ದಿನಭವಿಷ್ಯ 02 ಫೆಬ್ರವರಿ 2024 : ದ್ವಾದಶರಾಶಿಗಳ ಮೇಲೆ ಸ್ವಾತಿ ನಕ್ಷತ್ರದ ಪ್ರಭಾವ, ಈ ರಾಶಿಯವರ ಸಮಸ್ಯೆಗಳೆಲ್ಲಾ ಪರಿಹಾರ

Horoscope Today 02 February 2024 : ದಿನಭವಿಷ್ಯ 02 ಫೆಬ್ರವರಿ 2024  ಜ್ಯೋತಿಷ್ಯಶಾಸ್ತ್ರದ ಪ್ರಕಾರ, ದ್ವಾದಶ ರಾಶಿಗಳ ಮೇಲೆ ಇಂದು ಸ್ವಾತಿ ನಕ್ಷತ್ರದ ಪ್ರಭಾವ ಇರಲಿದೆ. ಚಂದ್ರ ತುಲಾರಾಶಿ ಯಲ್ಲಿ ಸಾಗುವುದರಿಂದ ಹಲವು ರಾಶಿಗಳಿಗೆ ಎದುರಾಗಿದ್ದ ಅಡೆತಡೆಗಳು ನಿವಾರಣೆಯಾಗಲಿದೆ.

Horoscope Today 02 February 2024 : ದಿನಭವಿಷ್ಯ 02 ಫೆಬ್ರವರಿ 2024  ಜ್ಯೋತಿಷ್ಯಶಾಸ್ತ್ರದ ಪ್ರಕಾರ, ದ್ವಾದಶ ರಾಶಿಗಳ ಮೇಲೆ ಇಂದು ಸ್ವಾತಿ ನಕ್ಷತ್ರದ ಪ್ರಭಾವ ಇರಲಿದೆ. ಚಂದ್ರ ತುಲಾರಾಶಿ ಯಲ್ಲಿ ಸಾಗುವುದರಿಂದ ಹಲವು ರಾಶಿಗಳಿಗೆ ಎದುರಾಗಿದ್ದ ಅಡೆತಡೆಗಳು ನಿವಾರಣೆಯಾಗಲಿದೆ. ಮೇಷರಾಶಿ ಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಧನಾತ್ಮಕ ಫಲಿತಾಂಶವನ್ನು ಪಡೆಯುತ್ತೀರಿ. ವೈಯಕ್ತಿಕ ಹಾಗೂ ಕೌಟುಂಬಿಕ ಸಂಬಂಧಗಳಿಗೆ ಸಿಹಿ ಸಮಾಚಾರ ಕೇಳುವಿರಿ. ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲಕರವಾದ ದಿನ. ಸಾಮಾಜಿಕವಾಗಿ ಗೌರವ ಹೆಚ್ಚಲಿದೆ.

ವೃಷಭರಾಶಿ ದಿನಭವಿಷ್ಯ
ಪ್ರೇಮ ಜೀವನವು ಸುಖಮಯವಾಗಿ ಇರಲಿದೆ. ಸಂಗಾತಿಯೊಂದಿಗೆ ಪ್ರೀತಿಯ ಜೀವನ ಅನುಭವಿಸುವಿರಿ. ವೈಯಕ್ತಿಕ ಸಂಬಂಧಗಳು ವೃದ್ದಿಸಲಿದೆ. ವಿದ್ಯಾರ್ಥಿಗಳು ಇಂದು ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ.

ಮಿಥುನರಾಶಿ ದಿನಭವಿಷ್ಯ
ಸಂಗಾತಿಯೊಂದಿಗೆ ನೀವು ಸಂತೋಷವಾಗಿ ಇರುತ್ತೀರಿ. ವೈಯಕ್ತಿಕ ಜೀವನವು ಸುಖಮಯವಾಗಿ ಇರಲಿದೆ. ಕಾರ್ಯಕ್ಷೇತ್ರದಲ್ಲಿ ಸುಧಾರಣೆ ಕಂಡು ಬರಲಿದೆ. ವ್ಯವಹಾರ ಕ್ಷೇತ್ರದಲ್ಲಿ ಹೆಚ್ಚಿನ ಲಾಭ ದೊರೆಯಲಿದೆ.

