ಹೊಸ ಸ್ಮಾರ್ಟ್​ ವಾಚ್​ನ ಹುಡುಕಾಟದಲ್ಲಿದ್ದೀರೇ..? ಅಮೆಜಾನ್​ನಲ್ಲಿದೆ ಬಿಗ್ಗೆಸ್ಟ್​ ಆಫರ್​

Best Premium Smart watch: ಒಳ್ಳೆಯ ಸ್ಮಾರ್ಟ್​ ವಾಚ್ (Best Smart Watch) ​ಗಳ ಹುಡುಕಾಟದಲ್ಲಿ ನೀವಿದ್ದರೆ ಖಂಡಿತವಾಗಿಯೂ ಈ ಅವಕಾಶವನ್ನು ಮಿಸ್​ಮಾಡಿಕೊಳ್ಳಬೇಡಿ.

Best Premium Smart watch : ದೇಶದಲ್ಲಿ ಸದ್ಯ ಹಬ್ಬದ ಸೀಸನ್​ ಮುಗಿದಿದೆ. ಆದರೆ ಪ್ರತಿಷ್ಟಿತ ಆನ್​ಲೈನ್​ ಮಾರುಕಟ್ಟೆ ಅಮೆಜಾನ್​ ಇಂದಿಗೂ ಸ್ಮಾರ್ಟ್​ವಾಚ್​​ಗಳು, ಹೆಡ್​ಫೋನ್​ಗಳು, ಸ್ಮಾರ್ಟ್​ಫೋನ್​ಗಳು ಸೇರಿದಂತೆ ಇನ್ನೂ ಅನೇಕ ಎಲೆಕ್ಟ್ರಾನಿಕ್ಸ್​ ಹಾಗೂ ಗ್ಯಾಜೆಟ್​ಗಳ ಮೇಲೆ ವಿಶೇಷ ರಿಯಾಯಿತಿ ನೀಡುವುದನ್ನು ಮುಂದುವರಿಸಿವೆ.ಈಗಂತೂ ಸ್ಮಾರ್ಟ್​ವಾಚ್​ಗಳನ್ನು ಧರಿಸುವುದು ಟ್ರೆಂಡ್​ ಆಗಿದೆ. ಹೀಗಾಗಿ ಒಳ್ಳೆಯ ಸ್ಮಾರ್ಟ್​ ವಾಚ್ (Best Smart Watch) ​ಗಳ ಹುಡುಕಾಟದಲ್ಲಿ ನೀವಿದ್ದರೆ ಖಂಡಿತವಾಗಿಯೂ ಈ ಅವಕಾಶವನ್ನು ಮಿಸ್​ಮಾಡಿಕೊಳ್ಳಬೇಡಿ.

Best Premium Smart watches 2023 samsung galaxy Apple google firebolt titans
Image Credit to Original Source

ಫೈರ್-ಬೋಲ್ಟ್ ಇನ್ವಿನ್ಸಿಬಲ್ ಪ್ಲಸ್ (Firebolt Samartwatchs)
ಈ ಸ್ಮಾರ್ಟ್‌ವಾಚ್ ಪ್ರಸ್ತುತ 4,499 ರೂಪಾಯಿಗೆ ಲಭ್ಯವಿದೆ. ಫೈರ್-ಬೋಲ್ಟ್ ಇನ್ವಿನ್ಸಿಬಲ್ ಪ್ಲಸ್ 1.43″ AMOLED 2.5D ಡಿಸ್ಪ್ಲೇ ಜೊತೆಗೆ 460×460 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 700 NITS ಗರಿಷ್ಠ ಬ್ರೈಟ್​​ನೆಸ್​​ ಹೊಂದಿದೆ. ಒಮ್ಮೆ ನೀವು ಸ್ಮಾರ್ಟ್​ ವಾಚ್​ನ್ನು ಫುಲ್​ ಚಾರ್ಜ್​ ಮಾಡಿದರೆ ಬ್ಯಾಟರಿ ಐದು ದಿನಗಳವರೆಗೆ ಬಾಳಿಕೆ ಬರಲಿದೆ.

