Horoscope : ದಿನಭವಿಷ್ಯ : ಹೊರಗಿನವರ ಸಲಹೆಯನ್ನು ಆಲಿಸಬೇಡಿ

ಮೇಷರಾಶಿ
ಜೀವನದ ಬಗ್ಗೆ ಉದಾರ ಮನೋಭಾವವನ್ನು ಬೆಳೆಸಿಕೊಳ್ಳಿ. ಪರಿಚಿತರ ಜೊತೆ ವೈಯಕ್ತಿಕ ವಿಷಯಗಳನ್ನು ಹಂಚಿ ಕೊಳ್ಳಬೇಡಿ, ಅನಿರೀಕ್ಷಿತ ಲಾಭಗಳ ಮೂಲಕ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ, ಸಂಗಾತಿಯ ಆರೋಗ್ಯ ಬಗ್ಗೆ ಅಸಡ್ಡೆ ಬೇಡ, ಕುಟುಂಬ ಸದಸ್ಯರಿಗಾಗಿ ಸಮಯವನ್ನು ನೀಡಲು ಯತ್ನಿಸಿ.

ವೃಷಭರಾಶಿ
ದೂರ ಪ್ರಯಾಣವನ್ನು ತಪ್ಪಿಸಲು ಪ್ರಯತ್ನಿಸಿ, ಖರ್ಚುಗಳ ಮೇಲೆ ಹಿಡಿತವಿರಲಿ, ಕುಟುಂಬ ಸದಸ್ಯರು ಜೀವನದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ನಿಮ್ಮ ಪಾಲಿಗಿಂದು ಸುಂದರವಾದ ದಿನ, ನಿಮ್ಮ ಉತ್ಸಾಹ ವ್ಯವಹಾರದಲ್ಲಿ ಅಧಿಕ ಲಾಭವನ್ನು ತಂದುಕೊಡಲಿದೆ, ಹೊರಗಿನವರ ಸಲಹೆಯನ್ನು ಯಾವುದೇ ಕಾರಣಕ್ಕೂ ಆಲಿಸಬೇಡಿ.

ಮಿಥುನರಾಶಿ
ಅತಿಯಾಗಿ ತಿನ್ನುವುದನ್ನು ತಪ್ಪಿಸಿ, ಹಣದ ಹೂಡಿಕೆಗಳು ಅಧಿಕ ಲಾಭವನ್ನು ತಂದುಕೊಡಲಿದೆ, ಬಾಕಿ ಇರುವ ಸಾಲ ಮರುಪಾವತಿಗೆ ಸಹಕಾರ ದೊರೆಯಲಿದೆ, ಅಪರಾಧ ಕೃತ್ಯಗಳು ನಡೆಯದಂತೆ ಎಚ್ಚರವಹಿಸಿ, ಸಂಗಾತಿಯ ಆರೋಗ್ಯ ಕ್ಷೀಣಿಸುತ್ತಿದ್ದು ಒತ್ತಡಕ್ಕೆ ಒಳಗಾಗುವ ಸಾಧ್ಯತೆಯಿದೆ, ದಿನಾಂತ್ಯಕ್ಕೆ ಶುಭ ವಾರ್ತೆಯೊಂದನ್ನು ಕೇಳುವಿರಿ.

ಕರ್ಕಾಟಕ ರಾಶಿ
ತಾಯಂದಿರ ಪಾಲಿಗೆ ಉತ್ತಮ ದಿನವಲ್ಲ, ವಾಕಿಂಗ್‌ ವೇಳೆಯಲ್ಲಿ ಎಚ್ಚರವಾಗಿರಿ, ಪ್ರಾಚೀನ ವಸ್ತುಗಳು ಹಾಗೂ ಆಭರಣಗಳ ಮೇಲೆ ಹೂಡಿಕೆ ಲಾಭವನ್ನು ತಂದುಕೊಡಲಿದೆ, ಆಕರ್ಷಕ ಸ್ವಭಾವ ಸ್ನೇಹಿತರ ಸ್ನೇಹ ಸಂಬಂಧವನ್ನು ವೃದ್ದಿಸುತ್ತದೆ, ಪ್ರೀತಿ ಪಾತ್ರರ ಜೊತೆಗೆ ಸಮಯವನ್ನು ಕಳೆಯುವಿರಿ, ರಾತ್ರಿಯ ವೇಳೆಯಲ್ಲಿ ಪ್ರಯಾಣವನ್ನು ತಪ್ಪಿಸಿ.