ಕರ್ಕಾಟಕರಾಶಿ ದಿನಭವಿಷ್ಯ
ಈ ಸಮಯದಲ್ಲಿ ನೀವು ತುಂಬಾ ಜಾಗರೂಕರಾಗಿ ಇರಬೇಕು. ಆತ್ಮವಿಶ್ವಾಸದ ಕೊರತೆಯನ್ನು ಎದುರಿಸಬೇಕಾಗುತ್ತದೆ. ಪ್ರೀತಿಯ ಜೀವನದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಿ. ಸೋಮಾರಿತನವನ್ನು ಬಿಟ್ಟು ಎಲ್ಲವನ್ನೂ ಧೈರ್ಯದಿಂದ ಎದುರಿಸಿ.

ಸಿಂಹರಾಶಿ ದಿನಭವಿಷ್ಯ
ಆದಾಯದಲ್ಲಿ ಗಮನಾರ್ಹ ಏರಿಕೆಯಾಗಲಿದೆ. ಪ್ರವಾಸಕ್ಕೆ ತೆರಳುವ ಸಾಧ್ಯತೆಯಿದೆ. ಸ್ನೇಹಿತರು ಹಾಗೂ ಸಂಬಂಧಿಕರು ನಿಮ್ಮ ಸಹಾಯಕ್ಕೆ ನಿಲ್ಲಲಿದ್ದಾರೆ. ಕೆಲಸ ಕಾರ್ಯಗಳು ನೀವು ಎಣಿಸಿದಂತೆ ನಡೆಯಲಿದೆ.

ಕನ್ಯಾರಾಶಿ ದಿನಭವಿಷ್ಯ
ಹೊಸ ವ್ಯವಹಾರ ಆರಂಭಿಸುವವರು ಯಶಸ್ಸನ್ನು ಪಡೆಯುತ್ತಾರೆ. ಸಾಮಾಜಿಕವಾಗಿ ಗೌರವ ಹೆಚ್ಚಲಿದೆ. ಕುಟುಂಬ ಜೀವನದಲ್ಲಿ ಸಂತೋಷವನ್ನು ಕಾಣುತ್ತೀರಿ. ಕುಟುಂಬ ಸದಸ್ಯರ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯುತ್ತೀರಿ.

ತುಲಾರಾಶಿ ದಿನಭವಿಷ್ಯ
ದೂರ ಪ್ರಯಾಣದಿಂದ ಅಧಿಕ ಲಾಭವಿದೆ. ಆದಾಯ ಹೆಚ್ಚಳವಾಗುವ ಸಾಧ್ಯತೆಯಿದೆ. ಅನೇಕ ವಿಚಾರಗಳಲ್ಲಿ ನೀವು ಇಂದು ತ್ವರಿತ ನಿರ್ಧಾರವನ್ನು ಕೈಗೊಳ್ಳುವಿರಿ. ಕೌಟುಂಬಿಕ ಜೀವನದಲ್ಲಿ ನೀವಿಂದು ಸಂತೋಷವಾಗಿ ಇರುತ್ತೀರಿ. ವೈಯಕ್ತಿಕ ಸಂಬಂಧಿಗಳು ಸುಧಾರಿಸಲಿದ್ದು, ಮನೆಯಲ್ಲಿ ನೆಮ್ಮದಿಯ ವಾತಾವರಣ ಇರಲಿದೆ.

Horoscope Today 02 February 2024 Zodiac Sign
Image Credit To Original Source

ವೃಶ್ಚಿಕರಾಶಿ ದಿನಭವಿಷ್ಯ
ಸಾಮಾಜಿಕವಾಗಿ ಗೌರವ ಹೆಚ್ಚಲಿದೆ. ನಿರುದ್ಯೋಗಿಗಳು ಉದ್ಯೋಗ ಸ್ಥಳದಲ್ಲಿ ಶುಭ ಸುದ್ದಿಯನ್ನು ಕೇಳುತ್ತಾರೆ. ಆರ್ಥಿಕ ಸ್ಥಿತಿಯು ಉತ್ತಮಗೊಳ್ಳಲಿದೆ. ವ್ಯವಹಾರ ಕ್ಷೇತ್ರದಲ್ಲಿ ಹೊಸ ಬದಲಾವಣೆಯನ್ನು ಮಾಡುವಿರಿ.