ಕಂಪನಿಯು ನೀಡಿರುವ ಮಾಹಿತಿಯ ಪ್ರಕಾರ ಈ ವಾಚ್​​ನ್ನು ಸಂಪೂರ್ಣ ಚಾರ್ಜ್ ಮಾಡಲು ಮೂರು ಗಂಟೆಗಳ ಸಮಯಾವಕಾಶ ಬೇಕಾಗಲಿದೆ. ತ್ವರಿತ 20 ಪರ್ಸೆಂಟ್​ ಚಾರ್ಜ್​ನ್ನು 20-30 ನಿಮಿಷದ ಅವಧಿಯಲ್ಲೇ ಮಾಡಿಕೊಳ್ಳಬಹುದಾಗಿದೆ. ಬಳಕೆದದಾರರು 110 ರೀತಿಯ ವಾಚ್​ ಫೇಸ್​ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

Best Premium Smart watches 2023 samsung galaxy Apple google firebolt titans
Image Credit to Original Source

ಟೈಟಾನ್​ ಸ್ಮಾರ್ಟ್​ 3 ಪ್ರೀಮಿಯಂ ಸ್ಮಾರ್ಟ್​ ವಾಚ್​ (Titan Smart 3 Premium Watch)

ಈ ಸ್ಮಾರ್ಟ್​ ವಾಚ್​ ಪ್ರಸ್ತುತ 7995 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಟೈಟಾನ್​ ಸ್ಮಾರ್ಟ್​ 3 ಪ್ರೀಮಿಯಂ ಸ್ಮಾರ್ಟ್​ ವಾಚ್​​ 1.96″ ಸೂಪರ್ AMOLED ಡಿಸ್‌ಪ್ಲೇ ಹೊಂದಿದೆ. ಈ ಸ್ಮಾರ್ಟ್ ವಾಚ್​ ನಿಮಗೆ ಸಿಂಗಲ್​ ಸಿಂಕ್ ಬಿಟಿ ಕಾಲಿಂಗ್​ ವೈಶಿಷ್ಟ್ಯ ಹೊಂದಿದೆ. 10 ನಿಮಿಷದ ಚಾರ್ಜಿಂಗ್​ನಲ್ಲಿ ಇಡೀ ಒಂದು ದಿನ ಸ್ಮಾರ್ಟ್​ ವಾಚ್​ ಬಳಕೆ ಮಾಡಬಹುದಾಗಿದೆ.

ಇದನ್ನೂ ಓದಿ : 200 MP ಕ್ಯಾಮೆರಾ, 8GB RAM… ಅಬ್ಬಬ್ಬಾ Motorola Edge 30 Ultra 5G ಫೀಚರ್ಸ್‌ ನೋಡಿದ್ರೆ ಸುಸ್ತಾಗೋದು ಗ್ಯಾರಂಟಿ

ಇದು 110+ ಸ್ಪೋರ್ಟ್ಸ್ ಮೋಡ್‌ಗಳು, 200+ ವಾಚ್ ಫೇಸ್‌ಗಳು, AI ಧ್ವನಿ ಸಹಾಯಕ ಮತ್ತು ಸ್ವಯಂ ಒತ್ತಡದ ಮಾನಿಟರಿಂಗ್, 24×7 ಹೃದಯ ಬಡಿತ ಟ್ರ್ಯಾಕಿಂಗ್, ನಿದ್ರೆ ಮಾನಿಟರಿಂಗ್, Spo2 ಮಾಪನ ಮತ್ತು ಮಹಿಳೆಯರ ಆರೋಗ್ಯ ವೈಶಿಷ್ಟ್ಯಗಳನ್ನು ಒಳಗೊಂಡಂತೆ ಸಮಗ್ರ ಆರೋಗ್ಯ ಮೇಲ್ವಿಚಾರಣೆಯನ್ನು ಹೊಂದಿದೆ. ಒಂದು ಬಾರಿ ನೀವು ಟೈಟಾನ್​ ಸ್ಮಾರ್ಟ್​ 3 ಪ್ರೀಮಿಯಂ ಸ್ಮಾರ್ಟ್​ ವಾಚ್​ ನ್ನು ಸಂಪೂರ್ಣ ಚಾರ್ಜ್​ ಮಾಡಿದರೆ ನಿಮಗೆ ಏಳು ದಿನಗಳವರೆಗೆ ಸ್ಮಾರ್ಟ್​ ವಾಚ್​​ನ್ನು ಬಳಕೆ ಮಾಡಬಹುದಾಗಿದೆ.

