ಮಕ್ಕಳಿಗೆ ಜ್ಯೂಸ್‌ನಲ್ಲಿ ವಿಷ ಬೆರೆಸಿ, ತಾನೂ ವಿಷ ಕುಡಿದ ತಂದೆ !

ಪುತ್ತೂರು : ಮಕ್ಕಳಿಗೆ ಜ್ಯೂಸ್‌ನಲ್ಲಿ ವಿಷ ಬೆರೆಸಿ ಕುಡಿಸಿ, ನಂತರ ತಾನೂ ವಿಷ ಕುಡಿದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಬಾಳೆಗುಂಡಿ ಎಂಬಲ್ಲಿ ನಡೆದಿದೆ. ಸದ್ಯ ವಿಷ ಕುಡಿದ ವ್ಯಕ್ತಿ ಹಾಗೂ ಮಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಬಾಳೆಗುಂಡಿಯ ನಿವಾಸಿಯಾಗಿರುವ ವಿಶ್ವನಾಥ್‌ ಎಂಬ ಎಂಬಾತನೇ ಮಕ್ಕಳಿಗೆ ವಿಷ ಉಣಿಸಿ, ನಂತರ ತಾನೂ ವಿಷ ಕುಡಿದ ವ್ಯಕ್ತಿ. ವಿಪರೀತ ಕುಡಿತದ ಚಟವನ್ನು ಹೊಂದಿದ್ದ. ನಿತ್ಯವೂ ಕುಡಿದು ಬಂದು ವಿಶ್ವನಾಥ್‌ ತನ್ನ ಪತ್ನಿ ಚಂದ್ರಾವತಿಯ ಜೊತೆಯಲ್ಲಿಜಗಳವಾಡುತ್ತಿದ್ದ. ಇದರಿಂದಾಗಿ ಬೇಸತ್ತಿದ್ದ ಪತ್ನಿ ಚಂದ್ರಾವತಿ ಕಳೆದ ಕೆಲವು ತಿಂಗಳಿನಿಂದಲೂ ಕಡಬದಲ್ಲಿರುವ ತನ್ನ ತವರು ಮನೆಯಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದರು.

ಕಡಬದಲ್ಲಿರುವ ಪತ್ನಿಯ ಮನೆಗೆ ಬಂದಿದ್ದ ವಿಶ್ವನಾಥ್‌ ಮಕ್ಕಳಿಗೆ ತಾನು ತಂದಿದ್ದ ಜ್ಯೂಸ್‌ ಕುಡಿಸಿದ್ದಾನೆ. ಓರ್ವ ಮಗನಿಗೆ ಡ್ರಿಂಗ್ಸ್‌ ಒಷ್ಟವಿಲ್ಲ ಎಂದ್ರೂ ಬಿಡದ ವಿಶ್ವನಾಥ್‌ ಎರಡೂ ಮಕ್ಕಳಿಗೆ ಜ್ಯೂಸ್‌ ಕುಡಿಸಿದ್ದಾನೆ. ನಂತರ ತಾನು ಮಕ್ಕಳಿಗೆ ಕುಡಿಸಿದ ಜ್ಯೂಸ್‌ ನಲ್ಲಿ ವಿಷ ಬೆರೆಸಿದ್ದೇನೆ, ನಾನು ಕೂಡ ವಿಷ ಕುಡಿದಿದ್ದೇನೆ ಎಂದು ಹೇಳಿದ್ದಾನೆ. ಕೂಡಲೇ ಮಕ್ಕಳು ಹಾಗೂ ವಿಶ್ವನಾಥ್‌ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗಿದೆ.

ಓರ್ವ ಮಗನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಶ್ವನಾಥ್‌ ಹಾಗೂ ಇನ್ನೋರ್ವ ಮಗನನ್ನು ನೆಲ್ಯಾಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನು ಕೊಡಿಸಲಾಗುತ್ತಿದೆ. ಒಟ್ಟಿನಲ್ಲಿ ತಂದೆಯ ಕುಡಿತದ ಚಟದಿಂದಾಗಿ ಮಕ್ಕಳಿಂದು ಸಾವು ಬದುಕಿನ ನಡುವೆ ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ : ಶೂಟೌಟ್‌ಗೆ ಮಗ ಸಾವು, ತಂದೆ ರಾಜೇಶ್‌ ಪ್ರಭು ಅರೆಸ್ಟ್‌

ಇದನ್ನೂ ಓದಿ : ಮಂಗಳೂರು : ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ

( Fathers who poisoned the children with the juice in Mangalore )

Comments are closed.