ದಿನಭವಿಷ್ಯ 17 ನವೆಂಬರ್‌ 2023 : ಯಾವ ರಾಶಿಗಿದೆ ಮೂಲಾ ನಕ್ಷತ್ರದ ಪ್ರಭಾವ

Horoscope Today : ದಿನಭವಿಷ್ಯ 17 ನವೆಂಬರ್‌ ೨೦೨೩ ಶುಕ್ರವಾರ. ದ್ವಾದಶರಾಶಿಗಳ ಮೇಲೆ ಇಂದು ಮೂಲಾ ನಕ್ಷತ್ರದ ಪ್ರಭಾವ ಇರುತ್ತದೆ. ಮೇಷರಾಶಿಯಿಂದ ಮೀನ ರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

Horoscope Today : ದಿನಭವಿಷ್ಯ 17 ನವೆಂಬರ್‌ 2023  ಶುಕ್ರವಾರ. ದ್ವಾದಶರಾಶಿಗಳ ಮೇಲೆ ಇಂದು ಮೂಲಾ ನಕ್ಷತ್ರದ ಪ್ರಭಾವ ಇರುತ್ತದೆ. ಕೆಲವು ರಾಶಿಯವರಿಗೆ ಇಂದು ಹೆಚ್ಚು ಅನುಕೂಲಕರ.  ಮೇಷರಾಶಿಯಿಂದ ಮೀನ ರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಆರೋಗ್ಯವು ವೃದ್ದಿಸಲಿದೆ. ವ್ಯವಹಾರ ಕ್ಷೇತ್ರದಲ್ಲಿ ಅನುಕೂಲಕರ ಫಲಿತಾಂಶವನ್ನು ಪಡೆಯುವಿರಿ. ಕೆಲಸದ ಸ್ಥಳದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ಪಡೆಯುವಿರಿ. ಗ್ರಹಗಳ ಅನುಕೂಲದಿಂದ ನೀವು ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ.

ವೃಷಭರಾಶಿ ದಿನಭವಿಷ್ಯ
ಕುಟುಂಬ ಸದಸ್ಯರು ನಿಮ್ಮ ಬೇಡಿಕೆಗೆ ಸ್ಪಂದಿಸುತ್ತಾರೆ. ಹಳೆಯ ವೈಮನಸ್ಸು ದೂರವಾಗಿ, ಸಂತೋಷದ ಕ್ಷಣ ನಿಮ್ಮದಾಗಲಿದೆ. ಆರ್ಥಿಕ ಅಭಿವೃದ್ದಿಯು ನಿಮಗೆ ಅನುಕೂಲವನ್ನು ತಂದುಕೊಡಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ.

ಮಿಥುನರಾಶಿ ದಿನಭವಿಷ್ಯ
ಕ್ರೀಡಾ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವಿರಿ. ವೈವಾಹಿಕ ಜೀವನವು ಅದ್ಬುತವಾಗಿ ಇರಲಿದೆ. ಜನರು ನಿಮ್ಮ ಕೆಲಸವನ್ನು ಗುರುತಿಸುತ್ತಾರೆ. ಸುತ್ತಮುತ್ತಲಿನ ಜನರ ಜೊತೆಗಿನ ಒಡನಾಟ ಸಂತೋಷ ಹಾಗೂ ಖುಷಿಯನ್ನು ತರುತ್ತದೆ.

ಕರ್ಕಾಟಕರಾಶಿ ದಿನಭವಿಷ್ಯ
ಸ್ನೇಹಿತರ ಜೊತೆಗೆ ಆಹ್ಲಾದಕರ ಸಂಜೆಯನ್ನು ಕಳೆಯುವಿರಿ. ಉದ್ಯೋಗದ ನಿಮಿತ್ತ ದೂರ ಪ್ರಯಾಣ ಅನುಕೂಲಕರವಾಗಲಿದೆ. ಪೋಷಕರ ಅನುಮತಿ ಪಡೆದು ವ್ಯವಹಾರದಲ್ಲಿ ಹೂಡಿಕೆ ಮಾಡುವುದು ಉತ್ತಮ. ಸಂಗಾತಿಯಿಂದ ನಿಮಗೆ ಅನುಕೂಲಕರ.

