ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ: ಆತಂಕದಲ್ಲಿ ಪೋಷಕರು : ಡಿಸಿಎಂ ನಿವಾಸಕ್ಕೂ ತಟ್ಟಿದ ಬಿಸಿ

Bangalore Bomb Threat bangalore more than 20 schools recived Bomb threat Email : ಬೆಂಗಳೂರಿನ ಬಸವೇಶ್ವರ ನಗರ, ಸದಾಶಿವ ನಗರ ಸೇರಿದಂತೆ ಹಲವು ಪ್ರತಿಷ್ಠಿತ ಏರಿಯಾಗಳ ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ಇ ಮೇಲ್ ಕಳುಹಿಸಲಾಗಿದೆ. ಏಳು ಶಾಲೆಗಳಿಗೆ ಬೆದರಿಕೆ ಮೇಲ್ ಬಂದಿದೆ ಎಂದು ಹೇಳಲಾಗಿತ್ತಾದರೂ ಮೇಲ್ ಬಾಕ್ಸ್ ಒಫನ್ ಮಾಡುತ್ತಿದ್ದಂತೆ ಆತಂಕಿತ ಶಾಲೆಗಳ ಸಂಖ್ಯೆ ಹೆಚ್ಚಿದೆ.

Bangalore Bomb Threat : ಮೊನ್ನೆ ಐಟಿ ಕಂಪನಿಗೆ ಉದ್ಯೋಗಾಕಾಂಕ್ಷಿ ಅಭ್ಯರ್ಥಿಯೊಬ್ಬರು ಬಾಂಬ್ ಬೆದರಿಕೆ ಹಾಕಿದ ಘಟನೆ ಮಾಸುವ ಮುನ್ನವೇ ಬೆಂಗಳೂರು ನಗರದ 20 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಆತಂಕ‌ ಎದುರಾಗಿದೆ. ನಿನ್ನೆ ಕನಕ ಜಯಂತಿ ರಜೆ ಮುಗಿಸಿ ಬಾಗಿಲು ತೆರೆದ ಶಾಲೆಗಳಿಗೆ ಬಾಂಬ್ ಬೆದರಿಕೆ ಇ ಮೇಲ್ ಬಂದಿದ್ದು ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಬೆಂಗಳೂರಿನ ಬಸವೇಶ್ವರ ನಗರ, ಸದಾಶಿವ ನಗರ ಸೇರಿದಂತೆ ಹಲವು ಪ್ರತಿಷ್ಠಿತ ಏರಿಯಾಗಳ ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ಇ ಮೇಲ್ ಕಳುಹಿಸಲಾಗಿದೆ. ಏಳು ಶಾಲೆಗಳಿಗೆ ಬೆದರಿಕೆ ಮೇಲ್ ಬಂದಿದೆ ಎಂದು ಹೇಳಲಾಗಿತ್ತಾದರೂ ಮೇಲ್ ಬಾಕ್ಸ್ ಒಫನ್ ಮಾಡುತ್ತಿದ್ದಂತೆ ಆತಂಕಿತ ಶಾಲೆಗಳ ಸಂಖ್ಯೆ ಹೆಚ್ಚಿದೆ. ಹೀಗಾಗಿ ಪೋಷಕರು ಆತಂಕದಿಂದ ಶಾಲೆಗಳತ್ತ ಧಾವಿಸುತ್ತಿದ್ದು ನಗರದಾದ್ಯಂತ ಫ್ಯಾನಿಕ್ ಸ್ಥಿತಿ ಸೃಷ್ಟಿಯಾಗಿದೆ.

Bangalore Bomb Threat bangalore more than 20 schools recived Bomb threat Email Parents Are worried
Image Credit to Original Source

ಬಸವೇಶ್ವರ ನಗರ ನ್ಯಾಶನಲ್ ಸ್ಕೂಲ್, ಯಲಹಂಕ, ಸದಾಶಿವನಗರದ ವಿದ್ಯಾಶಿಲ್ಪ ಸೇರಿದಂತೆ ಪ್ರಮುಖ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಪೋಷಕರು ಶಾಲೆಗಳತ್ತ ಧಾವಿಸುತ್ತಿದ್ದಾರೆ. ಶಾಲೆಗಳಲ್ಲಿ ಶಿಕ್ಷಕರು ಮುಂಜಾಗ್ರತಾ ಕ್ರಮವಾಗಿ ಮಕ್ಕಳನ್ನು ಆಟದ ಮೈದಾನದಲ್ಲಿ ಕೂರಿಸಿದ್ದು, ಪೋಷಕರು ಶಾಲೆಗೆ ಬರುತ್ತಿದ್ದಂತೆ ಅವರೊಂದಿಗೆ ಕಳುಹಿಸುವ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ : ಫುಲ್ ಕೈ ಶರ್ಟ್ ಹಾಕುವಂತಿಲ್ಲ, ಹಿಜಾಬ್ ಹಾಕಬಹುದು : ಸರ್ಕಾರದ ಹೊಸ ರೂಲ್ಸ್ ಗೆ ಆಕ್ರೋಶ