ಸಿಂಹರಾಶಿ
ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿ ಆರೋಗ್ಯ ಉತ್ತಮವಾಗಿರಲಿದೆ, ಜೀವನವನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸಬೇಡಿ, ಹಣಕಾಸಿನ ವಿಚಾರದಲ್ಲಿ ಚಿಂತೆ ಮಾಡಬೇಡಿ, ಮನೆಯವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವಿರಿ, ದೂರ ಪ್ರಯಾಣ ಲಾಭವನ್ನು ತರಲಿದೆ, ಹೊಂದಾಣಿಕೆಯಿಂದ ವ್ಯವಹಾರದಲ್ಲಿ ಲಾಭ.

ಇದನ್ನೂ ಓದಿ : ಸಾನ್ವರ್ ನಲ್ಲಿದ್ದಾನೆ ಉಲ್ಟಾ ಹನುಮಾನ್ : ಹನುಮನೇಕೆ ಇಲ್ಲಿ ತಲೆ ಕೆಳಗಾದ ಗೊತ್ತಾ?

ಕನ್ಯಾರಾಶಿ
ಒಡಹುಟ್ಟಿದವರ ಸಲಹೆಯನ್ನು ಆಲಿಸುವಿರಿ, ಹಲವು ರೀತಿಯಲ್ಲಿ ಹಣಕಾಸಿನ ಲಾಭವನ್ನು ಪಡೆಯುವಿರಿ, ಆಪ್ತ ಸ್ನೇಹಿತರ ಭೇಟಿ, ಕುಟುಂಬಸ್ಥರ ಜೊತೆಗೆ ಸಂತಸದಿಂದ ಕಾಲ ಕಳೆಯುವಿರಿ, ಹಳೆಯ ಸಮಸ್ಯೆಯ ಕುರಿತು ಸಂಘರ್ಷಕ್ಕೆ ಇಳಿಯಬೇಡಿ, ಹೊಸ ಚಿಂತನೆಯಿಂದ ಅಧಿಕ ಲಾಭ ಪಡೆಯುವಿರಿ, ದೂರದ ಊರಿನಿಂದ ಶುಭ ಸಮಾಚಾರ ಕೇಳುವಿರಿ.

ತುಲಾರಾಶಿ
ಯಾವುದೇ ವಿಚಾರದಲ್ಲಿ ತ್ವರಿತ ನಿರ್ಧಾರವನ್ನು ಕೈಗೊಳ್ಳಿ, ವ್ಯಾಪಾರದ ವಿಚಾರದಲ್ಲಿ ಅಧಿಕ ಲಾಭವನ್ನು ಪಡೆಯುವಿರಿ, ಸ್ನೇಹಿತರ ಜೊತೆಗೆ ಸಮಯವನ್ನು ಕಳೆಯುವಿರಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಆಧ್ಯಾತ್ಮದ ಕಡೆಗೆ ಒಲವು ಹೆಚ್ಚಲಿದೆ, ದೂರದ ಬಂಧುಗಳು ಮನೆಗೆ ಭೇಟಿ ನೀಡಲಿದ್ದಾರೆ. ಮನೆಯಲ್ಲಿ ಸುಖ ಭೋಜನ.

ವೃಶ್ಚಿಕರಾಶಿ
ಹೊರಾಂಗಣ ಕ್ರೀಡೆಗಳು ಆಕರ್ಷಿಸುತ್ತವೆ, ಧ್ಯಾನ ಮತ್ತು ಯೋಗವು ಲಾಭವನ್ನು ತರಲಿದೆ, ಹೂಡಿಕೆಯು ಲಾಭದಾಯಕವಾಗಿರುತ್ತದೆ. ಹೊಸ ಯೋಜನೆಯಲ್ಲಿ ಪೋಷಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ, ಬಹುಕಾಲದ ನಿರೀಕ್ಷೆಗಳು ಸಾಕಾರಗೊಳ್ಳಲಿದೆ, ಸಂಗಾತಿಯು ನಿಮ್ಮನ್ನು ಎಚ್ಚರಿಸಲಿದ್ದಾರೆ, ನಿರೀಕ್ಷೆಗಿಂತ ಹೆಚ್ಚಿನ ಲಾಭ ತರಲಿದೆ.

