ದಿನಭವಿಷ್ಯ 02 ನವೆಂಬರ್ 2023 : ದ್ವಾದಶ ರಾಶಿಗಳ ಮೇಲೆ ಆದ್ರಾ ನಕ್ಷತ್ರದ ಪ್ರಭಾವ, ಯಾವ ರಾಶಿಗೆ ಶುಭ ?

Horoscope Today :  ದಿನಭವಿಷ್ಯ 02 ನವೆಂಬರ್ 2023 ಗುರುವಾರ, ದ್ವಾದಶ ರಾಶಿಗಳ ಮೇಲೆ ಅದ್ರಾ ನಕ್ಷತ್ರದ ಪ್ರಭಾವ ಇರುತ್ತದೆ. ಕೆಲವು ರಾಶಿಗಳಿಗೆ ಆರ್ಥಿಕ ಪ್ರಗತಿ, ವ್ಯವಹಾರದಲ್ಲಿ ಅಭವೃದ್ದಿ ಕಂಡು ಬರಲಿದೆ.

Horoscope Today :  ದಿನಭವಿಷ್ಯ 02 ನವೆಂಬರ್ 2023 ಗುರುವಾರ, ದ್ವಾದಶ ರಾಶಿಗಳ ಮೇಲೆ ಅದ್ರಾ ನಕ್ಷತ್ರದ ಪ್ರಭಾವ ಇರುತ್ತದೆ. ಕೆಲವು ರಾಶಿಗಳಿಗೆ ಆರ್ಥಿಕ ಪ್ರಗತಿ, ವ್ಯವಹಾರದಲ್ಲಿ ಅಭವೃದ್ದಿ ಕಂಡು ಬರಲಿದೆ. ಮೇಷರಾಶಿಯಿಂದ ಹಿಡಿದು ಮೀನರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷ ರಾಶಿ ದಿನಭವಿಷ್ಯ
ಮೇಷರಾಶಿಯವರು ಕುಟುಂಬ ಸದಸ್ಯರ ಬೆಂಬಲ ಪಡೆಯುತ್ತಾರೆ. ಬಹುತೇಕ ಸಮಸ್ಯೆಗಳಿಗೆ ಇಂದು ಪರಿಹಾರ ದೊರೆಯಲಿದೆ. ನಕೃಾತ್ಮಕ ಆಲೋಚನೆಗಳನ್ನು ದೂರ ಮಾಡಿದೆ. ಕೆಲಸದಲ್ಲಿ ಹೆಚ್ಚು ಆಸಕ್ತಿ ಹೊಂದುತ್ತೀರಿ. ಮಕ್ಕಳಿಂದ ಸಮಸ್ಯೆ ಉಂಟಾಗುವ ಸಾಧ್ಯತೆಯದೆ. ಅವಿವಾಹಿತರಿಗೆ ವಿವಾಹ ಯೋಗವಿದೆ.

ವೃಷಭ ರಾಶಿ ದಿನಭವಿಷ್ಯ
ಪ್ರಯಾಣದ ವೇಳೆಯಲ್ಲಿ ಎಚ್ಚರವಾಗಿರಿ. ಕೌಟುಂಬಿಕ ಜೀವನದಲ್ಲಿ ಯಾವುದೇ ಸಮಸ್ಯೆಗಳಿದ್ದರೆ ತಂದೆಯ ಸಹಾಯದಿಂದ ಪರಿಹಾರ ಕಂಡುಕೊಳ್ಳಿ. ಸಂಗಾತಿಯೊಂದಿಗೆ ಪ್ರಮುಖ ವಸ್ತುಗಳ ಖರೀದಿ, ವ್ಯಾಪಾರಿಗಳು ಇಂದು ಉತ್ತಮ ಲಾಭವನ್ನು ಗಳಿಸುವ ಸಾಧ್ಯತೆಯಿದೆ.

ಮಿಥುನ ರಾಶಿ ದಿನಭವಿಷ್ಯ
ಪಾಲುದಾರಿಕೆ ವ್ಯವಹಾರದಿಂದ ಉತ್ತಮ ಲಾಭ. ಆರ್ಥಿಕ ಪರಿಸ್ಥಿತಿಯು ಬಲಗೊಳ್ಳಲಿದೆ. ಪ್ರಮುಖ ಕಾರ್ಯಗಳನ್ನು ನೀವು ಪೂರ್ಣಗೊಳಿಸುವಿರಿ. ಯಾರ ಬಳಿಯೂ ಸಾಲವನ್ನು ತೆಗೆದುಕೊಂಡರೆ ಅದನ್ನು ಮರುಪಾವತಿ ಮಾಡುವಲ್ಲಿ ಯಶಸ್ವಿ ಆಗುತ್ತೀರಿ. ಇದರಿಂದ ಮನಸಿಗೆ ನೆಮ್ಮದಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.

ಇದನ್ನೂ ಓದಿ: IPL 2024 : ನಿವೃತ್ತಿ ಘೋಷಿಸಿದ RCB ಸ್ಟಾರ್ ಆಟಗಾರ

ಕರ್ಕಾಟಕ ರಾಶಿ ದಿನಭವಿಷ್ಯ
ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಸ್ನೇಹಿತರಿಂದ ಬೆಂಬಲ ಪಡೆಯುತ್ತೀರಿ. ತಾಯಿಯ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ಸ್ನೇಹಿತರ ಸಹಾಯ ದೊರೆಯಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿದೆ. ಸಂಗಾತಿ ಸಲಹೆಯೊಂದಿಗೆ ಹೂಡಿಕೆ ಮಾಡಿದ್ರೆ ಅಧಿಕ ಲಾಭ. ಕುಟುಂಬ ಸದಸ್ಯರಿಂದ ಶುಭ ಸುದ್ದಿ ಕೇಳುವಿರಿ.

horoscope today 02 november 2023 these zodiac signs will get lord shiva blessings
Image Credit to Original Source

ಸಿಂಹ ರಾಶಿ ದಿನಭವಿಷ್ಯ
ವ್ಯವಹಾರ ಕ್ಷೇತ್ರದಲ್ಲಿ ಇಂದು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತೀರಿ. ಮಾಡುವ ಎಲ್ಲಾ ಪ್ರಯತ್ನಗಳಲ್ಲಿ ನೀವು ಯಶಸ್ವಿ ಆಗುತ್ತೀರಿ. ಕುಟುಂಬ ಸದಸ್ಯರ ಅಗತ್ಯತೆಗಳನ್ನು ಪೂರೈಸುತ್ತೀರಿ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಎಚ್ಚರಿಕೆಯನ್ನು ವಹಿಸಿ. ಗಂಭೀರ ಸಮಸ್ಯೆಗೆ ಸಹೋದರರಿಂದ ಪರಿಹಾರ ಕಂಡುಕೊಳ್ಳುವಿರಿ.

ಕನ್ಯಾ ರಾಶಿ ದಿನಭವಿಷ್ಯ
ಸಂಗಾತಿಯ ಬೆಂಬಲದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸಿ. ಸಂಬಂಧಿಕರ ಜೊತೆಗಿನ ವ್ಯವಹಾರ ಇಂದು ಕೊನೆಗೊಳ್ಳಲಿದೆ. ಯಾವುದೇ ಕೆಲಸವನ್ನು ನೀವಿಂದು ಬಾಕಿ ಇಡಬೇಡಿ. ಇದರಿಂದ ಮುಂದೆ ಸಮಸ್ಯೆ ಉಂಟಾಗಲಿದೆ. ಆಸ್ತಿ ಖರೀದಿ ಮತ್ತು ಮಾರಾಟಕ್ಕಾಗಿ ಯಾವುದೇ ಒಪ್ಪಂದ ಮಾಡಿಕೊಳ್ಳಬೇಡಿ.

ಇದನ್ನೂ ಓದಿ : ಎಟಿಎಂಗಳಿಂದ ಹಣ ಡ್ರಾ ಮಾಡಲು ಹೊಸ ರೂಲ್ಸ್‌ : ಕ್ರೆಡಿಟ್‌ ಕಾರ್ಡ್‌ನಿಂದ ಹಣ ಪಡೆದ್ರೆ ಕಡಿಮೆ ಆಗುತ್ತಾ ಸಿಬಿಲ್‌ ಸ್ಕೋರ್‌ ?

ತುಲಾ ರಾಶಿ ದಿನಭವಿಷ್ಯ
ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ. ಪ್ರತಿಯೊಂದು ಅವಕಾಶಗಳನ್ನು ನೀವು ಬಳಸಿಕೊಳ್ಳುತ್ತೀರಿ. ಸಂಬಂಧಿಕರಲ್ಲಿ ಕೆಲವರು ಹಣ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಹೊಸದನ್ನು ಪ್ರಾರಂಭಿಸಲು ಇಂದು ಉತ್ತಮ ಸಮಯ. ಯಾವುದೇ ಸಮಸ್ಯೆಯನ್ನು ಇಂದು ನೀವು ಧೈರ್ಯದಿಂದ ಎದುರಿಸುವಿರಿ.

ವೃಶ್ಚಿಕ ರಾಶಿ ದಿನಭವಿಷ್ಯ
ಆಸ್ತಿಗೆ ಸಂಬಂಧಿಸಿದ ವಿವಾದಗಳು ಇಂದು ಪರಿಹಾರವನ್ನು ಕಾಣಲಿದೆ ಯಾವುದೇ ನಿರ್ಧಾರವು ನಿಮ್ಮ ಪರವಾಗಿದ್ರೆ, ಅದರಿಂದ ನೀವು ಸಂತೋಷವಾಗಿ ಇರುತ್ತೀರಿ. ವ್ಯವಹಾರದ ನಿಮಿತ್ತ ದೂರ ಪ್ರಯಾಣ ಸಾಧ್ಯತೆಯಿದೆ. ಸಂಗಾತಿಯೊಂದಿಗಿನ ಮನಸ್ಥಾಪ ಕೊನೆಗೊಳ್ಳಲಿದೆ. ಮಾಡುವ ಕೆಲಸದಲ್ಲಿ ಯಾವುದೇ ಕಾರಣಕ್ಕೂ ಯಾರನ್ನೂ ಕುರುಡಾಗಿ ನಂಬಬೇಡಿ.

