಇರಲಿ.
ಕುಂಭ ರಾಶಿ (Aquarius)
ನಿಮ್ಮ ಆಹಾರದ ಮೇಲೆ ನಿಯಂತ್ರಣವಿರಲಿ ಮತ್ತು ಫಿಟ್ ಆಗಿ ಇರಲು ವ್ಯಾಯಾಮ ಮಾಡಿ. ಹಣಕಾಸಿನ ಪರಿಸ್ಥಿತಿ ಸಾಮಾನ್ಯವಾಗಿದ್ದರೂ, ಅನಗತ್ಯ ಖರ್ಚುಗಳನ್ನು ನಿಯಂತ್ರಿಸಬೇಕು. ಆರೋಗ್ಯ ಮತ್ತು ಫಿಟ್‌ನೆಸ್‌ಗೆ ಹೆಚ್ಚು ಗಮನ ಕೊಡಿ.
ಮೀನ ರಾಶಿ (Pisces) ಸ್ನೇಹಿತರು ಮತ್ತು ಹಿರಿಯರ ಆಲೋಚನೆಗಳು ನಿಮ್ಮ ಮೇಲೆ ಉತ್ತಮ ಪ್ರಭಾವ ಬೀರಬಹುದು. ಯಾವುದೇ ಹೊಸ ಕೆಲಸ ಅಥವಾ ಯೋಜನೆ ಪ್ರಾರಂಭಿಸಲು ಇದು ಶುಭ ಸಮಯ. ಇತರರ ಸಲಹೆಗಳನ್ನು ಸ್ವೀಕರಿಸಿ, ಆದರೆ ಅಂತಿಮ ನಿರ್ಧಾರ ನಿಮ್ಮದೇ ಆಗಿರಲಿ.
Daily Horoscope Moon transits in Taurus Shiva Yoga for this zodiac sign