ಧನಸುರಾಶಿ
ಮಾನಸಿಕ ಶಾಂತಿಗಾಗಿ ನಿಮ್ಮ ಒತ್ತಡವನ್ನು ಬಗೆಹರಿಸಿ. ಮನೆಗೆ ಸಂಬಂಧಿಸಿದ ಹೂಡಿಕೆಯು ಲಾಭವನ್ನು ತರುತ್ತದೆ, ಸಮಸ್ಯೆಗಳ ಪರಿಹಾರಕ್ಕೆ ಚಿಂತನೆಯನ್ನು ನಡೆಸಿ, ಅವಿವಾಹಿತರಿಗೆ ಯೋಗ್ಯ ಸಂಬಂಧ ಕೂಡಿಬರಲಿದೆ, ಸ್ನೇಹಿತರೊಂದಿಗೆ ಮನರಂಜನೆಯ ಕಾರ್ಯಕ್ರಮದಲ್ಲಿ ಭಾಗಿಯಾಗುವಿರಿ, ಧನಾತ್ಮಕ ಪುಸ್ತಕಗಳ ಕಡೆಗೆ ಗಮನ ಇರಲಿ.

ಮಕರರಾಶಿ
ನಿಮ್ಮ ನಡವಳಿಕೆ ಇತರರನ್ನು ಆಕರ್ಷಿಸುತ್ತದೆ, ಪರಿಸ್ಥಿತಿಯನ್ನು ನಿಭಾಯಿಸಲು ಸ್ನೇಹಿತರು ಸಹಕಾರವನ್ನು ಮಾಡಲಿದ್ದಾರೆ. ಉಳಿತಾದ ಕಡೆಗೆ ಹೆಚ್ಚಿನ ಗಮನ ಹರಿಸಿ, ಸಾಮಾಜಿಕ ಚಟುವಟಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ, ವಿಶೇಷ ವ್ಯಕ್ತಿಯೋರ್ವರನ್ನು ಭೇಟಿ ಮಾಡುವ ಸಾಧ್ಯತೆ, ಅಚ್ಚರಿಯ ಉಡುಗೆಗಳು ನಿಮ್ಮ ಕೈ ಸೇರಲಿದೆ.

ಕುಂಭರಾಶಿ
ದಾನ ಕಾರ್ಯಗಳಿಂದಾಗಿ ಮಾನಸಿಕ ಶಾಂತಿ, ನೆಮ್ಮದಿ ದೊರೆಯಲಿದೆ, ಖರ್ಚುಗಳನ್ನು ನಿಂತ್ರಣದಲ್ಲಿಡಿ, ಪತ್ನಿಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ಆಕೆಯನ್ನು ಕೆರಳಿಸಲಿದೆ, ಪ್ರೀತಿ ಪಾತ್ರರ ಜೊತೆಗೆ ಸುಂದರ ಕ್ಷಣವನ್ನು ಕಳೆಯುವಿರಿ, ಸಮಸ್ಯೆಗೆ ತ್ವರಿತವಾಗಿ ಪರಿಹಾರವನ್ನು ಕಂಡುಕೊಳ್ಳುವಿರಿ. ಶುಭ ಸಮಾಚಾರ ಕೇಳುವಿರಿ.

ಮೀನರಾಶಿ
ದೈಹಿಕ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಸಾಧ್ಯತೆ, ಒಡಹುಟ್ಟಿದವರು ನಿಮ್ಮಿಂದ ಹಣದ ಸಹಕಾರ ಪಡೆಯಲಿದ್ದಾರೆ, ಆರ್ಥಿಕ ಸಂಕಷ್ಟಗಳು ನಿಮ್ಮನ್ನು ಇನ್ನಷ್ಟು ಹದಗೆಡಿಸಲಿದೆ, ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬ ಸದಸ್ಯರ ನಡುವೆ ವಿವಾದ ಉಂಟಾಗುವ ಸಾಧ್ಯತೆಯಿದೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಯಾಣ ಲಾಭವನ್ನ ತಂದುಕೊಡಲಿದೆ.

ಇದನ್ನೂ ಓದಿ : 800 ವರ್ಷಗಳಿಂದ ಈ ದೇವಾಲಯದಲ್ಲಿದೆ ಸಂತನೊಬ್ಬನ ದೇಹ : ವಿಸ್ಮಯ ಮಾಡ್ತಿದ್ದಾನೆ ಮಹಾವಿಷ್ಣು

ಇದನ್ನೂ ಓದಿ : ನಾಗದೋಷದಿಂದ ಮುಕ್ತಿ ನೀಡುತ್ತಾನೆ ಇಲ್ಲಿನ 16 ಅಡಿ ನಾಗರಾಜ

( Horoscope today astrological prediction for October 10)

Comments are closed.