ಧನಸ್ಸು ರಾಶಿ ದಿನಭವಿಷ್ಯ
ಸಾಲಗಾರರು ಇಂದು ನಿಮಗೆ ಕಿರಿಕಿರಿ ಉಂಟು ಮಾಡುವ ಸಾಧ್ಯತೆಯಿದೆ. ಯಾರಿಂದಲೂ ಪಡೆದ ಸಾಲ ಮರುಪಾವತಿಗೆ ಒತ್ತಡ ಹೆಚ್ಚಲಿದೆ. ವ್ಯಪಾರಿಗಳು ಇಂದು ಹಣದ ಕೊರತೆಯನ್ನು ಎದುರಿಸುತ್ತೀರಿ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ವಿ ಆಗಲು ಕಠಿಣ ಪರಿಶ್ರಮ ಮಾಡಬೇಕು. ಮಕ್ಕಳೊಂದಿಗೆ ಸುಂದರ ಕ್ಷಣವನ್ನು ಕಳೆಯುವಿರಿ.

ಇದನ್ನೂ ಓದಿ : ವಾರಕ್ಕೆ 5 ದಿನ ಕೆಲಸ, ವೇತನದಲ್ಲಿ ಶೇ.15ರಷ್ಟು ಹೆಚ್ಚಳ : ನೌಕರರಿಗೆ ಇಲ್ಲಿದೆ ಭರ್ಜರಿ ಗುಡ್‌ನ್ಯೂಸ್‌

ಮಕರ ರಾಶಿ ದಿನಭವಿಷ್ಯ
ಕುಟುಂಬದ ವಿಚಾರದಲ್ಲಿ ಉತ್ತಮ ಸುದ್ದಿಯನ್ನು ಕೇಳುವಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುತ್ತೀರಿ. ಸಾಮಾಜಿಕವಾಗಿ ನಿಮ್ಮ ಬಗೆಗಿನ ಗೌರವ ಹೆಚ್ಚಳವಾಗಲಿದೆ. ಆರ್ಥಿಕ ಪರಿಸ್ಥಿತಿಯ ಬಗ್ಗೆ ಚಿಂತೆ ಮಾಡುವಿರಿ. ನಿಮ್ಮ ಮನೆಯ ಖರ್ಚುಗಳನ್ನು ಲಾಭದಲ್ಲಿ ಭರಿಸುವಿರಿ.

ಕುಂಭ ರಾಶಿ ದಿನಭವಿಷ್ಯ
ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ವಿ ಆಗುತ್ತೀರಿ. ಎದುರಾಳಿಗಳ ಮೇಲೆ ಜಯ ಸಾಧಿಸುವಿರಿ. ಮನೆಯಿಂದ ಹೊರಡುವಾಗ ಪೋಷಕರ ಆಶೀರ್ವಾದ ಅಗತ್ಯ. ಕೆಲಸ ಕಾರ್ಯಗಳಲ್ಲಿ ಯಶಸ್ವಿ ಆಗುತ್ತೀರಿ. ಉದ್ಯೋಗಿಗಳಿಗೆ ಮೇಲಾಧಿಕಾರಿಗಳ ಜೊತೆಗೆ ಯಾವುದೇ ಕಾರಣಕ್ಕೂ ವಾದವನ್ನು ಮಾಡಬೇಕು. ಇಲ್ಲದಿದ್ದರೆ, ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ.

ಮೀನ ರಾಶಿ ದಿನಭವಿಷ್ಯ
ಮಕ್ಕಳ ವಿಚಾರದಲ್ಲಿಂದು ಶುಭ ಸುದ್ದಿಯೊಂದನ್ನು ಕೇಳುವಿರಿ. ಕೆಲಸವು ಜವಾಬ್ದಾರಿಯನ್ನು ಪೂರೈಸುವಲ್ಲಿ ನೀವು ಚಿಂತಿತರಾಗುತ್ತೀರಿ. ಸಂಜೆಯ ವೇಳೆಗೆ ವ್ಯವಹಾರದಲ್ಲಿ ಲಾಭ ಪಡೆಯುತ್ತೀರಿ. ಆದರೆ ಶತ್ರುಗಳ ವಿಚಾರದಲ್ಲಿ ನೀವು ಬಹಳ ಎಚ್ಚರಿಕೆಯಿಂದ ಇರಬೇಕು. ಸಹೋದ್ಯೋಗಿಗಳ ಜೊತೆಗೆ ನೀವು ಉತ್ತಮ ಒಡನಾಟ ಹೊಂದುವುದು ಅಗತ್ಯ.

horoscope today 02 november 2023 these zodiac signs will get lord shiva blessings

Comments are closed.