ಇದನ್ನೂ ಓದಿ : ವಿಶ್ವಕಪ್ 2023 ತಂಡ ಪ್ರಕಟ : ವಿರಾಟ್ ಕೊಹ್ಲಿ ನಾಯಕ, ರೋಹಿತ್‌ ಶರ್ಮಾಗಿಲ್ಲ ಸ್ಥಾನ

ಸಿಂಹರಾಶಿ ದಿನಭವಿಷ್ಯ
ಪ್ರೀತಿಯ ಜೀವನವು ನಿಮ್ಮನ್ನು ಅರಳಿಸುತ್ತದೆ. ದೂರದ ಬಂಧುಗಳಿಂದ ಅನಿರೀಕ್ಷಿತ ಶುಭ ಸುದ್ದಿಯನ್ನು ಕೇಳುವಿರಿ. ಒಳ್ಳೆಯ ಉಡುಗೊರೆಗಳನ್ನು ನೀವಿಂದು ಖರೀದಿಸುವ ಸಾಧ್ಯತೆಯಿದೆ. ವೈವಾಹಿಕ ಜೀವನು ಉತ್ತಮವಾಗಿ ಇರಲಿದೆ. ಹೂಡಿಕೆಯಿಂದ ಲಾಭ ದೊರೆಯುವ ಸಾಧ್ಯತೆಯಿದೆ.

Horoscope Today 17 Novemeber 2023 Zordic Sign 
image Credit to Original Source

ಕನ್ಯಾರಾಶಿ ದಿನಭವಿಷ್ಯ
ಬಿಡುವಿಲ್ಲದ ಕಾರ್ಯಕ್ರಮದ ನಡುವಲ್ಲೂ ಆರೋಗ್ಯವೂ ಚೆನ್ನಾಗಿ ಇರುತ್ತದೆ. ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ವಿದ್ಯಾಭ್ಯಾಸದ ಯೋಗವಿದೆ. ಆರ್ಥಿಕ ಬಿಕ್ಕಟ್ಟು ನಿಮ್ಮನ್ನು ಕಂಗೆಡಿಸಲಿದೆ. ಮನೆಯ ಪರಿಸ್ಥಿತಿಯಿಂದ ನೀವು ಅಸಮಾಧಾನಗೊಳ್ಳುವ ಸಾಧ್ಯತೆಯಿದೆ.

ತುಲಾರಾಶಿ ದಿನಭವಿಷ್ಯ
ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಂಗಾತಿಯೊಂದಿಗೆ ಭಾವನಾತ್ಮಕವಾಗಿ ಮಾತನಾಡುವಿರಿ. ತಾಳ್ಮೆ ನಿಮಗೆ ವ್ಯವಹಾರಿಕವಾಗಿ ಲಾಭವನ್ನು ತಂದುಕೊಡಲಿದೆ. ಪ್ರೀತಿಯ ಜೀವನವು ಖುಷಿಯನ್ನು ಕೊಡಲಿದೆ.

ಇದನ್ನೂ ಓದಿ : ವಿಶ್ವಕಪ್‌ ಸೆಮಿಫೈನಲ್‌ : ಆಸ್ಟ್ರೇಲಿಯಾ ವಿರುದ್ದ ಸೋಲು ಕಂಡ ದಕ್ಷಿಣ ಆಫ್ರಿಕಾ, 8 ನೇ ಬಾರಿ ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಟ್ಟ ಆಸ್ಟ್ರೇಲಿಯಾ

ವೃಶ್ಚಿಕರಾಶಿ ದಿನಭವಿಷ್ಯ
ಕಣ್ಣಿನ ಆರೋಗ್ಯದ ವಿಚಾರದಲ್ಲಿ ಎಚ್ಚರವಾಗಿರಿ. ಆರ್ಥಿಕ ವ್ಯವಹಾರವನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಸಂಗಾತಿಯು ನಿಮ್ಮನ್ನು ಕಡೆಗಣಿಸುವ ಸಾಧ್ಯತೆಯಿದೆ. ಹಳೆಯ ಸ್ನೇಹಿತರ ಭೇಟಿಯಿಂದ ಮನಸಿಗೆ ಖುಷಿಯಾಗಲಿದೆ.