ಇದನ್ನೂ ಓದಿ : IMPS ಹಣ ವರ್ಗಾವಣೆ : ಇಂದಿನಿಂದ (ಫೆಬ್ರವರಿ 1) ಜಾರಿಯಾಗಲಿದೆ ಹೊಸ ರೂಲ್ಸ್‌

ಧನಸ್ಸುರಾಶಿ ದಿನಭವಿಷ್ಯ
ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಯಶಸ್ಸು ದೊರೆಯಲಿದೆ. ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಉತ್ತಮ ಲಾಭವಿದೆ. ಹಿರಿಯ ಸಲಹೆಯಂತೆ ಸೂಕ್ತ ನಿರ್ಧಾರವನ್ನು ಕೈಗೊಳ್ಳಿ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಕಾಣುವಿರಿ.

ಮಕರರಾಶಿ ದಿನಭವಿಷ್ಯ
ವೃತ್ತಿ ಜೀವನದಲ್ಲಿ ಹೊಸ ಬದಲಾವಣೆಯನ್ನು ಕಾಣುವಿರಿ. ಸಂಬಂಧಗಳ ಬಗ್ಗೆ ನಕಾರಾತ್ಮಕ ಯೋಚನೆಯನ್ನು ಮಾಡಬೇಡಿ. ವೃತ್ತಿಗೆ ಸಂಬಂಧಿಸಿದಂತ ಪ್ರಯಾಣವು ಯಶಸ್ವಿ ಆಗಲಿದೆ. ವ್ಯಪಾರಿಗಳ ಪಾಲಿಗೆ ಇಂದು ಉತ್ತಮವಾದ ದಿನ.

ಇದನ್ನೂ ಓದಿ : ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯು 300 ಯೂನಿಟ್ ವಿದ್ಯುತ್‌ ಉಚಿತ : ಕೇಂದ್ರ ಸರಕಾರದಿಂದ ಹೊಸ ಯೋಜನೆ

ಕುಂಭರಾಶಿ ದಿನಭವಿಷ್ಯ
ದೂರ ಪ್ರಯಾಣವನ್ನು ಕೈಗೊಳ್ಳುವ ಸಾಧ್ಯತೆಯಿದೆ. ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿ ಕೊಳ್ಳುವಿರಿ. ವೈಯಕ್ತಿಕ ಸಂಬಂಧಗಳಲ್ಲಿ ವಿಶೇಷ ಕಾಳಜಿಯನ್ನು ಹೊಂದುವಿರಿ. ಧೈನಂದಿನ ಕೆಲಸ ಕಾರ್ಯಗಳಲ್ಲಿ ಯಶಸ್ವಿ ಆಗುವಿರಿ.

ಮೀನರಾಶಿ ದಿನಭವಿಷ್ಯ
ಇಂದು ಹೆಚ್ಚು ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳನ್ನು ಮಾಡುವಿರಿ. ಸ್ನೇಹಿತರು ಹಾಗೂ ಸಂಬಂಧಿಕರು ನಿಮಗೆ ಇಂದು ಸಹಕಾರವನ್ನು ಮಾಡಲಿದ್ದಾರೆ. ಹೊಂದಾಣಿಕೆಯಿಂದ ಕಾರ್ಯಾನುಕೂಲವಿದೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.

ಇದನ್ನೂ ಓದಿ : ಒಂದು ಸರಳ ಪ್ರೇಮಕತೆ ಸಿನಿಮಾಕ್ಕೆ ಸಾಥ್‌ ಕೊಟ್ಟ ರಮ್ಯ, ಸೂಫಿ ಶೈಲಿಯ ಹಾಡು ರಿಲೀಸ್‌

Horoscope Today 02 February 2024 Zodiac Sign

Comments are closed.