ದಿನಭವಿಷ್ಯ 28 ನವೆಂಬರ್‌ 2023 : ಸಿದ್ದಿಯೋಗದಿಂದ ಈ ರಾಶಿಯವರಿಗೆ ಧನಲಾಭ

Horoscope Today 28 November 2023 Siddi Yoga Zodiac Sign : ದಿನಭವಿಷ್ಯ 28 ನವೆಂಬರ್‌ 2023 ಮಂಗಳವಾರ. ದ್ವಾದಶರಾಶಿಗಳ ಮೇಲೆ ಇಂದು ರೋಹಿಣಿ ನಕ್ಷತ್ರದ ಪ್ರಭಾವ ಇರುತ್ತದೆ. ಜೊತೆಗೆ ಸಿದ್ದಿಯೋಗ ಹಲವು ರಾಶಿಯವರಿಗೆ ಧನಲಾಭವನ್ನು ತಂದು ಕೊಡಲಿದೆ.

Horoscope Today : ದಿನಭವಿಷ್ಯ 28 ನವೆಂಬರ್‌ 2023 ಮಂಗಳವಾರ. ದ್ವಾದಶರಾಶಿಗಳ ಮೇಲೆ ಇಂದು ರೋಹಿಣಿ ನಕ್ಷತ್ರದ ಪ್ರಭಾವ ಇರುತ್ತದೆ. ಜೊತೆಗೆ ಸಿದ್ದಿಯೋಗ ಹಲವು ರಾಶಿಯವರಿಗೆ ಧನಲಾಭವನ್ನು ತಂದು ಕೊಡಲಿದೆ. ಮೇಷರಾಶಿಯಿಂದ ಹಿಡಿದು ಮೀನರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಕುಟುಂಬದ ಸದಸ್ಯರ ಜೊತೆಗೆ ಹೊಂದಾಣಿಕೆ ಇರುವುದು ತೀರಾ ಮುಖ್ಯ. ಅವಿವಾಹಿತರಿಗೆ ಇಂದು ಯೋಗ್ಯ ಸಂಬಂಧ ಕೂಡಿಬರಲಿದೆ. ಉದ್ಯಮಿಗಳಿಗೆ ವ್ಯವಹಾರದಲ್ಲಿ ಪ್ರಗತಿ ಕಂಡು ಬರಲಿದೆ. ದೂರ ಪ್ರಯಾಣ ಲಾಭದಾಯಕವಾಗಲಿದೆ.

ವೃಷಭರಾಶಿ ದಿನಭವಿಷ್ಯ
ಯಾವುದೇ ಕಾರಣಕ್ಕೂ ತರಾತುರಿಯಲ್ಲಿ ಹೂಡಿಕೆ ಮಾಡಬೇಡಿ. ಕಷ್ಟದ ಪರಿಸ್ಥಿತಿಯಲ್ಲಿ ನೀವು ಯಾವುದೇ ಕಾರಣಕ್ಕೂ ಖಿನ್ನತೆಗೆ ಒಳಗಾಗಬೇಡಿ. ಕುಟುಂಬ ಸದಸ್ಯರ ಜೊತೆಗೆ ಔತಣ ಕೂಟ ನಡೆಸುವ ಸಾಧ್ಯತೆಯಿದೆ. ಸಂಗಾತಿಯ ಆರೋಗ್ಯದ ಕಡೆಗೆ ನಿಮಗೆ ಚಿಂತೆ ಕಾಡಲಿದೆ.

ಮಿಥುನರಾಶಿ ದಿನಭವಿಷ್ಯ
ಹೂಡಿಕೆಗಳನ್ನು ಸಂಪ್ರದಾಯ ಬದ್ದವಾಗಿ ಉಳಿತಾಯ ಮಾಡಿದ್ರೆ ಅನುಕೂಲ. ಪ್ರೇಮಿಗಳಿಗೆ ಇಂದು ನೋವಿನ ದಿನ. ಉದ್ಯೋಗ ಕ್ಷೇತ್ರದಲ್ಲಿ ಪ್ರಮುಖ ಸಮಸ್ಯೆಯೊಂದಕ್ಕೆ ಪರಿಹಾರ ಕಂಡುಕೊಳ್ಳುವಿರಿ. ನಿರೀಕ್ಷೆಗೆ ತಕ್ಕಂತ ಫಲಿತಾಂಶ ಇಂದು ದೊರೆಯುವ ಸಾಧ್ಯತೆ ತೀರಾ ಕಡಿಮೆ. ಬುದ್ದಿವಂತಿಕೆಯಿಂದ ಅಸಾಧ್ಯವಾದುದನ್ನು ನೀವು ಸಾಧಿಸಬಹುದು.

ಕರ್ಕಾಟಕರಾಶಿ ದಿನಭವಿಷ್ಯ
ಆದಾಯಕ್ಕೆ ತಕ್ಕಂತೆ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಿ. ಕುಟುಂಬ ಸದಸ್ಯರ ಅಗತ್ಯತೆಗಳನ್ನು ಪೂರೈಸುವಿರಿ. ಜೀವನವು ಇಂದು ಸಂತೋಷದಿಂದ ಕೂಡಿರಲಿದೆ. ಸಂಗಾತಿಯ ಜೀವನದ ರಹಸ್ಯ ತಿಳಿದು ನಿಮಗೆ ಬೇಸರವಾಗಲಿದೆ. ನಿಮಗಾರಿ ಸಮಯವನ್ನು ಮೀಸಲಿಡುವುದು ಉತ್ತಮ.

ಸಿಂಹರಾಶಿ ದಿನಭವಿಷ್ಯ
ಸಂತೋಷದಿಂದ ಕೂಡಿರುವ ದಿನ. ಹಣಕಾಸಿನ ವಿಚಾರದಲ್ಲಿ ನಿಮ್ಮ ಬಯಕೆ ಪೂರ್ಣವಾಗಲಿದೆ. ಹೊಸ ಸ್ನೇಹಿತರನ್ನು ಗಳಿಸಲು ನಿಮ್ಮ ವ್ಯಕ್ತಿತ್ವ ಸಹಕಾರಿಯಾಗಲಿದೆ. ಹೊಸ ವ್ಯವಹಾರ ಹಾಗೂ ಪಾಲುದಾರಿಕೆಯ ವ್ಯವಹಾರಕ್ಕೆ ಸಹಿ ಹಾಕಬೇಡಿ. ಆಧ್ಯಾತ್ಮಿಕ ಪುಸ್ತಕಗಳನ್ನು ಓದಿ.

ಕನ್ಯಾರಾಶಿ ದಿನಭವಿಷ್ಯ
ಆರ್ಥಿಕ ಲಾಭವನ್ನು ಪಡೆಯುತ್ತೀರಿ. ನಿಮ್ಮ ಸಂಗಾತಿಯ ಜೊತೆಗೆ ವಿಹಾರಕ್ಕೆ ತೆರಳುವ ಸಾಧ್ಯತೆಯಿದೆ. ಹೊಸ ಅವಕಾಶಗಳನ್ನು ನೀವಿಂದು ಪಡೆಯುವ ಸಾಧ್ಯತೆಯಿದೆ. ದೂರ ಪ್ರಯಾಣ ಅನುಕೂಲಕರ. ಹೊಂದಾಣಿಕೆಯಿಂದ ಕಾರ್ಯಾನುಕೂಲವಾಗಲಿದೆ.

ಇದನ್ನೂ ಓದಿ : Tata Punch Big Offer : 26 ಕಿಮೀ ಮೈಲೇಜ್, ಕೇವಲ 6 ಲಕ್ಷಕ್ಕೆ ಸಿಗುತ್ತೆ ಟಾಟಾ ಪಂಚ್

ತುಲಾರಾಶಿ ದಿನಭವಿಷ್ಯ
ಪ್ರಾಮಾಣಿಕವಾದ ನಿಮ್ಮ ನಗುವು ಇಂದು ನಿಮಗೆ ಗೆಲುವನ್ನು ತಂದುಕೊಡಲಿದೆ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದೆ. ಹೊಸ ಯೋಜನೆಗಳ ಬಗ್ಗೆ ಕುಟುಂಬ ಸದಸ್ಯರ ಜೊತೆಗೆ ಚರ್ಚೆ ನಡೆಸುವುದು ಉತ್ತಮ. ಸಂಗಾತಿಯ ಸಂಬಂಧಕ್ಕೆ ಇಂದು ಧಕ್ಕೆ ಬರುವ ಸಾಧ್ಯತೆಯಿದೆ. ಸ್ನೇಹಿತರ ಜೊತೆಗೆ ಇಂದು ಸಮಯವನ್ನು ಕಳೆಯುವಿರಿ.Horoscope Today 28 November 2023 Siddi Yoga Zodiac Sign

ವೃಶ್ಚಿಕರಾಶಿ ದಿನಭವಿಷ್ಯ
ಅನಿರೀಕ್ಷಿತ ಮೂಲಗಳಿಂದ ಆರ್ಥಿಕ ಲಾಭ. ಮನೆ ಬದಲಾವಣೆಯ ನಿಮ್ಮ ಯೋಚನೆ ಕೈಗೂಡಲಿದೆ. ನಿಮ್ಮ ಸುತ್ತಮುತ್ತಲೂ ಇರುವ ಜನರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುತ್ತೀರಿ. ಸಂಗಾತಿ ಯಿಂದ ನೀವು ಅದ್ಬುತವಾದುದನ್ನು ಪಡೆಯುತ್ತೀರಿ. ನಿಮ್ಮ ಕೋಪ ಹಾಗೂ ಅಸಮಾಧಾನವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ.

ಧನಸ್ಸು ರಾಶಿ ದಿನಭವಿಷ್ಯ
ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸನ್ನು ಕಾಡುವ ಸಾಧ್ಯತೆಯಿದೆ. ಯಾವುದೇ ಕಾರಣಕ್ಕೂ ಗಡಿಬಿಡಿಯಲ್ಲಿ ಪ್ರಯಾಣವನ್ನು ಕೈಗೊಳ್ಳಬೇಡಿ. ಪ್ರೀತಿಯ ಜೀವನವು ನಿಮಗೆ ಸಂತಸವನ್ನು ತಂದು ಕೊಡಲಿದೆ. ವ್ಯವಹಾರದಲ್ಲಿನ ಅಭಿವೃದ್ದಿಯು ಆರ್ಥಿಕ ಲಾಭವನ್ನು ತರಲಿದೆ. ಆಧ್ಯಾತ್ಮದ ಕಡೆಗೆ ನಿಮ್ಮ ಮನಸ್ಸು ವಾಲಲಿದೆ.

ಇದನ್ನೂ ಓದಿ: ₹ 20,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಿ ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಫೋನ್‌ : Samsung Galaxy M34 5G, IQOO Z7s

ಮಕರರಾಶಿ ದಿನಭವಿಷ್ಯ
ಸ್ನೇಹಿತರ ಜೊತೆಗೆ ಪ್ರವಾಸಕ್ಕೆ ತೆರಳುವ ಸಾಧ್ಯತೆಯಿದೆ. ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನಸಿಗೆ ಸಂತಸ ತರಲಿದೆ. ಬಿಡುವಿಲ್ಲದ ಕೆಲಸದಿಂದ ದಣಿದಿರುವ ನಿಮಗೆ ಇಂದು ರೆಸ್ಟ್‌ ದೊರೆಯಲಿದೆ. ಅನಗತ್ಯ ಖರ್ಚು ನಿಮಗೆ ಮಾನಸಿಕ ಕಿರಿಕಿರಿಯನ್ನು ತಂದುಕೊಡಲಿದೆ.

ಕುಂಭರಾಶಿ ದಿನಭವಿಷ್ಯ
ಆರೋಗ್ಯದ ವಿಚಾರದಲ್ಲಿ ಸಾಕಷ್ಟು ಎಚ್ಚರಿಕೆಯನ್ನು ವಹಿಸಿ. ಕುಟುಂಬ ಸದಸ್ಯರ ಜೊತೆಗೆ ಸಾಕಷ್ಟು ಸಮಯವನ್ನು ಕಳೆಯುತ್ತೀರಿ. ಯಾವುದೇ ಸಂದರ್ಭದಲ್ಲಿಯೂ ನೀವು ಎದೆಗುಂದ ಬಾರದು. ಮುಂದಿನ ದಿನಗಳಲ್ಲಿ ನಿಮ್ಮ ಭವಿಷ್ಯ ಚೆನ್ನಾಗಿದೆ. ಸ್ನೇಹಿತರ ಜೊತೆಗೆ ಶಾಪಿಂಗ್‌ ಮಾಡುವಿರಿ.

ಇದನ್ನೂ ಓದಿ : ಐಪಿಎಲ್ 2024 : ಗುಜರಾತ್‌ ಟೈಟಾನ್ಸ್‌ಗೆ ಶುಭಮನ್‌ ಗಿಲ್‌ ನಾಯಕ

ಮೀನರಾಶಿ ದಿನಭವಿಷ್ಯ
ಕಳೆದ ಕೆಲವು ದಿನಗಳಿಂದ ಹುಡುಕುತ್ತಿದ್ದ ನಿಮಗೆ ಉದ್ಯೋಗ ದೊರೆಯಲಿದೆ. ಆರ್ಥಿಕ ನಷ್ಟ ಅನುಭವಿಸುವ ಸಾಧ್ಯತೆಯಿದೆ. ಹಣವನ್ನು ಇತರರಿಗೆ ನೀಡುವ ಮೊದಲು ಹಲವು ಬಾರಿ ಯೋಚಿಸಿ. ವೈವಾಹಿಕ ಜೀವನವು ಸುಂದರವಾಗಿ ಇರಲಿದೆ. ವ್ಯವಹಾರದ ನಿಮಿತ್ತ ದೂರದ ಊರಿಗೆ ಪ್ರಯಾಣ ಸಾಧ್ಯತೆಯಿದೆ.

Horoscope Today 28 November 2023 Siddi Yoga Zodiac Sign

 

Comments are closed.