ಭಾನುವಾರ, ಏಪ್ರಿಲ್ 27, 2025
Homehoroscopeದಿನಭವಿಷ್ಯ 05 ಡಿಸೆಂಬರ್‌ 2023 : ವಿಷ್ಕುಂಭ ಯೋಗದಿಂದ ಯಾವ ರಾಶಿಯವರಿಗೆ ಶುಭ

ದಿನಭವಿಷ್ಯ 05 ಡಿಸೆಂಬರ್‌ 2023 : ವಿಷ್ಕುಂಭ ಯೋಗದಿಂದ ಯಾವ ರಾಶಿಯವರಿಗೆ ಶುಭ

- Advertisement -

Horoscope Today  : ದಿನಭವಿಷ್ಯ 05 ಡಿಸೆಂಬರ್‌ 2023 ಮಂಗಳವಾರ. ಇಂದು ದ್ವಾದಶ ರಾಶಿಗಳ ಮೇಲೆ ಪೂರ್ವ ಪಾಲ್ಗುಣಿ ನಕ್ಷತ್ರದ ಪ್ರಭಾವ ಇರುತ್ತದೆ. ಜೊತೆಗೆ ವಿಷ್ಕುಂಭ ಯೋಗದಿಂದ ಹಲವು ರಾಶಿಯವರಿಗೆ ಶುಭವನ್ನು ತರಲಿದೆ. ಮೇಷ ರಾಶಿಯಿಂದ ಮೀನರಾಶಿಯ ವರೆಗೆ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಅನಿರೀಕ್ಷಿತ ಶುಭ ಸುದ್ದಿ ನಿಮ್ಮ ಕುಟುಂಬಕ್ಕೆ ಸಂತಸವನ್ನು ತರಲಿದೆ. ಕೆಲಸದ ಸ್ಥಳದಲ್ಲಿ ನೀವು ಸ್ವಲ್ಪ ಎಚ್ಚರವಾಗಿರಿ. ಖಿನ್ನತೆ ನಿಮ್ಮ ಪ್ರಗತಿಗೆ ಅಡ್ಡಿ ಪರಿಸುತ್ತದೆ. ಮನೆಯ ಹಿರಿಯ ಸದಸ್ಯರು ಹಣ ಸಂಪಾದನೆ ಮಾಡುವ ಟ್ರಿಕ್‌ ಹೇಳಿಕೊಡಲಿದ್ದಾರೆ.

ವೃಷಭರಾಶಿ ದಿನಭವಿಷ್ಯ
ಒತ್ತಡ ಜೀವನದಿಂದ ಮುಕ್ತಿ ದೊರೆಯಲಿದೆ. ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವುದು ಉತ್ತಮ. ಧಾರ್ಮಿಕ ಕಾರ್ಯಗಳ ಕಡೆಗೆ ಹೆಚ್ಚಿನ ಆಸಕ್ತಿ ವಾಲಲಿದೆ. ನಿಮ್ಮ ಮನಸ್ಸು ಇಂದು ಶಾಂತವಾಗಿ ಇರಲಿದೆ. ಸಂಗಾತಿಯಿಂದ ಸಂತೋಷದ ಕ್ಷಣಗಳನ್ನು ಕಳೆಯುವಿರಿ.

ಮಿಥುನರಾಶಿ ದಿನಭವಿಷ್ಯ
ನಿಮ್ಮ ಉಳಿತಾಯದ ಹಣವನ್ನು ಇಂದು ವ್ಯಯಿಸುವ ಸ್ಥಿತಿ ಎದುರಾಗಲಿದೆ. ಕುಟುಂಬದ ಒಳಿತಿಗಾಗಿ ಯೋಜನೆಯನ್ನು ರೂಪಿಸುವಿರಿ. ಆರೋಗ್ಯದ ವಿಚಾರದಲ್ಲಿ ಎಚ್ಚರವಾಗಿರಿ. ಹೊಂದಾಣಿಕೆಯಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ.

ಕರ್ಕಾಟಕರಾಶಿ ದಿನಭವಿಷ್ಯ
ಕುಟುಂಬಸ್ಥರು ಹಾಗೂ ಸ್ನೇಹಿತರ ಜೊತೆಗೆ ಉತ್ತಮ ಸಮಯವನ್ನು ಕಳೆಯುವಿರಿ. ಹೂಡಿಕೆಯು ಲಾಭದಾಯಕವಾಗಿ ಇರುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಪಾಲುದಾರಿಕೆ ವ್ಯವಹಾರದಿಂದ ದೂರವಿರಿ. ಎಲ್ಲರನ್ನೂ ನೀವು ಇಂದು ಆಕರ್ಷಿಸುವಿರಿ.

