ದಿನಭವಿಷ್ಯ 24 ಜನವರಿ 2024 : ಈ 2 ರಾಶಿಯವರಿಗೆ ಇದೆ ಇಂದು ಗಣೇಶನ ವಿಶೇಷ ಅನುಗ್ರಹ

Horoscope Today 24 January 2024 : ದಿನಭವಿಷ್ಯ 24 ಜನವರಿ 2024 ಬುಧವಾರ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ದ್ವಾದಶ ರಾಶಿಗಳ ಮೇಲೆ ಇಂದು ಪುನರ್ವಸು ನಕ್ಷತ್ರದ ಪ್ರಭಾವ ಇರಲಿದೆ. ಜೊತೆಗೆ ಚಂದ್ರನು ಕರ್ಕಾಟಕ ರಾಶಿಗೆ ಪ್ರವೇಶ ಮಾಡಲಿದ್ದಾನೆ.

Horoscope Today 24 January 2024 : ದಿನಭವಿಷ್ಯ 24 ಜನವರಿ 2024 ಬುಧವಾರ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ದ್ವಾದಶ ರಾಶಿಗಳ ಮೇಲೆ ಇಂದು ಪುನರ್ವಸು ನಕ್ಷತ್ರದ ಪ್ರಭಾವ ಇರಲಿದೆ. ಜೊತೆಗೆ ಚಂದ್ರನು ಕರ್ಕಾಟಕ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಮಿಥುನರಾಶಿ, ಸಿಂಹರಾಶಿ ಹಾಗೂ ಧನಸ್ಸುರಾಶಿ ಯವರಿಗೆ ಗಣೇಶನ ಅನುಗ್ರಹ ದೊರೆಯಲಿದೆ. ಹಾಗಾದ್ರೆ 12 ದ್ವಾದಶರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಉದ್ಯೋಗಿಗಳ ಇಂದು ಉದ್ಯೋಗ ಕ್ಷೇತ್ರದಲ್ಲಿ ಎಚ್ಚರಿಕೆಯಿಂದ ಇರಬೇಕು. ಸಂಗಾತಿಯು ಇಂದು ಕೆಲವು ಸಮಸ್ಯೆಯಿಂದ ಬಳಲುತ್ತಾರೆ. ಅವಿವಾಹಿತರಿಗೆ ಇಂದು ಯೋಗ್ಯ ಸಂಬಂಧಗಳು ಕೂಡಿಬರಲಿದೆ. ಮನೆಯಲ್ಲಿ ಆಹ್ಲಾದಕರ ವಾತಾವರಣ ಇರಲಿದೆ. ವ್ಯವಹಾರಿಕವಾಗಿ ಅಭಿವೃದ್ದಿ ಗೋಚರಕ್ಕೆ ಬರಲಿದೆ.

ವೃಷಭರಾಶಿ ದಿನಭವಿಷ್ಯ
ಆರ್ಥಿಕವಾಗಿ ಹಠಾತ್‌ ಲಾಭ ದೊರೆಯಲಿದೆ. ನಿಮ್ಮ ಆಲೋಚನೆ ಇಂದು ಧನಾತ್ಮಕ ಬದಲಾವಣೆಯನ್ನು ತಂದುಕೊಡಲಿದೆ. ಶ್ರಮವಹಿಸಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ. ಸ್ನೇಹಿತರು ಹಾಗೂ ಸಂಬಂಧಿಕರು ನಿಮಗೆ ಬೆಂಬಲ ನೀಡಲಿದ್ದಾರೆ. ನಿಮ್ಮ ಆದಾಯದಲ್ಲಿ ಅಭಿವೃದ್ದಿ ಕಂಡು ಬರಲಿದೆ.

ಮಿಥುನರಾಶಿ ದಿನಭವಿಷ್ಯ
ಆರೋಗ್ಯದ ಮೇಲೆ ಒತ್ತಡ ಪ್ರಭಾವ ಬೀರಲಿದೆ. ಪ್ರೇಮ ಸಂಬಂಧದಲ್ಲಿ ಯಶಸ್ಸು ಕಾಣುವಿರಿ. ವ್ಯಾಪಾರಿಗಳಿಗೆ ದಿಢೀರ್‌ ಆರ್ಥಿಕ ಲಾಭ. ಬರಬೇಕಾಗಿರುವ ಬಾಕಿ ಹಣ ನಿಮ್ಮ ಕೈ ಸೇರಲಿದೆ. ಮಧುರ ಮಾತುಗಳಿಂದ ನೀವು ಇತರರನ್ನು ಗೆಲ್ಲುವಿರಿ.

ಕರ್ಕಾಟಕರಾಶಿ ದಿನಭವಿಷ್ಯ
ಕೆಲಸ ಕಾರ್ಯಗಳಲ್ಲಿ ಸಮಸ್ಯೆಗಳು ಉಂಟಾಗಬಹುದು. ವಿವಾದಗಳನ್ನು ತಪ್ಪಿಸಲು ನೀವು ಯಾರ ಮೇಲೂ ಅವಲಂಭಿತರಾಗಬೇಡಿ. ಆರೋಗ್ಯದ ವಿಚಾರದಲ್ಲಿ ಜಾಗರೂಕರಾಗಿ ಇರಿ. ಪ್ರೀತಿಯ ಜೀವನದಲ್ಲಿ ಯಾವುದೇ ನಿರ್ಧಾರವನ್ನು ಕೈಗೊಳ್ಳಬೇಡಿ. ಕೆಲಸದ ವಾತಾವರಣವು ಅನುಕೂಲಕರಾಗಿ ಇರುವುದಿಲ್ಲ.

ಸಿಂಹರಾಶಿ ದಿನಭವಿಷ್ಯ
ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ. ಕೆಲವು ಶುಭ ಸುದ್ದಿಗಳನ್ನು ಕೇಳುತ್ತೀರಿ. ಸಂಗಾತಿಯ ಭಾವನೆಗಳನ್ನು ಇಂದು ಅರ್ಥ ಮಾಡಿಕೊಳ್ಳುತ್ತೀರಿ. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆಯನ್ನು ವಹಿಸಿ. ಧೈರ್ಯ, ಉತ್ಸಾಹ ಹೆಚ್ಚಲಿದ್ದು, ಹಲವು ಸಮಯಗಳಿಂದ ಬಾಕಿ ಉಳಿದ ಕೆಲಸ ಕಾರ್ಯ ಪೂರ್ಣಗೊಳ್ಳಲಿದೆ.

Horoscope Today 24 January 2024 These 2 zodiac signs have special grace of Lord Ganesha
Image Credit to Original Source

ಕನ್ಯಾರಾಶಿ ದಿನಭವಿಷ್ಯ
ಹಲವು ಸಮಯಗಳಿಂದ ಬಾಕಿ ಉಳಿದಿದ್ದ ಕೆಲಸ ಕಾರ್ಯಗಳು ಇಂದು ಪೂರ್ಣಗೊಳ್ಳಲಿದೆ. ಕುಟುಂಬ ಜೀವನವು ಇಂದು ಸಂತೋಷವಾಗಿ ಇರಲಿದೆ. ವೃತ್ತಿ ಜೀವನದಲ್ಲಿ ಹೂಡಿಕೆಯು ಲಾಭವನ್ನು ತರಲಿದೆ. ಹಣಕಾಸಿನ ವಿಚಾರದಲ್ಲಿ ನೀವಿಂದು ಬಹಳ ಎಚ್ಚರವಾಗಿ ಇರುವುದು ಒಳಿತು. ಆರೋಗ್ಯದಲ್ಲಿಯೂ ಸುಧಾರಣೆ ಕಂಡು ಬರಲಿದೆ.

ಇದನ್ನೂ ಓದಿ : ಕರ್ನಾಟಕದಲ್ಲಿದೆ ಮಾರೀಚನನ್ನು ಕೊಂದ ಜಾಗ ; ರಾಮ ಬಂದು ಹೋಗಿದಕ್ಕೆ ಈ ದೇವಾಲಯವೇ ಸಾಕ್ಷಿ

ತುಲಾರಾಶಿ ದಿನಭವಿಷ್ಯ
ಉದ್ಯೋಗದಲ್ಲಿ ಭಡ್ತಿ ದೊರೆಯಲಿದೆ. ಶ್ರಮವಹಿಸಿ ಮಾಡಿದ ಕೆಲಸ ಕಾರ್ಯಗಳಲ್ಲಿ ಇಂದು ಯಶಸ್ಸು ಪಡೆಯುತ್ತೀರಿ. ಕೆಲಸ ಕಾರ್ಯಗಳಲ್ಲಿ ಇತರರ ಸಹಕಾರವನ್ನು ಪಡೆಯುತ್ತೀರಿ. ಕೆಲಸ ಕಾರ್ಯಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವಿರಿ. ಆರೋಗ್ಯದ ವಿಚಾರದಲ್ಲಿ ನೆಮ್ಮದಿ ದೊರೆಯಲಿದೆ.

ವೃಶ್ಚಿಕರಾಶಿ ದಿನಭವಿಷ್ಯ
ಆರ್ಥಿಕ ವಿಚಾರದಲ್ಲಿ ನಷ್ಟ ಅನುಭವಿಸುವ ಸಾಧ್ಯತೆಯಿದೆ. ಯಾವುದೇ ವಿಚಾರದಲ್ಲಿ ಹಠಾತ್‌ ನಿರ್ಧಾರವನ್ನು ಕೈಗೊಳ್ಳಬೇಡಿ. ಕೆಲವೊಂದು ಕೆಲಸಕ್ಕಾಗಿ ನೀವಿಂದು ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ. ಕಾನೂನು ವಿಚಾರದಲ್ಲಿ ನೀವಿಂದು ಸಿಲುಕಿ ಹಾಕಿಕೊಳ್ಳುವ ಸಾಧ್ಯತೆಯಿದೆ.