ಧನಸ್ಸುರಾಶಿ ದಿನಭವಿಷ್ಯ
ವಿವಾಹಿತರಿಗೆ ಇಂದು ಹಣಕಾಸಿನ ವಿಚಾರದಲ್ಲಿ ಅನುಕೂಲಕರ. ಪೀತಿಯ ಬಲೆಯಲ್ಲಿ ನೀವು ಬೀಳುವ ಸಾಧ್ಯತೆಯಿದೆ. ಕೆಲವೊಂದು ವಿಚಾರದಲ್ಲಿ ನೀವು ತೀರಾ ಎಚ್ಚರವಾಗಿ ಇರಬೇಕು. ಸಂಗಾತಿಯ ಆರೋಗ್ಯ ಬಗ್ಗೆ ಎಚ್ಚರಿಕೆಯನ್ನು ವಹಿಸಿ.

ಮಕರರಾಶಿ ದಿನಭವಿಷ್ಯ
ಮನೆಯ ಹಿರಿಯ ಸದಸ್ಯರು ಇಂದು ಆರ್ಥಿಕವಾಗಿ ನಿಮ್ಮೆ ಸಹಾಯಕ್ಕೆ ನಿಲ್ಲಲಿದ್ದಾರೆ. ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯ ಇಂದು ಕೊನೆಯಾಗಲಿದೆ. ಯಾವುದೇ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆ ಹರಿಸಿಕೊಳ್ಳುವುದು ಉತ್ತಮ. ಆರೋಗ್ಯದ ವಿಚಾರದಲ್ಲಿ ನೀವು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ.

ಇದನ್ನೂ ಓದಿ : ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಅಮಾನತ್ತುಗೊಳಿಸಿದ ಐಸಿಸಿ : ಅನಿಶ್ಚಿತತೆಯಲ್ಲಿ T20 ವಿಶ್ವಕಪ್ ಭವಿಷ್ಯ

ಕುಂಭರಾಶಿ ದಿನಭವಿಷ್ಯ

ಆರ್ಥಿಕ ಪರಿಸ್ಥಿತಿ ಸುಧಾರಣೆಯನ್ನು ಕಾಣಲಿದೆ. ಸಹೋದರ ವಿಚಾರದಲ್ಲಿ ನಿಮಗೆ ಗೌರವ ಪ್ರಾಫ್ತಿಯಾಗಿದೆ. ಪ್ರೀತಿ ಪಾತ್ರರ ಭಾವನೆಗಳನ್ನು ನೀವು ಅರ್ಥ ಮಾಡಿಕೊಳ್ಳಿ. ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ, ಧಾರ್ಮಿಕ ಕಾರ್ಯಗಳ ಮೇಲೆ ಆಸಕ್ತಿ ಮೂಡಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ಮೀನರಾಶಿ ದಿನಭವಿಷ್ಯ
ಹಳೆಯ ಹೂಡಿಕೆಗಳು ನಿಮಗೆ ಇಂದು ಲಾಭವನ್ನು ತಂದುಕೊಡಲಿದೆ. ಹಣಕಾಸಿಗೆ ಸಂಬಂಧಿಸಿದ ಯಾವುದೇ ವಿಚಾರದಲ್ಲಿ ನೀವು ಎಚ್ಚರವಾಗಿ ಇರಬೇಕು. ವೈವಾಹಿಕ ಜೀವನವು ಇಂದು ಅತ್ಯುತ್ತಮವಾಗಿ ಇರಲಿದೆ. ನಿಜವಾದ ಪ್ರೀತಿಯನ್ನು ನೀವಿಂದು ಅನುಭವಿಸುತ್ತೀರಿ.

Horoscope Today 17 Novemeber 2023 Zordic Sign 

Comments are closed.