ಸಿಂಹರಾಶಿ ದಿನಭವಿಷ್ಯ
ನಿಮ್ಮ ಹೆಸರನ್ನು ಕೆಡಿಸಲು ಯತ್ನಿಸುತ್ತಾರೆ ಹೀಗಾಗಿ ಎಚ್ಚರವಾಗಿರಿ. ಇಂದು ಖರ್ಚುಗಳು ಅಧಿಕವಾಗುವ ಸಾಧ್ಯತೆಯಿದೆ. ಉದ್ಯಮಿಗಳು ಇಂದು ಎಚ್ಚರಿಕೆಯಿಂದ ಹೂಡಿಕೆಯನ್ನು ಮಾಡಿ. ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಯಾವುದೇ ಕಾರಣಕ್ಕೂ ಸಹನೆಯನ್ನು ಕಳೆದುಕೊಳ್ಳಬೇಡಿ.

ಇದನ್ನೂ ಓದಿ : ಆಧಾರ್‌ ಕಾರ್ಡ್‌ ದುರ್ಬಳಕೆ ಆಗ್ತಾ ಇದ್ಯಾ ? ಪತ್ತೆ ಹಚ್ಚುವುದು ಬಹಳ ಸುಲಭ, ಯಾವುದಕ್ಕೂ ಒಮ್ಮೆ ಚೆಕ್‌ ಮಾಡಿ

ಕನ್ಯಾರಾಶಿ ದಿನಭವಿಷ್ಯ
ಆತ್ಮವಿಶ್ವಾಸ, ಬುದ್ದಿವಂತಿಕೆಯನ್ನು ಬಳಸಿಕೊಂಡು ವ್ಯವಹಾರದಲ್ಲಿ ಮುನ್ನೆಡೆಯಿರಿ. ಮೇಲಾಧಿಕಾರಿಗಳು ನಿಮ್ಮ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಸಂಜೆಯ ವೇಳೆಗೆ ಸುಮಧುರ ಕ್ಷಣಗಳನ್ನು ಕಾಣುವಿರಿ. ದೂರ ಪ್ರಯಾಣ ನಿಮಗೆ ಲಾಭವನ್ನು ತಂದುಕೊಡಲಿದೆ. ವರ್ಗಾವಣೆಯ ವಿಚಾರದಲ್ಲಿ ಶುಭ ಸುದ್ದಿಯೊಂದನ್ನು ಕೇಳುವಿರಿ.

Horoscope Today 05 December 2024 Zodiac Sign 
Image Credit to Original Source

ತುಲಾರಾಶಿ ದಿನಭವಿಷ್ಯ
ಆರೋಗ್ಯದ ವಿಚಾರದಲ್ಲಿ ನೀವಿಂದು ಎಚ್ಚರವಾಗಿರಿ. ವ್ಯವಹಾರಕ್ಕೆ ಸಂಬಂಧಿಸಿದ ದೂರ ಪ್ರಯಾಣವು ಲಾಭದಾಯಕವಾಗಿ ಪರಿಣಮಿಸಲಿದೆ. ಸಂಗಾತಿಯ ಕಡೆಯಿಂದ ಇಂದು ಉತ್ತಮ ಸ್ಪಂದನೆ ದೊರೆಯಲಿದೆ. ಯಾವುದೇ ಯೋಜನೆಯನ್ನು ಆರಂಭಿಸುವ ಮೊದಲು ಸಾಕಷ್ಟು ಬಾರಿ ಯೋಚಿಸುವುದು ಒಳಿತು.

ಇದನ್ನೂ ಓದಿ : HDFC ಬ್ಯಾಂಕ್ ಟಾಟಾ ನ್ಯೂ ಕ್ರೆಡಿಟ್ ಕಾರ್ಡ್‌ ಬಿಡುಗಡೆ : ಯಾರೆಲ್ಲಾ ಪಡೆಯಬಹುದು ಈ ಕಾರ್ಡ್‌ ? ಇಲ್ಲಿದೆ ಮಾಹಿತಿ