ಸದಾಶಿವ ನಗರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿವಾಸದ ಎದುರಿಗೆ‌ ಇರುವ ಡೇ ಕೇರ್ ಗೂ ಬೆದರಿಕೆಯ ಇ ಮೇಲ್ ಬಂದಿದ್ದು, ಹೀಗಾಗಿ ಡೇ ಕೇರ್ ಮುಚ್ಚಲಾಗಿದೆ. ಡೇ ಕೇರ್ ಬಳಿ ಮಕ್ಕಳನ್ನು ಬಿಡಲು ಬಂದಿರೋ ಪೋಷಕರಿಗೆ ಸಿಬ್ಬಂದಿ ಬಾಂಬ್ ಬೆದರಿಕೆ ಕರೆ ಬಂದಿದೆ. ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಅವರು ಬಂದು ಪರಿಶೀಲನೆ ಮಾಡಬೇಕಿದೆ. ಹೀಗಾಗಿ ಡೇ ಕೇರ್ ಗೆ ರಜೆ ನೀಡಲಾಗಿದೆ ಎಂದು ಮಾಹಿತಿ ನೀಡ್ತಿದ್ದಾರೆ.

ನಗರದದ್ಯಾಂತ ಬಾಂಬ್ ಬೆದರಿಕೆ ಕರೆ ಸದ್ದು ಮಾಡ್ತಿರೋದರಿಂದ ನಗರ ಪೊಲೀಸರು ಅಲರ್ಟ್ ಆಗಿದ್ದು ಎಲ್ಲೆಡೆ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರೋ ನಗರ ಪೊಲೀಸ್ ಆಯುಕ್ತ ದಯಾನಂದ್ , ಮಾಹಿತಿ ನೀಡಿದ್ದು, ಎಲ್ಲೆಡೆ ಪೊಲೀಸರನ್ನು ಅಲರ್ಟ್ ಮಾಡಿದ್ದೇವೆ.‌ಬೆದರಿಕೆ ಇರೋ ಶಾಲೆಗಳಲ್ಲಿ ಪರಿಶೀಲನೆ ಮಾಡಲಾಗ್ತಿದೆ.

ಇದನ್ನೂ ಓದಿ : 2019 ರಿಂದ 23 ರ ಅವಧಿಯ ಅಕ್ರಮ: ಬಿಜೆಪಿಗೆ ಬಿಬಿಎಂಪಿ ಕಂಟಕ

ನಾಗರೀಕರು ಹಾಗೂ ಪೋಷಕರಿಗೆ ಮನವಿ ಮಾಡುತ್ತೇವೆ ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬೇಡಿ. ಅನುಮಾನಾಸ್ಪದ ಸಂಗತಿ ಕಂಡುಬಂದರೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಎಂದಿದ್ದಾರೆ. ಇನ್ನೂ ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿದ್ದು, ಈ ರೀತಿಯ ಘಟನೆಗಳು ಸಾಮಾನ್ಯ. ಯಾಕೆಂದರೇ ಕೆಲವರು ಆತಂಕ ಸೃಷ್ಟಿಸುವ ಹಾಗೂ ಭಯ ಸೃಷ್ಟಿಸುವ ಉದ್ದೇಶ ಹೊಂದಿರುತ್ತಾರೆ.

ಆದರೆ ಅಂತವರನ್ನು ಆದಷ್ಟು ಬೇಗ ಪೊಲೀಸರು ಹುಡುಕಿ ಬಂಧಿಸುತ್ತಾರೆ. ಪೋಷಕರು ಆತಂಕಜ್ಜೆ ಒಳಗಾಗಬೇಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೇ ಈ ರೀತಿ ಹಲವಾರು ಭಾರಿ ಹುಸಿ ಬಾಂಬ್ ಬೆದರಿಜೆ ಹಾಕಿ ಕೊನೆಗೊಮ್ಮೆ ನಿಜವಾಗಿ ಕೃತ್ಯ ಎಸಗುವ ಸಾಧ್ಯತೆ ಇರೋದರಿಂದ ಪೊಲೀಸ್ ಇಲಾಖೆ ಇದನ್ನು ಗಂಭೀರವಾವಿ ಪರಿಗಣಿಸಿದೆ ಎಂದು ಡಿಕೆಶಿ ಮಾಹಿತಿ ನೀಡಿದ್ದಾರೆ. ಡಿಕೆಶಿ ನಿವಾಸದ ಎದುರಿಗೆ ಇರೋ Neev ಡೇ ಕೇರ್ ಗೆ ಭೇಟಿ ನೀಡಿ ಇ‌ಮೇಲ್ ಪರಿಶೀಲಿಸಿ ಅಲ್ಲಿನ ಸಿಬ್ಬಂದಿಗೆ ಧೈರ್ಯ ತುಂಬಿದ್ದಾರೆ.

Bangalore Bomb Threat bangalore more than 20 schools recived Bomb threat Email Parents Are worried
Image Credit to Original Source

ಇದನ್ನೂ ಓದಿ : ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ : ಮತ್ತೊಂದು ಗುಡ್‌ನ್ಯೂಸ್‌ ಕೊಟ್ಟ ಸಿಎಂ ಸಿದ್ದರಾಮಯ್ಯ

ಆರಂಭದಲ್ಲಿ ನಗರದ ಶಾಲೆಗಳಲ್ಲಿ ಮಾತ್ರ ಬೆದರಿಕೆ ಇ ಮೇಲ್ ಬಂದಿರೋ ಮಾಹಿತಿ ಹೊರಬಿದ್ದಿತ್ತು. ಆದರೆ ಹನ್ನೊಂದು ಗಂಟೆ ವೇಳೆಗೆ ಆನೇಕಲ್ ನ ನಾಲ್ಕು ಇಂಟರ ನ್ಯಾಶನಲ್ ಸ್ಕೂಲ್ ಗಳಿಗೂ ಬೆದರಿಕೆ ಮೇಲ್ ಬಂದಿದೆ ಎನ್ನಲಾಗಿದ್ದು ಬಾಂಬ್ ನಿಷ್ಕ್ರಿಯ ದಳ ಹಾಗೂ ಡಾಗ್ ಸ್ಕ್ಯಾಡ್ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ.

ಕಳೆದ ಕೆಲ‌ದಿನಗಳ ಹಿಂದಷ್ಟೇ ಡಿಸಿಎಂ ಡಿ.ಕೆ.ಶಿವಕುಮಾರ್ ಒಡೆತನದ ಅಂಬರವ್ಯಾಲಿ ಇಂಟರನ್ಯಾಶನಲ್ ಸ್ಕೂಲ್ ಗೂ ಸಹ ಬೆದರಿಕೆ ಕರೆ ಮಾಡಲಾಗಿತ್ತು. ಈ ವೇಳೆ ಶಾಲೆಗೆ ರಜೆ ಘೋಷಿಸಿ ಮಕ್ಕಳನ್ನು ಮನೆಗೆ‌ಕಳುಹಿಸಿ ಪರಿಶೀಲನೆ ನಡೆಸಲಾಗಿತ್ತು. ಇದೀಗ‌ನಗರದಾದ್ಯಂತ ಬಾಂಬ್ ಬೆದರಿಕೆ ಸಂಚಲನ ಮೂಡಿಸಿದೆ.

ಆದರೆ ಮೇಲ್ನೋಟಕ್ಕೆ ಇದು ಕೇವಲ ಆತಂಕ ಸೃಷ್ಟಿಸುವ ಪ್ರಯತ್ನ ಎನ್ನಲಾಗ್ತಿದ್ದು ಯಾವುದೇ ಶಾಲೆ ಅಥವಾ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಅತಂಕಕಾರಿ ವಸ್ತುಗಳು ಕಂಡುಬಂದಿಲ್ಲ. ಹೀಗಾಗಿ ಪೋಷಕರು ಆತಂಕಗೊಳ್ಳುವ ಅಗತ್ಯವಿಲ್ಲ

Bangalore Bomb Threat : bangalore more than 20 schools recived Bomb threat Email Parents Are worried DCM Dk Shivakumar residence has also been hit by heat

Comments are closed.