Best Premium Smart watches 2023 samsung galaxy Apple google firebolt titans
Image Credit to Original Source

ಫಾಸಿಲ್​​ ಜೆನ್​​ 6 ಡಿಸ್​ಪ್ಲೇ ವೆಲ್​ನೆಸ್​ ಎಡಿಷನ್​ ಬ್ಲಾಕ್​ ಸ್ಮಾರ್ಟ್​ ವಾಚ್​​ (fazil Gen Smartwatch)

ಫಾಸಿಲ್ ಜೆನ್ 6 ಡಿಸ್‌ಪ್ಲೇ ವೆಲ್‌ನೆಸ್ ಎಡಿಷನ್ ಬ್ಲ್ಯಾಕ್ ಸ್ಮಾರ್ಟ್‌ವಾಚ್ ಪ್ರಸ್ತುತ ₹9,598 ರೂಪಾಯಿಗೆ ಮಾರಾಟವಾಗುತ್ತಿದೆ. Google ನಿಂದ Wear OS ಗೆ ಹೊಂದಿಕೆಯಾಗುವ ಈ ಸ್ಮಾರ್ಟ್‌ವಾಚ್, Android ಮತ್ತು iOS ಸಾಧನಗಳೊಂದಿಗೆ ಸಂಯೋಜಿಸುತ್ತದೆ , ರೋಮಾಂಚಕ ಬಣ್ಣಗಳ ಆನ್ ಡಿಸ್‌ಪ್ಲೇ, ಕೇವಲ ಅರ್ಧ ಗಂಟೆಯಲ್ಲಿ ಕ್ಷಿಪ್ರ ಚಾರ್ಜಿಂಗ್ ಮತ್ತು ವಿವಿಧ ಕಸ್ಟಮೈಸ್ ಮಾಡಬಹುದಾದ ವಾಚ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಇದು ಹೊಂದಿದೆ.

ಇದನ್ನೂ ಓದಿ : ಶೀಘ್ರದಲ್ಲೇ ಮಾರುಕಟ್ಟೆಗೆ ಬರ್ತಿದೆ 15 ಸಾವಿರಕ್ಕೂ ಕಡಿಮೆ ದರದ ಜಿಯೋ ಲ್ಯಾಪ್​ಟಾಪ್​​

ಇದರ 3 ATM ವಿನ್ಯಾಸ ಮತ್ತು 24 Hr + ಬಹು-ದಿನದ ವಿಸ್ತೃತ ಮೋಡ್ ವೈವಿಧ್ಯಮಯ ಚಟುವಟಿಕೆಗಳಿಗೆ ಸೂಕ್ತವಾಗಿದೆ. ಗಡಿಯಾರವು ಆರೋಗ್ಯ ಮೆಟ್ರಿಕ್‌ಗಳನ್ನು ಸ್ವಯಂಚಾಲಿತವಾಗಿ ಟ್ರ್ಯಾಕ್ ಮಾಡುತ್ತದೆ, ಹಲವಾರು ಅಪ್ಲಿಕೇಶನ್‌ಗಳನ್ನು ಬೆಂಬಲಿಸುತ್ತದೆ . ನೋಟಿಫಿಕೇಶನ್​, ಕರೆಗಳು ಮತ್ತು ಸಿಂಕ್ ಮಾಡುವ ಸಾಮರ್ಥ್ಯಗಳೊಂದಿಗೆ ನಿಮ್ಮನ್ನು ಸಂಪರ್ಕಿಸುತ್ತದೆ.

Best Premium Smart watches 2023 samsung galaxy Apple google firebolt titans

Comments are closed.