ವೃಶ್ಚಿಕರಾಶಿ ದಿನಭವಿಷ್ಯ
ಆರೋಗ್ಯದ ವಿಚಾರದಲ್ಲಿ ಶುಭ ಸುದ್ದಿಯನ್ನು ಕೇಳುವಿರಿ. ಬಾಕಿ ಇರುವ ಕೆಲಸ ಕಾರ್ಯಗಳು ಇಂದು ಪೂರ್ಣಗೊಳ್ಳಲಿದೆ. ವೈವಾಹಿಕ ಜೀವನವು ಉತ್ತಮವಾಗಿ ಇರಲಿದೆ. ಹೊಸ ಹೂಡಿಕೆಗಳು ಇಂದು ಹೆಚ್ಚು ಲಾಭವನ್ನು ತಂದುಕೊಡಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ಧನಸ್ಸುರಾಶಿ ದಿನಭವಿಷ್ಯ
ಸಂಗಾತಿಯ ನಡುವೆ ಗೊಂದಲಗಳು ಏರ್ಪಡುವ ಸಾಧ್ಯತೆಯಿದೆ. ಪ್ರೀತಿ ಪಾತ್ರರ ಜೊತೆಗೆ ಗೊಂದಲಕ್ಕೆ ಕಾರಣವಾಗುವ ಸಮಸ್ಯೆಗಳನ್ನು ತಪ್ಪಿಸಿ. ಕೆಲಸ ಕಾರ್ಯಗಳನ್ನು ಎಲ್ಲರಿಂದಲೂ ಪ್ರಶಂಸೆ ಕೇಳುವಿರಿ. ಹಳೆಯ ವಿಚಾರಕ್ಕೆ ಸಂಬಂಧಿಸಿದಂತೆ ಕಿರಿಕಿರಿ ಅನುಭವಿಸುವ ಸಾಧ್ಯತೆಯಿದೆ.

ಇದನ್ನೂ ಓದಿ : ಐಪಿಎಲ್ 2024 : 10 ಓವರ್‌ 98 ರನ್‌, 18.50 ಕೋಟಿ ರೂ.ಗೆ ಖರೀದಿಸಿದ್ದ ಪಂಜಾಬ್‌ ಕಿಂಗ್ಸ್‌ ಬೌಲರ್‌ ದುಬಾರಿ ಬೌಲಿಂಗ್‌

ಮಕರರಾಶಿ ದಿನಭವಿಷ್ಯ
ಹಣಕಾಸಿನ ವಿಚಾರದಲ್ಲಿ ಚೇತರಿಕೆ ಕಂಡು ಬರಲಿದೆ. ಉದ್ಯಮಿಗಳಿಗೆ ಆತ್ಮವಿಶ್ವಾಸ ವೃದ್ದಿಸಲಿದೆ. ಹೊಸ ಸಂಬಂಧಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ವಿದೇಶದಲ್ಲಿ ಕೆಲಸ ದೊರೆಯುವ ಸಾಧ್ಯತೆಯಿದೆ. ನಿಮ್ಮ ಪಾಲಿಗೆ ಇಂದು ಅದೃಷ್ಟದ ದಿನವಾಗಿರಲಿದೆ. ಸ್ನೇಹಿತರಿಂದ ನೀವು ಇಂದು ಸಾಲ ಕೇಳಬಹುದು.

ಕುಂಭರಾಶಿ ದಿನಭವಿಷ್ಯ
ಇಂದು ಸಾಕಷ್ಟು ಕಾರ್ಯನಿರತರಾಗಿ ಇರುತ್ತೀರಿ. ಸಂಗಾತಿಯು ನಿಮ್ಮ ಪಾಲಿಗೆ ಭೂಮಿ ಮೇಲಿನ ಸ್ವರ್ಗದಂತೆ ಕಾಣುತ್ತಾರೆ. ಬಾಕಿ ಉಳಿದಿರುವ ಕೆಲಸ ಕಾರ್ಯಗಳು ಇಂದು ಪೂರ್ಣಗೊಳ್ಳಲಿದೆ. ನೀವು ಮಾಡುವ ಸಣ್ಣ ಎಡವಟ್ಟಿನಿಂದಾಗಿ ಭಾರೀ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆಯಿದೆ. ವ್ಯವಹಾರದಲ್ಲಿ ಯೋಚಿಸಿ ಹೆಜ್ಜೆಯನ್ನಿಡುವುದು ಉತ್ತಮ.

ಮೀನರಾಶಿ ದಿನಭವಿಷ್ಯ
ಹಳೆಯ ಸ್ನೇಹಿತರ ಭೇಟಿಯಿಂದ ಹಣಕಾಸಿನ ನೆರವು. ಸಂಗಾತಿಯು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ. ಆರ್ಥಿಕ ಪರಿಸ್ಥಿತಿ ವೃದ್ದಿಸಲಿದೆ. ಆರೋಗ್ಯದ ವಿಚಾರದಲ್ಲಿ ನೀವು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ. ಸಹೋದ್ಯೋಗಿಗಳ ಸಹಕಾರದಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಂಡು ಬರಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

Horoscope Today 05 December 2024 Zodiac Sign

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular