ದಿನಭವಿಷ್ಯ 26 ಜನವರಿ 2024 : ಈ ರಾಶಿಯವರು ತಪ್ಪಿಯೂ ಈ ಕಾರ್ಯಗಳನ್ನು ಮಾಡಲೇ ಬೇಡಿ

Horoscope Today 26 January 2024 : ಆಯುಷ್ಮಾನ್‌ ಯೋಗ, ಮಂಗಳಕರ ಯೋಗ ಕೆಲವು ರಾಶಿಯವರಿಗೆ ಉತ್ತಮ ಫಲಿತಾಂಶವನ್ನು ನೀಡುತ್ತಾನೆ. ಮೇಷರಾಶಿಯಿಂದ ಮೀನ ರಾಶಿಯ ವರೆಗೆ ಒಟ್ಟು 12  ದ್ವಾದಶರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

Horoscope Today 26 January 2024 : ದಿನಭವಿಷ್ಯ 26 ಜನವರಿ 2024  ಶುಕ್ರವಾರ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದ್ವಾದಶರಾಶಿಗಳ ಮೇಲೆ ಇಂದು ಚಂದ್ರನ ಪ್ರಭಾವ ಇರುತ್ತದೆ. ಆಯುಷ್ಮಾನ್‌ ಯೋಗ, ಮಂಗಳಕರ ಯೋಗ ಕೆಲವು ರಾಶಿಯವರಿಗೆ ಉತ್ತಮ ಫಲಿತಾಂಶವನ್ನು ನೀಡುತ್ತಾನೆ. ಮೇಷರಾಶಿಯಿಂದ ಮೀನ ರಾಶಿಯ ವರೆಗೆ ಒಟ್ಟು 12  ದ್ವಾದಶರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಕೆಲಸದ ವಿಚಾರದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಆಹಾರ ಸೇವನೆಯ ವಿಚಾರದಲ್ಲಿ ಎಚ್ಚರಿಕೆಯನ್ನು ವಹಿಸಿ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಯಾರಿಗೂ ಹಣವನ್ನು ಸಾಲವಾಗಿ ನೀಡಬೇಡಿ.

ವೃಷಭರಾಶಿ ದಿನಭವಿಷ್ಯ
ಪೂರ್ವ ನಿರ್ಧಾರಿತ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಮಕ್ಕಳಿಂದ ಉತ್ತಮ ಬೆಂಬಲ ಪಡೆಯುತ್ತೀರಿ. ಸ್ನೇಹಿತರು ಹಾಗೂ ಸಂಬಂಧಿಕರು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ಹಠಾತ್‌ ಆರ್ಥಿಕ ಲಾಭ ಕಂಡು ಬರಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ಮಿಥುನರಾಶಿ ದಿನಭವಿಷ್ಯ
ಸಂಗಾತಿಯ ಬೆಂಬಲ ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ಒತ್ತಡವನ್ನು ಎದುರಿಸುವ ಸಾಧ್ಯತೆಯಿದೆ. ಹಣವನ್ನು ಹೂಡಿಕೆ ಮಾಡುವ ಮೊದಲು ಅನುಭವಿಗಳ ಮಾರ್ಗದರ್ಶನ ಪಡೆಯಿರಿ. ಸಕಾಲದಲ್ಲಿಯೇ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ.

ಕರ್ಕಾಟಕರಾಶಿ ದಿನಭವಿಷ್ಯ
ಪ್ರೀತಿಯ ವಿಚಾರದಲ್ಲಿ ಇಂದು ಯಾವುದೇ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಿಲ್ಲ. ನಿತ್ಯದ ಕೆಲಸ ಕಾರ್ಯಗಳಲ್ಲಿ ಸಮಸ್ಯೆ ಕಂಡು ಬರಲಿದೆ. ಆರೋಗ್ಯದಲ್ಲಿ ಎಚ್ಚರಿಕೆಯನ್ನು ವಹಿಸಿ. ವಾಹನ ಚಾಲನೆಯ ವೇಳೆಯಲ್ಲಿ ಮೈಯೆಲ್ಲಾ ಕಣ್ಣಾಗಿಸಿಕೊಳ್ಳಿ. ಸಹೋದ್ಯೋಗಿಗಳ ಬೆಂಬಲ ದೊರೆಯಲಿದೆ.

ಸಿಂಹರಾಶಿ ದಿನಭವಿಷ್ಯ
ಇಂದು ಕೆಲವು ಶುಭ ಸುದ್ದಿಗಳನ್ನು ಕೇಳುವಿರಿ. ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳನ್ನು ಮಾಡುತ್ತೀರಿ. ನಿಮ್ಮ ಕೆಲವೊಂದು ಸಲಹೆ ಕೆಲವರಿಗೆ ಸಹಾಯವಾಗಲಿದೆ. ಸಂಗಾತಿಯು ನಿಮ್ಮ ಭಾವನೆಯನ್ನು ಆರ್ಥಮಾಡಿಕೊಳ್ಳುತ್ತಾರೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರನ್ನು ಭೇಟಿ ಮಾಡುವ ಸಾಧ್ಯತೆಯಿದೆ.

Horoscope Today 26 January Zodiac Sign Republic day
Image Credit to Original Source

ಕನ್ಯಾರಾಶಿ ದಿನಭವಿಷ್ಯ
ವೈಯಕ್ತಿಕ ಜೀವನವು ಸಂತೋಷವನ್ನು ತರಲಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯನ್ನು ವಹಿಸಿ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ. ದೀರ್ಘ ಕಾಲದಿಂದ ಎದುರಿಸುತ್ತಿದ್ದ ಆರೋಗ್ಯದ ಸಮಸ್ಯೆ ಇಂದು ಪರಿಹಾರವನ್ನು ಕಾಣಲಿದೆ. ವೃತ್ತಿ ಹಾಗೂ ಹೂಡಿಕೆ ಕ್ಷೇತ್ರದಲ್ಲಿ ವಿಶೇಷ ಲಾಭವನ್ನು ಕಾಣುತ್ತೀರಿ.

ಇದನ್ನೂ ಓದಿ : ಅಯೋಧ್ಯೆಗೆ ವಾರ್ಷಿಕ 4 ಲಕ್ಷ ಕೋಟಿ ಆದಾಯ ! ತಿಮ್ಮಪ್ಪನ ತಿರುಪತಿಯನ್ನೇ ಮೀರಿಸುತ್ತೆ ರಾಮಜನ್ಮಭೂಮಿ ಅಯೋಧ್ಯೆ !

ತುಲಾರಾಶಿ ದಿನಭವಿಷ್ಯ
ಹಣಕಾಸಿನ ವಿಚಾರದಲ್ಲಿ ನಷ್ಟವನ್ನು ಅನುಭವಿಸಲಿದ್ದೀರಿ. ಹೀಗಾಗಿ ಹಣಕಾಸಿನ ವ್ಯವಹಾರವನ್ನು ಮಾಡುವ ಮುನ್ನ ಸಾಕಷ್ಟು ಎಚ್ಚರಿಕೆಯನ್ನು ವಹಿಸಿ. ಕಾನೂನು ಸಮಸ್ಯೆಯಲ್ಲಿ ನೀವು ಸಿಲುಕುವ ಸಾಧ್ಯತೆಯಿದೆ. ನಿಮ್ಮ ಆರೋಗ್ಯವು ಸಾಮಾನ್ಯವಾಗಿ ಇರಲಿದೆ.

ಧನಸ್ಸುರಾಶಿ ದಿನಭವಿಷ್ಯ
ಷೇರು ಮಾರುಕಟ್ಟೆಯಲ್ಲಿ ಬುದ್ದಿವಂತಿಕೆಯಿಂದ ಹೂಡಿಕೆಯನ್ನು ಮಾಡಿ. ವೃತ್ತಿಗೆ ಸಂಬಂಧಿಸಿದಂತೆ ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತೀರಿ. ವಿಶೇಷ ಕೆಲಸ ಕಾರ್ಯಗಳು ಇಂದು ಪೂರ್ಣಗೊಳ್ಳಲಿದೆ. ನೌಕರರು ಸಹೋದ್ಯೋಗಿಗಳ ಜೊತೆಗೆ ಇಂದು ಹೊಂದಾಣಿಕೆಯಿಂದ ಇರಬೇಕು.

ಮಕರರಾಶಿ ದಿನಭವಿಷ್ಯ
ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದಂತೆ ವಾದ ವಿವಾದಗಳನ್ನು ಎದುರಿಸಲಿದ್ದೀರಿ. ಯಾವುದೇ ಕಾರಣಕ್ಕೂ ಆಡಂಬರವನ್ನು ಮಾಡಬೇಡಿ. ಆರೋಗ್ಯವು ಕೈಕೊಡುವ ಸಾಧ್ಯತೆಯಿದೆ. ಸಮಯದ ವಿಚಾರದಲ್ಲಿ ನೀವು ನಿರ್ಲಕ್ಷ್ಯವನ್ನು ಮಾಡಬೇಡಿ. ಇತರರ ಭಾವನೆಗಳನ್ನು ಆರ್ಥ ಮಾಡಿಕೊಳ್ಳಿ.

ಇದನ್ನೂ ಓದಿ : ಕೇವಲ 21,000ಕ್ಕೆ ಬುಕ್‌ ಮಾಡಿ ಟಾಟಾ ಟಿಯಾಗೋ, ಟಾಟಾ ಟಿಗರ್‌ CNG AMT

ಕುಂಭರಾಶಿ ದಿನಭವಿಷ್ಯ
ಉದ್ಯೋಗಿಗಳಿಗೆ ಉತ್ತಮವಾದ ಸಮಯ. ಹೊಸ ವ್ಯಕ್ತಿಗಳ ಭೇಟಿಯಿಂದ ಮನಸಿಗೆ ನೆಮ್ಮದಿ. ವ್ಯವಹಾರವನ್ನು ಮಾಡುವಲ್ಲಿ ಯಶಸ್ವಿ ಆಗುತ್ತೀರಿ. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯನ್ನು ವಹಿಸಿ. ಸಣ್ಣಪುಟ್ಟ ಸಂತೋಷಗಳನ್ನು ಆನಂದಿಸಲು ಸಿದ್ದರಾಗಿ. ಉದ್ಯೋಗಿಗಳಿಗೆ ಇಂದು ಉತ್ತಮವಾದ ದಿನ.

ಮೀನರಾಶಿ ದಿನಭವಿಷ್ಯ
ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಿ. ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸಲಿದ್ದೀರಿ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಆರ್ಥಿಕ ನೆರವು ದೊರೆಯಲಿದೆ. ವೃತ್ತಿ ಜೀವನದಲ್ಲಿ ಹಲವು ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಯೋಚನೆಯನ್ನು ಮಾಡಿ. ಹೊಂದಾಣಿಕೆಯಿಂದ ಕಾರ್ಯಾನುಕೂಲವಿದೆ.

ಇದನ್ನೂ ಓದಿ : ಭಾರತ – ಇಂಗ್ಲೆಂಡ್‌ ಟೆಸ್ಟ್‌ ಪಂದ್ಯ ; ಕನ್ನಡಿಗ ಕೆಎಲ್‌ ರಾಹುಲ್‌ ಹೊಸ ದಾಖಲೆ

Horoscope Today 26 January 2024 Zodiac Sign Republic day 

Comments are closed.