ಧನಸ್ಸುರಾಶಿ ದಿನಭವಿಷ್ಯ
ಆರೋಗ್ಯದ ವಿಚಾರದಲ್ಲಿ ಸಾಮಾನ್ಯವಾದ ದಿನ. ಪ್ರೀತಿ ಪಾತ್ರರರನ್ನು ಭೇಟಿಯಾಗುವಿರಿ. ಪುಣ್ಯಕ್ಷೇತ್ರಗಳ ಭೇಟಿಯಿಂದ ಮನಸಿಗೆ ನೆಮ್ಮದಿ ದೊರೆಯಲಿದೆ. ಉದ್ಯೋಗಿಗಳು ಮೇಲಾಧಿಕಾರಿಗಳ ಜೊತೆಗೆ ಹೊಂದಾಣಿಕೆಯಿಂದ ಇರಬೇಕು. ಷೇರು ಮಾರುಕಟ್ಟೆಯಿಂದ ಅಧಿಕ ಲಾಭ ದೊರೆಯಲಿದೆ.

ಇದನ್ನೂ ಓದಿ : ರಾಮನ ದರ್ಶನಕ್ಕಾಗಿ ಕಾಯುತ್ತವೆ ಪ್ರೇತಾತ್ಮಗಳು : ರಾಮನಿಗೂ ಲಕ್ಷ್ಮಣ ನಿಗೂ ಇಲ್ಲಿ ಭಿನ್ನ ಪೂಜೆ

ಮಕರರಾಶಿ ದಿನಭವಿಷ್ಯ
ಹಣಕಾಸಿನ ವಿಚಾರದಲ್ಲಿ ನೀವು ಬಹಳ ಎಚ್ಚರವಾಗಿ ಇರಿ. ಆರೋಗ್ಯದ ವಿಚಾರದಲ್ಲಿ ನೀವು ನಿರ್ಲಕ್ಷ್ಯ ಮಾಡಬೇಡಿ. ಆನ್‌ಲೈನ್‌ ಶಾಪಿಂಗ್‌ನಿಂದ ಅಧಿಕ ಲಾಭ ದೊರೆಯಲಿದೆ. ಮನೆಯಲ್ಲಿ ಸಂತಸದ ವಾತಾವರಣ ಕಂಡು ಬರಲಿದೆ. ಸಂಗಾತಿಯ ನಡವಳಿಕೆಯಿಂದ ಅತೃಪ್ತಿಯ ವಾತಾವರಣ ಕಂಡು ಬರಲಿದೆ.

ಕುಂಭರಾಶಿ ದಿನಭವಿಷ್ಯ
ಹೊಸ ವ್ಯವಹಾರದಲ್ಲಿ ನೀವು ಯಶಸ್ವಿ ಆಗುತ್ತೀರಿ. ಶತ್ರುಗಳು ಇಂದು ನಿಮ್ಮ ಮೇಲೆ ಪ್ರಾಬಲ್ಯವನ್ನು ಸಾಧಿಸುತ್ತಾರೆ. ಉದ್ಯೋಗಿಗಳಿಗೆ ಇದು ಉತ್ತಮವಾದ ಸಮಯ. ಹೊಸ ವ್ಯಕ್ತಿಗಳ ಭೇಟಿಯಿಂದ ಹೆಚ್ಚು ಅನುಕೂಲಕರ. ವ್ಯವಹಾರದಲ್ಲಿ ಹೊಸ ಯೋಚನೆಗಳ ಇಂದು ಫಲವನ್ನು ಕೊಡಲಿದೆ. ಪುಣ್ಯಕ್ಷೇತ್ರಗಳ ಭೇಟಿಯಿಂದ ಮನಸಿಗೆ ಸಂತಸ.

ಮೀನರಾಶಿ ದಿನಭವಿಷ್ಯ
ಪ್ರೀತಿಯ ಜೀವನದಲ್ಲಿ ಏರಿಳಿತಗಳು ಕಂಡು ಬರಲಿದೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ಹರಿಸಿ. ಕೆಲಸ ಕಾರ್ಯಗಳನ್ನು ನೀವು ಎಚ್ಚರಿಕೆಯಿಂದ ಮಾಡಿ. ವೃತ್ತಿಗೆ ಸಂಬಂಧಿಸಿದಂತೆ ಯೋಚಿಸಿ ನಿರ್ಧಾರವನ್ನು ಕೈಗೊಳ್ಳಿ. ಕೆಲಸದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ತಪ್ಪುಗಳನ್ನು ಮಾಡಬೇಡಿ.

ಇದನ್ನೂ ಓದಿ : ಗೃಹಲಕ್ಷ್ಮೀ ಹಣ ಪಡೆಯಲು NPCI ಕಡ್ಡಾಯ : ಸರಕಾರದಿಂದ ಜಾರಿಯಾಯ್ತು ಹೊಸ ರೂಲ್ಸ್‌

Horoscope Today 24 January 2024 : These 2 zodiac signs have special grace of Lord Ganesha

Comments are closed.